Taragati 8 vignana abhyasa pustaka chapter 2 Uttaragalu Kannada Madhyama

 

Taragati 8 vignana abhyasa pustaka chapter 2 Uttaragalu Kannada Madhyama.Taragati 8 vignana abhyasa pustaka chapter 2 Uttaragalu Kannada Madhyama

Taragati 8 vignana abhyasa pustaka chapter 2 Uttaragalu Kannada Madhyama ಅಧ್ಯಾಯ - ೨: ಸೂಕ್ಷ್ಮಜೀವಿಗಳು - ಮಿತ್ರ ಮತ್ತು ಶತ್ರು.  ಅಭ್ಯಾಸ ಪುಸ್ತಕದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.ktbs solutions class 8 science workbook Microorganisms Friend and Foe ೮ನೇ ತರಗತಿಯ ವಿದ್ಯಾರ್ಥಿಗಳ ಜ್ಞಾನ ಅನುಭವ ಮತ್ತು ವಯೋಮಾನವನ್ನು ಗಮನದಲ್ಲಿರಿಸಿ ಈ ಅಭ್ಯಾಸ ಪುಸ್ತಕವನ್ನು ರಚಿಸಲಾಗಿದೆ. ಪಠ್ಯದಲ್ಲಿ ಬಂದಿರುವ ಪ್ರಶ್ನೆ ಮತ್ತು ಅವುಗಳ ಸ್ವರೂಪಕ್ಕಿಂತಲೂ ಭಿನ್ನ ನೆಲೆಯಲ್ಲಿ ಈ ಅಭ್ಯಾಸ ಪುಸ್ತಕವನ್ನು ಪ್ರಸ್ತುತ ಪಡಿಸಲು ಪ್ರಯತ್ನಿಸಲಾಗಿದೆ. ಮಗುವಿನ ಯೋಜನಾ ಲಹರಿಯನ್ನು ಪ್ರೇರೇಪಿಸಿ ತನ್ನ ನೈಜ ಭಾವಾಭಿವ್ಯಕ್ತಿಗೆ ಅವಕಾಶ ನೀಡುವಂತಹ ಚಟುವಟಿಕೆ ಮತ್ತು ಪ್ರಶ್ನಾವಳಿ ರೂಪಿಸಲಾಗಿದೆ.

ktbs solutions class 8 science workbook Chapter -2.

I. ಕೆಳಗಿನ ಬಹು ಆಯ್ಕೆ ಪ್ರಶ್ನೆಗಳಿಗೆ ಅಥವಾ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಅದರ ಕ್ರಮಾಕ್ಷರದೊಂದಿಗೆ ಬರೆಯಿರಿ. 

೧. ಕೆಳಗೆ ನೀಡಿರುವ ಸೂಕ್ಷ್ಮಜೀವಿಗಳ ಸರಿಯಾದ ಅನುಕ್ರಮಣಿಕೆ

Taragati 8 vignana abhyasa pustaka chapter 2 Uttaragalu Kannada Madhyama

ಎ) ಪ್ಯಾರಾಮೀಸಿಯಂ, ಕ್ಲಾಮಿಡೋಮೊನಾಸ್, ಸ್ಪೈರೋಗೈರಾ ಮತ್ತು ಅಮೀಬಾ 

ಬಿ) ಕ್ಲಾಮಿಡೋಮೊನಾಸ್, ಸ್ಪೈರೋಗೈರಾ, ಪ್ಯಾರಾಮೀಸಿಯಂ ಮತ್ತು ಅಮೀಬಾ 

ಸಿ) ಸ್ಪೈರೋಗೈರಾ, ಪ್ಯಾರಾಮೀಸಿಯಂ, ಕ್ಲಾಮಿಡೋಮೊನಾಸ್ ಮತ್ತು ಅಮೀಬಾ 

ಡಿ) ಅಮೀಬಾ, ಪ್ಯಾರಾಮೀಸಿಯಂ, ಕ್ಲಾಮಿಡೋಮೊನಾಸ್ ಮತ್ತು ಸ್ಪೈರೋಗೈರಾ

ಉತ್ತರ - ಬಿ) ಕ್ಲಾಮಿಡೋಮೊನಾಸ್, ಸ್ಪೈರೋಗೈರಾ, ಪ್ಯಾರಾಮೀಸಿಯಂ ಮತ್ತು ಅಮೀಬಾ 

ಸೂಕ್ಷ್ಮಜೀವಿಗಳ ಸರಿಯಾದ ಅನುಕ್ರಮಣಿಕೆ

೨. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳೆಂದರೆ

ಎ) ವಿಷಮಶೀತಜ್ವರ ಮತ್ತು ಕ್ಷಯ

ಬಿ) ಕ್ಷಯ ಮತ್ತು ಪೋಲಿಯೊ 

ಸಿ) ಪೋಲಿಯೊ ಮತ್ತು ರೇಬಿಸ್

ಡಿ) ಫ್ಲೂ ಮತ್ತು ವಿಷಮಶೀತಜ್ವರ

ಉತ್ತರ - ಎ) ವಿಷಮಶೀತಜ್ವರ ಮತ್ತು ಕ್ಷಯ

ವಿಷಮಶೀತಜ್ವರ ಮತ್ತು ಕ್ಷಯ


೩. ರೋಗಕಾರಕ ಸೂಕ್ಷ್ಮಣುಜೀವಿಗಳನ್ನು ಕೊಲ್ಲಲು ಬಳಸುವ ಔಷಧಿಗಳು

ಎ) ಪ್ರತಿಕಾಯಗಳು

ಬಿ) ಪ್ರತಿಜೈವಿಕಗಳು

ಸಿ) ಪ್ರತಿರಕ್ಷಕಗಳು

ಡಿ) ಪ್ರತಿಉತ್ಕರ್ಷಕಗಳು

ಉತ್ತರ- ಬಿ) ಪ್ರತಿಜೈವಿಕಗಳು

ಪ್ರತಿಜೈವಿಕಗಳು

೪. ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳ ಸರಿಯಾದ ಆಯ್ಕೆ

ಎ) ಕಾಗದದ ಪೊಟ್ಟಣಗಳು, ಕಾಗದದ ಲೋಟಗಳು ಮತ್ತು ಪ್ಲಾಸ್ಟಿಕ್ ಲೋಟಗಳು 

ಬಿ) ಸಸ್ಯ ಮತ್ತು ಪ್ರಾಣಿತ್ಯಾಜ್ಯಗಳು, ತರಕಾರಿ ಮತ್ತು ಹಣ್ಣುಗಳ ತ್ಯಾಜ್ಯಗಳು ಹಾಗೂ ಆಹಾರದ ಉಳಿಕೆಗಳು

ಸಿ) ಪಾಲಿಥೀನ್ ಚೀಲಗಳು, ಗಾಜಿನ ಖಾಲಿ ಬಾಟಲ್‌ಗಳು ಮತ್ತು ಮುರಿದ ಪ್ಲಾಸ್ಟಿಕ್ ಆಟಿಕೆಗಳು

ಡಿ) ಬಟ್ಟೆ ಚೀಲಗಳು, ಪ್ಲಾಸ್ಟಿಕ್ ಬಳೆಗಳು ಮತ್ತು ರಬ್ಬರ್ ಚಪ್ಪಲಿಗಳು

ಉತ್ತರ- ಸಿ) ಪಾಲಿಥೀನ್ ಚೀಲಗಳು, ಗಾಜಿನ ಖಾಲಿ ಬಾಟಲ್‌ಗಳು ಮತ್ತು ಮುರಿದ ಪ್ಲಾಸ್ಟಿಕ್ ಆಟಿಕೆಗಳು

೫. ಸ್ಥಂಭ-೧ ನ್ನು ಸ್ಥಂಭ-೨ ರೊಂದಿಗೆ ಹೊಂದಿಸಿ ಬರೆಯಿರಿ. ಅಧ್ಯಾಯ - ೨: ಸೂಕ್ಷ್ಮಜೀವಿಗಳು - ಮಿತ್ರ ಮತ್ತು ಶತ್ರು. 

ktbs solutions class 8 science workbook Microorganisms Friend and Foe

B. A. 1– a, 2 – b, 3 – c, 4 – d 

C. B. 1– d, 2 – a, 3 – b, 4 – c 

D. C. 1– d, 2 – c, 3 – b, 4 – a 

E. D.1– d, 2 – b, 3 – a, 4 – c 

ಉತ್ತರ- D. C. 1– d, 2 – c, 3 – b, 4 – a 

೬. ಕೆಳಗಿನವುಗಳಲ್ಲಿ ಸರಿಯಾದ ಜೋಡಿ

ಎ) ಎಡ್ವರ್ಡ್ ಜೆನ್ನರ್ - ಪಾಶ್ಚರೀಕರಣ ಪ್ರಕ್ರಿಯೆಯ ಸಂಶೋಧಕರು 

ಬಿ) ಅಲೆಕ್ಸಾಂಡರ್ ಫ್ಲೆಮಿಂಗ್ - ಪೆನಿಸಿಲಿನ್ ಜೀವನಿರೋಧಕ ಸಂಶೋಧಕರು

ಸಿ) ರಾಬರ್ಟ್ ಕೋಚ್ - ಜೀವಕೋಶಗಳನ್ನು ಮೊದಲು ಗುರುತಿಸಿದವರು 

ಡಿ) ಲೂಯಿ ಪಾಶ್ಚರ್ - ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದವರು

ಉತ್ತರ- ಬಿ) ಅಲೆಕ್ಸಾಂಡರ್ ಫ್ಲೆಮಿಂಗ್ - ಪೆನಿಸಿಲಿನ್ ಜೀವನಿರೋಧಕ ಸಂಶೋಧಕರು

ಅಲೆಕ್ಸಾಂಡರ್ ಫ್ಲೆಮಿಂಗ್ - ಪೆನಿಸಿಲಿನ್ ಜೀವನಿರೋಧಕ ಸಂಶೋಧಕರು

II. ಕೆಳಗಿನ ಹೇಳಿಕೆಗಳು ಸರಿಯಿದ್ದರೆ (ಸ) ಎಂದು, ಅಥವಾ ತಪ್ಪಿದ್ದರೆ (ತ) ಎಂದು ಗುರುತಿಸುವುದರ ಮೂಲಕ ಉತ್ತರಿಸಿ.

೧. ಕೆಲವು ಸೂಕ್ಷ್ಮಜೀವಿಗಳು ಸಾವಯವ ತ್ಯಾಜ್ಯ, ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ಸರಳ ವಸ್ತುಗಳಾಗಿ ವಿಘಟಿಸಿ ಪರಿಸರವನ್ನು ಸ್ವಚ್ಛಗೊಳಿಸುತ್ತವೆ. ( )

ಉತ್ತರ-  ಸರಿ

೨. ವಿನೆಗರ್ ಬಳಕೆಯಿಂದ ಉಪ್ಪಿನಕಾಯಿ ಕೆಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ( )

ಉತ್ತರ- ತಪ್ಪು

೩. ನಾವು ದಿನನಿತ್ಯ ಬಳಸುವ ಅಡುಗೆ ಉಪ್ಪು ಹಾಗೂ ಖಾದ್ಯ ತೈಲಗಳು ಆಹಾರ ಸಂರಕ್ಷಕಗಳಾಗಿ ಕಾರ್ಯನಿರ್ವಹಿಸುತ್ತವೆ. ( )

ಉತ್ತರ-  ಸರಿ

೪. ವೈರಸ್‌ಗಳಿಂದ ಕಾಲು ಮತ್ತು ಬಾಯಿ ರೋಗ, ಹೆಪಟೈಟಿಸ್ - ಎ, ಸೀತಾಳೆ ಸಿಡುಬು, ದಡಾರ ಮತ್ತು ಪೋಲಿಯೊ ರೋಗಗಳು ಉಂಟಾಗುತ್ತವೆ. ( )

ಉತ್ತರ-  ಸರಿ

೫. ವಿಶ್ವವನ್ನೇ ತಲ್ಲಣಗೊಳಿಸಿದ ಕೊರೋನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡಿದ್ದು ಇಟಲಿಯಲ್ಲಿ. ( )

ಉತ್ತರ- ತಪ್ಪು

III. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.ಅಧ್ಯಾಯ - ೨: ಸೂಕ್ಷ್ಮಜೀವಿಗಳು - ಮಿತ್ರ ಮತ್ತು ಶತ್ರು. 

೧. ಪ್ರೋಟೋಜೊವಾಗಳಿಂದ ಉಂಟಾಗುವ ಯಾವುದಾದರೂ ಎರಡು ರೋಗಗಳನ್ನು ಹೆಸರಿಸಿ.

ಉತ್ತರ-ಮಲೇರಿಯಾ, ಅಮೀಬಿಯಾಸಿಸ್, ಗಿಯಾರ್ಡಿಯಾಸಿಸ್, ಟಾಕ್ಸೊಪ್ಲಾಸ್ಮಾಸಿಸ್, ಟ್ರೈಕೊಮೋನಿಯಾಸಿಸ್ ಮತ್ತು ಲೀಶ್ಮೇನಿಯಾಸಿಸ್ ಮೊದಲಾದವು ಪ್ರೊಟೊಜೋವಾದಿಂದ ಉಂಟಾಗುವ ಸಾಮಾನ್ಯ ಕಾಯಿಲೆಗಳಾಗಿವೆ. ಈ ಸೋಂಕುಗಳು ವಿವಿಧ ದೇಹ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಜಠರಗರುಳಿನ ಸಮಸ್ಯೆಗಳಿಂದ ಹಿಡಿದು ತೀವ್ರ ವ್ಯವಸ್ಥಿತ ತೊಡಕುಗಳವರೆಗೆ ರೋಗಲಕ್ಷಣಗಳಿಗೆ ಕಾರಣವಾಗಬಹುದು.

೨. ಪ್ರತಿಜೈವಿಕ ಔಷಧಿಗಳಿಗೆ ಎರಡು ಉದಾಹರಣೆ ಕೊಡಿ.

ಉತ್ತರ- ಸ್ಟ್ರೆಪ್ಟೋಮೈಸಿನ್, ಟೆಟ್ರಾಸೈಕ್ಲಿನ್ ಮತ್ತು ಎರಿಥ್ರೋಮೈಸಿನ್

೩. ಇವುಗಳಿಗೆ ಯಾವ ಸೂಕ್ಷಾö್ಮಣುಜೀವಿಗಳು ಕಾರಣವಾಗಿವೆ? ಎ) ಕ್ಷಯ ಬಿ) ದಡಾರ 

ಉತ್ತರ- ಎ) ಕ್ಷಯ - ಬ್ಯಾಕ್ಟೀರಿಯಾ 

 ಬಿ) ದಡಾರ - ವೈರಸ್

೪. ಕಾಗದವನ್ನು ಪರಿಸರ ಸ್ನೇಹಿ ಎಂದು ಕರೆಯಬಹುದೇ? ಕಾರಣವೇನು?

ಉತ್ತರ-ಕಾಗದವನ್ನು ಸುಲಭವಾಗಿ ಮರುಬಳಕೆ ಮಾಡಲಾಗುತ್ತದೆ ಮತ್ತು ಕಾಗದದ ಫೈಬರ್‌ಗಳು ಕಾಗದದ ಉತ್ಪಾದನೆಗೆ ಬಳಸಲಾಗದಷ್ಟು ಚಿಕ್ಕದಾಗುವ ಮೊದಲು 6 ಅಥವಾ 7 ಬಾರಿ ಮರುಬಳಕೆ ಮಾಡಬಹುದು. 

IV. ಕೆಳಗೆ ನೀಡಿರುವ ಸುಳಿವುಗಳನ್ನು ಆಧಾರವಾಗಿಟ್ಟುಕೊಂಡು, ಕೆಳಗಿನ ಪದಬಂಧವನ್ನು ಪೂರ್ಣಗೊಳಿಸಿ.

 ಎಡದಿಂದ ಬಲಕ್ಕೆ :

೧. ಭೇದಿ ಮತ್ತು ಮಲೇರಿಯಾಗಳಂತಹ ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳು (೪)

ಉತ್ತರ-ಪ್ರೋಟೋಜೋವಾ

೨. ವಿನೆಗರ್ ಅನ್ನು ರಾಸಾಯನಿಕವಾಗಿ ಹೀಗೆ ಕರೆಯುತ್ತಾರೆ (೬)

ಉತ್ತರ-ಅಸಿಟಿಕ್ ಆಮ್ಲ

೩. ಮಲೇರಿಯಾ ರೋಗಕ್ಕೆ ಕಾರಣವಾಗಿರುವ ಸೂಕ್ಷ್ಮಜೀವಿ (೪)

ಉತ್ತರ-ಪ್ರೋಟೋಜೋವಾ

೪. ನಾವು ಬಳಕೆ ಮಾಡುವ ಹಾಲನ್ನು ಮೊಸರನ್ನಾಗಿ ಪರಿವರ್ತಿಸುವ ಉಪಯುಕ್ತ ಬ್ಯಾಕ್ಟೀರಿಯಾ (೩)

ಉತ್ತರ-ಲ್ಯಾಕ್ಟೋಬ್ಯಾಸಿಲಸ್ 

೫. ಹಾಲನ್ನು ಕೆಡದಂತೆ ಸಂರಕ್ಷಿಸಲು ಲೂಯಿಸ್ ಪಾಶ್ಚರ್‌ರವರು ಕಂಡುಹಿಡಿದ ಒಂದು ವಿಧಾನ (೬)

ಉತ್ತರ-ಪಾಶ್ಚರೀಕರಣ

ಮೇಲಿಂದ ಕೆಳಗೆ :

೧. ಸೂಕ್ಷ್ಮಣುಜೀವಿಗಳ ವರ್ಗೀಕರಣದಲ್ಲಿ ಇದು ಒಂದು ಗುಂಪು (೩)

ಉತ್ತರ-ವೈರಸ್

೨. ಪೆನ್ಸಿಲಿನ್ ಜೀವನಿರೋಧಕವನ್ನು ಇದರಿಂದ ತಯಾರಿಸುತ್ತಾರೆ (೫)

ಉತ್ತರ-ಪೆನ್ಸಿಲಿಯಮ್

೩. ಡೆಂಗ್ಯೂ ವೈರಸ್‌ನ ವಾಹಕವಾಗಿರುವ ಹೆಣ್ಣು ಸೊಳ್ಳೆ (೩)

ಉತ್ತರ-ಈಡಿಸ್ 

೪. ವಿಷಮಶೀತಜ್ವರ ಹಾಗೂ ಕ್ಷಯ ರೋಗಗಳನ್ನು ಉಂಟುಮಾಡುವ ಸೂಕ್ಷö್ಮಜೀವಿಗಳ ವಿಧ (೪)

ಉತ್ತರ-ಬ್ಯಾಕ್ಟೀರಿಯಾ

೫. ಕಲುಷಿತ ನೀರು ಅಥವಾ ಆಹಾರದ ಮೂಲಕ ಹರಡುವ ಒಂದು ರೋಗ (೩)

ಉತ್ತರ-ಕಾಲರಾ, ವಿಷಮಶೀತಜ್ವರ

ktbs solutions class 8 science workbook Microorganisms Friend and Foe

VI. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

೧. ವೈರಸ್‌ಗಳಿಂದ ಹರಡಬಹುದಾದ ರೋಗಗಳನ್ನು ಹೆಸರಿಸಿ.

ಉತ್ತರ- ಹೆಪಟೈಟಿಸ್ ಎ, ದಡಾರ ,ಸೀತಾಳೆ ಸಿಡುಬು,ಪೋಲಿಯೋ.

೨. ಲಸಿಕೆಗಳ ಮೂಲಕ ಗುಣಪಡಿಸಬಹುದಾದ ರೋಗಗಳಿಗೆ ನಾಲ್ಕು ಉದಾಹರಣೆ ಕೊಡಿ.

ಉತ್ತರ-ದಡಾರ ,ಸೀತಾಳೆ ಸಿಡುಬು,ಪೋಲಿಯೋ.

೩. ಡೆಂಗ್ಯೂ ರೋಗವನು ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಗಳನ್ನು ಹೇಗೆ ಗುರುತಿಸುವಿರಿ?

ಉತ್ತರ- ಈಡಿಸ್ ಈಜಿಪ್ಟಿ ಸೊಳ್ಳೆ ಎಂಬುದು ಒಂದು ಸಣ್ಣ, ಗಾಢ ಕಪ್ಪು ಬಣ್ಣದ ಸೊಳ್ಳೆಯಾಗಿದ್ದು, ಅದರ ಕಾಲುಗಳ ಮೇಲಿನ ಬಿಳಿ ಪಟ್ಟಿಗಳು ಮತ್ತು ಅದರ ದೇಹದ ಮೇಲಿನ ಬೆಳ್ಳಿ-ಬಿಳಿ ಮಾದರಿಯ ಮಾಪಕಗಳಿಂದ ಗುರುತಿಸಬಹುದು.

೪. ಪ್ರಾಣಿಗಳಲ್ಲಿ ಕಂಡುಬರುವ ಎರಡು ರೋಗಗಳು ಮತ್ತು ಆ ರೋಗಗಳಿಗೆ ಸಂಬಂಧಿಸಿದ ಸೂಕ್ಷ್ಮಜೀವಿಗಳನ್ನು ಹೆಸರಿಸಿ.

ಉತ್ತರ- ಆಂಥ್ರಾಕ್ಸ್ ಇದೊಂದು ಬ್ಯಾಕ್ಟೀರಿಯಾದಿಂದ ಉಂಟಾಗುವ ಮಾನವ ಮತ್ತು ಜಾನುವಾರುಗಳಿಗೆ ತಗುಲುವ ಭಯಾನಕ ರೋಗವಾಗಿದೆ. ಜಾನುವಾರುಗಳಿಗೆ ತಗುಲುವ ಕಾಲು ಮತ್ತು ಬಾಯಿ ರೋಗವು ಒಂದು ವೈರಸ್‌ನಿಂದ ಉಂಟಾಗುತ್ತದೆ.

VII. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

೧. ಹುದುಗುವಿಕೆ ಪ್ರಕ್ರಿಯೆ ಎಂದರೇನು? ಹುದುಗುವಿಕೆ ಕ್ರಿಯೆಯನ್ನು ಪರಿಚಯಿಸಿದ ವಿಜ್ಞಾನಿ ಯಾರು?ಈ ಕ್ರಿಯೆಯು ನಡೆಯುವ ಸಂದರ್ಭದಲ್ಲಿ ಯಾವ ಅನಿಲ ಬಿಡುಗಡೆಯಾಗುತ್ತದೆ?

ಉತ್ತರ-ಸಕ್ಕರೆಯು ಆಲ್ಕೋಹಾಲ್ ಆಗಿ ಪರಿವರ್ತನೆಯಾಗುವ ಈ ಪ್ರಕ್ರಿಯೆಯನ್ನು ಹುದುಗುವಿಕೆ ಎಂದು ಕರೆಯಲಾಗುತ್ತದೆ.  ೧೮೫೭ರಲ್ಲಿ ಲೂಯಿಸ್ ಪ್ಯಾಶ್ಚರ್ ಹುದುಗುವಿಕೆಯನ್ನು ಅನ್ವೇಷಿಸಿದರು.- ಇಂಗಾಲದ ಡೈ ಆಕ್ಸೈಡ್ ಮತ್ತು ನೀರು  ಬಿಡುಗಡೆಯಾಗುತ್ತದೆ. 

೨. ಪ್ಲಾಸ್ಟಿಕ್ ಚೀಲಗಳು, ಕಾಗದದ ಲಕೋಟೆಗಳು, ಹತ್ತಿ ಬಟ್ಟೆಯಿಂದ ತಯಾರಿಸಿದ ಚೀಲಗಳು, ರಬ್ಬರ್ ಪಾದರಕ್ಷೆಗಳು, ಆಹಾರದ ಉಳಿಕೆಗಳು, ತರಕಾರಿ ಸಿಪ್ಪೆಗಳು, ಗಾಜಿನ ಲೋಟಗಳು ಮತ್ತು ಡಿ.ಡಿ.ಟಿ. ಇವುಗಳನ್ನು ಜೈವಿಕ ವಿಘಟನೆಯಾಗುವ ಮತ್ತು ಜೈವಿಕ ವಿಘಟನೆಯಾಗದ ವಸ್ತುಗಳಾಗಿ ವಿಂಗಡಿಸಿ.

ಉತ್ತರ-

ಜೈವಿಕ ವಿಘಟನೆಯಾಗುವ ಮತ್ತು ಜೈವಿಕ ವಿಘಟನೆಯಾಗದ ವಸ್ತುಗಳಾಗಿ ವಿಂಗಡಿಸಿ

೩. ಬಹುತೇಕ ಸೂಕ್ಷ್ಮಣುಜೀವಿಗಳು ಮಾನವರಿಗೆ ವರದಾಯಕವಾಗಿವೆ. ವಿವರಿಸಿ.

ಉತ್ತರ-ಸೂಕ್ಷ್ಮಜೀವಿಗಳನ್ನು  ವಿಭಿನ್ನ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಮೊಸರು, ಬ್ರೆಡ್ ಮತ್ತು ಕೇಕ್ ತಯಾರಿಕೆಗೆ ಅವುಗಳನ್ನು ಬಳಸಲಾಗುತ್ತದೆ.ಅನಾದಿಕಾಲದಿಂದಲೂ ಸೂಕ್ಷ್ಮಜೀವಿಗಳನ್ನು ಮದ್ಯದ ಉತ್ಪಾದನೆಗೆ ಬಳಸಲಾಗುತ್ತಿದೆ.ಪರಿಸರವನ್ನು ಸ್ವಚ್ಛಗೊಳಿಸಲೂ ಅವುಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಬ್ಯಾಕ್ಟೀರಿಯಾಗಳು ಸಾವಯವ ತ್ಯಾಜ್ಯಗಳನ್ನು(ತರಕಾರಿ ಹಾನಿಕರವಲ್ಲದ ಮತ್ತು ಸಿಪ್ಪೆಗಳು, ಪ್ರಾಣಿಗಳ ಅವಶೇಷಗಳು, ಮಲ ಇತ್ಯಾದಿ) ಬಳಸಬಹುದಾದ ವಸ್ತುಗಳನ್ನಾಗಿ ವಿಘಟಿಸುತ್ತವೆ. ಬ್ಯಾಕ್ಟೀರಿಯಾಗಳನ್ನು ಔಷಧಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ. ಇವುಗಳು ನೈಟ್ರೋಜನ್ ಅನ್ನು ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ಕೃಷಿಯಲ್ಲಿ ಬಳಸುವರು.

VIII. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

೧. ಕೆಳಗೆ ನೀಡಿರುವ ಆಹಾರ ಪದಾರ್ಥಗಳ ಸಂಗ್ರಹಯೋಗ್ಯ ಕಾಲವನ್ನು ಹೆಚ್ಚಿಸಬೇಕಾದರೆ ನಾವು ಬಳಸಬಹುದಾದ ರಾಸಾಯನಿಕಗಳು ಅಥವಾ ತಂತ್ರಗಳು

ಎ) ಜಾಮ್ ಮತ್ತು ಹಣ್ಣಿನ ರಸ-

ಜಾಮ್, ಜೆಲ್ಲಿ, ಮತ್ತು ಹಣ್ಣಿನ ರಸಗಳು ಸಕ್ಕರೆಯಿಂದ ಸಂರಕ್ಷಿಸಲ್ಪಡುತ್ತವೆ. ಸಕ್ಕರೆಯು ತೇವಾಂಶದ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ಆಹಾರವನ್ನು ಹಾಳುಮಾಡುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಗಟ್ಟುತ್ತದೆ.

ಬಿ) ಮೀನು ಮತ್ತು ಮಾಂಸ -ಎಣ್ಣೆ ಮತ್ತು ವಿನೆಗರ್‌ಗಳ ಬಳಕೆ.

ಸಿ) ಲಿಂಬೆ ಹಣ್ಣಿನಿಂದ ತಯಾರಿಸಿದ ಉಪ್ಪಿನಕಾಯಿ - ಎಣ್ಣೆ ಮತ್ತು ವಿನೆಗರ್‌ಗಳ ಬಳಕೆ

ಡಿ) ಹಾಲು ಮತ್ತು ಮೊಸರು- ಶಾಖ ಮತ್ತು ತಂಪು ವಿಧಾನ

೨. ಬ್ಯಾಕ್ಟೀರಿಯಾಗಳಿಂದ ವರ್ಗಾವಣೆಯಾಗಬಹುದಾದ ಯಾವುದಾದರೂ ನಾಲ್ಕು ರೋಗಗಳ ಹೆಸರು ಮತ್ತು ಅವುಗಳಿಗೆ ಸಂಬಂಧಿಸಿದ ಎರಡೆರಡು ರೋಗಲಕ್ಷಣಗಳನ್ನು ಬರೆಯಿರಿ. 

ಉತ್ತರ- ಕ್ಷಯ ,ಕಾಲರಾ, ವಿಷಮಶೀತಜ್ವರ, ಪ್ಲೇಗ್. ಬ್ಯಾಕ್ಟೀರಿಯಾದ ಕಾಯಿಲೆಗಳ ಮುಖ್ಯ ಲಕ್ಷಣಗಳು ಹೀಗಿವೆ:ಅತಿಸಾರ, ವಾಂತಿ ಮತ್ತು ವಾಕರಿಕೆ,ದೌರ್ಬಲ್ಯ,ಕುತ್ತಿಗೆಯಲ್ಲಿ ಬಿಗಿತ,ಜ್ವರ ತರಹದ ಲಕ್ಷಣಗಳು,ದದ್ದುಗಳು ಮತ್ತು ಗಾಯಗಳು.

೧. ಮಲೇರಿಯಾ ರೋಗವು ಯಾವ ಕೀಟದಿಂದ ಹರಡುತ್ತದೆ? ಈ ರೋಗಕ್ಕೆ ಕಾರಣವಾಗಿರುವ ಸೂಕ್ಷ್ಮಣುಜೀವಿಯ ಹೆಸರೇನು? ಈ ರೋಗದಿಂದ ದೂರವಿರಲು ನೀವು ಯಾವ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಿರಿ?

ಉತ್ತರ- ಮಲೇರಿಯಾ ರೋಗವು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಯಿಂದ ಕೀಟದಿಂದ ಹರಡುತ್ತದೆ.ಮಲೇರಿಯಾ ಉಂಟುಮಾಡುವ ಪರೋಪಜೀವಿ ಪ್ಲಾಸ್ಮೋಡಿಯಂ. ಈ ರೋಗದಿಂದ ದೂರವಿರಲು ಸೊಳ್ಳೆಪರದೆ ಬಳಕೆ, ಸೊಳ್ಳೆಗಳು ಹೆಚ್ಚಾಗದಂತೆ ಸ್ವಚ್ಛತೆ ಕಾಪಾಡುವುದು.  

ktbs solutions class 8 science workbook Microorganisms Friend and Foe ಅಭ್ಯಾಸ ಪುಸ್ತಕದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.Dont forget to share and comment.

👉Ktbs solutions class 8 science workbook microorganisms friend and foe questions in pdf.👈

class 8 science workbook Microorganisms Friend and Foe FAQs👇👇

೧). ಪೆನ್ಸಿಲಿನ್‌ನನ್ನು ತಯಾರಿಸಲು ಬಳಸುವ ಸೂಕ್ಷ್ಮ ಜೀವಿ ಯಾವುದು?

೨). ಸಿಡುಬು ರೋಗಕ್ಕೆ ಲಸಿಕೆಯನ್ನು ಯಾರು ಕಂಡುಹಿಡಿದರು?

೩). ರೋಗಕಾರಕ ಜೀವಿಗಳು ಎಂದರೇನು?

೪). ಸಂಪರ್ಕದಿಂದ ಹರಡುವ ರೋಗಗಳು ಎಂದರೇನು?




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.