NCERT Class 6 Social What Books And Burials Tell Us notes in kannada Medium

NCERT Class 6 Social What Books And Burials Tell Us notes in kannada Medium  6 ನೇ ತರಗತಿ ಸಮಾಜ ಅಧ್ಯಾಯ-4 ರ ಅತ್ಯುತ್ತಮ ಸಂಕ್ಷಿಪ್ತ ಪ್ರಮುಖ ಅಂಶಗಳನ್ನುಇಲ್ಲಿ ನೀಡಲಾಗಿದೆ. ಈ ಪ್ರಮುಖ ಅಂಶಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

NCERT Class 6 Social What Books And Burials Tell Us  notes in kannada Medium
Veda means knowledge
Vedic texts - shruthi - Based on hearings.
Smruthi- Based on memory
There are four Vedas– 
  1. The Rigveda, 
  2. The Samaveda, 
  3. The Yajurveda 
  4. The Atharvaveda. 
    The oldest Veda is the Rigveda, composed about 3500 years ago. 
    The Rigveda includes more than a thousand hymns, called sukta or “well-said”. 
    These hymns are in praise of various gods and goddesses. 
    Three gods are especially important: Agni, the god of fire; Indra, a warrior god; and Soma, a plant from which a special drink was prepared. 
    These hymns were composed by sages (rishis). Priests taught students to recite and memorise each syllable, word, and sentence, bit by bit, with great care. 
    Most of the hymns were composed, taught, and learned by men. 
    A few were composed by women.
    Rigveda in Vedic Sanskrit.
    NCERT Class 6 Social What Books And Burials Tell Us notes in kannada Medium

    ವೇದ ಎಂದರೆ ಜ್ಞಾನ ಎಂದರ್ಥ.
    ವೈದಿಕ ಪಠ್ಯಗಳು - ಶ್ರುತಿ - ಕೇಳುವಿಕೆಯ ಆಧಾರದ ಮೇಲೆ ರೂಪುಗೊಂಡಿದೆ.
    ಸ್ಮೃತಿ - ನೆನಪಿನ ಆಧಾರದ ಮೇಲೆ ರೂಪುಗೊಂಡಿದೆ.
    ನಾಲ್ಕು ವೇದಗಳಿವೆ -
    1. ಋಗ್ವೇದ
    2. ಸಾಮವೇದ
    3. ಯಜುರ್ವೇದ
    4. ಅಥರ್ವವೇದ
    ಅತ್ಯಂತ ಹಳೆಯ ವೇದವೆಂದರೆ ಸುಮಾರು 3500 ವರ್ಷಗಳ ಹಿಂದೆ ರಚಿಸಲ್ಪಟ್ಟ ಋಗ್ವೇದ.
    ಋಗ್ವೇದವು ಸಾವಿರಕ್ಕೂ ಹೆಚ್ಚು ಸ್ತೋತ್ರಗಳನ್ನು ಒಳಗೊಂಡಿದೆ, ಇವುಗಳನ್ನು ಸೂಕ್ತ ಅಥವಾ “ಸುವಚನ” ಎಂದು ಕರೆಯುತ್ತಾರೆ.
    ಈ ಸ್ತೋತ್ರಗಳು ವಿವಿಧ ದೇವರು ಮತ್ತು ದೇವತೆಗಳ ಹೊಗಳಿಕೆಯಲ್ಲಿವೆ. ಮೂರು ದೇವರುಗಳು ವಿಶೇಷವಾಗಿ ಮುಖ್ಯವಾಗಿವೆ:
    1. ಅಗ್ನಿ, ಅಗ್ನಿದೇವ;
    2. ಇಂದ್ರ, ಯೋಧ ದೇವರು; ಮತ್ತು
    3. ಸೋಮ, ವಿಶೇಷ ಪಾನೀಯವನ್ನು ತಯಾರಿಸಲಾಗುವ ಸಸ್ಯ.
    • ಈ ಸ್ತೋತ್ರಗಳನ್ನು ಋಷಿಗಳು ರಚಿಸಿದ್ದಾರೆ.
    • ಪುರೋಹಿತರು ವಿದ್ಯಾರ್ಥಿಗಳಿಗೆ ಪ್ರತಿ ಅಕ್ಷರ, ಪದ ಮತ್ತು ವಾಕ್ಯವನ್ನು ಸ್ವಲ್ಪ ಸ್ವಲ್ಪವಾಗಿ ಅತ್ಯಂತ ಜಾಗರೂಕತೆಯಿಂದ ಪಠಿಸಲು ಮತ್ತು ನೆನಪಿಟ್ಟುಕೊಳ್ಳಲು ಕಲಿಸಿದರು.
    • ಹೆಚ್ಚಿನ ಸ್ತೋತ್ರಗಳನ್ನು ಪುರುಷರು ರಚಿಸಿದ್ದಾರೆ, ಕಲಿಸಿದ್ದಾರೆ ಮತ್ತು ಕಲಿತಿದ್ದಾರೆ.  ಕೆಲವನ್ನು ಮಹಿಳೆಯರು ರಚಿಸಿದ್ದಾರೆ.
    • ಋಗ್ವೇದವು ಹಳೆಯ ಅಥವಾ ವೈದಿಕ ಸಂಸ್ಕೃತದಲ್ಲಿದೆ.

    Some of the hymns in the Rigveda are in the form of dialogues. 

    This is part of one such hymn, a dialogue between a sage named Vishvamitra, and two rivers, (Beas and Sutlej) that were worshipped as goddesses.

    ಋಗ್ವೇದದ ಕೆಲವು ಸ್ತೋತ್ರಗಳು ಸಂವಾದದ ರೂಪದಲ್ಲಿವೆ.  

    ವಿಶ್ವಾಮಿತ್ರ ಎಂಬ ಋಷಿ ಮತ್ತು ಪೂಜಿಸಲ್ಪಡುವ ಎರಡು ನದಿಗಳ (ಬಿಯಾಸ್ ಮತ್ತು ಸಟ್ಲೆಜ್) ನಡುವಿನ ಸಂವಾದವನ್ನು ಒಳಗೊಂಡಿರುವ ಸ್ತೋತ್ರದ ಒಂದು ಭಾಗ ಇಲ್ಲಿದೆ.

    Cattle, horses, and chariots

    • There are many prayers in the Rigveda for cattle, children (especially sons), and horses. Horses were yoked to chariots that were used in battles, which were fought to capture cattle. 
    • Battles were also fought for land, which was important for pasture, and for growing hardy crops that ripened quickly, such as barley. 
    • Some battles were fought for water, and to capture people. 
    • Some of the wealth that was obtained was kept by the leaders, some was given to the priests and the rest was distributed amongst the people. 
    • Some wealth was used for the performance of yajnas or sacrifices in which offerings were made into the fire. 
    • These were meant for gods and goddesses. 
    • Offerings could include ghee, grain, and in some cases, animals. 
    • Most men took part in these wars. 
    • There was no regular army, but there were assemblies where people met and discussed matters of war and peace. 
    • They also chose leaders, who were often brave and skilful warriors. 

    ಜಾನುವಾರು, ಕುದುರೆಗಳು ಮತ್ತು ರಥಗಳು

    • ಋಗ್ವೇದದಲ್ಲಿ ಜಾನುವಾರುಗಳು, ಮಕ್ಕಳು (ವಿಶೇಷವಾಗಿ ಗಂಡು ಮಕ್ಕಳು) ಮತ್ತು ಕುದುರೆಗಳಿಗಾಗಿ ಅನೇಕ ಪ್ರಾರ್ಥನೆಗಳಿವೆ. 
    • ಯುದ್ಧಗಳಲ್ಲಿ ಬಳಸಲಾಗುವ ರಥಗಳಿಗೆ ಕುದುರೆಗಳನ್ನು ಜೋಡಿಸಲಾಗಿತ್ತು. 
    • ಈ ಯುದ್ಧಗಳು ಜಾನುವಾರುಗಳನ್ನು ವಶಪಡಿಸಿಕೊಳ್ಳಲು ನಡೆಯುತ್ತಿದ್ದವು. 
    • ಭೂಮಿಗಾಗಿಯೂ ಹೋರಾಡಲಾಗುತ್ತಿತ್ತು, ಇದು ಹುಲ್ಲುಗಾವಲುಗಳಿಗೆ ಮತ್ತು ಬೇಗನೆ ಬೆಳೆಯುವ ಬಾರ್ಲಿಯಂತಹ ಗಟ್ಟಿಮುಟ್ಟಾದ ಬೆಳೆಗಳನ್ನು ಬೆಳೆಯಲು ಮುಖ್ಯವಾಗಿತ್ತು. 
    • ಕೆಲವು ಯುದ್ಧಗಳನ್ನು ನೀರಿಗಾಗಿ ಮತ್ತು ಜನರನ್ನು ವಶಪಡಿಸಿಕೊಳ್ಳಲು ನಡೆಸಲಾಯಿತು.
    • ಪಡೆದ ಸಂಪತ್ತಿನಲ್ಲಿ ಕೆಲವು ಭಾಗವನ್ನು ನಾಯಕರು ತಮ್ಮಲ್ಲಿ ಇಟ್ಟುಕೊಳ್ಳುತ್ತಿದ್ದರು, ಕೆಲವನ್ನು ಪುರೋಹಿತರಿಗೆ ನೀಡಲಾಗುತ್ತಿತ್ತು ಮತ್ತು ಉಳಿದವುಗಳನ್ನು ಜನರಲ್ಲಿ ಹಂಚಲಾಗುತ್ತಿತ್ತು. 
    • ಕೆಲವು ಸಂಪತ್ತನ್ನು ಯಜ್ಞಗಳ ಅನುಷ್ಠಾನಕ್ಕಾಗಿ ಬಳಸಲಾಗುತ್ತಿತ್ತು. ಇವುಗಳಲ್ಲಿ ಬೆಂಕಿಯಲ್ಲಿ ಅರ್ಪಣೆಗಳನ್ನು ಮಾಡಲಾಗುತ್ತಿತ್ತು. 
    • ಇವು ದೇವರು ಮತ್ತು ದೇವತೆಗಳಿಗಾಗಿ ಉದ್ದೇಶಿಸಿ ಮಾಡಲಾಗುತ್ತಿತ್ತು. 
    • ತುಪ್ಪ, ಧಾನ್ಯ ಮತ್ತು ಕೆಲವು ಸಂದರ್ಭಗಳಲ್ಲಿ, ಪ್ರಾಣಿಗಳನ್ನು ಅರ್ಪಣೆಯಾಗಿ ನೀಡಲಾಗುತ್ತಿತ್ತು.
    • ಈ ಯುದ್ಧಗಳಲ್ಲಿ ಹೆಚ್ಚಿನ ಪುರುಷರು ಭಾಗವಹಿಸುತ್ತಿದ್ದರು. 
    • ಕಾಯಂ ಸೇನೆ ಇರಲಿಲ್ಲ, ಆದರೆ ಜನರು ಭೇಟಿಯಾಗಿ ಯುದ್ಧ ಮತ್ತು ಶಾಂತಿಯ ವಿಷಯಗಳನ್ನು ಚರ್ಚಿಸುವ ಸಭೆಗಳು ನಡೆಯುತ್ತಿದ್ದವು. ಅವರು ಸಾಮಾನ್ಯವಾಗಿ ಧೈರ್ಯಶಾಲಿ ಮತ್ತು ನುರಿತ ಯೋಧರಾಗಿದ್ದ ನಾಯಕರನ್ನು ಸಹ ಆಯ್ಕೆ ಮಾಡುತ್ತಿದ್ದರು.

    ಜನರನ್ನು ವಿವರಿಸಲು ಬಳಸುವ ಪದಗಳು-

    ಜನರನ್ನು ವಿವರಿಸಲು ಹಲವಾರು ಮಾರ್ಗಗಳಿವೆ - 

    ಅವರು ಮಾಡುವ ಕೆಲಸ, ಮಾತನಾಡುವ ಭಾಷೆ, ವಾಸಿಸುವ ಸ್ಥಳ, ಕುಟುಂಬ,  ಸಮುದಾಯಗಳು ಮತ್ತು ಸಾಂಸ್ಕೃತಿಕ ಪದ್ಧತಿಗಳ ವಿಷಯದಲ್ಲಿ ಅವರನ್ನು ವಿವರಿಸಲಾಗುತ್ತದೆ. 

    ಋಗ್ವೇದದಲ್ಲಿ ಕಂಡುಬರುವ ಜನರನ್ನು ವಿವರಿಸಲು ಬಳಸಲಾದ ಕೆಲವು ಪದಗಳು -

    ಕೆಲಸದ ಮೂಲಕ ವಿವರಿಸಲಾದ ಎರಡು ಗುಂಪುಗಳಿವೆ - 

    • ಪುರೋಹಿತರು (ಬ್ರಾಹ್ಮಣರು) ವಿವಿಧ ಆಚರಣೆಗಳನ್ನು ಮಾಡುವವರು. 
    • ರಾಜರು-ಇವರು ರಾಜಧಾನಿ ನಗರಗಳನ್ನು, ಅರಮನೆಗಳನ್ನು ಅಥವಾ ಸೈನ್ಯಗಳನ್ನು ಹೊಂದಿರಲಿಲ್ಲ, ಅವರು ತೆರಿಗೆಗಳನ್ನು ಸಂಗ್ರಹಿಸಲಿಲ್ಲ. ರಾಜನ ಮಕ್ಕಳು ಸ್ವಯಂಚಾಲಿತವಾಗಿ ತಮ್ಮ ತಂದೆಯ ಉತ್ತರಾಧಿಕಾರಿಯಾತ್ತಿರಲಿಲ್ಲ. 

    ಜನರನ್ನು ಅಥವಾ ಸಮುದಾಯವನ್ನು ಒಟ್ಟಾರೆಯಾಗಿ ವಿವರಿಸಲು   

    • ಜನ. 
    • ವಿಶ  ವೈಶ್ಯ ಪದವು ವಿಶ ನಿಂದ ಬಂದಿದೆ. 

    ಕೆಲವೊಮ್ಮೆ, ಸ್ತೋತ್ರಗಳನ್ನು ರಚಿಸಿದ ಜನರು ತಮ್ಮನ್ನು ಆರ್ಯರು ಎಂದು ಕರೆದುಕೊಂಡರು ಮತ್ತು ತಮ್ಮ ವಿರೋಧಿಗಳನ್ನು ದಾಸರು ಅಥವಾ ದಸ್ಯುಗಳು ಎಂದು ಕರೆದರು. 

    ಇವರು ಯಜ್ಞಗಳನ್ನು ಮಾಡದ ಮತ್ತು ಬಹುಶಃ ಭಿನ್ನ ಭಾಷೆಗಳನ್ನು ಮಾತನಾಡುವ ಜನರಾಗಿದ್ದರು. ನಂತರ, ದಾಸ (ಮತ್ತು ಸ್ತ್ರೀರೂಪ ದಾಸಿ) ಎಂಬ ಪದವು ಗುಲಾಮ ಎಂದರ್ಥ ಬಂತು.

    ಗುಲಾಮರು ಯುದ್ಧದಲ್ಲಿ ಸೆರೆಹಿಡಿಯಲ್ಪಟ್ಟ ಮಹಿಳೆಯರು ಮತ್ತು ಪುರುಷರಾಗಿದ್ದರು. 

    ಮಾಲೀಕರು ತಮಗೆ ಬೇಕಾದ ಯಾವುದೇ ಕೆಲಸ ಮಾಡಿಸಿಕೊಳ್ಳುವ ಹಕ್ಕು ಅವರಿಗೆ ಇತ್ತು.

    Silent sentinels—the story of the megaliths ನಿಶ್ಯಬ್ದ ಕಾವಲುಗಾರರು - ಹೆಬ್ಬಂಡೆಗಳ ಕಥೆ (ಬೃಹತ್ ಶಿಲಾಯುಗ). 

    • ಈ ಕಲ್ಲಿನ ಬಂಡೆಗಳನ್ನು ಹೆಬ್ಬಂಡೆಗಳು (ಅಕ್ಷರಶಃ ದೊಡ್ಡ ಕಲ್ಲುಗಳು/ಬೃಹತ್ ಶಿಲೆ) ಎಂದು ಕರೆಯಲಾಗುತ್ತದೆ. 
    • ಜನರು ಇವುಗಳನ್ನು ಜಾಗರೂಕವಾಗಿ ಜೋಡಿಸಿ ಸಮಾಧಿ ಸ್ಥಳಗಳನ್ನು ಗುರುತಿಸಲು ಬಳಸುತ್ತಿದ್ದರು. 
    • ಹೆಬ್ಬಂಡೆಗಳನ್ನು ನಿರ್ಮಿಸುವ ಅಭ್ಯಾಸವು ಸುಮಾರು 3000 ವರ್ಷಗಳ ಹಿಂದೆ ಪ್ರಾರಂಭವಾಯಿತು, ಮತ್ತು ಇದು ಡೆಕ್ಕನ್, ದಕ್ಷಿಣ ಭಾರತ, ಈಶಾನ್ಯ ಮತ್ತು ಕಾಶ್ಮೀರದಾದ್ಯಂತ ವ್ಯಾಪಕವಾಗಿತ್ತು.

    • ಕೆಲವು ಹೆಬ್ಬಂಡೆಗಳನ್ನು ಮೇಲ್ಮೈಯಲ್ಲಿ ಕಾಣಬಹುದಾದರೆ, ಇತರ ಹೆಬ್ಬಂಡೆ ಸಮಾಧಿಗಳು ಸಾಮಾನ್ಯವಾಗಿ ಭೂಗತದಲ್ಲಿರುತ್ತವೆ. 
    • ಕೆಲವೊಮ್ಮೆ, ಪುರಾತತ್ವ ಶಾಸ್ತ್ರಜ್ಞರು ಕಲ್ಲಿನ ಬಂಡೆಗಳ ವೃತ್ತವನ್ನು ಅಥವಾ ನೆಲದ ಮೇಲೆ ನಿಂತಿರುವ ಒಂದೇ ದೊಡ್ಡ ಕಲ್ಲನ್ನು ಕಂಡುಕೊಳ್ಳುತ್ತಾರೆ. ಈ ಕುರುಹುಗಳು, ಕೆಳಗೆ ಸಮಾಧಿಗಳಿವೆ ಎಂದು ಸೂಚಿಸುತ್ತವೆ.

    NCERT Class 6 Social What Books And Burials Tell Us notes in kannada Medium

    ಈ ಎಲ್ಲಾ ಸಮಾಧಿಗಳು ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ. 

    1. ಸಾಮಾನ್ಯವಾಗಿ, ಸತ್ತವರನ್ನು ವಿಶಿಷ್ಟವಾದ ಮಡಕೆಗಳೊಂದಿಗೆ ಸಮಾಧಿ ಮಾಡಲಾಗುತ್ತಿತ್ತು, ಇದನ್ನು ಕಪ್ಪು ಮತ್ತು ಕೆಂಪು ಪಾತ್ರೆಗಳು (Black and Red Ware) ಎಂದು ಕರೆಯಲಾಗುತ್ತದೆ. 
    2. ಕಬ್ಬಿಣದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳು ಮತ್ತು ಕೆಲವೊಮ್ಮೆ, ಕುದುರೆಗಳ ಅಸ್ಥಿಪಂಜರಗಳು, ಕುದುರೆ ಸಾಮಗ್ರಿಗಳು ಮತ್ತು ಕಲ್ಲು ಮತ್ತು ಚಿನ್ನದ ಆಭರಣಗಳನ್ನೂ ಇಲ್ಲಿ ಕಾಣಬಹುದು.

    Was iron used in the Harappan cities? ಹರಪ್ಪ ನಗರಗಳಲ್ಲಿ ಕಬ್ಬಿಣವನ್ನು ಬಳಸಲಾಗಿದೆಯೇ?

    • ಹೆಬ್ಬಂಡೆಯ/ಬೃಹತ್ ಶಿಲೆ ಸಮಾಧಿಗಳಲ್ಲಿ ಕಬ್ಬಿಣದ ಸಾಮಗ್ರಿಗಳು ಪತ್ತೆಯಾಗಿದ್ದವು.  
    • ಕುದುರೆ ಸಲಕರಣೆ.  ಕೊಡಲಿಗಳು. ಕಠಾರಿ.

    Finding out about social differences ಸಾಮಾಜಿಕ ವ್ಯತ್ಯಾಸಗಳನ್ನು ಕಂಡುಹಿಡಿಯುವುದು

    • ಪುರಾತತ್ವಶಾಸ್ತ್ರಜ್ಞರು ಒಂದು ಅಸ್ಥಿಪಂಜರದೊಂದಿಗೆ ಕಂಡುಬರುವ ವಸ್ತುಗಳು ಸತ್ತ ವ್ಯಕ್ತಿಗೆ ಸೇರಿದ್ದಿರಬಹುದು ಎಂದು ಭಾವಿಸುತ್ತಾರೆ. ಕೆಲವೊಮ್ಮೆ, ಒಂದು ಸಮಾಧಿಯಲ್ಲಿ ಇನ್ನೊಂದಕ್ಕಿಂತ ಹೆಚ್ಚಿನ ವಸ್ತುಗಳು ಕಂಡುಬರುತ್ತವೆ. 
    • ಬ್ರಹ್ಮಗಿರಿ ಇಲ್ಲಿ, ಒಂದು ಅಸ್ಥಿಪಂಜರವನ್ನು 33 ಚಿನ್ನದ ಮಣಿಗಳು, 2 ಕಲ್ಲಿನ ಮಣಿಗಳು, 4 ತಾಮ್ರದ ಕಡಗಗಳು ಮತ್ತು ಒಂದು ಶಂಖದ ಚಿಪ್ಪಿನೊಂದಿಗೆ ಸಮಾಧಿ ಮಾಡಲಾಗಿದೆ. 
    • ಇತರ ಅಸ್ಥಿಪಂಜರಗಳು ಕೆಲವೇ ಮಡಕೆಗಳನ್ನು ಹೊಂದಿವೆ.
    • ಸಮಾಧಿ ಮಾಡಿದ ಜನರಲ್ಲಿ ಸ್ಥಾನಮಾನದಲ್ಲಿ ಕೆಲವು ವ್ಯತ್ಯಾಸಗಳು ಇದ್ದವು ಎಂದು ಈ ಸಂಶೋಧನೆಗಳು ಸೂಚಿಸುತ್ತವೆ. 
    • ಕೆಲವರು ಶ್ರೀಮಂತರು, ಇತರರು ಬಡವರು, ಕೆಲವರು ಮುಖ್ಯಸ್ಥರು, ಇತರರು ಅನುಯಾಯಿಗಳು ಆಗಿದ್ದರು ಎಂದು ಇದು ತೋರಿಸುತ್ತದೆ.

    Were some burial spots meant for certain families? ಕೆಲವು ಸಮಾಧಿ ಸ್ಥಳಗಳು ಕೆಲವು ಕುಟುಂಬಗಳಿಗೆ ಮೀಸಲಿಡಲಾಗಿತ್ತೇ?

    • ಕೆಲವೊಮ್ಮೆ, ಹೆಬ್ಬಂಡೆಗಳು ಒಂದಕ್ಕಿಂತ ಹೆಚ್ಚು ಅಸ್ಥಿಪಂಜರಗಳನ್ನು ಹೊಂದಿರುತ್ತವೆ. 
    • ಜನರು, ಬಹುಶಃ ಒಂದೇ ಕುಟುಂಬಕ್ಕೆ ಸೇರಿದವರು, ಒಂದೇ ಸ್ಥಳದಲ್ಲಿ ಸಮಾಧಿ ಮಾಡಲ್ಪಟ್ಟಿದ್ದಾರೆ, ಆದರೆ ಒಂದೇ ಸಮಯದಲ್ಲಿ ಅಲ್ಲ ಎಂದು ಸೂಚಿಸುತ್ತದೆ. ನಂತರ ಸತ್ತವರ ಶವಗಳನ್ನು ರಂಧ್ರಗಳ ಮೂಲಕ ಸಮಾಧಿಗೆ ತರಲಾಗುತ್ತಿತ್ತು.
    • ಮೇಲ್ಮೈಯಲ್ಲಿ ಇರಿಸಲಾದ ಕಲ್ಲು ವೃತ್ತಗಳು ಅಥವಾ ಬಂಡೆಗಳು ಬಹುಶಃ ಸಮಾಧಿ ಸ್ಥಳವನ್ನು ಕಂಡುಹಿಡಿಯಲು ಸೂಚನೆಗಳಾಗಿ ಕಾರ್ಯನಿರ್ವಹಿಸಿರಬಹುದು, ಇದರಿಂದ ಜನರು ಯಾವಾಗ ಬೇಕಾದರೂ ಅದೇ ಸ್ಥಳಕ್ಕೆ ಮರಳಬಹುದಾಗಿತ್ತು. 

    A special burial at Inamgaon ಇನಾಂಗಾಂವ್‌ನಲ್ಲಿ ವಿಶೇಷ ಸಮಾಧಿ-

    • ಭೀಮಾ ನದಿಯ ಉಪನದಿಯಾದ ಘೋಡ್ ನದಿಯ ಮೇಲಿರುವ ಸ್ಥಳವೇ ಇನಾಂಗಾಂವ್. 
    • ಇದು 3600 ಮತ್ತು 2700 ವರ್ಷಗಳ ಹಿಂದೆ ಜನವಸತಿಯಾಗಿತ್ತು.
    • ಇಲ್ಲಿ, ವಯಸ್ಕರನ್ನು ಸಾಮಾನ್ಯವಾಗಿ ನೆಲದಲ್ಲಿ ಸಮಾಧಿ ಮಾಡಲಾಗುತ್ತಿತ್ತು, 
    • ತಲೆಯನ್ನು ಉತ್ತರದ ಕಡೆಗೆ ಇರಿಸಿ ನೇರವಾಗಿ ಮಲಗಿಸಲಾಗುತ್ತಿತ್ತು. 
    • ಕೆಲವೊಮ್ಮೆ ಸಮಾಧಿಗಳು ಮನೆಗಳ ಒಳಗೆ ಇರುತ್ತಿದ್ದವು. 
    • ಸತ್ತವರೊಂದಿಗೆ ಆಹಾರ ಮತ್ತು ನೀರನ್ನು ಹೊಂದಿದ್ದ ಪಾತ್ರೆಗಳನ್ನು ಇಡಲಾಗುತ್ತಿತ್ತು.
    • ಒಬ್ಬ ಮನುಷ್ಯನನ್ನು ಮನೆಯ ಮಧ್ಯದಲ್ಲಿ, ಐದು ಕೋಣೆಗಳ ಮನೆಯ (ಸ್ಥಳದ ಅತಿದೊಡ್ಡ ಮನೆಗಳಲ್ಲಿ ಒಂದು) ಪ್ರಾಂಗಣದಲ್ಲಿ ದೊಡ್ಡ, ನಾಲ್ಕು ಕಾಲುಗಳ ಮಣ್ಣಿನ ಜಾಡಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಕಂಡುಬಂದಿದೆ. 
    • ಈ ಮನೆಗೆ ಧಾನ್ಯದ ಕಣಜ ಕೂಡ ಇತ್ತು. 
    • ಶವವನ್ನು ಕಾಲುಗಳನ್ನು ಅಡ್ಡಲಾಗಿ ಬಿಟ್ಟ ಸ್ಥಿತಿಯಲ್ಲಿ ಇರಿಸಲಾಗಿತ್ತು.

    Occupations at Inamgaon ಇನಾಂಗಾಂವ್‌ನಲ್ಲಿನ ವೃತ್ತಿಗಳು-

    • ಪುರಾತತ್ವ ಶಾಸ್ತ್ರಜ್ಞರು ಗೋಧಿ, ಬಾರ್ಲಿ, ಅಕ್ಕಿ, ಕಾಳುಗಳು, ಕಿರುಧಾನ್ಯಗಳು, ಬಟಾಣಿ ಮತ್ತು ಎಳ್ಳಿನ ಬೀಜಗಳನ್ನು ಕಂಡುಕೊಂಡಿದ್ದಾರೆ. ಆಹಾರವಾಗಿ ಬಳಸಿದ್ದರ ಗುರುತುಗಳಿರುವ ಅನೇಕ ಪ್ರಾಣಿಗಳ ಮೂಳೆಗಳು ಸಹ ಪತ್ತೆಯಾಗಿವೆ. 
    • ಎಮ್ಮೆ, ಮೇಕೆ, ಕುರಿ, ನಾಯಿ, ಕುದುರೆ, ಕತ್ತೆ, ಹಂದಿ, ಸಾಂಬಾರ್, ಚುಕ್ಕೆ ಜಿಂಕೆ,ಜಿಂಕೆ, ಮೊಲ ಮತ್ತು ಮುಂಗುಸಿ, ಪಕ್ಷಿಗಳು, ಮೊಸಳೆ, ಆಮೆ, ಏಡಿ ಮತ್ತು ಮೀನುಗಳು ಸೇರಿವೆ.
    • ನೆಲ್ಲಿ, ನೇರಳೆ, ಖರ್ಜೂರ ಮತ್ತು ವಿವಿಧ ಹಣ್ಣುಗಳನ್ನು ಸಂಗ್ರಹಿಸಿದ ಪುರಾವೆಗಳಿವೆ.
    • ವ್ಯವಸಾಯ, ಪಶುಪಾಲನೆ,ಮೀನುಗಾರಿಕೆ,

     👉NCERT Class 6 Social What Books And Burials Tell Us Notes in Kannada Medium PDF.👈

     👇NCERT Class 6 Social What Books And Burials Tell Us Notes in Kannada Medium FAQs.👇

    ವೇದಗಳ ಕಾಲದ ನಾಲ್ಕು ವರ್ಣಗಳನ್ನು ಹೆಸರಿಸಿ.

    ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ.

    ಬೃಹತ್ ಶಿಲೆ ಸಮಾಧಿಗಳು ಸಮಾಜದ ಬಗ್ಗೆ ಏನು ಹೇಳುತ್ತವೆ?

    ಬೃಹತ್ ಶಿಲೆ ಸಮಾಧಿಗಳಲ್ಲಿ ಕಂಡುಬರುವ ವಸ್ತುಗಳು ಸಮಾಜದಲ್ಲಿನ ಸಾಮಾಜಿಕ ವ್ಯತ್ಯಾಸಗಳನ್ನು ಸೂಚಿಸುತ್ತವೆ. ಕೆಲವು ಸಮಾಧಿಗಳಲ್ಲಿ ಹೆಚ್ಚು ವಸ್ತುಗಳು ಕಂಡುಬಂದರೆ, ಇತರ ಸಮಾಧಿಗಳಲ್ಲಿ ಕಡಿಮೆ ವಸ್ತುಗಳು ಕಂಡುಬರುತ್ತವೆ. ಇದು ಸಮಾಜದಲ್ಲಿನ ಆರ್ಥಿಕ ಅಸಮಾನತೆಯನ್ನು ಸೂಚಿಸಬಹುದು.

    ಕರ್ನಾಟಕದಲ್ಲಿರುವ ಪ್ರಮುಖ ಬೃಹತ್ ಶಿಲಾಯುಗದ ನೆಲೆಗಳನ್ನು ಹೆಸರಿಸಿ.

    ಬ್ರಹ್ಮಗಿರಿ, ಹೆಮ್ಮಿಗೆ,ಪಾಂಡವರದಿಣ್ಣೆ, ಬನಹಳ್ಳಿ.















    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.