6th science chapter 10 solutions Motion and Measurement of Distances in kannada medium

 KSEEB Solutions For Class 6 Science Chapter 10 In Kannada 🙏 Motion and Measurement of Distances.

KSEEB Solutions For Class 6 Science Chapter 10 In Kannada

ಚಲನೆ ಮತ್ತು ದೂರಗಳ ಅಳತೆ ಸಾರಾಂಶ-

  • ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸಲು ಸಾರಿಗೆಯ ವಿವಿಧ ಪ್ರಕಾರಗಳನ್ನು ಬಳಸಲಾಗುತ್ತದೆ.
  • ಹಿಂದಿನ ಕಾಲದಲ್ಲಿ ಜನರು ಪಾದದ ಉದ್ದವನ್ನು, ಬೆರಳಿನ ಅಗಲವನ್ನು, ಹೆಜ್ಜೆಯನ್ನು ಅಳತೆಯ ಏಕಮಾನವನ್ನಾಗಿ ಬಳಸುತ್ತಿದ್ದರು. ಇದರಿಂದ ಗೊಂದಲ ಉಂಟಾಯಿತು ಮತ್ತು ಒಂದು ಏಕರೂಪದ ಅಳತೆಯ ಪದ್ಧತಿಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಹುಟ್ಟು ಹಾಕಿತು.
  • ಈಗ ನಾವು ಅಂತರರಾಷ್ಟ್ರೀಯ ಏಕಮಾನ ಪದ್ಧತಿಯನ್ನು ಬಳಸುತ್ತೇವೆ. ಇದು ಜಗತ್ತಿನ ಎಲ್ಲ ಕಡೆಗಳಲ್ಲೂ ಅಂಗೀಕಾರವಾಗಿದೆ.
  • ಉದ್ದದ SI ಏಕಮಾನ ಮೀಟರ್. 
  • ಸರಳರೇಖೆಯಲ್ಲಿನ ಚಲನೆಯನ್ನು ಸರಳರೇಖೀಯ ಚಲನೆ ಎನ್ನುವರು.
  • ವೃತ್ತೀಯ ಚಲನೆಯಲ್ಲಿ ನಿಗದಿತ ಬಿಂದುವಿನಿಂದ ಸಮಾನ ದೂರದಲ್ಲಿರುವಂತೆ ವಸ್ತುವು ಚಲಿಸುತ್ತದೆ.
  • ಸ್ವಲ್ಪ ಸಮಯದ ನಂತರ ಪುನರಾವರ್ತಿತವಾಗುವ ಚಲನೆಯನ್ನು ಆವರ್ತಕ ಚಲನೆ ಎನ್ನುವರು.

Solutions For Class 6 Science Chapter 10 In Kannada

ಅಭ್ಯಾಸಗಳು
೧. ನೆಲ, ನೀರು ಮತ್ತು ಗಾಳಿಯಲ್ಲಿನ ಸಾರಿಗೆಯ ವಿಧಗಳಿಗೆ ತಲಾ ಎರಡು ಉದಾಹರಣೆಗಳನ್ನು ನೀಡಿ.
ಉತ್ತರ : 
ನೆಲ ಸಾರಿಗೆ :- ಬಸ್ಸು, ಲಾರಿ, ಕಾರು 
ನೀರು (ಜಲ) ಸಾರಿಗೆ :- ಹಡಗು, ದೋಣಿ,    
ಗಾಳಿ (ವಾಯು) ಸಾರಿಗೆ :- ವಿಮಾನ, ಹೆಲಿಕಾಪ್ಟರ್

KSEEB Solutions For Class 6 Science Chapter 10 In Kannada


೨. ಬಿಟ್ಟ ಸ್ಥಳಗಳನ್ನು ತುಂಬಿ. 
i) ಒಂದು ಮೀಟರ್ ಎಂದರೆ ______ cm.
ಉತ್ತರ : 1೦೦ cm
ii) ಐದು ಕಿಲೋಮೀಟರ್ ಎಂದರೆ ____ m.
ಉತ್ತರ : 5000 m
iii) ಉಯ್ಯಾಲೆಯಲ್ಲಿನ ಮಗುವಿನ ಚಲನೆಯು _______ ಚಲನೆ.
ಉತ್ತರ : ಆವರ್ತಕ ಚಲನೆ 
iv) ಹೊಲಿಗೆ ಯಂತ್ರದ ಸೂಜಿಯ ಚಲನೆಯು _______ ಚಲನೆ.
ಉತ್ತರ : ಆವರ್ತಕ ಚಲನೆ 
v) ಬೈಸಿಕಲ್‌ನ ಚಕ್ರದ ಚಲನೆಯು _______ ಚಲನೆ.
ಉತ್ತರ : ವೃತ್ತೀಯ ಚಲನೆ.
೩. ಉದ್ದದ ಆದರ್ಶಮಾನವನ್ನಾಗಿ ಒಂದು ದಾಪು ಅಥವಾ ಒಂದು ಪಾದದ ಹೆಜ್ಜೆಯನ್ನು ಬಳಸಲು ಸಾಧ್ಯವಿಲ್ಲ, ಏಕೆ?

ಉತ್ತರ : ಉದ್ದದ ಆದರ್ಶಮಾನವನ್ನಾಗಿ ಒಂದು ದಾಪು ಅಥವಾ ಒಂದು ಪಾದದ ಹೆಜ್ಜೆಯನ್ನು  ಬಳಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬರ ದೇಹದ ಅಂಗಗಳು ಗಾತ್ರದಲ್ಲಿ ವ್ಯತ್ಯಾಸವನ್ನು  ಹೊಂದಿರುತ್ತವೆ. ಇದರಿಂದ ನಿಖರವಾದ ಅಳತೆ ಸಿಗುವುದಿಲ್ಲ. ಅಳತೆಯು ವ್ಯಕ್ತಿಯಿಂದ ವ್ಯಕ್ತಿಗೆ  ಭಿನ್ನವಾಗುತ್ತದೆ. 
೪. ಈ ಕೆಳಗಿನ ಉದ್ದಗಳನ್ನು ಅವುಗಳ ಪರಿಮಾಣದ ಏರಿಕೆಯ ಕ್ರಮದಲ್ಲಿ ಜೋಡಿಸಿ.
1 ಮೀಟರ್, 1 ಸೆಂಟಿ ಮೀಟರ್, 1 ಕಿಲೋ ಮೀಟರ್, 1 ಮಿಲಿ ಮೀಟರ್.
ಉತ್ತರ : ಏರಿಕೆ ಕ್ರಮ :- 1 ಮಿಲಿ ಮೀಟರ್, 1 ಸೆಂಟಿ ಮೀಟರ್, 1 ಮೀಟರ್, 1 ಕಿಲೋ ಮೀಟರ್ 

೫. ಒಬ್ಬ ವ್ಯಕ್ತಿಯ ಎತ್ತರ 1.65m. ಇದನ್ನು cm ಮತ್ತು mm ಗಳಲ್ಲಿ ವ್ಯಕ್ತಪಡಿಸಿ.
6th science chapter 10 Motion and Measurement of Distances solutions kannada medium


ಉತ್ತರ : ಒಬ್ಬ ವ್ಯಕ್ತಿಯ ಎತ್ತರ   = 1.65 m 
1 m = 100 cm 
1.65 m = 1.65 × 100 = 165 cm 
1cm = 10 mm 
165 cm = 165 × 10 = 1650 mm

೬. ರಾಧಾಳ ಮನೆ ಮತ್ತು ಅವಳ ಶಾಲೆಯ ನಡುವಿನ ಅಂತರ 3250m ಈ ಅಂತರವನ್ನು 
kmನಲ್ಲಿ ವ್ಯಕ್ತಪಡಿಸಿ.
6th science chapter 10 Motion and Measurement of Distances solutions kannada medium


1 km = 1000 m
3250m=3.250km
೭. ಒಂದು ಹೆಣಿಗೆ ಸೂಜಿಯ ಉದ್ದವನ್ನು ಅಳೆಯುವಾಗ ಸ್ಕೇಲ್‌ನ ಒಂದು ಬದಿಯ ಅಳತೆ 3.0cm
ಮತ್ತು ಇನ್ನೊಂದು ಬದಿಯ ಅಳತೆ 33.1cm ಆಗಿದೆ. ಹಾಗಾದರೆ ಸೂಜಿಯ ಉದ್ದವೆಷ್ಟು?
ಉತ್ತರ : ಸೂಜಿಯ ಉದ್ದ= 0.3 + 33.1 = 36.1 cm

೮. ಬೈಸಿಕಲ್‌ನ ಚಲನೆ ಮತ್ತು ಸ್ವಿಚ್ ಆನ್ ಮಾಡಿದ ಸೀಲಿಂಗ್ ಫ್ಯಾನ್‌ಗಳ ನಡುವೆ ಇರುವ 
ಸಾಮ್ಯತೆ ಮತ್ತು ಭಿನ್ನತೆಗಳನ್ನು ಬರೆಯಿರಿ.
ಉತ್ತರ : ಸಾಮ್ಯತೆ : ಎರಡೂ ವೃತ್ತೀಯ ಚಲನೆಗಳಾಗಿವೆ. ಸೀಲಿಂಗ್ ಫ್ಯಾನ್ ಮತ್ತು ಬೈಸಿಕಲ್, ಚಕ್ರಗಳನ್ನು ಒಂದು ಹಂತದ ಬಿಂದುವಿನಲ್ಲಿ ಜೋಡಿಸಲಾಗಿದೆ..
ಸೀಲಿಂಗ್ ಫ್ಯಾನ್ ಮತ್ತು ಬೈಸಿಕಲ್,ಆಯಾ ಸ್ಥಿರ ಬಿಂದುಗಳ ಬಗ್ಗೆ ತಿರುಗುವ ಚಲನೆಯನ್ನು ಹೊಂದಿವೆ.
ಬೈಸಿಕಲ್ ಮತ್ತು ಸೀಲಿಂಗ್ ಫ್ಯಾನ್‌ನ ಚಲನೆಯ ವ್ಯತ್ಯಾಸ:
ಬೈಸಿಕಲ್ ಚಕ್ರಗಳು ಆವರ್ತಕ ಚಲನೆಯ ಜೊತೆಗೆ ಸರಳರೇಖೀಯ ಚಲನೆಯನ್ನು ತೋರಿಸುತ್ತವೆ, ಆದರೆ ಸೀಲಿಂಗ್ ಫ್ಯಾನ್ ವೃತ್ತೀಯ ಚಲನೆ ಚಲನೆಯನ್ನು ಮಾತ್ರ ತೋರಿಸುತ್ತದೆ.
6th science chapter 10 Motion and Measurement of Distances solutions kannada medium


೯. ಅಂತರವನ್ನು ಅಳೆಯಲು ರಬ್ಬರ್‌ನಂತಹ ಸ್ಥಿತಿಸ್ಥಾಪಕ ವಸ್ತುವನ್ನು ಅಳತೆ ಪಟ್ಟಿಯಂತೆ ಬಳಸಲು  ನೀವು ಏಕೆ ಬಯಸುವುದಿಲ್ಲ? ಅಂತಹ ಟೇಪನ್ನು ಬಳಸಿ ಅಳೆದುದನ್ನು ಇತರರಿಗೆ ಹೇಳುವಾಗ ನೀವು ಎದುರಿಸುವ ಸಮಸ್ಯೆಗಳಾವುವು?
6th science chapter 10 Motion and Measurement of Distances solutions kannada medium


ಉತ್ತರ : ರಬ್ಬರ್ ಸ್ಥತಿಸ್ಥಾಪಕ ಗುಣವನ್ನು ಹೊಂದಿದೆ. ಅಂದರೆ ಇದು ಹಿಗ್ಗುತ್ತದೆ ಮತ್ತು ಕುಗ್ಗುತ್ತದೆ. ಈ  ಕಾರಣದಿಂದ ರಬ್ಬರ್‌ನಂತಹ ಸ್ಥಿತಿಸ್ಥಾಪಕ ವಸ್ತುವಿನಿಂದ ಮಾಡಿದ ಅಳತೆ ಪಟ್ಟಿಯನ್ನು ಅಳತೆ  ಮಾಡಲು ಬಳಸಲು ಬಯಸುವುದಿಲ್ಲ. ಇಂತಹ ಟೇಪ್‌ನಿಂದ ನಿಖರವಾದ ಅಳತೆ  ದೊರೆಯುವುದಿಲ್ಲ. ಇತರರಿಗೆ ನಿಖರವಾದ ಅಳತೆಯನ್ನು ಹೇಳಲು ಸಾದ್ಯವಿಲ್ಲ. 

೧೦. ಆವರ್ತಕ ಚಲನೆಗೆ ಎರಡು ಉದಾಹರಣೆಗಳನ್ನು ನೀಡಿ.
ಉತ್ತರ : ಗಡಿಯಾರದ ಲೋಲಕದ ಚಲನೆ ಮತ್ತು ಉಯ್ಯಾಲೆಯಲ್ಲಿ ಮಗುವಿನ ಚಲನೆ.
6th science chapter 10 Motion and Measurement of Distances solutions kannada medium

KSEEB Solutions For Class 6 Science Chapters in kannada.

ಅಧ್ಯಾಯ ೧ : ಆಹಾರ-ಇದು ಎಲ್ಲಿಂದ ದೊರಕುತ್ತದೆ? 

ಅಧ್ಯಾಯ ೨ : ಆಹಾರದ ಘಟಕಗಳು 

ಅಧ್ಯಾಯ ೩ : ಎಳೆಯಿಂದ ಬಟ್ಟೆ 

ಅಧ್ಯಾಯ ೪ : ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು 

ಅಧ್ಯಾಯ ೫ : ಪದಾರ್ಥಗಳನ್ನು ಬೇರ್ಪಡಿಸುವಿಕೆ 

ಅಧ್ಯಾಯ ೬ : ನಮ್ಮ ಸುತ್ತಲಿನ ಬದಲಾವಣೆಗಳು 

ಅಧ್ಯಾಯ ೭ : ಸಸ್ಯಗಳನ್ನು ತಿಳಿಯುವುದು



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.