Class 6 Science Chapter 11 Question Answer In Kannada ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು

 Class 6 Science Chapter 11 Question Answer In Kannada ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು.

Class 6 Science Chapter 11 Question Answer In Kannada

ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು ಸಾರಾಂಶ

  • ಅಪಾರದರ್ಶಕ ವಸ್ತುಗಳು ತಮ್ಮ ಮೂಲಕ ಬೆಳಕನ್ನು ಹರಿಯಲು ಬಿಡುವುದಿಲ್ಲ.ಪಾರದರ್ಶಕ ವಸ್ತುಗಳು ಬೆಳಕನ್ನು ತಮ್ಮ ಮೂಲಕ ಹಾದು ಹೋಗಲು ಬಿಡುತ್ತವೆ ಹಾಗೂ ಈ ವಸ್ತುಗಳ ಮೂಲಕ ನಾವು ಸ್ಪಷ್ಟವಾಗಿ ನೋಡಬಹುದು.
  • ಅರೆ ಪಾರದರ್ಶಕ ವಸ್ತುಗಳು ಬೆಳಕನ್ನು ತಮ್ಮ ಮೂಲಕ ಭಾಗಶಃ ಹರಿದುಹೋಗಲು ಬಿಡುತ್ತವೆ.
  • ಬೆಳಕಿನ ಪಥದಲ್ಲಿ ಅಪಾರದರ್ಶಕ ವಸ್ತುಗಳು ಬಂದಾಗ ಛಾಯೆಗಳು ಉಂಟಾಗುತ್ತವೆ.
  • ಸೂಜಿ ರಂಧ್ರ ಕ್ಯಾಮೆರಾವನ್ನು ಸರಳ ವಸ್ತುಗಳಿಂದ ಮಾಡಬಹುದು ಮತ್ತು ಸೂರ್ಯನ ಹಾಗೂ ಪ್ರಕಾಶಿತ ವಸ್ತುಗಳ ಬಿಂಬವನ್ನು ಪಡೆಯಲು ಬಳಸಬಹುದು.
  • ಬೆಳಕು ಸರಳರೇಖೆಯಲ್ಲಿ ಚಲಿಸುತ್ತದೆ.
  • ದರ್ಪಣದ ಪ್ರತಿಫಲನವು ನಮಗೆ ಸ್ಪಷ್ಟ ಬಿಂಬಗಳನ್ನು ನೀಡುತ್ತದೆ. 

ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು ಅಭ್ಯಾಸಗಳು-

೧. ಅಪಾರದರ್ಶಕ ವಸ್ತುಗಳ ಬಗ್ಗೆ ಅರಿಯಲು ಸಹಾಯ ಮಾಡುವ ಈ ಬಾಕ್ಸ್ಗಳನ್ನು ಪುನರ್ 
ಜೋಡಿಸಿ ಅರ್ಥಪೂರ್ಣ ವಾಕ್ಯ ರಚಿಸಿ.
Class 6 Science Chapter 11 Question Answer In Kannada
ಉತ್ತರ : 
ಅಪಾರ ದರ್ಶಕ ವಸ್ತುಗಳು ಛಾಯೆಯನ್ನು ಉಂಟು ಮಾಡುತ್ತವೆ. 

೨. ಈ ಕೆಳಗೆ ನೀಡಿರುವ ವಸ್ತು ಅಥವಾ ಸಾಮಗ್ರಿಗಳನ್ನು ಪಾರದರ್ಶಕ, ಅಪಾರದರ್ಶಕ, ಅರೆ 
ಪಾರದರ್ಶಕ ಮತ್ತು ಸ್ವಯಂ ಪ್ರಕಾಶ ಅಥವಾ ಸ್ವಯಂ ಪ್ರಕಾಶರಹಿತ ವಸ್ತುಗಳಾಗಿ ವಿಂಗಡಿಸಿ 
ಬರೆಯಿರಿ.
ಗಾಳಿ, ನೀರು, ಬಂಡೆಯ ಚೂರು, ಅಲ್ಯೂಮಿನಿಯಮ್ ಹಾಳೆ, ದರ್ಪಣ, ಮರದ ಹಲಗೆ, 
ಪಾಲಿಥೀನ್ ಹಾಳೆ, ಅಆ, ಹೊಗೆ, ಸಮತಲ ಗಾಜಿನ ಹಾಳೆ, ಹಿಮ, ಕೆಂಪಗೆ ಕಾದ ಕಬ್ಬಿಣದ 
ತುಂಡು, ಕೊಡೆ, ಉರಿಯುತ್ತಿರುವ ಪ್ರತಿದೀಪ್ತ ಕೊಳವೆ, ಗೋಡೆ, ಕಾರ್ಬನ್ 
ಹಾಳೆ, ಗ್ಯಾಸ್ ಬರ್ನರ್‌ನ ಜ್ವಾಲೆ, ಕಾರ್ಡ್ಬೋರ್ಡ್ ಹಾಳೆ. ಉರಿಯುತ್ತಿರುವ ಟಾರ್ಚ್, 
ಸೆಲ್ಲೋಫೇನ್ ಹಾಳೆ, ತಂತಿಯ ಬಲೆ, ಸೀಮೆಎಣ್ಣೆ ಸ್ಟೊವ್, ಸೂರ್ಯ, ಮಿಣುಕುಹುಳು, ಚಂದ್ರ.
Class 6 Science Chapter 11 Question Answer In Kannada


೩. ಒಂದು ರೀತಿಯಲ್ಲಿ ಹಿಡಿದರೆ ವೃತ್ತಾಕಾರದ ಛಾಯೆ, ಇನ್ನೊಂದು ರೀತಿ ಹಿಡಿದರೆ ಆಯತಾಕಾರದ ಛಾಯೆಯನ್ನು ಉಂಟುಮಾಡುವ ಒಂದು ಆಕೃತಿಯನ್ನು ಸೃಷ್ಟಿಸುವ ಬಗ್ಗೆ ಆಲೋಚಿಸುವಿರಾ?
ಉತ್ತರ : ಸಿಲಿಂಡರ್ ಆಕೃತಿಯ ವಸ್ತುವಿನ ಮೇಲ್ಭಾಗ ಅಥವಾ ಕೆಳಭಾಗದಿಂದ ಬೆಳಕನ್ನು ಹಾಯಿಸಿದಾಗ  ಅದರ ಛಾಯೆಯು ವೃತ್ತಾಕಾರದಲ್ಲಿರುತ್ತದೆ. ಅದೇ ಸಿಲಿಂಡರ್ ಆಕೃತಿಯ ವಸ್ತುವಿನ  ಪಾರ್ಶ್ವದಿಂದ ಬೆಳಕನ್ನು ಹಾಯಿಸಿದಾಗ ಆಯತಾಕಾರದ ಛಾಯೆ ಉಂಟಾಗುತ್ತದೆ. 

೪. ಒಂದು ಸಂಪೂರ್ಣ ಕತ್ತಲಾದ ಕೊಠಡಿಯಲ್ಲಿ ನಿಮ್ಮ ಎದುರಿಗೆ ದರ್ಪಣವನ್ನು ಹಿಡಿದುಕೊಂಡರೆ, ದರ್ಪಣದಲ್ಲಿ ನಿಮ್ಮ ಪ್ರತಿಬಿಂಬವು ಕಾಣುವುದೇ?
ಉತ್ತರ : ಇಲ್ಲ, ನಮ್ಮ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಲು ನಮಗೆ ಸಾಧ್ಯವಾಗುವುದಿಲ್ಲ. ಕನ್ನಡಿಯಿಂದ ಬೆಳಕು ಪ್ರತಿಫಲಿಸಿದಾಗ ವಸ್ತುವಿನ ಚಿತ್ರವು ರೂಪುಗೊಳ್ಳುತ್ತದೆ. ಕೋಣೆಯಲ್ಲಿ ಬೆಳಕಿನ ಮೂಲವಿಲ್ಲದ ಕಾರಣ, ಯಾವುದೇ ಚಿತ್ರವು ರೂಪುಗೊಳ್ಳುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.