Reading Techniques – Enhance Your Academic Skills ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಲು ಓದುವ ತಂತ್ರಗಳು.
Reading Techniques – Enhance Your Academic Skills ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಲು ಓದುವ ತಂತ್ರಗಳು ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಮರೆಯಾಗುತ್ತಿದೆ, ಆದರೆ, 'ಉತ್ತಮ ಪುಸ್ತಕವು , ಉತ್ತಮ ಸ್ನೇಹಿತ ಇದ್ದಂತೆ ' ಎಂಬ ನಾಣ್ಣುಡಿಯಂತೆ ಪುಸ್ತಕಗಳ ಮಹತ್ವ ಎಷ್ಟು ಹೇಳಿದರು ಕಡಿಮೆಯೇ. ಪುಸ್ತಕಗಳನ್ನು ಓದುವ ಗೀಳು ಇರುವವರು ತಮ್ಮನ್ನು ತಾವೇ ಮರೆತು ಆಳಕ್ಕೆ ಇಳಿದು ಪುಸ್ತಕದ ಪ್ರಪಂಚದಲ್ಲಿ ವಿಹರಿಸುವರು, ಇದು ಕೇವಲ ಕೆಲವು ಮಂದಿಯಲ್ಲಿ ಮಾತ್ರ.ನಾವು ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಓದು ಬಹಳ ಮುಖ್ಯ, ಕಾರಣ ಇಂದಿನ ಪರೀಕ್ಷಾ ವಿಧಾನಗಳು. ಒಬ್ಬೊಬ್ಬರ ಓದುವ ವಿಧಾನ ಬೇರೆ ಬೇರೆ, ನಾವು ಓದಿದ ವಿಷಯ ಚೆನ್ನಾಗಿ ಅರ್ಥವಾಗಿ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯ ಅಂಕ ಗಳಿಸಲು, ನಾನು ನಿಮಗೆ 4 ಸರಳವಾದ ವೈಜ್ಞಾನಿಕ ಓದುವ ವಿಧಾನಗಳ ಮಾಹಿತಿಯನ್ನು ನೀಡುವೆ, ಅದು ಯಾವುದು? ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಲು ನಾವು ಅನುಸರಿಸಬೇಕಾದ ಓದುವ ತಂತ್ರಗಳ ಬಗ್ಗೆ ತಿಳಿಸಲಾಗಿದೆ.
ಓದಿನ ಬಗ್ಗೆ ಅನುಭವಿಗಳ ನುಡಿಮುತ್ತುಗಳು -
- ಮಾತನಾಡುವ ಮೊದಲು ಯೋಚಿಸು, ಯೋಚಿಸುವ ಮೊದಲು ಓದಿ - ಫ್ರಾನ್ ಲೆಬೋವಿಟ್ಜ್
- ಓದುಗ ಸಾಯುವ ಮುನ್ನ ಸಾವಿರ ಸಲ ಬದುಕುತ್ತಾನೆ, ಎಂದಿಗೂ ಓದದ ಮನುಷ್ಯ ಒಂದು ಸಲ ಮಾತ್ರ ಬದುಕುತ್ತಾನೆ.
- ಬೇಗ ಬೇಗ ಓದುವುದನ್ನು ಕಲಿಯಿರಿ. ಪ್ರಪಂಚದ ಬುದ್ದಿವಂತರ ಅನೇಕ ವರ್ಷಗಳ ಅನುಭವ ಪುಸ್ತಕಗಳಲ್ಲಿ ಸಿಗುತ್ತದೆ. ಒಂದು ಕಡೆ ಕುಳಿತು ಈ ಪುಸ್ತಕಗಳನ್ನು ಓದಿ ಆಲೋಚಿಸಿದರೆ ನಿಮ್ಮ ಬದುಕಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಕ್ಕುತ್ತದೆ ಬೇಗ ಓದಿ ಅರ್ಥಮಾಡಿಕೊಳ್ಳುವುದು ಅಭ್ಯಾಸವಾದರೆ ಹೆಚ್ಚು ಹೆಚ್ಚು ವಿಷಯಗಳು ನಿಮಗೆ ತಿಳಿಯುತ್ತವೆ.
- ಎಷ್ಟು ಹೊತ್ತು ಓದಿದ್ದೇವೆ ಎಂಬುದು ಮುಖ್ಯವಲ್ಲ ಓದಿದ್ದು ಎಷ್ಟು ತಲೆಗೆ ಹತ್ತಿತು ಎಂಬುದು ಮುಖ್ಯ.
4 ಸರಳವಾದ ವೈಜ್ಞಾನಿಕ ಓದುವ ವಿಧಾನಗಳು/ ತಂತ್ರಗಳು -
- SQR3 ಓದುವ ತಂತ್ರ.
- ಸ್ಕಿಮ್ಮಿಂಗ್ ಓದುವ ತಂತ್ರ.
- ಸ್ಕಾನ್ನಿಂಗ್ ಓದುವ ತಂತ್ರ.
- ಸಕ್ರಿಯ ಓದುವಿಕೆ ಓದುವ ತಂತ್ರ.
SQR3 ಎಂಬುದು acronym for
S- Survey
Q-Question
R3- Read, Review, Repeat
S-Survey ಅಂದರೆ ನೀವು ಓದಬೇಕಾಗಿರುವ ಪುಸ್ತಕ , ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಒಮ್ಮೆ ಕಣ್ಣಾಡಿಸಿ.
Q-Question - ಪ್ರಮುಖ ಪದಗಳನ್ನು ಗಮನಿಸಿದ ನಂತರ ಆ ಪದಗಳನ್ನು ಕೇಂದ್ರಿಕರಿಸಿ ನಿಮಗೆ ನೀವೇ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿ -
ಏನು?
ಎಲ್ಲಿ?
ಹೇಗೆ?
ಏಕೆ?
ಹೀಗೆ ಪ್ರಶ್ನೆಗಳನ್ನು ಹಾಕಿಕೊಂಡು ಅವುಗಳಿಗೆ ಮನಸ್ಸಿನಲ್ಲಿ ಉತ್ತರಿಸಲು ಪ್ರಯತ್ನಿಸಿ, ಆಗ ನಿಮಗೆ ನಿಮ್ಮ ಎದುರು ಇರುವ ಪುಸ್ತಕದಲ್ಲಿ ಇರಬಹುದಾದ ಅಂಶಗಳ ಬಗ್ಗೆ ಮಾಹಿತಿ ಸಿಗುತ್ತದೆ. ನಂತರ R3- Read, , Repeat, Review Read-ನಿಮ್ಮ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗಳನ್ನು ಗಮನದಲ್ಲಿ ಇರಿಸಿಕೊಂಡು ಪಠ್ಯವನ್ನು ಓದಿ.
Repeat - ಪುನಃ ಮೇಲಿನ Read ವಿಧಾನ ಅನುಸರಿಸಿ.
Review- ಮೇಲಿನ ಎರಡೂ ವಿಧಾನಗಳನ್ನು ಅನುಸರಿಸಿದ ನಂತರ ಪಠ್ಯ ದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.ಈ ರೀತಿಯ ಒಂದು ಹೊಸ ವೈಜ್ಞಾನಿಕ ಅಧ್ಯಯನ ವಿಧಾನ ಅನುಸರಿಸಿ ನಮ್ಮ ಪಠ್ಯ ಪುಸ್ತಕದ ಜ್ಞಾನವನ್ನು ವೃದ್ದಿಸಿಕೊಳ್ಳಬಹುದು.
2. ಸ್ಕಿಮ್ಮಿಂಗ್ ಓದುವ ತಂತ್ರ.
ನಾವು ಓದಬೇಕಾದ ವಿಷಯದ ಒಟ್ಟಾರೆ ಪಠ್ಯದ ಮುಖ್ಯ ಪರಿಕಲ್ಪನೆಗಳನ್ನ /ವಿಚಾರಗಳನ್ನು ಮಾತ್ರ ಪಡೆಯಲು ಅನುಸರಿಸುವ ಒಂದು ವೈಜ್ಞಾನಿಕ ವಿಧಾನವಾಗಿದೆ.
- ಲೇಖನ ಅಥವಾ ವಿಷಯದ ಶೀರ್ಷಿಕೆಯನ್ನು ನಾವು ಮೊದಲು ಗಮನಿಸಬೇಕು.
- ಲೇಖನ ಅಥವಾ ಪುಸ್ತಕದ ಪರಿಚಯ ಮೊದಲ ಪ್ಯಾರಾಗ್ರಾಫ್ ಓದುವುದು.
- ಲೇಖನದ ಉಪ ಶೀರ್ಷಿಕೆಗಳನ್ನ ಓದುವುದು
- ಲೇಖನದಲ್ಲಿನ ಚಾರ್ಟ್ಗಳನ್ನ ಚಿತ್ರಗಳನ್ನ ಗಮನಿಸುವುದು
- ಲೇಖನದ ಉಪಸಂಹಾರ ಅಥವಾ ಸಾರಾಂಶ ಓದುವುದು.
- ನಾವು ಒಂದು ಲೇಖನದಲ್ಲಿ ಅಥವಾ ವಿಷಯದಲ್ಲಿ ನಿರ್ದಿಷ್ಟವಾಗಿರುವ ಅತಿ ಅವಶ್ಯಕ ಮಾಹಿತಿಗಳನ್ನ ತ್ವರಿತವಾಗಿ ಪಡೆಯಲು ಅನುಸರಿಸುವ ಅಥವಾ ಬಳಸುವ ಓದುವ ತಂತ್ರ ಇದಾಗಿದೆ .
- ಅವಶ್ಯಕತೆ ಮಾಹಿತಿಯನ್ನು ಹೊರತುಪಡಿಸಿ ಉಳಿದ ಎಲ್ಲವನ್ನು ಗಮನಿಸುವ ಓದುವ ಅವಶ್ಯಕತೆ ಇರುವುದಿಲ್ಲ.
ಉದಾಹರಣೆಗೆ -ನಿರ್ದಿಷ್ಟ ದಿನಾಂಕ ಹುಡುಕುವಾಗ ನಾವು ಅಲ್ಲಿ ಸಂಖ್ಯೆಗಳನ್ನು ಮಾತ್ರ ಗಮನಿಸುತ್ತೇವೆ ಸ್ಕಿಮ್ಮಿಂಗ್ ಮತ್ತು ಸ್ಕ್ಯಾನಿಂಗ್ ಓದುವ ವಿಧಾನಗಳು ವೇಗದ ಓದುವಿಕೆ ಎರಡು ವಿಭಿನ್ನ ತಂತ್ರಗಳಾಗಿವೆ ಎಂಬುದು ನಮಗೆ ತಿಳಿದಿರಬೇಕು.
ಸಕ್ರಿಯ ಓದುವಿಕೆ ಅಥವಾ ಆಕ್ಟಿವ್ ರೀಡಿಂಗ್ ಓದುವನು ತಾನು ಓದುತ್ತಿರುವ ಲೇಖನ ಅಥವಾ ಪಠ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಗ್ರಹಿಕೆಯ ತಂತ್ರವಾಗಿದೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಪ್ರಮುಖವಾದ ಓದುವ ತಂತ್ರ ಇದಾಗಿದೆ .
- ಇದರಲ್ಲಿ ಪೂರ್ವ ಓದು ಮತ್ತು ನಂತರ ನನ್ ನಂತರದ ಓದು ಎಂಬ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ .
- ಯಾವ ಮಾಹಿತಿ ಅವಶ್ಯಕತೆ ಎಂಬುದು ನೆನಪಿನಲ್ಲಿರಬೇಕು .
- ಪರೀಕ್ಷೆಯಲ್ಲಿ ಯಾವ ಪ್ರಶ್ನೆ ಕೇಳಬಹುದು ಎಂಬ ಮುಂದಾಲೋಚನೆ ಮಾಡಬೇಕು.
- ಐದು ನಿಮಿಷ ವಿಶ್ರಾಂತಿ ಪಡೆದು ಮತ್ತೆ ಓದುವುದು ನಂತರ ಹಿಂದೆ ಓದಿದ ಅಂಶಗಳಿಗೂ ಈಗ ಓದುತ್ತಿರುವ ಅಂಶಗಳಿಗೂ ಇರುವ ಸಂಬಂಧವನ್ನು ಗಮನಿಸುವುದು .
- ಓದುವಾಗ ಟಿಪ್ಪಣಿ ಅಥವಾ ನೋಟ್ಸ್ ತೆಗೆದುಕೊಳ್ಳುವುದು.
- ಪಠ್ಯ ಓದುವಾಗ ಅದರಲ್ಲಿನ ಪ್ರಮುಖ ಅಂಶಗಳ ಕೆಳಗೆ ಗೆರೆ ಎಳೆಯುವುದು ಅಥವಾ ಬಣ್ಣದಿಂದ ಮಾರ್ಕ್ ಮಾಡುವುದು ಇತ್ಯಾದಿ ವಿಧಾನಗಳನ್ನ ಇದರಲ್ಲಿ ಅನುಸರಿಸಲಾಗುತ್ತದೆ.
ಇವಿಷ್ಟು ಅತಿ ಪ್ರಮುಖವಾಗಿರುವ ಓದುವ ತಂತ್ರಗಳಾಗಿವೆ ಇವುಗಳಲ್ಲಿ ಯಾವುದು ಯಾವ ಸಂದರ್ಭದಲ್ಲಿ ಯಾವ ಪುಸ್ತಕವನ್ನು ಓದುತ್ತಿದ್ದೇವೆ ಎಂಬುದರ ಅರಿವು ನಾವು ಕಂಡುಕೊಂಡು, ಈ ಮೇಲಿನ ವಿಧಾನಗಳನ್ನು ಅನುಸರಿಸಿ ಓದಿದಾಗ ನಮ್ಮ ಓದು ನಮ್ಮ ಬದುಕಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಕ್ಕುತ್ತದೆ.
good info
ಪ್ರತ್ಯುತ್ತರಅಳಿಸಿPLEASE DO NOT ENTER ANY SPAM LINK IN THE COMMENT BOX