KSEEB Solutions for Class 6 Science Chapter 1 Ahara-Idu Ellinda Dorakuttade?
ಅಧ್ಯಾಯ ೧ : ಆಹಾರ-ಇದು ಎಲ್ಲಿಂದ ದೊರಕುತ್ತದೆ?
6 ನೇ ತರಗತಿ ವಿಜ್ಞಾನದ ಅಧ್ಯಾಯ 1: ಆಹಾರ-ಇದು ಎಲ್ಲಿಂದ ದೊರಕುತ್ತದೆ? ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ವೈವಿಧ್ಯ ಇದೆ ಎಂದು ಕಾಣುತ್ತದೆ. ಈ ಆಹಾರ ಪದಾರ್ಥಗಳನ್ನು ಯಾವುದರಿಂದ ತಯಾರಿಸಲಾಗಿದೆ?ಆಹಾರದ ಮತ್ತು ಅದು ಎಲ್ಲಿಂದ ಬರುತ್ತದೆ ಎಂಬುದನ್ನು ಅನ್ವೇಷಣೆ ಮಾಡಿರುತ್ತೀರಿ. ಈ ಅಧ್ಯಾಯವು ನಮ್ಮ ಆಹಾರದ ಮೂಲಗಳು ಮತ್ತು ಸಮತೋಲಿತ ಆಹಾರದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಅತ್ಯಗತ್ಯ ಅಡಿಪಾಯವಾಗಿದೆ. ಈ ಅಧ್ಯಾಯವನ್ನು ಅಧ್ಯಯನ ಮಾಡುವ ಮೂಲಕ, ವಿದ್ಯಾರ್ಥಿಗಳು ಸಸ್ಯಗಳು ಮತ್ತು ಪ್ರಾಣಿಗಳಂತಹ ವಿವಿಧ ಆಹಾರ ಮೂಲಗಳ ಬಗ್ಗೆ ಮತ್ತು ಆಹಾರವನ್ನು ಉತ್ಪಾದಿಸುವ ಮತ್ತು ಪಡೆಯುವಲ್ಲಿ ಒಳಗೊಂಡಿರುವ ವಿವಿಧ ಪ್ರಕ್ರಿಯೆಗಳ ಬಗ್ಗೆ ಕಲಿಕೆ ಮಾಡಿರುತ್ತೀರಿ. ಈ ಬ್ಲಾಗ್ ಪೋಸ್ಟ್ನಲ್ಲಿ ಈ KSEEB Solutions For Class 6 Science Chapter 1 In Kannada ಅಧ್ಯಾಯದ ಅಭ್ಯಾಸದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ ಜೊತೆಗೆ ನಿಮ್ಮ ಅನುಕೂಲಕ್ಕಾಗಿ ಈ ಉತ್ತರಗಳ ಪಿ.ಡಿ.ಎಫ್. ಪ್ರತಿಯನ್ನು ಒದಗಿಸಲಾಗಿದೆ.
KSEEB Solutions For Class 6 Science Chapter 1 In Kannada.
ಅಭ್ಯಾಸಗಳು
೧. ಎಲ್ಲ ಜೀವಿಗಳಿಗೂ ಒಂದೇ ತರಹದ ಆಹಾರವು ಅವಶ್ಯ ಎಂದು ನೀವು ತಿಳಿದಿರುವಿರಾ?
ಉತ್ತರ- ಇಲ್ಲ. ವಿಭಿನ್ನ ಪ್ರಾಣಿಗಳು ತಮ್ಮ ದೇಹದ ರಚನೆ ಮತ್ತು ಆಂತರಿಕ ಅಂಗಗಳಿಗೆ ಅನುಗುಣವಾಗಿ, ಹಾಗೂ ತಮ್ಮ ದೈಹಿಕ ಅವಶ್ಯಕತೆಗೆ ಅನುಗುಣವಾಗಿ ವಿವಿಧ ರೀತಿಯ ಆಹಾರವನ್ನು ತಿನ್ನುತ್ತವೆ.
೨. ನಾವು ತಿನ್ನುವ ಐದು ಸಸ್ಯಗಳು ಮತ್ತು ತಿನ್ನುವ ಅವುಗಳ ಭಾಗಗಳನ್ನು ಹೆಸರಿಸಿ.
೩. ಕಾಲಂ - ಎ ನಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ - ಬಿ ನಲ್ಲಿರುವ ಅಂಶಗಳೊಂದಿಗೆ
೪. ಕೊಟ್ಟಿರುವ ಪದಗಳಿಂದ ಬಿಟ್ಟ ಸ್ಥಳಗಳನ್ನು ತುಂಬಿ.
ಸಸ್ಯಾಹಾರಿ, ಸಸ್ಯ, ಹಾಲು, ಕಬ್ಬು, ಮಾಂಸಾಹಾರಿ
ಎ) ಹುಲಿಯು ___________. ಏಕೆಂದರೆ ಇದು ಮಾಂಸವನ್ನು ಮಾತ್ರ ತಿನ್ನುತ್ತದೆ.
ಉತ್ತರ-ಮಾಂಸಾಹಾರಿ
ಬಿ) ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ. ಆದ್ದರಿಂದ ಇದು ___________
ಉತ್ತರ-ಸಸ್ಯಾಹಾರಿ
ಸಿ) ಗಿಳಿಯು _____________ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ.
ಉತ್ತರ- ಸಸ್ಯ
ಡಿ) ಹಸುಗಳು, ಎಮ್ಮೆಗಳು ಮತ್ತು ಮೇಕೆಗಳಿಂದ ದೊರೆತ, ನಾವು ಕುಡಿಯುವ ಒಂದು ಪ್ರಾಣಿ
ಜನ್ಯ ಉತ್ಪನ್ನ __________
ಉತ್ತರ-ಹಾಲು
ಇ) ನಮಗೆ ಸಕ್ಕರೆಯು ದೊರೆಯುವ ಮೂಲ __________
ಉತ್ತರ-ಕಬ್ಬು
PLEASE DO NOT ENTER ANY SPAM LINK IN THE COMMENT BOX