Taragati 8 Vignana Abhyasa Pustaka 2021 Answer Chapter 1

Taragati 8 vignana abhyasa pustaka 2021 answer chapter 1 ಅಧ್ಯಾಯ:೧ ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ. ಅಭ್ಯಾಸ ಪುಸ್ತಕದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.ktbs solutions class 8 science workbook Crop Production and Management ೮ನೇ ತರಗತಿಯ ವಿದ್ಯಾರ್ಥಿಗಳ ಜ್ಞಾನ ಅನುಭವ ಮತ್ತು ವಯೋಮಾನವನ್ನು ಗಮನದಲ್ಲಿರಿಸಿ ಈ ಅಭ್ಯಾಸ ಪುಸ್ತಕವನ್ನು ರಚಿಸಲಾಗಿದೆ. ಪಠ್ಯದಲ್ಲಿ ಬಂದಿರುವ ಪ್ರಶ್ನೆ ಮತ್ತು ಅವುಗಳ ಸ್ವರೂಪಕ್ಕಿಂತಲೂ ಭಿನ್ನ ನೆಲೆಯಲ್ಲಿ ಈ ಅಭ್ಯಾಸ ಪುಸ್ತಕವನ್ನು ಪ್ರಸ್ತುತ ಪಡಿಸಲು ಪ್ರಯತ್ನಿಸಲಾಗಿದೆ. ಮಗುವಿನ ಯೋಜನಾ ಲಹರಿಯನ್ನು ಪ್ರೇರೇಪಿಸಿ ತನ್ನ ನೈಜ ಭಾವಾಭಿವ್ಯಕ್ತಿಗೆ ಅವಕಾಶ ನೀಡುವಂತಹ ಚಟುವಟಿಕೆ ಮತ್ತು ಪ್ರಶ್ನಾವಳಿ ರೂಪಿಸಲಾಗಿದೆ.

Taragati 8 vignana abhyasa pustaka 2021 answer chapter 1 ಅಧ್ಯಾಯ೧ ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ

ಅಧ್ಯಾಯ:೧ ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ.

      I.ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

      ೧. ಬೆಳೆ ಎಂದರೇನು?

      ಉತ್ತರ-ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ. ಉದಾಹರಣೆಗೆ, ಗೋಧಿಯ ಬೆಳೆ ಎಂದರೆ ಒಂದು ಜಮೀನಿನಲ್ಲಿ ಬೆಳೆಯುವ ಎಲ್ಲಾ ಸಸ್ಯಗಳು ಗೋಧಿಯ ಸಸ್ಯಗಳು ಎಂದರ್ಥ.

      crop

      ೨.ಆಹಾರವನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವ ಅವಶ್ಯಕತೆ ಇದೆ. ಕಾರಣವೇನು?

      ಉತ್ತರ-ನಮ್ಮೆಲ್ಲರಿಗೂ ಆಹಾರದ ಅಗತ್ಯವಿರುವುದರಿಂದ, ಅತ್ಯಧಿಕ ಸಂಖ್ಯೆಯಲ್ಲಿರುವ ನಮ್ಮ ದೇಶದ ಜನರಿಗೆ ನಾವು ಆಹಾರವನ್ನು ಒದಗಿಸಲು ಆಹಾರವನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸಬೇಕಾಗುತ್ತದೆ.ಹೆಚ್ಚಿನ ಜನಸಮೂಹಕ್ಕೆ ಆಹಾರವನ್ನು ಒದಗಿಸಬೇಕಾದರೆ-ಆಹಾರದ ನಿಯಮಿತ ಉತ್ಪಾದನೆ, ಸಮರ್ಪಕ ನಿರ್ವಹಣೆ ಮತ್ತು ವಿತರಣೆ ಅಗತ್ಯವಾಗಿದೆ.

      ೩.ರಬಿ ಬೆಳೆಗಳು ಎಂದರೇನು?

      ಉತ್ತರ- ರಬಿ ಬೆಳೆಗಳು: ಚಳಿಗಾಲದಲ್ಲಿ ಬೆಳೆಯುವ ಬೆಳೆಗಳಿಗೆ ರಬಿ ಬೆಳೆಗಳು ಎನ್ನುವರು. ಅವುಗಳ ಕಾಲಾವಧಿ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಮಾರ್ಚ್ವರೆಗೆ ಇರುತ್ತದೆ. ಗೋಧಿ, ಕಡಲೆ, ಬಟಾಣಿ, ಸಾಸಿವೆ ಮತ್ತು ಅಗಸೆ ರಬಿ ಬೆಳೆಗಳಾಗಿವೆ.

      rabi crops

      ೪.ಖಾರಿಫ್ ಬೆಳೆಗಳು ಎಂದರೇನು?

      ಉತ್ತರ-ಖಾರಿಫ್ ಬೆಳೆಗಳು: ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ಖಾರಿಫ್ ಬೆಳೆಗಳು ಎನ್ನುವರು. ಭಾರತದಲ್ಲಿ ಮಳೆಗಾಲವು ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇರುತ್ತದೆ. ಭತ್ತ, ಜೋಳ, ಸೊಯಾಬೀನ್, ನೆಲಗಡಲೆ, ಹತ್ತಿ ಇತ್ಯಾದಿಗಳು ಖಾರಿಫ್ ಬೆಳೆಗಳು.

      ಖಾರಿಫ್ ಬೆಳೆ

      ೫.ಲೆಗ್ಯುಮಿನೇಸಿ ಕುಟುಂಬಕ್ಕೆ ಸೇರಿದ ಸಸ್ಯಗಳಿಗೆ ಉದಾಹರಣೆ ಕೊಡಿ.

      ಉತ್ತರ-ಅವರೆಕಾಳು,ಕಡಲೆ.ಸೋಯಾಬೀನ್ಸ್ ,ಕಡಲೆಕಾಯಿ.

      ktbs solutions class 8 science workbook Crop Production and Management

      ೬.ಭತ್ತವನ್ನು ಚಳಿಗಾಲದಲ್ಲಿ ಬೆಳೆಯದಿರಲು ಕಾರಣವೇನು?

      ಉತ್ತರ-ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು.ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತದೆ.

      Why paddy can not be grown in the winter season

      ೭.ಉಳುಮೆ ಎಂದರೇನು?

      ಉತ್ತರ-ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎನ್ನುತ್ತಾರೆ. ಇದನ್ನು ನೇಗಿಲನ್ನು ಬಳಸಿ ಮಾಡಲಾಗುತ್ತದೆ.

      ploughing

      ೮.ಹಾನಿಯಾದ ಬೀಜಗಳಿಂದ ಉತ್ತಮ ಆರೋಗ್ಯಕರ ಬೀಜಗಳನ್ನು ಹೇಗೆ ಪ್ರತ್ಯೇಕಿಸುವಿರಿ?

      ಉತ್ತರ-ಒಂದು ಬೀಕರ್ ತೆಗೆದುಕೊಂಡು ಅದರ ಅರ್ಧಭಾಗದವರೆಗೆ ನೀರನ್ನು ತುಂಬಿ. ಒಂದು ಮುಷ್ಟಿ ಗೋಧಿ ಬೀಜಳನ್ನು ಅದಕ್ಕೆ ಹಾಕಿ ಚೆನ್ನಾಗಿ ಕಲಕಿ. ಸ್ವಲ್ಪ ಸಮಯದವರೆಗೆ ಕಾಯಿರಿ.ಬೀಜಗಳೇನಾದರೂ ನೀರಿನ ಮೇಲೆ ತೇಲುತ್ತಿವೆಯೇ? ಒಂದು ವೇಳೆ ಬೀಜಗಳು ತೇಲುತ್ತಿರುವುದು ಕಂಡುಬಂದರೆ ಅವು ಮುಳುಗಿರುವ ಬೀಜಗಳಿಗಿಂತ ಹಗುರವಾಗಿರುತ್ತವೆಯೋ ಅಥವಾ ಭಾರವಾಗಿರುತ್ತವೆಯೋ? ಅವು ಏಕೆ ಹಗುರವಾಗಿರುತ್ತವೆ? ಹಾನಿಗೊಳಗಾದ ಬೀಜಗಳು ಟೊಳ್ಳಾಗಿರುತ್ತವೆಯಾದ್ದರಿಂದ ಅವು ಹಗುರವಾಗಿರುತ್ತವೆ. ಆದ್ದರಿಂದ ಅವು ನೀರಿನ ಮೇಲೆ ತೇಲುತ್ತವೆ.ಉತ್ತಮ, ಆರೋಗ್ಯಕರ ಬೀಜಗಳನ್ನು ಹಾನಿಗೊಂಡ ಬೀಜಗಳಿಂದ ಪ್ರತ್ಯೇಕಿಸಲು ಇದು ಉತ್ತಮ ವಿಧಾನವಾಗಿದೆ.

      ೯.ಯಾಂತ್ರಿಕ ಕೂರಿಗೆಯ ಅನುಕೂಲವೇನು?

      ಉತ್ತರ- ಯಾಂತ್ರಿಕ ಕೂರಿಗೆ: ಟ್ರಾಕ್ಟರ್‌ನ ಸಹಾಯದಿಂದ ಯಾಂತ್ರಿಕ ಕೂರಿಗೆಯನ್ನು ಬಳಸಿ ಬಿತ್ತನೆ ಮಾಡಲಾಗುತ್ತಿದೆ.ಈ ಸಲಕರಣೆಯು ಸರಿಯಾದ ಆಳದಲ್ಲಿ ಮತ್ತು ಅಂತರಗಳಲ್ಲಿ ಒಂದೇ ರೀತಿಯಾಗಿ ಬೀಜಗಳನ್ನು ಬಿತ್ತನೆ ಮಾಡುತ್ತದೆ. ಬಿತ್ತನೆಯ ನಂತರ ಬೀಜಗಳು ಮಣ್ಣಿನಿಂದ ಮುಚ್ಚಿರುವುದನ್ನು ಇದು ಖಚಿತಪಡಿಸುತ್ತದೆ. ಪಕ್ಷಿಗಳು ಬೀಜಗಳನ್ನು ತಿನ್ನದಂತೆ ಇದು ರಕ್ಷಿಸುತ್ತದೆ. ಯಾಂತ್ರಿಕ ಕೂರಿಗೆಯಿಂದ ಮಾಡುವ ಬಿತ್ತನೆಯು ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ.

      Seed drill

      ೧೦. ಸಾವಯವ ಗೊಬ್ಬರ ಎಂದರೇನು?

      ಉತ್ತರ- ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಪೋಷಕಾಂಶಗಳ ರೂಪದಲ್ಲಿ ಮಣ್ಣಿಗೆ ಸೇರಿಸುವ ಪದಾರ್ಥಗಳನ್ನು ಸಾವಯವ ಗೊಬ್ಬರಗಳು ಎನ್ನುವರು. ಸಾವಯವ ಗೊಬ್ಬರವು ಒಂದು ನೈಸರ್ಗಿಕ ಪದಾರ್ಥವಾಗಿದ್ದು, ಅದನ್ನು ಸಗಣಿ ಮತ್ತು ಸಸ್ಯಗಳ ಉಳಿಕೆಗಳ ವಿಘಟನೆಯಿಂದ ಪಡೆಯಲಾಗುತ್ತದೆ.

      Manure

      ೧೧. ಬೆಳೆ ಸರದಿ ಎಂದರೇನು?

      ಉತ್ತರ- ವಿಭಿನ್ನ ಬೆಳೆಗಳನ್ನು ಒಂದಾದ ನಂತರ ಒಂದರಂತೆ ಬೆಳೆಯುವ ಪದ್ಧತಿ. ಬೆಳೆಸರದಿ ಪದ್ಧತಿಯು, ಮಣ್ಣಿಗೆ ಎಲ್ಲಾ ಪೋಷಕಾಂಶಗಳನ್ನು ಮರುಭರ್ತಿಮಾಡುವ ಇನ್ನೊಂದು ವಿಧಾನ. ರೈತರು ಲೆಗ್ಯುಮ್ ಸಸ್ಯಗಳನ್ನು ಮೇವಿನ ಬೆಳೆಯಾಗಿ ಒಂದು ಋತುವಿನಲ್ಲಿ ಬೆಳೆಯುವುದು ಮತ್ತು ಮುಂದಿನ ಋತುವಿನಲ್ಲಿ ಗೋಧಿಯನ್ನು ಬೆಳೆಯುವುದು  ಇದು ಮಣ್ಣಿಗೆ ನೈಟ್ರೋಜನ್ ಮರುಭರ್ತಿಮಾಡಲು ಸಹಾಯ ಮಾಡುತ್ತದೆ. 

      ೧೨. ಕಳೆಗಳು ಎಂದರೇನು?

      ಉತ್ತರ- ಒಂದು ಜಮೀನಿನಲ್ಲಿ ಬೆಳೆಯ ಜೊತೆಗೆ ಅನೇಕ ಅನಪೇಕ್ಷಿತ ಸಸ್ಯಗಳು ತಾನೇ ತಾನಾಗಿ ಬೆಳೆಯಬಹುದು. ಈ ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎನ್ನುವರು.

      ಕಳೆಗಳು ಎಂದರೇನು

      ೧೩. ಪಶುಸಂಗೋಪನೆ ಎಂದರೇನು?

      ಉತ್ತರ- ಪ್ರಾಣಿಗಳಿಂದಲೂ ಸಹ ಆಹಾರವನ್ನು ಪಡೆಯಲಾಗುತ್ತದೆ ಮತ್ತು ಇದಕ್ಕಾಗಿ ಪ್ರಾಣಿಗಳನ್ನು ಮನೆಯಲ್ಲಿ ಅಥವಾ ಸಾಕಾಣಿಕಾ ಕೇಂದ್ರಗಳಲ್ಲಿ ಸಾಕುವ ಪ್ರಾಣಿಗಳಿಗೆ ಸಮರ್ಪಕ ಆಹಾರ, ಆಶ್ರಯ ಮತ್ತು ಕಾಳಜಿಗಳನ್ನು ಒದಗಿಸಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಇದನ್ನು ಮಾಡಿದಾಗ, ಪಶುಸಂಗೋಪನೆ ಎಂದು ಕರೆಯಲಾಗುತ್ತದೆ.

      ಪಶುಸಂಗೋಪನೆ ಎಂದರೇನು

      ktbs solutions class 8 science workbook.

      II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

      ೧. ಎರಡು ಬೆಳೆಗಳ ನಡುವೆ ಮಣ್ಣನ್ನು ಸ್ವಲ್ಪಕಾಲ ಉಳುಮೆ ಮಾಡದೆ ಬಿಡಬೇಕು. ಏಕೆ?

      ಉತ್ತರ- ನಿರಂತರವಾಗಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.  ಮಣ್ಣಿಗೆ ಪುನಃ ಪೋಷಕಾಂಶಗಳನ್ನು ಸೇರಿಸಲು ರೈತರು ಅವಶ್ಯವಾಗಿ ಜಮೀನಿನಲ್ಲಿ ಎರಡು ಬೆಳೆಗಳ ನಡುವೆ ಮಣ್ಣನ್ನು ಸ್ವಲ್ಪಕಾಲ ಉಳುಮೆ ಮಾಡದೆ ಬಿಡಬೇಕು. 

      ೨.ರೈಜೋಬಿಯಂ ಬ್ಯಾಕ್ಟೀರಿಯಾದ ಕಾರ್ಯವನ್ನು ಬರೆಯಿರಿ.

      ಉತ್ತರ- ರೈಜೋಬಿಯಂ (Rhizobium) ಬ್ಯಾಕ್ಟೀರಿಯಾಇವು ಲೆಗ್ಯುಮಿನಸ್ (ದ್ವಿದಳ) ಸಸ್ಯಗಳ ಬೇರುಗಳ ಗಂಟುಗಳಲ್ಲಿ ಇರುತ್ತವೆ. ಅವು ವಾತಾವರಣದ ನೈಟ್ರೋಜನ್‌ಅನ್ನು ಸ್ಥಿರಗೊಳಿಸುತ್ತವೆ.ಮಣ್ಣಿಗೆ ನೈಟ್ರೋಜನ್ ಮರುಭರ್ತಿಮಾಡಲು ಸಹಾಯ ಮಾಡುತ್ತವೆ. 

      ರೈಜೋಬಿಯಂ ಬ್ಯಾಕ್ಟೀರಿಯಾ

      ೩.ಬೇಸಿಗೆಯಲ್ಲಿ ನೀರೊದಗಿಸುವ ಆವರ್ತನ ಹೆಚ್ಚು ಮಾಡಬೇಕು. ಏಕೆ?

      ಉತ್ತರ- ಬೇಸಿಗೆಯಲ್ಲಿ ನೀರೊದಗಿಸುವ ಆವರ್ತನವು ಅತಿ ಹೆಚ್ಚಾಗುತ್ತದೆ. ಮಣ್ಣು ಮತ್ತು ಎಲೆಗಳಿಂದ ನೀರಿನ ಆವೀಕರಣದ ದರವು ಹೆಚ್ಚಾಗುವುದರಿಂದ ಬೆಳೆಗಳಿಗೆ ಬೇಸಿಗೆಯಲ್ಲಿ ನೀರೊದಗಿಸುವ ಆವರ್ತನವು ಅತಿ ಹೆಚ್ಚಾಗುತ್ತದೆ. 

      ಬೇಸಿಗೆಯಲ್ಲಿ ನೀರೊದಗಿಸುವ ಆವರ್ತನ ಹೆಚ್ಚು ಮಾಡಬೇಕು

      ೪.ರೈತರು ಕಳೆ ನಿವಾರಿಸಲು ಅಳವಡಿಸಿಕೊಂಡಿರುವ ವಿಧಾನಗಳನ್ನು ಬರೆಯಿರಿ.

      ಉತ್ತರ- ಬೆಳೆಗಳ ಬಿತ್ತನೆಗೆ ಮೊದಲು ಉಳುಮೆ ಮಾಡುವಿಕೆಯು ಕಳೆಗಳನ್ನು ಬುಡಮೇಲಾಗಿಸಿ ನಾಶಪಡಿಸುತ್ತದೆ.ಕಳೆಗಳು ಹೂವು ಮತ್ತು ಬೀಜಗಳನ್ನು ಬಿಡುವ ಮೊದಲು ಅವುಗಳನ್ನು ಕಿತ್ತು ಹಾಕಬೇಕು. ಇದೇ ಕಳೆಗಳನ್ನು ನಿವಾರಿಸುವ ಅತ್ಯಂತ ಪ್ರಶಸ್ತ ಸಮಯವಾಗಿದೆ. ಕಾಲಕಾಲಕ್ಕೆ ಕಳೆಗಳನ್ನು ಬುಡಸಹಿತ ಕಿತ್ತುಹಾಕುವುದು ಅಥವಾ ನೆಲಮಟ್ಟಕ್ಕೆ ಅವುಗಳನ್ನು ಕತ್ತರಿಸುವುದು ಕೈಗಳಿಂದ ಕಳೆಗಳನ್ನು ನಿವಾರಿಸುವ ವಿಧಾನವಾಗಿದೆ.ಇದನ್ನು ಕುರ್ಪಿ ಅಥವಾ ಕುರ್ಚಿಗೆ ಎಂದು ಕರೆಯುವ ಸಣ್ಣ ಕತ್ತಿಗಳಿಂದ ಮಾಡಲಾಗುತ್ತದೆ. ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಗಳನ್ನೂ ಸಹ ಬಳಸಲಾಗುತ್ತದೆ.

      ಕಳೆನಾಶಕಗಳು ಎಂದು ಕರೆಯಲ್ಪಡುವ ಕೆಲವು ರಾಸಾಯನಿಕಗಳನ್ನು ಬಳಸುವುದರಿಂದಲೂ ಕಳೆಗಳನ್ನು ನಿಯಂತ್ರಿಸಬಹುದು. ಉದಾಹರಣೆಗೆ ೨,೪-ಆ. ಕಳೆಗಳನ್ನು ನಾಶಪಡಿಸಲು ಜಮೀನುಗಳಿಗೆ ಇವುಗಳನ್ನು ಸಿಂಪಡಿಸಲಾಗುತ್ತದೆ. 

      Spraying weedicide

      ೫.ರೈತರು ಕಳೆನಾಶಕ ಬಳಸುವಾಗ ತೆಗೆದುಕೊಳ್ಳುಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು?

      ಉತ್ತರ - ಕಳೆನಾಶಕಗಳ ಸಿಂಪಡಣೆಯು ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು. ಆದ್ದರಿಂದ, ಅವರು ಈ ರಾಸಾಯನಿಕಗಳನ್ನು ಹೆಚ್ಚು ಎಚ್ಚರಿಕೆಯಿಂದ ಬಳಸಬೇಕು. ಈ ರಾಸಾಯನಿಕಗಳನ್ನು ಸಿಂಪಡಿಸುವಾಗ ಅವರು ತಮ್ಮ ಮೂಗು ಮತ್ತು ಬಾಯಿಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು.

      III. ನೀರಾವರಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.

      AB
      ೧. ಏತ ನೀರಾವರಿa..ಸನ್ನೆಕೋಲು ವಿಧಾನ
      ೨.ತುಂತುರು ವಿಧಾನb. ಸಾಕಷ್ಟು ನೀರಿನ ಲಭ್ಯತೆ ಇಲ್ಲದ ಪ್ರದೇಶ
      ೩.ಹನಿ ನೀರಾವರಿc. ಸಾಂಪ್ರದಾಯಿಕ ವಿಧಾನ
      ೪.ರಾಹಟ್d. ಮರಗಳಿಗೆ ನೀರು ಹಾಯಿಸುವ ವಿಧಾನ

      ಉತ್ತರ-

      AB
      ೧. ಏತ ನೀರಾವರಿc. ಸಾಂಪ್ರದಾಯಿಕ ವಿಧಾನ
      ೨.ತುಂತುರು ವಿಧಾನb. ಸಾಕಷ್ಟು ನೀರಿನ ಲಭ್ಯತೆ ಇಲ್ಲದ ಪ್ರದೇಶ
      ೩.ಹನಿ ನೀರಾವರಿd. ಮರಗಳಿಗೆ ನೀರು ಹಾಯಿಸುವ ವಿಧಾನ
      ೪.ರಾಹಟ್a..ಸನ್ನೆಕೋಲು ವಿಧಾನ

      IV. ಈ ಕೆಳಗಿನ ಹೇಳಿಕೆಗಳಿಗೆ ವೈಜ್ಞಾನಿಕ ಕಾರಣ ಕೊಡಿ.

      ೧. ಎರೆಹುಳುಗಳು ರೈತರ ಸ್ನೇಹಿತರು.

      ಉತ್ತರ- ಎರೆಹುಳು ತನ್ನ ಮಾರ್ಗದ ಮಣ್ಣನ್ನು ತಿನ್ನುತ್ತದೆ! ಆನಂತರ ಅದು ತಿಂದು ಜೀರ್ಣವಾಗದ ಭಾಗವನ್ನು ದೇಹದಿಂದ ಹೊರಹಾಕುತ್ತದೆ. ಎರೆಹುಳುವಿನ ಈ ಚಟುವಟಿಕೆಯು ಸಸ್ಯಗಳಿಗೆ ಮಣ್ಣನ್ನು ಹೆಚ್ಚು ಉಪಯುಕ್ತವಾಗಿಸುತ್ತದೆ.ಇವುಗಳು ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುತ್ತವೆ ಮತ್ತು ಅದಕ್ಕೆ ಹ್ಯೂಮಸ್ಸನ್ನು ಸೇರಿಸುತ್ತವೆ. 

      vermicomposting

      ೨.ಬಿತ್ತನೆ ಮಾಡುವ ಬೀಜಗಳ ನಡುವೆ ಸೂಕ್ತ ಅಂತರವಿರಬೇಕು.

      ಉತ್ತರ- ಸಸ್ಯಗಳು ಒತ್ತೊತ್ತಾಗಿ ದಟ್ಟವಾಗಿ ಬೆಳೆಯುವುದನ್ನು ತಪ್ಪಿಸಲು ಬೀಜಗಳ ನಡುವೆ ಸೂಕ್ತ ಅಂತರವಿರಬೇಕು. ಸಸ್ಯಗಳು ಸಾಕಷ್ಟು ಸೌರಬೆಳಕು, ಪೋಷಕಾಂಶಗಳು ಮತ್ತು ನೀರನ್ನು ಮಣ್ಣಿನಿಂದ ಪಡೆಯಲು ಇದು ಸಹಾಯಕವಾಗಿದೆ. 

      ೩.ಮನೆಗಳಲ್ಲಿ ಆಹಾರಧಾನ್ಯಗಳನ್ನು ಸಂಗ್ರಹಿಸಲು ಬೇವಿನ ಎಲೆಗಳನ್ನು ಬಳಸುತ್ತಾರೆ.

      ಉತ್ತರ- ಕಾಳುಗಳನ್ನು  ಪೀಡೆಗಳಿಂದ ಮತ್ತು ಸೂಕ್ಷö್ಮಜೀವಿಗಳಿಂದ ರಕ್ಷಿಸಲು ಮನೆಗಳಲ್ಲಿ ಆಹಾರ ಧಾನ್ಯಗಳನ್ನು ಸಂರಕ್ಷಿಸಲು ಒಣಗಿದ ಬೇವಿನ ಎಲೆಗಳನ್ನು ಬಳಸುತ್ತಾರೆ.

      ೪.ಕೃಷಿಗೆ ಒಳಪಡದ ಕಳೆಗಳನ್ನು ಬೆಳೆಗಳಿಂದ ತೆಗೆದು ಹಾಕುತ್ತಾರೆ.

      ಉತ್ತರ- ಕಳೆಗಳನ್ನು ತೆಗೆದುಹಾಕುವುದಕ್ಕೆ ಕಳೆ ಕೀಳುವಿಕೆ ಎನ್ನುವರು. ಕಳೆಗಳು ನೀರು, ಪೋಷಕಾಂಶಗಳು, ಸ್ಥಳ ಮತ್ತು ಬೆಳಕಿಗಾಗಿ ಬೆಳೆಗಳೊಂದಿಗೆ ಸ್ಪರ್ಧೆ ನಡೆಸುವುದರಿಂದ ಕಳೆ ಕೀಳುವಿಕೆ ಅಗತ್ಯವಾಗಿದೆ. ಏಕೆಂದರೆ, ಬೆಳೆಗಳ ಬೆಳೆಯುವಿಕೆಗೆ ಅವು ಹಾನಿಯುಂಟುಮಾಡುತ್ತವೆ.  ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಅವು ವಿಷಕಾರಿಯಾಗಿರಬಹುದು.

      ೫.ಕೊಯ್ಲು ಮಾಡಿದ ಕಾಳುಗಳನ್ನು ಒಣಗಿಸದೆ ಸಂಗ್ರಹ ಮಾಡಬಾರದು.

      ಉತ್ತರ- ತಾಜಾ ಬೆಳೆಯು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ. ಆಗಷ್ಟೇ ಕೊಯ್ಲು ಮಾಡಿದ ಕಾಳುಗಳನ್ನು (ಧಾನ್ಯಗಳನ್ನು) ಒಣಗಿಸದೇ ಸಂಗ್ರಹಿಸಿದರೆ ಅವು ಹಾಳಾಗಬಹುದು ಅಥವಾ ಕೀಟಭಾದೆಗೆ ಒಳಪಡಬಹುದು ಅಥವಾ ಅವು ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಆದ್ದರಿಂದ, ಸಂಗ್ರಹಿಸುವ ಮೊದಲು ಕಾಳುಗಳನ್ನು ಅವುಗಳಲ್ಲಿನ ತೇವಾಂಶ ಕಡಿಮೆಯಾಗುವಂತೆ ಬಿಸಿಲಿನಲ್ಲಿ ಸಮರ್ಪಕವಾಗಿ ಒಣಗಿಸಬೇಕು. ಇದು ಕೀಟಪೀಡೆಗಳು, ಬ್ಯಾಕ್ಟೀರಿಯಾ, ಮತ್ತು ಶಿಲೀಂಧ್ರಗಳಿಂದಾಗುವ ದಾಳಿಗಳನ್ನು ತಡೆಯುತ್ತದೆ.

      ೬.ಸಾವಯವ ವ್ಯವಸಾಯ ಪದ್ಧತಿಯು ಉತ್ತಮವಾದ ಕೃಷಿ ಪದ್ಧತಿಯಾಗಿದೆ.

      ಉತ್ತರ- 

      1. ನೀರನ್ನು ಹಿಡಿದಿಡುವ ಮಣ್ಣಿನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.
      2. ಇದು ಮಣ್ಣನ್ನು ರಂಧ್ರಯುಕ್ತವಾಗಿಸುತ್ತದೆ. ಇದರಿಂದಾಗಿ, ಅನಿಲಗಳ ವಿನಿಮಯವು ಸುಲಭವಾಗುತ್ತದೆ.
      3. ಇದು ಉಪಯುಕ್ತ ಸೂಕ್ಷ್ಮಜೀವಿಗಳ  ಸಂಖ್ಯೆಯನ್ನು ಹೆಚ್ಚಿಸುತ್ತದೆ.
      4. ಇದು ಮಣ್ಣಿನ ಸಂರಚನೆಯನ್ನು ಸುಧಾರಿಸುತ್ತದೆ.

      V. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.

      ೧. ಕೃಷಿ ಚಟುವಟಿಕೆಯ ಮೊದಲನೇ ಹಂತ ____________________

      ಉತ್ತರ- ಮಣ್ಣನ್ನು ಹದಗೊಳಿಸುವಿಕೆ

      ೨.ಸೂಕ್ಷ್ಮಜೀವಿಗಳು _________ ಕ್ರಿಯೆಯ ಮೂಲಕ ಸಾವಯವ ಗೊಬ್ಬರವನ್ನು ಉಂಟುಮಾಡುತ್ತವೆ. 

      ಉತ್ತರ- ವಿಘಟನೆ ಕ್ರಿಯೆ

      ೩. N.P.K ರಸಗೊಬ್ಬರಗಳಲ್ಲಿರುವ “K” ಅಕ್ಷರವು __________ ಪೋಷಕಾಂಶವನ್ನು ಪ್ರತಿನಿಧಿಸುತ್ತದೆ.

      ಉತ್ತರ- ಪೊಟ್ಯಾಸಿಯಂ

      ೪.ಮೀನಿನ ಕಾಡ್‌ಲಿವರ್ ಎಣ್ಣೆಯಲ್ಲಿರುವ ಜೀವಸತ್ವ ____________

      ಉತ್ತರ- vitamins A and D 

      ೫.ಕಾಫಿ ತೋಟಕ್ಕೆ ಉಪಯುಕ್ತವಾದ ನೀರಾವರಿ ವಿಧಾನ _____________

      ಉತ್ತರ- ತುಂತುರು ವಿಧಾನ 

      VI. ಈ ಕೆಳಗಿನ ಹೇಳಿಕೆಗಳಿಗೆ ಒಂದು ಪದವನ್ನು ಕೊಡಿ.

      ೧. ಪಕ್ವವಾದ ನಂತರ ಬೆಳೆಯನ್ನು ಕತ್ತರಿಸುವ ಕ್ರಿಯೆ. _______________

      ಉತ್ತರ- ಕೊಯ್ಲು

      ೨.ಮಣ್ಣನ್ನು ಮಟ್ಟ ಮಾಡಲು ಬಳಸುವ ಉಪಕರಣ _______________

      ಉತ್ತರ- ಲೆವೆಲ್ಲರ್

      ೩.ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆ _______________

      ಉತ್ತರ- ಕೂರಿಗೆ

      VII. ಈ ಕೆಳಗೆ ಕೊಟ್ಟಿರುವ ಸಲಕರಣೆಗಳ ಕಾರ್ಯವನ್ನು ಬರೆಯಿರಿ.

      ೧. ಎಡೆಕುಂಟೆ

      ಉತ್ತರ-ಇದೊಂದು ಸರಳವಾದ ಉಪಕರಣವಾಗಿದ್ದು ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುತ್ತಾರೆ. 

      ೨.ಕಲ್ಟಿವೇಟರ್

      ಉತ್ತರ-ಟ್ರಾಕ್ಟರ್‌ನಿಂದ ಎಳೆಯುವ ಕಲ್ಟಿವೇಟರ್‌ನಿಂದ ಉಳುಮೆಯನ್ನು ಮಾಡಲಾಗುತ್ತದೆ. ಕಲ್ಟಿವೇಟರ್‌ನ ಬಳಕೆಯಿಂದ ದೈಹಿಕ ಶ್ರಮ ಮತ್ತು ಸಮಯದ ಉಳಿತಾಯವಾಗುತ್ತದೆ. 

      ೩.ಲೆವೆಲ್ಲರ್

      ಉತ್ತರ-ಮಣ್ಣನ್ನು ಮಟ್ಟ ಮಾಡಲು ಬಳಸುವ ಉಪಕರಣ.

      ೪.ನೇಗಿಲು

      ಉತ್ತರ-ಮಣ್ಣನ್ನು ಉಳುಮೆ ಮಾಡಲು, ಬೆಳೆಗೆ ಗೊಬ್ಬರಗಳನ್ನು ಹಾಕಲು, ಕಳೆಗಳನ್ನು ತೆಗೆಯಲು, ಮಣ್ಣನ್ನು ಪುಡಿ ಮಾಡಲು ಮುಂತಾದ ಕೆಲಸಗಳಿಗೆ ಇದನ್ನು ಬಳಸಲಾಗುತ್ತದೆ. 

      VIII. ಈ ಕೆಳಗಿನವುಗಳಿಗೆ ಉದಾಹರಣೆ ಬರೆಯಿರಿ.

      ೧. ಖಾರಿಫ್ ಬೆಳೆಗಳು

      ಉತ್ತರ-ಭತ್ತ, ಜೋಳ, ಸೊಯಾಬೀನ್, ನೆಲಗಡಲೆ, ಹತ್ತಿ 

      ೨.ರಬಿ ಬೆಳೆಗಳು

      ಉತ್ತರ-ಗೋಧಿ, ಕಡಲೆ, ಬಟಾಣಿ, ಸಾಸಿವೆ ಮತ್ತು ಅಗಸೆ 

      ೩. ಸಾಂಪ್ರದಾಯಿಕ ನೀರಾವರಿ ವಿಧಾನ

      ಉತ್ತರ-

      i.ಅಗಳು (ರಾಟೆ ವಿಧಾನ)

      ii. ಸರಪಳಿ ಪಂಪ್

      iii. ಏತ ನೀರಾವರಿ

      iv. ರಾಹಟ್ (ಸನ್ನೆಕೋಲು ವಿಧಾನ) 

      IX. ಹೊಂದಿಸಿ ಬರೆಯಿರಿ.

      AB
      ೧. ನೇಗಿಲುa..ತ್ರಿಕೋನಾಕಾರದ ಕಬ್ಬಿಣದ ಚೂರು
      ೨.ಕುಳb. ದೈಹಿಕ ಶ್ರಮ ಸಮಯದ ಉಳಿತಾಯ
      ೩.ಎಡೆಕುಂಟೆc. ಉಳುಮೆ ಮಾಡಲು
      ೪.ಕಲ್ಟೀವೇಟರ್d.ಕಳೆಗಳನ್ನು ತೆಗೆಯಲು

      ಉತ್ತರ-

      AB
      ೧. ನೇಗಿಲುc. ಉಳುಮೆ ಮಾಡಲು
      ೨.ಕುಳa..ತ್ರಿಕೋನಾಕಾರದ ಕಬ್ಬಿಣದ ಚೂರು
      ೩.ಎಡೆಕುಂಟೆd.ಕಳೆಗಳನ್ನು ತೆಗೆಯಲು
      ೪.ಕಲ್ಟೀವೇಟರ್b. ದೈಹಿಕ ಶ್ರಮ ಸಮಯದ ಉಳಿತಾಯ

      X. ಖಾಲಿ ಬಿಟ್ಟಿರುವ ಸ್ಥಳವನ್ನು ಸೂಕ್ತ ಉತ್ತರದಿಂದ ಭರ್ತಿಮಾಡಿ.

      ೧. ರಸಗೊಬ್ಬರಗಳ ಹೆಸರು ಸಂಗ್ರಹಿಸಿ, ಅವುಗಳಲ್ಲಿರುವ ಪೋಷಕಾಂಶಗಳ ಶೇಕಡ ಪ್ರಮಾಣವನ್ನು ನಮೂದಿಸಿ.

      ಕ್ರ. ಸಂರಸಗೊಬ್ಬರದ ಹೆಸರುಪೋಷಕಾಂಶಗಳ ಸಂಯೋಜನೆ
      1ಯೂರಿಯಾ45-0-0
      2ಜಿಪ್ಸಮ್
      3ಅಮೋನಿಯಂ ನೈಟ್ರೇಟ್
      4ಮೆಗ್ನೀಸಿಯಂ ಸಲ್ಫೇಟ್
      5ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್27-0-0

      ೨.ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.

      ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳಿಗಿರುವ ವ್ಯತ್ಯಾಸ
      ೩.ನಿಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಏಕದಳ ಮತ್ತು ದ್ವಿದಳ ಸಸ್ಯಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿಮಾಡಿ

      ಏಕದಳ ಸಸ್ಯಗಳುದ್ವಿದಳ ಸಸ್ಯಗಳು
      ಏಕದಳ ಧಾನ್ಯ ಸಸ್ಯಗಳ ಬೀಜವು ಒಂದು ಬೀಜ ದಳವನ್ನು ಹೊಂದಿರುತ್ತದೆ.ದ್ವಿದಳ ಧಾನ್ಯ ಸಸ್ಯಗಳ ಬೀಜವು ಎರಡು ಬೀಜ ದಳಗಳನ್ನು ಹೊಂದಿರುತ್ತದೆ.
      ಉದಾಹರಣೆ : ಜೋಳ, ರಾಗಿ, ಗೋಧಿ, ಭತ್ತ, ಸಿರಿಧಾನ್ಯಗಳು.ಉದಾಹರಣೆ : ಹುರುಳಿ, ಶೇಂಗಾ. ತೊಗರಿ, ಕಡಲೆ, ಉದ್ದು.

      ktbs solutions class 8 science workbook Crop Production and Management pdf 



      ಕಾಮೆಂಟ್‌‌ ಪೋಸ್ಟ್‌ ಮಾಡಿ

      0 ಕಾಮೆಂಟ್‌ಗಳು
      * Please Don't Spam Here. All the Comments are Reviewed by Admin.