Class 8 Science Chapter 1 Question Answer Crop Production and Management in Kannada Medium

Class 8 Science Chapter 1 Question Answer Crop Production and Management in Kannada Medium ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Class 8 Science Chapter 1 Question Answer Crop Production and Management in Kannada Medium

ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಅಧ್ಯಾಯದಲ್ಲಿನ ಪ್ರಮುಕಾಂಶಗಳು. 

  • ಬೆಳೆಯುತ್ತಿರುವ ನಮ್ಮ ಸಮುದಾಯಕ್ಕೆ ಆಹಾರವನ್ನು ಒದಗಿಸಲು ನಾವು ಕೆಲವು ಕೃಷಿಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.
  • ಒಂದೇ ರೀತಿಯ ಸಸ್ಯಗಳನ್ನು ಒಂದೇ ಸ್ಥಳದಲ್ಲಿ ಬೆಳೆಸುವುದು ಅಥವಾ ಕೃಷಿ ಮಾಡುವುದು ಬೆಳೆ ಎನಿಸಿಕೊಳ್ಳುತ್ತದೆ.
  • ಋತುಮಾನದ ಆಧಾರದ ಮೇಲೆ ಭಾರತದಲ್ಲಿ ಬೆಳೆಗಳನ್ನು ವಿಶಾಲವಾಗಿ ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ – ರಬಿ ಮತ್ತು ಖಾರಿಫ್ ಬೆಳೆಗಳು.
  • ಉಳುಮೆ ಮತ್ತು ಮಟ್ಟಮಾಡುವ ಮೂಲಕ ಮಣ್ಣನ್ನು ಸಿದ್ಧಗೊಳಿಸುವ ಅಗತ್ಯವಿದೆ. ನೇಗಿಲು ಮತ್ತು ಲೆವೆಲ್ಲರ್‌ಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
  • ಬೀಜಗಳನ್ನು ಸರಿಯಾದ ಆಳ ಮತ್ತು ಅಂತರಗಳಲ್ಲಿ ಬಿತ್ತಿದರೆ ಉತ್ತಮ ಇಳುವರಿ ಕೊಡುತ್ತವೆ. ಆರೋಗ್ಯಕರ ಬೀಜಗಳನ್ನು ಆಯ್ದ ನಂತರ ಉತ್ತಮ ವೈವಿಧ್ಯಮಯ ಬೀಜಗಳನ್ನು ಕೂರಿಗೆಗಳಿಂದ ಬಿತ್ತನೆ ಮಾಡಲಾಗುತ್ತದೆ.
  • ಸಾವಯವ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣನ್ನು ಪುನ:ಶ್ಚೇತನ ಮತ್ತು ಮರುಪೂರಣ ಮಾಡುವ ಅಗತ್ಯವಿದೆ. ಬೆಳೆಗಳ ಹೊಸ ತಳಿಗಳ ಪರಿಚಯದಿಂದ ರಾಸಾಯನಿಕ ಗೊಬ್ಬರಗಳ ಬಳಕೆಯು ಮಹತ್ತರವಾಗಿ ಹೆಚ್ಚಿತು.
  • ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದಕ್ಕೆ ನೀರಾವರಿ ಎಂದು ಕರೆಯುತ್ತಾರೆ.
  • ಕೃಷಿಗೆ ಒಳಪಡದ ಮತ್ತು ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎನ್ನಲಾಗುತ್ತದೆ. ಇಂತಹ ಸಸ್ಯಗಳನ್ನು ತೆಗೆದುಹಾಕುವುದಕ್ಕೆ ಕಳೆಕೀಳುವಿಕೆ ಎನ್ನಲಾಗುತ್ತದೆ.
  • ಪಕ್ವವಾದ ಬೆಳೆಯನ್ನು ಕೈಗಳಿಂದ ಅಥವಾ ಯಂತ್ರಗಳಿಂದ ಕತ್ತರಿಸುವುದಕ್ಕೆ ಕೊಯ್ಲು ಎನ್ನುವರು.
  • ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವುದಕ್ಕೆ ಒಕ್ಕಣೆ ಎಂದು ಕರೆಯುವರು.
  • ಪೀಡೆಗಳಿಂದ ಮತ್ತು ಸೂಕ್ಷö್ಮಜೀವಿಗಳಿಂದ ರಕ್ಷಿಸಲು ಕಾಳುಗಳನ್ನು ಸಮರ್ಪಕವಾಗಿ ಸಂಗ್ರಹಿಸಬೇಕಾಗುತ್ತದೆ.
  • ಪ್ರಾಣಿಗಳಿಂದಲೂ ಸಹ ಆಹಾರವನ್ನು ಪಡೆಯಲಾಗುತ್ತದೆ ಮತ್ತು ಇದಕ್ಕಾಗಿ ಪ್ರಾಣಿಗಳನ್ನು ಸಾಕುತ್ತಾರೆ. ಇದನ್ನು ಪಶುಸಂಗೋಪನೆ ಎನ್ನಲಾಗುತ್ತದೆ.

ಅಭ್ಯಾಸಗಳು.

೧. ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿ 

ತೇಲು, ನೀರು, ಬೆಳೆ, ಪೋಷಕಾಂಶಗಳು, ಪೂರ್ವಸಿದ್ಧತೆ

 (a) ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಿ ಬೆಳೆಸುವುದನ್ನು----------- ಎನ್ನುತ್ತಾರೆ.

ಉತ್ತರ-ಬೆಳೆ

 (b) ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣಿನ --------- ಮೊದಲ ಹಂತವಾಗಿದೆ.

ಉತ್ತರ-ಪೂರ್ವಸಿದ್ಧತೆ

 (c) ಹಾನಿಗೊಳಗಾದ ಬೀಜಗಳು ನೀರಿನ ಮೇಲೆ ---------

ಉತ್ತರ-ತೇಲುತ್ತವೆ

 (d) ಬೆಳೆಯುತ್ತಿರುವ ಬೆಳೆಗೆ ಸಾಕಷ್ಟು ಸೌರಬೆಳಕು ಮತ್ತು ಮಣ್ಣಿನಿಂದ -------- ಅಗತ್ಯವಾಗಿ ಬೇಕು.

ಉತ್ತರ-ಪೋಷಕಾಂಶಗಳು

೨. A ಪಟ್ಟಿಯಲ್ಲಿರುವ ಪ್ರಮುಖ ಪದಗಳೊಂದಿಗೆ B ಪಟ್ಟಿಯಲ್ಲಿರುವ ಅಂಶಗಳನ್ನು ಹೊಂದಿಸಿ ಬರೆಯಿರಿ.

A B
I. ಖಾರಿಫ್ ಬೆಳೆಗಳು (a) ಜಾನುವಾರುಗಳಿಗೆ ಆಹಾರ
II. ರಬಿ ಬೆಳೆಗಳು (b) ಯೂರಿಯಾ ಮತ್ತು ಸೂಪರ್ ಫಾಸ್ಫೇಟ್
III. ರಾಸಾಯನಿಕ ಗೊಬ್ಬರಗಳು (c) ಪ್ರಾಣಿತ್ಯಾಜ್ಯ, ಸಗಣಿ, ಮೂತ್ರ ಮತ್ತು ಸಸ್ಯತ್ಯಾಜ್ಯ
IV. ಸಾವಯವ ಗೊಬ್ಬರ (d) ಗೋಧಿ, ಕಡಲೆ, ಬಟಾಣಿ
(e) ಭತ್ತ ಮತ್ತು ಜೋಳ

ಉತ್ತರ-

A B
I. ಖಾರಿಫ್ ಬೆಳೆಗಳು (e) ಭತ್ತ ಮತ್ತು ಜೋಳ
II. ರಬಿ ಬೆಳೆಗಳು (d) ಗೋಧಿ, ಕಡಲೆ, ಬಟಾಣಿ
III. ರಾಸಾಯನಿಕ ಗೊಬ್ಬರಗಳು (b) ಯೂರಿಯಾ ಮತ್ತು ಸೂಪರ್ ಫಾಸ್ಫೇಟ್
IV. ಸಾವಯವ ಗೊಬ್ಬರ (c) ಪ್ರಾಣಿತ್ಯಾಜ್ಯ, ಸಗಣಿ, ಮೂತ್ರ ಮತ್ತು ಸಸ್ಯತ್ಯಾಜ್ಯ

೩. ಪ್ರತಿಯೊಂದಕ್ಕೂ ಎರಡು ಉದಾಹರಣೆಗಳನ್ನು ಕೊಡಿ.

 (a) ಖಾರಿಫ್ ಬೆಳೆ

ಉತ್ತರ- ಭತ್ತ, ಜೋಳ, ಸೊಯಾಬೀನ್, ನೆಲಗಡಲೆ, ಹತ್ತಿ 

Class 8 Science Chapter 1 Question Answer Crop Production and Management in Kannada Medium

 (b) ರಬಿ ಬೆಳೆ

ಉತ್ತರ- ಗೋಧಿ, ಕಡಲೆ, ಬಟಾಣಿ, ಸಾಸಿವೆ ಮತ್ತು ಅಗಸೆ

Class 8 Science Chapter 1 Question Answer Crop Production and Management in Kannada Medium

೪. ಈ ಕೆಳಗಿನ ಪ್ರತಿಯೊಂದರ ಬಗ್ಗೆ ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ.

(a) ಮಣ್ಣನ್ನು ಸಿದ್ಧಗೊಳಿಸುವಿಕೆ 

ಉತ್ತರ- ಬೆಳೆಯನ್ನು ಬೆಳೆಯುವ ಮೊದಲು ಮಣ್ಣನ್ನು ಹದಗೊಳಿಸುವುದು ಕೃಷಿಯ ಮೊದಲ ಹಂತವಾಗಿದೆ. ಕೃಷಿಯಲ್ಲಿನ ಬಹುಮುಖ್ಯ ಕಾರ್ಯವೆಂದರೆ, ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿಸುವುದು. ಇದರಿಂದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ. ಬೇರುಗಳು ಅತ್ಯಂತ ಆಳಕ್ಕೆ ಹೋದರೂ ಸಡಿಲವಾದ ಮಣ್ಣು ಅವುಗಳ ಸುಲಭ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ. ಸಡಿಲವಾದ ಮಣ್ಣು ಎರೆಹುಳುಗಳ ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. 

ಈ ಜೀವಿಗಳು ರೈತನ ಮಿತ್ರ. ಏಕೆಂದರೆ, ಇವುಗಳು ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುತ್ತವೆ ಮತ್ತು ಅದಕ್ಕೆ ಹ್ಯೂಮಸ್ಸನ್ನು ಸೇರಿಸುತ್ತವೆ. ಕೇವಲ ಕೆಲವು ಸೆಂಟಿಮೀಟರ್‌ಗಳಷ್ಟು ದಪ್ಪದ ಮಣ್ಣಿನ ಮೇಲ್ಪದರವು ಸಸ್ಯಗಳ ಬೆಳವಣಿಗೆಯನ್ನು ಬೆಂಬಲಿಸುವುದರಿಂದ ಮಣ್ಣು ಸಡಿಲಗೊಳಿಸುವ ಪ್ರಕ್ರಿಯೆಯು ಪೋಷಕಾಂಶದಿಂದ ಸಮೃದ್ಧವಾದ ಮಣ್ಣನ್ನು ಮೇಲ್ಭಾಗಕ್ಕೆ ತರುತ್ತದೆ. ಈ ಪೋಷಕಾಂಶಗಳನ್ನು ಸಸ್ಯಗಳು ಬಳಸಿಕೊಳ್ಳುತ್ತವೆ. ಆದ್ದರಿಂದ, ಮಣ್ಣನ್ನು ತಿರುವಿಹಾಕುವುದು ಮತ್ತು ಸಡಿಲಗೊಳಿಸುವುದು ಬೆಳೆಗಳನ್ನು ಬೆಳೆಯಲು ಅತೀ ಮುಖ್ಯವಾಗಿದೆ.ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎನ್ನುತ್ತಾರೆ. ಇದನ್ನು ನೇಗಿಲನ್ನು ಬಳಸಿ ಮಾಡಲಾಗುತ್ತದೆ. 

(b) ಬಿತ್ತನೆ

ಉತ್ತರ- ಬಿತ್ತನೆಯು ಬೆಳೆ ಉತ್ಪಾದನೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಬಿತ್ತನೆಗೆ ಮೊದಲು ಒಳ್ಳೆಯ ತಳಿಯ, ಆರೋಗ್ಯಕರ, ಸ್ವಚ್ಛ ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ದುಕೊಳ್ಳಲಾಗುತ್ತದೆ. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆಯು ಒಂದು ಆಲಿಕೆಯ ಆಕಾರದಲ್ಲಿರುತ್ತದೆ. ಇದನ್ನು ಕೂರಿಗೆ ಎನ್ನುವರು. ಬೀಜಗಳನ್ನು ಕೂರಿಗೆಯ ಆಲಿಕೆಯಂತಹ ಭಾಗದಲ್ಲಿ ತುಂಬಲಾಗುತ್ತದೆ. ಅವು ಚೂಪಾದ ತುದಿಗಳನ್ನು ಹೊಂದಿದ ಎರಡು ಅಥವಾ ಮೂರು ಕೊಳವೆಗಳ ಮೂಲಕ ಕೆಳಗೆ ಬರುತ್ತವೆ. ಈ ತುದಿಗಳು ಮಣ್ಣಿನೊಳಕ್ಕೆ ಚುಚ್ಚಿ ಬೀಜಗಳನ್ನು ಬಿತ್ತುತ್ತವೆ.ಈಗಿನ ದಿನಗಳಲ್ಲಿ ಟ್ರಾಕ್ಟರ್‌ನ ಸಹಾಯದಿಂದ ಯಾಂತ್ರಿಕ ಕೂರಿಗೆಯನ್ನು ಬಳಸಿ ಬಿತ್ತನೆ ಮಾಡಲಾಗುತ್ತಿದೆ. ಈ ಸಲಕರಣೆಯು ಸರಿಯಾದ ಆಳದಲ್ಲಿ ಮತ್ತು ಅಂತರಗಳಲ್ಲಿ ಒಂದೇ ರೀತಿಯಾಗಿ ಬೀಜಗಳನ್ನು ಬಿತ್ತನೆ ಮಾಡುತ್ತದೆ. ಬಿತ್ತನೆಯ ನಂತರ ಬೀಜಗಳು ಮಣ್ಣಿನಿಂದ ಮುಚ್ಚಿರುವುದನ್ನು ಇದು ಖಚಿತಪಡಿಸುತ್ತದೆ. ಪಕ್ಷಿಗಳು ಬೀಜಗಳನ್ನು ತಿನ್ನದಂತೆ ಇದು ರಕ್ಷಿಸುತ್ತದೆ. 

(c) ಕಳೆ ನಿವಾರಣೆ 

ಉತ್ತರ- ಒಂದು ಜಮೀನಿನಲ್ಲಿ ಬೆಳೆಯ ಜೊತೆಗೆ ಅನೇಕ ಅನಪೇಕ್ಷಿತ ಸಸ್ಯಗಳು ತಾನೇ ತಾನಾಗಿ ಬೆಳೆಯಬಹುದು. ಈ ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎನ್ನುವರು.ಕಳೆಗಳನ್ನು ತೆಗೆದುಹಾಕುವುದಕ್ಕೆ ಕಳೆ ಕೀಳುವಿಕೆ ಎನ್ನುವರು. ಕಳೆಗಳು ನೀರು, ಪೋಷಕಾಂಶಗಳು, ಸ್ಥಳ ಮತ್ತು ಬೆಳಕಿಗಾಗಿ ಬೆಳೆಗಳೊಂದಿಗೆ ಸ್ಪರ್ಧೆ ನಡೆಸುವುದರಿಂದ ಕಳೆ ಕೀಳುವಿಕೆ ಅಗತ್ಯವಾಗಿದೆ. ಏಕೆಂದರೆ, ಬೆಳೆಗಳ ಬೆಳೆಯುವಿಕೆಗೆ ಅವು ಹಾನಿಯುಂಟುಮಾಡುತ್ತವೆ. ಕೆಲವು ಕಳೆಗಳು ಕೊಯ್ಲಿನ ಸಮಯದಲ್ಲೂ ಕಾಣಿಸಿಕೊಳ್ಳುತ್ತವೆ ಮತ್ತು ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಅವು ವಿಷಕಾರಿಯಾಗಿರಬಹುದು.ಕಳೆಗಳನ್ನು ನಿವಾರಿಸಲು ಮತ್ತು ಅವುಗಳ ಬೆಳವಣಿಗೆಯನ್ನು ನಿಯಂತ್ರಿಸಲು ರೈತರು ಹಲವಾರು ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಬೆಳೆಗಳ ಬಿತ್ತನೆಗೆ ಮೊದಲು ಉಳುಮೆ ಮಾಡುವಿಕೆಯು ಕಳೆಗಳನ್ನು ಬುಡಮೇಲಾಗಿಸಿ ನಾಶಪಡಿಸುತ್ತದೆ. ಅವು ನಂತರ ಒಣಗಿ ಮಣ್ಣಿನೊಂದಿಗೆ ಬೆರೆಯುತ್ತವೆ. ಕಳೆಗಳು ಹೂವು ಮತ್ತು ಬೀಜಗಳನ್ನು ಬಿಡುವ ಮೊದಲು ಅವುಗಳನ್ನು ಕಿತ್ತು ಹಾಕಬೇಕು. ಇದೇ ಕಳೆಗಳನ್ನು ನಿವಾರಿಸುವ ಅತ್ಯಂತ ಪ್ರಶಸ್ತ ಸಮಯವಾಗಿದೆ. ಕಾಲಕಾಲಕ್ಕೆ ಕಳೆಗಳನ್ನು ಬುಡಸಹಿತ ಕಿತ್ತುಹಾಕುವುದು ಅಥವಾ ನೆಲಮಟ್ಟಕ್ಕೆ ಅವುಗಳನ್ನು ಕತ್ತರಿಸುವುದು ಕೈಗಳಿಂದ ಕಳೆಗಳನ್ನು ನಿವಾರಿಸುವ ವಿಧಾನವಾಗಿದೆ.ಇದನ್ನು ಕುರ್ಪಿ ಅಥವಾ ಕುರ್ಚಿಗೆ ಎಂದು ಕರೆಯುವ ಸಣ್ಣ ಕತ್ತಿಗಳಿಂದ ಮಾಡಲಾಗುತ್ತದೆ. ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಗಳನ್ನೂಸಹ ಬಳಸಲಾಗುತ್ತದೆ.ಕಳೆನಾಶಕಗಳು ಎಂದು ಕರೆಯಲ್ಪಡುವ ಕೆಲವು ರಾಸಾಯನಿಕಗಳನ್ನು ಬಳಸುವುದರಿಂದಲೂ ಕಳೆಗಳನ್ನು ನಿಯಂತ್ರಿಸಬಹುದು. ಉದಾಹರಣೆಗೆ 2,4-D.  ಕಳೆಗಳನ್ನು ನಾಶಪಡಿಸಲು ಜಮೀನುಗಳಿಗೆ ಇವುಗಳನ್ನು ಸಿಂಪಡಿಸಲಾಗುತ್ತದೆ. ಇವುಗಳಿಂದ ಬೆಳೆಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಕಳೆನಾಶಕಗಳನ್ನು ನೀರಿನಿಂದ ಅಗತ್ಯಕ್ಕೆ ತಕ್ಕಷ್ಟು ಸಾರರಿಕ್ತಗೊಳಿಸಿ ಸಿಂಪಡಕಗಳ ಸಹಾಯದಿಂದ ಜಮೀನುಗಳಿಗೆ ಸಿಂಪಡಿಸಲಾಗುತ್ತದೆ

(d) ಒಕ್ಕಣೆ

ಉತ್ತರ- ಬೆಳೆಗಳ ಸಂಗ್ರಹಣೆಯು ಒಂದು ಪ್ರಮುಖ ಕಾರ್ಯವಾಗಿದೆ. ಬೆಳೆಯ ಧಾನ್ಯಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಬೇಕಾದರೆ ಅವುಗಳನ್ನು ತೇವಾಂಶ, ಕೀಟಗಳು, ಇಲಿಗಳು ಮತ್ತು ಸೂಕ್ಷö್ಮಜೀವಿಗಳಿಂದ ರಕ್ಷಿಸಬೇಕು. ತಾಜಾ ಬೆಳೆಯು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ. ಆಗಷ್ಟೇ ಕೊಯ್ಲು ಮಾಡಿದ ಕಾಳುಗಳನ್ನು (ಧಾನ್ಯಗಳನ್ನು) ಒಣಗಿಸದೇ ಸಂಗ್ರಹಿಸಿದರೆ ಅವು ಹಾಳಾಗಬಹುದು ಅಥವಾ ಕೀಟಭಾದೆಗೆ ಒಳಪಡಬಹುದು ಅಥವಾ ಅವು ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಆದ್ದರಿಂದ, ಸಂಗ್ರಹಿಸುವ ಮೊದಲು ಕಾಳುಗಳನ್ನು ಅವುಗಳಲ್ಲಿನ ತೇವಾಂಶ ಕಡಿಮೆಯಾಗುವಂತೆ ಬಿಸಿಲಿನಲ್ಲಿ ಸಮರ್ಪಕವಾಗಿ ಒಣಗಿಸಬೇಕು. ಇದು ಕೀಟಪೀಡೆಗಳು, ಬ್ಯಾಕ್ಟೀರಿಯಾ, ಮತ್ತು ಶಿಲೀಂಧ್ರಗಳಿಂದಾಗುವ ದಾಳಿಗಳನ್ನು ತಡೆಯುತ್ತದೆ. ರೈತರು ಕಾಳುಗಳನ್ನು ಗೋಣಿಚೀಲಗಳಲ್ಲಿ ಅಥವಾ ಲೋಹದ ಡಬ್ಬಗಳಲ್ಲಿ ಸಂಗ್ರಹಿಸುತ್ತಾರೆ. ಆದಾಗ್ಯೂ, ಪೀಡೆಗಳಾದ ಇಲಿಗಳು ಮತ್ತು ಕೀಟಗಳಿಂದ ರಕ್ಷಿಸಲು ಅಧಿಕ ಪ್ರಮಾಣದಲ್ಲಿ ಕಾಳುಗಳ ಸಂಗ್ರಹಣೆಯನ್ನು ದೊಡ್ಡ ಸಂಗ್ರಹಾಗಾರಗಳಲ್ಲಿ ಮತ್ತು ಗೋದಾಮುಗಳಲ್ಲಿ (silos and granaries) ಮಾಡಲಾಗುತ್ತದೆ.

೫. ರಸಗೊಬ್ಬರಗಳು ಸಾವಯವ ಗೊಬ್ಬರಕ್ಕಿಂತ ಹೇಗೆ ಭಿನ್ನವಾಗಿವೆ ಎಂದು ವಿವರಿಸಿ.

ಉತ್ತರ- 

Class 8 Science Chapter 1 Question Answer Crop Production and Management in Kannada Medium
Class 8 Science Chapter 1 Question Answer Crop Production and Management in Kannada Medium

೬. ನೀರಾವರಿ ಎಂದರೇನು? ನೀರನ್ನು ಉಳಿತಾಯ ಮಾಡುವ ನೀರಾವರಿಯ ಎರಡು ವಿಧಾನಗಳನ್ನು ವಿವರಿಸಿ.

ಉತ್ತರ- 

ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದಕ್ಕೆ ನೀರಾವರಿ ಎಂದು ಕರೆಯುತ್ತಾರೆ.ನೀರು ಸಸ್ಯಗಳ ಬೇರುಗಳಿಂದ ಹೀರಲ್ಪಡುತ್ತದೆ. ನೀರಿನ ಜೊತೆಗೆ ಖನಿಜಗಳು ಮತ್ತು ರಸಗೊಬ್ಬರಗಳೂ ಸಹ ಹೀರಲ್ಪಡುತ್ತವೆ. ಸಸ್ಯಗಳು ಸುಮಾರು ಶೇ.೯೦ರಷ್ಟು ನೀರನ್ನು ಒಳಗೊಂಡಿವೆ. ನೀರು ಅತಿ ಅಗತ್ಯ ಏಕೆಂದರೆ ಶುಷ್ಕ ಪರಿಸ್ಥಿತಿಗಳಲ್ಲಿ ಬೀಜಗಳು ಮೊಳೆಯಲಾರವು. ಪೋಷಕಾಂಶಗಳು ನೀರಿನಲ್ಲಿ ಕರಗಿ ಸಸ್ಯದ ಎಲ್ಲಾ ಭಾಗಗಳಿಗೂ ಸಾಗಿಸಲ್ಪಡುತ್ತವೆ. ಶೀತಗಾಳಿ ಮತ್ತು ಬಿಸಿಗಾಳಿಗಳಿಂದ ಬೆಳೆಗೆ ರಕ್ಷಣೆಯನ್ನು ಕೂಡಾ ನೀರು ಒದಗಿಸುತ್ತದೆ. ಬೆಳೆಯ ಆರೋಗ್ಯಕರ ಬೆಳವಣಿಗೆಗೆ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಜಮೀನಿಗೆ ನಿಯಮಿತವಾಗಿ ನೀರು ಹಾಯಿಸಬೇಕು.

ನೀರಾವರಿಯ ಆಧುನಿಕ ವಿಧಾನಗಳು ನೀರನ್ನು ಮಿತವಾಗಿ ಬಳಸುವುದಕ್ಕೆ ನಮಗೆ ಸಹಾಯಕವಾಗಿವೆ.ಬಳಕೆಯಲ್ಲಿರುವ ಮುಖ್ಯ ವಿಧಾನಗಳು ಈ ಕೆಳಗಿನಂತಿವೆ.

(i) ತುಂತುರು ವಿಧಾನ : ಸಾಕಷ್ಟು ನೀರಿನ ಲಭ್ಯತೆ ಇಲ್ಲದ ಮತ್ತು ಅಸಮವಾದ ಭೂಮಿಗೆ ಈ ವಿಧಾನವು ಹೆಚ್ಚು ಉಪಯುಕ್ತವಾಗಿದೆ. ಇಲ್ಲಿ ತುದಿಯಲ್ಲಿ ತಿರುಗುವ ನಳಿಕೆಯನ್ನು ಹೊಂದಿರುವ ಕೊಳವೆಗಳನ್ನು ಮುಖ್ಯ ಕೊಳವೆಗೆ ನಿಯಮಿತ ಅಂತರಗಳಲ್ಲಿ ಲಂಬವಾಗಿ ನಿಲ್ಲುವಂತೆ ಜೋಡಿಸಲಾಗಿರುತ್ತದೆ. ಒಂದು ಮೋಟಾರ್ ಪಂಪ್‌ನ ಸಹಾಯದಿಂದ ನೀರನ್ನು ಹೆಚ್ಚು ಒತ್ತಡದಲ್ಲಿ ಮುಖ್ಯ ಕೊಳವೆಗೆ ಹರಿಯುವಂತೆ ಮಾಡಿದರೆ ಅದು ತಿರುಗುವ ನಳಿಕೆಗಳ ಮೂಲಕ ಹೊರಚಿಮ್ಮುತ್ತದೆ. ಇದು ಮಳೆಯಂತೆ ಬೆಳೆಗಳ ಮೇಲೆ ಬೀಳುತ್ತದೆ. ಹುಲ್ಲು ಹಾಸುಗಳು, ಕಾಫಿ ತೋಟ ಮತ್ತು ಇತರ ಬೆಳೆಗಳಿಗೆ ತುಂತುರು ನೀರಾವರಿ ತುಂಬಾ ಉಪಯುಕ್ತವಾಗಿದೆ.

Crop Production and Management in Kannada Medium

(ii) ಹನಿ ನೀರಾವರಿ ವಿಧಾನ : ಈ ವಿಧಾನದಲ್ಲಿ ನೀರು ಹನಿ ಹನಿಯಾಗಿ ಬೇರುಗಳ ಬಳಿ ಬೀಳುತ್ತದೆ. ಆದ್ದರಿಂದ ಇದನ್ನು ಹನಿ ನೀರಾವರಿ ವಿಧಾನ ಎನ್ನುತ್ತಾರೆ. ಇದು ಹಣ್ಣಿನ ಗಿಡಗಳಿಗೆ, ಉದ್ಯಾನಗಳಿಗೆ ಮತ್ತು ಮರಗಳಿಗೆ ನೀರು ಹಾಯಿಸುವ ಅತ್ಯುತ್ತಮ ತಂತ್ರವಾಗಿದೆ. ಇಲ್ಲಿ ನೀರು ವ್ಯರ್ಥವಾಗುವುದೇ ಇಲ್ಲ. ನೀರಿನ ಲಭ್ಯತೆ ಅತ್ಯಂತ ಕನಿಷ್ಟವಾಗಿರುವ ಪ್ರದೇಶಗಳಿಗೆ ಇದು ವರದಾನವಾಗಿದೆ.

೭. ಒಂದು ವೇಳೆ ಖಾರಿಫ್ ಋತುವಿನಲ್ಲಿ ಗೋಧಿಯನ್ನು ಬಿತ್ತನೆ ಮಾಡಿದರೆ ಏನಾಗಬಹುದು? ಚರ್ಚಿಸಿ.

ಉತ್ತರ- ಗೋಧಿ ರಬಿ ಬೆಳೆ.ಗೋಧಿಗೆ ಶೀತ ಹವಾಮಾನ ಪರಿಸ್ಥಿತಿಗಳು ಬೇಕಾಗುತ್ತವೆ.  ಇದನ್ನು ಖರೀಫ್  ಋತುವಿನಲ್ಲಿ ಜೂನ್ ನಿಂದ ಅಕ್ಟೋಬರ್ ವರೆಗೆ ಬಿತ್ತಿದರೆ, ಗೋಧಿಯ ಬೆಳವಣಿಗೆ ನಡೆಯುವುದಿಲ್ಲ.ಏಕೆಂದರೆ ಖರೀಫ್  ಋತುಮಾನವು ಮಳೆಗಾಲ.  ಗೋಧಿ ಬೆಳೆಗೆ ಅಷ್ಟು ಪ್ರಮಾಣದ ನೀರನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ.  ಇದು ಗೋಧಿ ಬೆಳೆ ಮತ್ತು ಹೊಲದಲ್ಲಿ ನೀರು ಪ್ರವೇಶಿಸಲು ಹಾನಿಯನ್ನುಂಟುಮಾಡುತ್ತದೆ.ಗರಿಷ್ಠ ತಾಪಮಾನದ ಕೊರತೆ, ಹೊಂದಿಕೊಳ್ಳುವಿಕೆ, ಕೀಟಗಳು ಮುಂತಾದ ಹಲವು ಅಂಶಗಳಿವೆ, ಇದು ಖಾರಿಫ್  ಋತುವಿನಲ್ಲಿ ಗೋಧಿ ಬೆಳೆಗಳನ್ನು ನಾಶಪಡಿಸುತ್ತದೆ.ಖಾರಿಫ್ ಬೆಳೆಗಳಿಗೆ ಸಾಕಷ್ಟು ಮಳೆಯ ಅಗತ್ಯವಿದ್ದರೆ ಗೋಧಿಗೆ ಚಳಿಗಾಲದ ಅಗತ್ಯವಿರುತ್ತದೆ.  ಹೀಗಾಗಿ ಖಾರಿಫ್  ಋತುವಿನಲ್ಲಿ ಗೋಧಿ ಬಿತ್ತಿದರೆ, ಬೆಳೆಗಳು ನಾಶವಾಗುತ್ತವೆ ಅಥವಾ ಬೆಳೆಗಳ ಬೆಳವಣಿಗೆ ನಡೆಯುವುದಿಲ್ಲ.

೮. ಒಂದು ಜಮೀನಿನಲ್ಲಿ ನಿರಂತರವಾಗಿ ಬೆಳೆಗಳನ್ನು ಬೆಳೆದರೆ ಮಣ್ಣಿನ ಮೇಲಾಗುವ ಪರಿಣಾಮವನ್ನು ವಿವರಿಸಿ.

ಉತ್ತರ- ಮಣ್ಣು ಖನಿಜಯುಕ್ತ ಪೋಷಕಾಂಶಗಳನ್ನು ಬೆಳೆಗೆ ಒದಗಿಸುತ್ತದೆ. ಸಸ್ಯಗಳ ಬೆಳವಣಿಗೆಗೆ ಈ ಪೋಷಕಾಂಶಗಳು ಅತ್ಯಗತ್ಯ. ರೈತರು ಒಂದೇ ಜಮೀನಿನಲ್ಲಿ ಒಂದಾದ ನಂತರ ಒಂದರಂತೆ ಬೆಳೆಗಳನ್ನು ಬೆಳೆಯುತ್ತಾರೆ. ನಿರಂತರವಾಗಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಎರಡು ಬೆಳೆಗಳ ನಡುವೆ ಸ್ವಲ್ಪ ಕಾಲ ಜಮೀನನ್ನು ಉಳುಮೆ ಮಾಡದೇ ಬೀಳು ಬಿಡಬೇಕು.

೯. ಕಳೆಗಳು ಎಂದರೇನು? ಅವುಗಳನ್ನು ನಾವು ಹೇಗೆ ನಿಯಂತ್ರಿಸಬಹುದು?

ಉತ್ತರ- ಒಂದು ಜಮೀನಿನಲ್ಲಿ ಬೆಳೆಯ ಜೊತೆಗೆ ಅನೇಕ ಅನಪೇಕ್ಷಿತ ಸಸ್ಯಗಳು ತಾನೇ ತಾನಾಗಿ ಬೆಳೆಯಬಹುದು. ಈ ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎನ್ನುವರು.ಕಳೆಗಳನ್ನು ತೆಗೆದುಹಾಕುವುದಕ್ಕೆ ಕಳೆ ಕೀಳುವಿಕೆ ಎನ್ನುವರು. ಕಳೆಗಳು ನೀರು, ಪೋಷಕಾಂಶಗಳು, ಸ್ಥಳ ಮತ್ತು ಬೆಳಕಿಗಾಗಿ ಬೆಳೆಗಳೊಂದಿಗೆ ಸ್ಪರ್ಧೆ ನಡೆಸುವುದರಿಂದ ಕಳೆ ಕೀಳುವಿಕೆ ಅಗತ್ಯವಾಗಿದೆ. ಏಕೆಂದರೆ, ಬೆಳೆಗಳ ಬೆಳೆಯುವಿಕೆಗೆ ಅವು ಹಾನಿಯುಂಟುಮಾಡುತ್ತವೆ. 

ಕಳೆಗಳನ್ನು ನಿವಾರಿಸಲು ಮತ್ತು ಅವುಗಳ ಬೆಳವಣಿಗೆಯನ್ನು ನಿಯಂತ್ರಿಸಲು ರೈತರು ಹಲವಾರು ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. 

೧. ಬೆಳೆಗಳ ಬಿತ್ತನೆಗೆ ಮೊದಲು ಉಳುಮೆ ಮಾಡುವಿಕೆ

೨. ಕಳೆಗಳು ಹೂವು ಮತ್ತು ಬೀಜಗಳನ್ನು ಬಿಡುವ ಮೊದಲು ಅವುಗಳನ್ನು ಕಿತ್ತು ಹಾಕಬೇಕು. ಇದೇ ಕಳೆಗಳನ್ನು ನಿವಾರಿಸುವ ಅತ್ಯಂತ ಪ್ರಶಸ್ತ ಸಮಯವಾಗಿದೆ. ಕಾಲಕಾಲಕ್ಕೆ ಕಳೆಗಳನ್ನು ಬುಡಸಹಿತ ಕಿತ್ತುಹಾಕುವುದು ಅಥವಾ ನೆಲಮಟ್ಟಕ್ಕೆ ಅವುಗಳನ್ನು ಕತ್ತರಿಸುವುದು ಕೈಗಳಿಂದ ಕಳೆಗಳನ್ನು ನಿವಾರಿಸುವ ವಿಧಾನವಾಗಿದೆ.ಇದನ್ನು ಕುರ್ಪಿ ಅಥವಾ ಕುರ್ಚಿಗೆ ಎಂದು ಕರೆಯುವ ಸಣ್ಣ ಕತ್ತಿಗಳಿಂದ ಮಾಡಲಾಗುತ್ತದೆ. ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಗಳನ್ನೂಸಹ ಬಳಸಲಾಗುತ್ತದೆ.

೩. ಕಳೆನಾಶಕಗಳು ಎಂದು ಕರೆಯಲ್ಪಡುವ ಕೆಲವು ರಾಸಾಯನಿಕಗಳನ್ನು ಬಳಸುವುದರಿಂದಲೂ ಕಳೆಗಳನ್ನು ನಿಯಂತ್ರಿಸಬಹುದು. ಉದಾಹರಣೆಗೆ ೨,೪-ಆ. ಕಳೆಗಳನ್ನು ನಾಶಪಡಿಸಲು ಜಮೀನುಗಳಿಗೆ ಇವುಗಳನ್ನು ಸಿಂಪಡಿಸಲಾಗುತ್ತದೆ. ಇವುಗಳಿಂದ ಬೆಳೆಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. 

೧೦. ಕಬ್ಬಿನ ಬೆಳೆಯ ಉತ್ಪಾದನೆಯ ಪರಿಕಲ್ಪನಾ ಹರಿವು ನಕ್ಷೆಯನ್ನು ತಯಾರಿಸಲು ಈ ಕೆಳಗೆ ನೀಡಿರುವ ಅಂಶಗಳನ್ನು ಸರಿಯಾಗಿ ಹೊಂದಿಸಿ. 

Class 8 Science Chapter 1 Question Answer Crop Production and Management in Kannada Mediumಉತ್ತರ- 

Class 8 Science Chapter 1 Question Answer Crop Production and Management in Kannada Medium

ALSO REAAD-KSEEB Solutions for Class 5 EVS Chapter 6 Air in English Medium (2023)

೧೧. ಈ ಕೆಳಗೆ ನೀಡಿರುವ ಪದ ಜಾಲದಲ್ಲಿ ಮುಂದಿನ ಸುಳುಹುಗಳನ್ನು ಬಳಸಿ ಪದಗಳ ಸುತ್ತ ವೃತ್ತಾಕಾರಕ್ಕೆ ಗೆರೆ ಎಳೆಯಿರಿ (ಮೊದಲನೆಯದನ್ನು ಉದಾಹರಣೆಯಾಗಿ ನೀಡಿದೆ).

೧. ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆ - ಖಾರಿಫ್.

೨. ಬೆಳೆಯನ್ನು ಬೆಳೆಯುವ ಮೊದಲು ಅನುಸರಿಸುವ ಕೃಷಿಯ ಮೊದಲ ಹಂತ.- ಮಣ್ಣನ್ನು ಸಡಿಲಗೊಳಿಸುವುದು. 

೩. ಈ ಜೀವಿಯು `ರೈತನ ಮಿತ್ರ'.- ಎರೆಹುಳು 

೪. ಮಣ್ಣನ್ನು ಮಟ್ಟ ಮಾಡಲು ಬಳಸುವ ಉಪಕರಣ. ಲೆವೆಲ್ಲರ್

೫. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆ.-ಕೂರಿಗೆ

೬. ಇದೊಂದು ರಸಗೊಬ್ಬರ.- ನೈಟ್ರೋಜನ್

೭. ಲೆಗ್ಯುಮಿನಸ್ ಸಸ್ಯಗಳ ಬೇರುಗಳ ಗಂಟುಗಳಲ್ಲಿರುವ ಬ್ಯಾಕ್ಟೀರಿಯಾ.ರೈಜೋಬಿಯಂ

೮. ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದು.ನೀರಾವರಿ

೯. ಕಾಫಿ ತೋಟಕ್ಕೆ ತುಂಬಾ ಉಪಯುಕ್ತವಾದ ನೀರಾವರಿ ವಿಧಾನ.-ತುಂತುರು ವಿಧಾನ

೧೦. ಜಮೀನಿನಲ್ಲಿ ಬೆಳೆಯ ಜೊತೆಗೆ ಬೆಳೆಯುವ ಅನಪೇಕ್ಷಿತ ಸಸ್ಯಗಳು.-ಕಳೆಗಳು

೧೧. ಪಕ್ವವಾದ ನಂತರ ಬೆಳೆಯನ್ನು ಕತ್ತರಿಸುವ ಕ್ರಿಯೆ.-ಕೊಯ್ಲು

೧೨. ಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ಪ್ರಕ್ರಿಯೆ.-ಒಕ್ಕಣೆ 

೧೩. ಇದೊಂದು ನೀರಾವರಿಯ ಸಾಂಪ್ರದಾಯಿಕ ವಿಧಾನ.ಅಗಳು 

೧೪. ಮಣ್ಣಿಗೆ ಎಲ್ಲಾ ಪೋಷಕಾಂಶಗಳನ್ನು ಮರುಭರ್ತಿ ಮಾಡುವ ಒಂದು ವಿಧಾನ.ಬೆಳೆಸರದಿ ಪದ್ಧತಿ

೧೫. ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುವ ಸರಳ ಉಪಕರಣ.ಕೂರಿಗೆ

Class 8 Science Chapter 1 Question Answer Crop Production and Management in Kannada Medium
ಉತ್ತರ- 
Class 8 Science Chapter 1 Question Answer Crop Production and Management in Kannada Medium






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.