NCERT Solutions Class 6 Science Air Around us In Kannada Medium

6ನೇ ತರಗತಿ ವಿಜ್ಞಾನವು ವಿಶೇಷವಾಗಿ ಆಸಕ್ತಿದಾಯಕವಾಗಿದೆ ಮತ್ತು ಅದರ ಮೂಲಭೂತ ಪರಿಕಲ್ಪನೆಗಳಲ್ಲಿ ಒಂದಾಗಿದೆ "ನಮ್ಮ ಸುತ್ತಲಿನ ಗಾಳಿ." ಈ ಲೇಖನದಲ್ಲಿ, NCERT Solutions Class 6 Science Air Around us In Kannada Medium ನಾವು ತರಗತಿ 6 ವಿಜ್ಞಾನಕ್ಕಾಗಿ NCERT ಪರಿಹಾರಗಳನ್ನು ಪರಿಶೀಲಿಸುತ್ತೇವೆ - ನಮ್ಮ ಸುತ್ತಲಿನ ಗಾಳಿ, ಅದರ ಮಹತ್ವ ಮತ್ತು ಪ್ರಮುಖ ವಿಷಯಗಳನ್ನು ಸರಳ ಮತ್ತು ಆಕರ್ಷಕವಾಗಿ ಅನ್ವೇಷಿಸುತ್ತೇವೆ.

NCERT Solutions Class 6 Science Air Around us In Kannada Medium

NCERT Solutions Class 6 Science Air Around us In Kannada Medium.

ಸಾರಾಂಶ-

  • ಗಾಳಿಯು ಎಲ್ಲೆಲ್ಲೂ ಇದೆ. ನಾವು ಗಾಳಿಯನ್ನು ನೋಡಲು ಸಾಧ್ಯವಿಲ್ಲ. ಆದರೆ ಅನುಭವಿಸಬಹುದು.
  • ಚಲಿಸುತ್ತಿರುವ ಗಾಳಿಯೇ ಪವನ.
  • ಗಾಳಿಯು ಜಾಗವನ್ನು ಆಕ್ರಮಿಸುತ್ತದೆ.
  • ನೀರು ಮತ್ತು ಮಣ್ಣಿನಲ್ಲಿಯೂ ಗಾಳಿಯಿದೆ.
  • ಗಾಳಿಯು ನೈಟ್ರೊಜನ್, ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್, ನೀರಾವಿ ಹಾಗು ಕೆಲವು 
  • ಅನಿಲಗಳ ಮಿಶ್ರಣವಾಗಿದೆ. ಅದರಲ್ಲಿ ಧೂಳಿನ ಕಣಗಳೂ ಇರಬಹುದು.
  • ವಸ್ತುಗಳು ಉರಿಯಲು ಆಕ್ಸಿಜನ್ ಸಹಕರಿಸುತ್ತದೆ ಮತ್ತು ಇದು ಜೀವಿಗಳಿಗೆ ಅತ್ಯವಶ್ಯ.
  • ಭೂಮಿಯನ್ನು ಆವರಿಸಿರುವ ಗಾಳಿಯ ಪದರವೇ ವಾತಾವರಣ.
  • ಭೂಮಿಯ ಮೇಲಿನ ಜೀವಿಗಳಿಗೆ ವಾತಾವರಣ ಅತ್ಯವಶ್ಯ.
  • ನೀರಿನಲ್ಲಿನ ಪ್ರಾಣಿಗಳು ನೀರಿನಲ್ಲಿ ಕರಗಿದ ಗಾಳಿಯನ್ನು ಉಸಿರಾಡಲು ಬಳಸುತ್ತವೆ.
  • ಗಾಳಿಯಿಂದ ಆಕ್ಸಿಜನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ನ್ನು ವಿನಿಮಯ ಮಾಡಿಕೊಳ್ಳಲು ಸಸ್ಯಗಳು ಮತ್ತು ಪ್ರಾಣಿಗಳು ಪರಸ್ಪರ ಅವಲಂಬಿತವಾಗಿವೆ. 

Class 6 Science Air Around us ಅಭ್ಯಾಸಗಳು-

೧. ಗಾಳಿಯ ಘಟಕಗಳಾವುವು?

ಉತ್ತರ : ಗಾಳಿಯ ಘಟಕಗಳು : ನೈಟ್ರೋಜನ್, ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್, ನೀರಾವಿ ಹಾಗೂ  ಕೆಲವು ಅನಿಲಗಳು. 

NCERT Solutions Class 6 Science Air Around us In Kannada Medium

೨. ಉಸಿರಾಟಕ್ಕೆ ಅಗತ್ಯವಾದ, ವಾತಾವರಣದಲ್ಲಿರುವ ಅನಿಲ ಯಾವುದು?

ಉತ್ತರ : ಉಸಿರಾಟಕ್ಕೆ ಅಗತ್ಯವಾದ, ವಾತಾವರಣದಲ್ಲಿರುವ ಅನಿಲ -ಆಮ್ಲಜನಕ.

NCERT Solutions Class 6 Science Air Around us In Kannada Medium

೩. ವಸ್ತುಗಳು ಉರಿಯಲು ಗಾಳಿಯು ಸಹಕರಿಸುತ್ತದೆ ಎಂಬುದನ್ನು ಹೇಗೆ ನಿರೂಪಿಸುವಿರಿ?

NCERT Solutions Class 6 Science Air Around us In Kannada Medium

ಉತ್ತರ : ಎರಡು ಖಾಲಿ ಪಾತ್ರೆಗಳ ಮಧ್ಯದಲ್ಲಿ ಒಂದೇ ಉದ್ದದ ಎರಡು ಸಣ್ಣ ಮೇಣದ ಬತ್ತಿಗಳನ್ನು ನಿಮ್ಮ ಶಿಕ್ಷಕರ ಸಮ್ಮುಖದಲ್ಲಿ ಅಂಟಿಸಿ. ಮೇಣದ ಬತ್ತಿಗಳನ್ನು ಹಚ್ಚಿ. ಗಾಜಿನ ಲೋಟದಿಂದ ಒಂದು ಮೇಣದ ಬತ್ತಿಯನ್ನು ಮುಚ್ಚಿ. ಉರಿಯುತ್ತಿರುವ ಎರಡೂ ಮೇಣದ ಬತ್ತಿಗಳನ್ನು ಎಚ್ಚರಿಕೆಯಿಂದ ಗಮನಿಸಿ.ಎರಡೂ ಮೇಣದ ಬತ್ತಿಗಳು ನಿರಂತರವಾಗಿ ಉರಿಯುತ್ತವೆಯೇ? ಅಥವಾ ಆರಿ ಹೋಗುತ್ತವೆಯೇ? ಲೋಟದಿಂದ ಮುಚ್ಚಿದ ಮೇಣದ ಬತ್ತಿಯು ಸ್ವಲ್ಪ ಸಮಯದ ನಂತರ ಆರಿಹೋಗುವುದನ್ನು ಆದರೆ ಇನ್ನೊಂದು ಮೇಣದ ಬತ್ತಿಯು ಉರಿಯುತ್ತಲೇ ಇರುವುದನ್ನು ನೀವು ಗಮನಿಸಿರಲೇಬೇಕು.ಇದಕ್ಕೆ ಕಾರಣವೇನು? ಉರಿಯಲು ಸಹಕರಿಸುವ ಘಟಕವು ಗಾಜಿನ ಲೋಟದೊಳಗೆ ಕಡಿಮೆ ಇದ್ದ ಕಾರಣ ಮೇಣದ ಬತ್ತಿಯು ಆರಿಹೋಯಿತೆಂದು ತೋರುತ್ತದೆ. ಉರಿಯುತ್ತಿರುವ ಮೇಣದ ಬತ್ತಿಯಿಂದ ಈ ಘಟಕವು ಬಹುಪಾಲು ಬಳಕೆಯಾಯಿತು. ಆದರೆ ಇನ್ನೊಂದು ಮೇಣದ ಬತ್ತಿಯು ಗಾಳಿಯ ನಿರಂತರ ಪೂರೈಕೆಯನ್ನು ಪಡೆಯುತ್ತಿದೆ. ಉರಿಯಲು ಸಹಕರಿಸುವ ಗಾಳಿಯ ಈ ಘಟಕವನ್ನು ಆಕ್ಸಿಜನ್ ಎನ್ನುವರು.

೪. ನೀರಿನಲ್ಲಿ ಗಾಳಿಯು ಕರಗಿದೆ ಎಂದು ಹೇಗೆ ತೋರಿಸುವಿರಿ?

ಉತ್ತರ : ಒಂದು ಗಾಜಿನ ಪಾತ್ರೆ ಅಥವಾ ಬೀಕರ್‌ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಳ್ಳಿ. ಅದನ್ನು ನಿಧಾನವಾಗಿ ಕಾಯಿಸಿ. ನೀರು ಕುದಿಯಲಾರಂಭಿಸುವ ಮುನ್ನ ಪಾತ್ರೆಯ ಒಳ ಮೇಲ್ಮೈಯನ್ನು ಎಚ್ಚರಿಕೆಯಿಂದ ಗಮನಿಸಿ. ಒಳಗೆ ಅತಿ ಸಣ್ಣ ಗುಳ್ಳೆಗಳನ್ನು ನೀವು ಕಾಣುವಿರಿ. ಗುಳ್ಳೆಗಳು ನೀರಿನಲ್ಲಿ ಕರಗಿರುವ ಗಾಳಿಯಿಂದ ಬರುತ್ತವೆ. ಆರಂಭದಲ್ಲಿ ನೀರನ್ನು ಬಿಸಿ ಮಾಡಿದಾಗ ನೀರಿನಲ್ಲಿ ಕರಗಿರುವ ಗಾಳಿಯು ಮೊದಲು ಹೊರಹೋಗುತ್ತದೆ. ಬಿಸಿ ಮಾಡುವುದನ್ನು ಮುಂದುವರೆಸಿದಾಗ ನೀರು ಹಬೆಯಾಗುತ್ತದೆ ಮತ್ತು ಕಡೆಗೆ ಕುದಿಯಲಾರಂಭಿಸುತ್ತದೆ. ನೀರಿನಲ್ಲಿ ವಾಸಿಸುವ ಪ್ರಾಣಿಗಳು ನೀರಿನಲ್ಲಿ ಕರಗಿರುವ ಆಕ್ಸಿಜನ್‌ಅನ್ನು ಬಳಸುತ್ತವೆ. 

NCERT Solutions Class 6 Science Air Around us In Kannada Medium

೫. ಹತ್ತಿಉಣ್ಣೆಯ ಉಂಡೆಯು ನೀರಿನಲ್ಲಿ ಏಕೆ ಸಣ್ಣದಾಗುತ್ತದೆ?

ಉತ್ತರ : ಹತ್ತಿ ಉಣ್ಣೆಯ ಉಂಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಾಳಿಯು ಸೇರಿಕೊಂಡು ಅದು  ದೊಡ್ಡದಾಗಿರುತ್ತದೆ. ಅದನ್ನು ನೀರಿನಲ್ಲಿ ಅದ್ದಿದಾಗ ಅದರಲ್ಲಿರುವ ಗಾಳಿಯು ಹೊರಗೆ ಹೋಗಿ  ಹತ್ತಿ ಉಣ್ಣೆಯ ಉಂಡೆಯು ಸಣ್ಣದಾಗುತ್ತದೆ.  

೬. ಭೂಮಿಯನ್ನು ಆವರಿಸಿದ ಗಾಳಿಯ ಪದರವೆ ___________.

ಉತ್ತರ : ವಾತಾವರಣ

೭. ಹಸಿರು ಸಸ್ಯಗಳು ತಮ್ಮ ಆಹಾರ ತಯಾರಿಸಲು ಬಳಸುವ ಗಾಳಿಯ ಘಟಕ __________.

ಉತ್ತರ : ಕಾರ್ಬನ್ ಡೈ ಆಕ್ಸೈಡ್ 

೮. ಗಾಳಿಯಿರುವುದರಿಂದ ಸಾಧ್ಯವಾಗುವ ಐದು ಚಟುವಟಿಕೆಗಳನ್ನು ಪಟ್ಟಿ ಮಾಡಿ.

ಉತ್ತರ : ೧. ಗಾಳಿಯಿಂದ ಆಕ್ಸಿಜನ್ ದೊರೆಯುತ್ತದೆ. ಇದರಿಂದ ಜೀವಿಗಳು ಉಸಿರಾಡಲು  ಸಾಧ್ಯವಾಗುತ್ತದೆ. 

೨. ಗಾಳಿಯಿಂದ ನಾವು ಒಗೆದು ಹಾಕಿದ ಬಟ್ಟೆಗಳು ಒಣಗುತ್ತವೆ. 

೩. ಗಾಳಿಯಿಂದ ಮೋಡಗಳ ಚಲನೆಯು ಸಾಧ್ಯವಾಗುತ್ತದೆ.  

೪. ಗಾಳಿಯಿಂದ ಪವನ ಯಂತ್ರಗಳನ್ನು ತಿರುಗುವಂತೆ ಮಾಡಿ ವಿದ್ಯುತ್‌ನ್ನು  ತಯಾರಿಸಬಹುದಾಗಿದೆ. 

೫. ಗಾಳಿಯಿರುವುದರಿಂದ ಪಕ್ಷಿಗಳು, ಬಾವಲಿಗಳು ಮತ್ತು ಕೀಟಗಳು ಹಾರಲು ಸಾಧ್ಯವಾಗುತ್ತದೆ. 

೯. ವಾತಾವರಣದಲ್ಲಿನ ಅನಿಲಗಳ ವಿನಿಮಯಕ್ಕೆ ಸಸ್ಯಗಳು ಮತ್ತು ಪ್ರಾಣಿಗಳು ಹೇಗೆ ಪರಸ್ಪರ ಸಹಕರಿಸುತ್ತವೆ?

ಉತ್ತರ : ಸಸ್ಯಗಳಿಲ್ಲದೆ ಪ್ರಾಣಿಗಳು ಬದುಕಲಾರವು ಎಂಬುದು ಸ್ಪಷ್ಟ. ಸಸ್ಯಗಳ ಹಾಗೂ ಪ್ರಾಣಿಗಳ  ಉಸಿರಾಟದಿಂದ ಮತ್ತು ಸಸ್ಯಗಳಲ್ಲಿನ ದ್ಯುತಿಸಂಶ್ಲೇಷಣೆಯಿಂದ ವಾತಾವರಣದಲ್ಲಿನ ಆಕ್ಸಿಜನ್  ಮತ್ತು ಕಾರ್ಬನ್ ಡೈ ಆಕ್ಸೈಡ್ ಸಮತೋಲನವು ನಿರ್ವಹಿಸಲ್ಪಡುತ್ತದೆ. ಇದು ಸಸ್ಯಗಳ ಮತ್ತು  ಪ್ರಾಣಿಗಳ ಪರಸ್ಪರ ಅವಲಂಬನೆಯನ್ನು ತೋರಿಸುತ್ತದೆ. ಈ ರೀತಿ ವಾತಾವರಣದಲ್ಲಿನ  ಅನಿಲಗಳ ವಿನಿಮಯಕ್ಕೆ ಸಸ್ಯಗಳು ಮತ್ತು ಪ್ರಾಣಿಗಳು ಪರಸ್ಪರ ಸಹಕರಿಸುತ್ತವೆ.

NCERT Solutions Class 6 Science Air Around us In Kannada Medium


Air Around us FAQS-

1. ಜೀವನಕ್ಕೆ ಗಾಳಿ ಏಕೆ ಅತ್ಯಗತ್ಯ?
ಗಾಳಿಯು ಆಮ್ಲಜನಕವನ್ನು ಹೊಂದಿರುತ್ತದೆ, ಇದು ಉಸಿರಾಟಕ್ಕೆ ನಿರ್ಣಾಯಕವಾಗಿದೆ. ಗಾಳಿಯಿಲ್ಲದೆ,  ಜೀವಿಗಳು ಬದುಕಲು ಸಾಧ್ಯವಿಲ್ಲ.

2. ಗಾಳಿಯ ಸಂಯೋಜನೆ ಏನು?
ಗಾಳಿಯು ಪ್ರಾಥಮಿಕವಾಗಿ ಸಾರಜನಕ (ಸುಮಾರು 78%) ಮತ್ತು ಆಮ್ಲಜನಕದಿಂದ (ಸುಮಾರು 21%) ರಚಿತವಾಗಿದೆ, ಕಾರ್ಬನ್ ಡೈಆಕ್ಸೈಡ್ನಂತಹ ಇತರ ಅನಿಲಗಳ ಕುರುಹುಗಳು.

3. ಗಾಳಿಯ ಒತ್ತಡವು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಹವಾಮಾನ ಮಾದರಿಗಳು, ಪಂಪ್‌ಗಳ ಕಾರ್ಯನಿರ್ವಹಣೆ ಮತ್ತು ವಿಮಾನದ ಹಾರಾಟ ಸೇರಿದಂತೆ ವಿವಿಧ ದೈನಂದಿನ ವಿದ್ಯಮಾನಗಳಲ್ಲಿ ಗಾಳಿಯ ಒತ್ತಡವು ಒಂದು ಪಾತ್ರವನ್ನು ವಹಿಸುತ್ತದೆ.

4. ಗಾಳಿಯಿಲ್ಲದೆ ಬೆಂಕಿ ಉರಿಯಬಹುದೇ?
ಇಲ್ಲ, ಬೆಂಕಿಯನ್ನು ಸುಡಲು ಗಾಳಿಯಿಂದ ಆಮ್ಲಜನಕದ ಅಗತ್ಯವಿದೆ. ಗಾಳಿಯ ಅನುಪಸ್ಥಿತಿಯಲ್ಲಿ, ದಹನ ಸಂಭವಿಸುವುದಿಲ್ಲ.

ಈ ಲೇಖನದಲ್ಲಿ, NCERT Solutions Class 6 Science Air Around us In Kannada Medium ನಾವು NCERT 6 ನೇ ತರಗತಿಯ ವಿಜ್ಞಾನದ ಪರಿಹಾರಗಳನ್ನು ಅನ್ವೇಷಿಸಿದ್ದೇವೆ - ನಮ್ಮ ಸುತ್ತಲಿನ ಗಾಳಿ, ಅದರ ಮಹತ್ವ, ಪ್ರಮುಖ ಪರಿಕಲ್ಪನೆಗಳು ಮತ್ತು ತೊಡಗಿಸಿಕೊಳ್ಳುವ ಬೋಧನಾ ವಿಧಾನವನ್ನು ಒತ್ತಿಹೇಳುತ್ತದೆ. ಈ ಜ್ಞಾನವು ವಿದ್ಯಾರ್ಥಿಗಳನ್ನು ಸುತ್ತುವರೆದಿರುವ ಗಾಳಿ ಮತ್ತು ಪ್ರಪಂಚದಲ್ಲಿ ಅದರ ಅಗತ್ಯ ಪಾತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ದೃಢವಾದ ಅಡಿಪಾಯವನ್ನು ಹೊಂದಿದೆ.

KSEEB Solutions For Class 6 Science Chapters in kannada.

ಅಧ್ಯಾಯ ೧ : ಆಹಾರ-ಇದು ಎಲ್ಲಿಂದ ದೊರಕುತ್ತದೆ? 

ಅಧ್ಯಾಯ ೨ : ಆಹಾರದ ಘಟಕಗಳು 

ಅಧ್ಯಾಯ ೩ : ಎಳೆಯಿಂದ ಬಟ್ಟೆ 

ಅಧ್ಯಾಯ ೪ : ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು 

ಅಧ್ಯಾಯ ೫ : ಪದಾರ್ಥಗಳನ್ನು ಬೇರ್ಪಡಿಸುವಿಕೆ 

ಅಧ್ಯಾಯ ೬ : ನಮ್ಮ ಸುತ್ತಲಿನ ಬದಲಾವಣೆಗಳು 

ಅಧ್ಯಾಯ ೭ : ಸಸ್ಯಗಳನ್ನು ತಿಳಿಯುವುದು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.