Class 8 Science Chapter 2 Question Answer Microorganisms Friend And Foe in Kannada Medium ಅಧ್ಯಾಯ 2 ಸೂಕ್ಷ್ಮ ಜೀವಿಗಳು ಮಿತ್ರ ಮತ್ತು ಶತ್ರು.ದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.
ಸೂಕ್ಷ್ಮ ಜೀವಿಗಳು ಮಿತ್ರ ಮತ್ತು ಶತ್ರು ಅಧ್ಯಾಯದಲ್ಲಿನ ಪ್ರಮುಕಾಂಶಗಳು.
- ಸೂಕ್ಷ್ಮ ಜೀವಿಗಳು ತುಂಬಾ ಚಿಕ್ಕದಾಗಿವೆ ಮತ್ತು ಬರಿಗಣ್ಣಿಗೆ ಕಾಣಿಸುವುದಿಲ್ಲ.
- ಸೂಕ್ಷ್ಮ ಜೀವಿಗಳು ಅತಿತಂಪು (ice cold) ಹವಾಗುಣದಿಂದ ಹಿಡಿದು ಬಿಸಿನೀರಿನ ಬುಗ್ಗೆಗಳು ಮತ್ತು ಮರುಭೂಮಿಗಳಿಂದ ಹಿಡಿದು ಜೌಗುಪ್ರದೇಶಗಳಂತಹ ಎಲ್ಲಾ ವಿಧಗಳ ವಾತಾವರಣದಲ್ಲಿ ಬದುಕಬಲ್ಲವು.
- ಸೂಕ್ಷ್ಮ ಜೀವಿಗಳು ಗಾಳಿ, ನೀರಿನಲ್ಲಿ ಕಂಡುಬರುತ್ತವೆ. ಸಸ್ಯ ಮತ್ತು ಪ್ರಾಣಿಗಳ ದೇಹಗಳ ಒಳಗೂ ಸಹ ಕಂಡುಬರುತ್ತವೆ.
- ಅವುಗಳು ಏಕಕೋಶೀಯ ಅಥವಾ ಬಹುಕೋಶೀಯವಾಗಿರಬಹುದು.
- ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಪ್ರೋಟೋಜೊವಾ ಮತ್ತು ಕೆಲವು ಶೈವಲಗಳು ಸೂಕ್ಷ್ಮ ಜೀವಿಗಳ ಗುಂಪಿಗೆ ಸೇರಿವೆ. ವೈರಸ್‌ಗಳು ಮೇಲಿನ ಜೀವಿಗಳಿಗಿಂತ ಭಿನ್ನವಾಗಿದ್ದರೂ ಕೂಡಾ ಸೂಕ್ಷ್ಮ ಜೀವಿಗಳೆಂದು ಪರಿಗಣಿಸಲ್ಪಟ್ಟಿವೆ.
- ವೈರಸ್‌ಗಳು ಇತರ ಸೂಕ್ಷö್ಮಜೀವಿಗಳಿಗಿಂತ ಭಿನ್ನವಾಗಿವೆ. ಬ್ಯಾಕ್ಟೀರಿಯಾ, ಸಸ್ಯ ಅಥವಾ ಪ್ರಾಣಿ ಜೀವಕೋಶದಂತಹ ಆತಿಥೇಯ ಜೀವಿಗಳಲ್ಲಿ ಮಾತ್ರ ಅವುಗಳು ಸಂತಾನೋತ್ಪತ್ತಿ ಮಾಡುತ್ತವೆ.
- ಔಷಧಗಳು ಮತ್ತು ಆಲ್ಕೋಹಾಲ್‌ಗಳ ವಾಣಿಜ್ಯ ಉತ್ಪಾದನೆಗೆ ಕೆಲವು ಸೂಕ್ಷö್ಮಜೀವಿಗಳು ಉಪಯುಕ್ತವಾಗಿವೆ.
- ಕೆಲವು ಸೂಕ್ಷ್ಮ ಜೀವಿಗಳು ಸಾವಯವ ತ್ಯಾಜ್ಯ, ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ಸರಳ ವಸ್ತುಗಳಾಗಿ ವಿಘಟಿಸಿ ಪರಿಸರವನ್ನು ಸ್ವಚ್ಛಗೊಳಿಸುತ್ತವೆ.
- ಭೇದಿ ಮತ್ತು ಮಲೇರಿಯಾಗಳಂತಹ ಗಂಭೀರ ರೋಗಗಳನ್ನು ಪ್ರೋಟೋಜೋವಾಗಳು ಉಂಟುಮಾಡುತ್ತವೆ.
- ನಮ್ಮ ಆಹಾರದ ಮೇಲೆ ಕೆಲವು ಸೂಕ್ಷ್ಮ ಜೀವಿಗಳು ಬೆಳೆಯುತ್ತವೆ ಮತ್ತು ಆಹಾರದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತವೆ.
- ದ್ವಿದಳ ಸಸ್ಯಗಳ ಬೇರುಗಳ ಗಂಟುಗಳಲ್ಲಿ ಕೆಲವು ಸೂಕ್ಷ್ಮ ಜೀವಿಗಳು ವಾಸಿಸುತ್ತವೆ. ಅವುಗಳು ಗಾಳಿಯಿಂದ ನೈಟ್ರೋಜನ್‌ಅನ್ನು ಸ್ಥಿರೀಕರಿಸುತ್ತವೆ ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.
- ಮಣ್ಣಿನಲ್ಲಿರುವ ಕೆಲವು ಬ್ಯಾಕ್ಟೀರಿಯಾ ಮತ್ತು ನೀಲಿ ಹಸಿರು ಶೈವಲಗಳು ವಾತಾವರಣದಿಂದ ನೈಟ್ರೋಜನ್‌ಅನ್ನು ಸ್ಥಿರೀಕರಿಸಿ ನೈಟ್ರೋಜನ್ ಸಂಯುಕ್ತಗಳಾಗಿ ಪರಿವರ್ತಿಸುತ್ತವೆ.
- ಕೆಲವು ಸೂಕ್ಷ್ಮ ಜೀವಿಗಳು ಮಣ್ಣಿನಲ್ಲಿರುವ ನೈಟ್ರೋಜನ್ ಸಂಯುಕ್ತಗಳನ್ನು ನೈಟ್ರೋಜನ್ ಅನಿಲವಾಗಿ ಪರಿವರ್ತಿಸುತ್ತವೆ, ಇದು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.
೧. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರದಿಂದ ಭರ್ತಿ ಮಾಡಿ.
ಉತ್ತರ - ಸೂಕ್ಷ್ಮದರ್ಶಕ ಯಂತ್ರ - Microscope
ಉತ್ತರ - ಯೀಸ್ಟ್ - YEAST
೨. ಸರಿಯಾದ ಉತ್ತರವನ್ನು ಗುರುತಿಸಿ
೩.A ಪಟ್ಟಿಯಲ್ಲಿ ನೀಡಿರುವ ಸೂಕ್ಷ್ಮಜೀವಿಗಳನ್ನುB ಪಟ್ಟಿಯಲ್ಲಿ ಕೊಟ್ಟಿರುವ ಅವುಗಳ
ಕಾರ್ಯಕ್ಕನುಗುಣವಾಗಿ ಹೊಂದಿಸಿ ಬರೆಯಿರಿ.
೪. ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡಬಹುದೇ? ಇಲ್ಲದಿದ್ದರೆ, ಅವುಗಳನ್ನು ಹೇಗೆ
ನೋಡಬಹುದು?
೫. ಸೂಕ್ಷ್ಮಜೀವಿಗಳ ಪ್ರಮುಖ ಗುಂಪುಗಳು ಯಾವುವು?
- ಬ್ಯಾಕ್ಟೀರಿಯಾ,
- ಶಿಲೀಂಧ್ರಗಳು,
- ಪ್ರೋಟೋಜೊವಾಗಳು,
- ಶೈವಲಗಳು,
- ವೈರಸ್‌ಗಳು.
೬. ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳನ್ನು ಹೆಸರಿಸಿ.
೭. ನಮ್ಮ ಜೀವನದಲ್ಲಿ ಸೂಕ್ಷ್ಮಜೀವಿಗಳ ಉಪಯುಕ್ತತೆಯನ್ನು ಕುರಿತು ೧೦ ಸಾಲುಗಳನ್ನು
ಬರೆಯಿರಿ.
- ಮೊಸರು, ಬ್ರೆಡ್ ಮತ್ತು ಕೇಕ್ ತಯಾರಿಕೆಗೆ ಸೂಕ್ಷ್ಮಜೀವಿಗಳನ್ನು ಬಳಸಲಾಗುತ್ತದೆ.ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯವು ಹಾಲಿನಲ್ಲಿ ವೃದ್ಧಿಯಾಗಿ ಅದನ್ನು ಮೊಸರಿನಾಗಿ ಪರಿವರ್ತಿಸುತ್ತದೆ. ಅಕ್ಕಿ ಇಡ್ಲಿ ಮತ್ತು ದೋಸೆ ಹಿಟ್ಟಿನ ಹುದುಗುವಿಕೆಗೆ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಕೂಡ ಸಹಕಾರಿ.
- ಪರಿಸರವನ್ನು ಸ್ವಚ್ಛಗೊಳಿಸಲೂ ಅವುಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಬ್ಯಾಕ್ಟೀರಿಯಾಗಳು ಸಾವಯವ ತ್ಯಾಜ್ಯಗಳನ್ನು(ತರಕಾರಿ ಸಿಪ್ಪೆಗಳು, ಪ್ರಾಣಿಗಳ ಅವಶೇಷಗಳು, ಮಲ ಇತ್ಯಾದಿ) ಹಾನಿಕರವಲ್ಲದ ಮತ್ತು ಬಳಸಬಹುದಾದ ವಸ್ತುಗಳನ್ನಾಗಿ ವಿಘಟಿಸುತ್ತವೆ.
- ಸೂಕ್ಷ್ಮಜೀವಿಗಳನ್ನು ದೊಡ್ಡ ಪ್ರಮಾಣದಲ್ಲಿ ಆಲ್ಕೋಹಾಲ್, ವೈನ್ ಮತ್ತು ಅಸಿಟಿಕ್ ಆಮ್ಲ ಉತ್ಪಾದಿಸಲು ಬಳಸಲಾಗುತ್ತದೆ.
- ಬ್ಯಾಕ್ಟೀರಿಯಾಗಳನ್ನು ಔಷಧಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಉದಾ -ಸ್ಟ್ರೆಪ್ಟೋಮೈಸಿನ್ ಪ್ರತಿಜೈವಿಕ.
- ರೈಜೋಬಿಯಂ, ನೀಲಿ ಹಸಿರು ಶೈವಲಗಳು ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನುಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ಕೃಷಿಯಲ್ಲಿ ಬಳಸುವರು.
೮. ಸೂಕ್ಷ್ಮಜೀವಿಗಳಿಂದ ಉಂಟಾಗುವ ಹಾನಿಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.
- ಕೆಲವು ಸೂಕ್ಷ್ಮಜೀವಿಗಳು ಮನುಷ್ಯರಲ್ಲಿ, ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗಗಳನ್ನು ಉಂಟುಮಾಡುತ್ತವೆ. ಈ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ರೋಗಕಾರಕ ಜೀವಿಗಳು ಎನ್ನಲಾಗುತ್ತದೆ. ಉದಾಹರಣೆಗೆ, ಮನುಷ್ಯರಲ್ಲಿನ ಕಾಲರಾ ರೋಗವನ್ನು ವಿಬ್ರಿಯೋ ಕಾಲರಾ ಎಂಬ ಬ್ಯಾಕ್ಟೀರಿಯವು ಉಂಟುಮಾಡುತ್ತದೆ. ಪ್ರಾಣಿಗಳಲ್ಲಿ, ಫುಟ್ ಮತ್ತು ಮೌತ್ ರೋಗವನ್ನು ವೈರಸ್ ಉಂಟುಮಾಡುತ್ತದೆ.
- ಕೆಲವು ಸೂಕ್ಷ್ಮಜೀವಿಗಳು ಆಹಾರ, ಬಟ್ಟೆ ಮತ್ತು ಚರ್ಮದ ವಸ್ತುಗಳನ್ನು ಹಾಳುಮಾಡುತ್ತವೆ.
- ಹಲವಾರು ಸೂಕ್ಷ್ಮಜೀವಿಗಳು ಗೋಧಿ, ಭತ್ತ, ಆಲೂಗಡ್ಡೆ, ಕಬ್ಬು, ಕಿತ್ತಳೆ, ಸೇಬು ಮತ್ತು ಇತರ ಸಸ್ಯಗಳಲ್ಲಿ ರೋಗಗಳನ್ನು ಉಂಟುಮಾಡುತ್ತವೆ. ರೋಗಗಳು ಬೆಳೆಗಳ ಇಳುವರಿಯನ್ನು ಕುಂಠಿತಗೊಳಿಸುತ್ತವೆ.ಉದಾಹರಣೆಗೆ- ಶಿಲೀಂಧ್ರ ಗೋಧಿಯ ತುಕ್ಕು ರೋಗ ಕ್ಕೆ ಕಾರಣವಾಗುತ್ತದೆ.
- ಸೂಕ್ಷ್ಮಜೀವಿಗಳು ಆಹಾರ ವಿಷಕ್ಕೆ ಕಾರಣವೂ ಆಗಿವೆ - ನಮ್ಮ ಆಹಾರದ ಮೇಲೆ ಬೆಳೆಯುವ ಸೂಕ್ಷ್ಮಜೀವಿಗಳು ಕೆಲವೊಮ್ಮೆ ವಿಷಕಾರಿ ಪದಾರ್ಥಗಳನ್ನು ಉತ್ಪಾದಿಸುತ್ತವೆ. ಇವುಗಳು ಆಹಾರವನ್ನು ವಿಷಯುಕ್ತವಾಗಿ ಮಾಡುವುದರ ಮೂಲಕ ಗಂಭೀರವಾದ ಕಾಯಿಲೆಯನ್ನು ಹಾಗೂ ಸಾವನ್ನು ಕೂಡಾ ಉಂಟುಮಾಡುತ್ತವೆ.
೯. ಪ್ರತಿಜೈವಿಕಗಳು ಎಂದರೇನು? ಪ್ರತಿಜೈವಿಕಗಳನ್ನು ತೆಗೆದುಕೊಳ್ಳುವಾಗ ಯಾವ
ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ALSO READ- Class 8 Science Chapter 1 Question Answer Crop Production and Management in Kannada Medium
Class 8 Science Chapter 2 Microorganisms Friend And Foe FAQs-👇👇
೧). ಪೆನ್ಸಿಲಿನ್‌ನನ್ನು ತಯಾರಿಸಲು ಬಳಸುವ ಸೂಕ್ಷ್ಮ ಜೀವಿ ಯಾವುದು?
ಉತ್ತರ- ಪೆನ್ಸಿಲಿನ್‌ನನ್ನು ತಯಾರಿಸಲು ಬಳಸುವ ಸೂಕ್ಷ್ಮ ಜೀವಿ ಶಿಲೀಂಧ್ರ.
೨). ಸಿಡುಬು ರೋಗಕ್ಕೆ ಲಸಿಕೆಯನ್ನು ಯಾರು ಕಂಡುಹಿಡಿದರು?
ಉತ್ತರ-ಎಡ್ವರ್ಡ್ ಜೆನ್ನರ್ ೧೭೯೮ರಲ್ಲಿ ಸಿಡುಬು ರೋಗಕ್ಕೆ ಲಸಿಕೆಯನ್ನು ಕಂಡುಹಿಡಿದರು.
೩). ರೋಗಕಾರಕ ಜೀವಿಗಳು ಎಂದರೇನು?
ಉತ್ತರ-ಕೆಲವು ಸೂಕ್ಷ್ಮ ಜೀವಿಗಳು ಮನುಷ್ಯರಲ್ಲಿ, ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗಗಳನ್ನು ಉಂಟುಮಾಡುತ್ತವೆ. ಈ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮ ಜೀವಿಗಳನ್ನು ರೋಗಕಾರಕ ಜೀವಿಗಳು ಎನ್ನಲಾಗುತ್ತದೆ.
೪). ಸಂಪರ್ಕದಿಂದ ಹರಡುವ ರೋಗಗಳು ಎಂದರೇನು?
ನಾವು ಉಸಿರಾಡುವ ಗಾಳಿಯ ಮೂಲಕ, ಕುಡಿಯುವ ನೀರಿನ ಮೂಲಕ ಅಥವಾ ತಿನ್ನುವ ಆಹಾರದ ಮೂಲಕ ರೋಗಕಾರಕ ಜೀವಿಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಸೋಂಕಿತ ವ್ಯಕ್ತಿಯ ನೇರ ಸಂಪರ್ಕದಿಂದ ಮತ್ತು ಪ್ರಾಣಿಗಳ ಮೂಲಕವೂ ಅವು ಹರಡುತ್ತವೆ. ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಗಾಳಿ, ನೀರು, ಆಹಾರ ಅಥವಾ ದೈಹಿಕ ಸಂಪರ್ಕದ ಮೂಲಕ ಹರಡುವ ಕಾಯಿಲೆಗಳಿಗೆ ಸಂಪರ್ಕದಿಂದ ಹರಡುವ ರೋಗಗಳು ಎನ್ನಲಾಗುತ್ತದೆ. ಉದಾಹರಣೆಗಳೆಂದರೆ, ಕಾಲರಾ, ಸಾಮಾನ್ಯಶೀತ, ಚಿಕನ್‌ಪಾಕ್ಸ್ (ಸೀತಾಳೆ ಸಿಡುಬು) ಮತ್ತು ಕ್ಷಯರೋಗ.
PLEASE DO NOT ENTER ANY SPAM LINK IN THE COMMENT BOX