Class 5 EVS Question Answer Chapter 13 Amazing Energy.
ವಿಸ್ಮಯ ಶಕ್ತಿ-ನಾವು ವಾಸಿಸುವ ವಿಶ್ವವು ದ್ರವ್ಯ ಮತ್ತು ಶಕ್ತಿಯಿಂದಾಗಿದೆ ಎಂದು ಹಿಂದಿನ ಪಾಠದಲ್ಲಿ ತಿಳಿದಿರುವೆ. ಮಾನವರು ಪರಿಸರದ ಒಂದು ಭಾಗ. ಪರಿಸರದ ಅನೇಕ ಸ್ವಾಭಾವಿಕ ಸಂಗತಿಗಳನ್ನು ಮಾನವರು ಅರ್ಥಮಾಡಿಕೊಂಡಿದ್ದಾರೆ. ಪರಿಸರದಲ್ಲಿ ಕಂಡು ಬರುವ ಬದಲಾವಣೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿತಿದ್ದಾರೆ. ನಾವು ದಿನನಿತ್ಯ ಬಲ, ಕೆಲಸ, ಶಕ್ತಿ ಎಂಬ ಪದಗಳನ್ನು ಬಳಸುತ್ತಿರುತ್ತೇವೆ. ಇಲ್ಲಿ ನಾವು Class 5 EVS Question Answer Chapter 13 Amazing Energy ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.
Class 5 EVS Question Answer Chapter 13 Amazing Energy.
ಚಟುವಟಿಕೆ : ನೀನು ಮಾಡುವ ಯಾವುದಾದರೂ ೫ ಕೆಲಸಗಳ ಹೆಸರು ಬರೆ.
(ಉದಾಹರಣೆಯನ್ನು ಗಮನಿಸು)
೧. ನೀರು ತರುವುದು.
೨. ____________________________________________________
೩. ____________________________________________________
೪. ____________________________________________________
೫. ____________________________________________________
೬. ____________________________________________________
ಉತ್ತರ-
೧. ನೀರು ತರುವುದು.
೨. ಕಸಗುಡಿಸುವುದು.
೩. ಸೌದೆ ಒಡೆಯುವುದು.
೪. ಅಂಗಡಿಗೆ ಹೋಗಿ ಅಗತ್ಯ ಸಾಮಗ್ರಿಗಳನ್ನು ತರುವುದು.
೫. ಬಟ್ಟೆ ಹೊಗೆಯುವುದು.
೬. ಅಡುಗೆ ತಯಾರಿಸುವುದು.
ಮೇಲಿನ ಚಿತ್ರದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಕೆಳಗೆ ಕೊಟ್ಟಿರುವ ಜಾಗದಲ್ಲಿ ಬರೆ.
೧. ___________________________________________________
೨. ___________________________________________________
೩. ___________________________________________________
೪. ___________________________________________________
೫. ___________________________________________________
ಉತ್ತರ- ೧. ಸೈಕಲ್ ಸವಾರಿ ಮಾಡುತ್ತಿರುವುದು.
೨. ಕೈ ಗಾಡಿ ಎಳೆಯುತ್ತಿರುವುದು.
೩. ಬೆಳೆಗಳಿಗೆ ರಾಸಾಯನಿಕ ಸಿಂಪರಣೆ ಮಾಡಲಾಗುತ್ತಿದೆ.
೪. ಚೆಂಡನ್ನು ಎಸೆಯುತ್ತಿರುವುದು.
೫. ತಲೆಯ ಮೇಲೆ ವಸ್ತುಗಳನ್ನು ಹೊತ್ತಿರುವುದು.
ಸ್ನಾಯು ಶಕ್ತಿ ಬಳಸಿ ನೀನು ಮಾಡುವ ಯಾವುದಾದರೂ ೪ ಕೆಲಸಗಳನ್ನು ಬರೆ.
೧. ____________________________________________________
೨. ____________________________________________________
೩. ____________________________________________________
೪. ___________________________________________________
ಉತ್ತರ-೧. ನೀರು ತರುವುದು.
೨. ಕಸಗುಡಿಸುವುದು.
೩. ಓಡುವುದು.
೪. ಸೈಕಲ್ ಸವಾರಿ ಮಾಡುವುದು.
ಯಾಂತ್ರಿಕ ಶಕ್ತಿ ಬಳಸಿ ನಿನ್ನ ಮನೆಯಲ್ಲಿ ಮಾಡುವ ಯಾವುದಾದರೂ ೨ ಕೆಲಸಗಳನ್ನು ಬರೆ.
೧. _________________________________________________
೨. _________________________________________________
ಉತ್ತರ-೧. ಫ್ಯಾನ್ ತಿರುಗುವುದು.
೨. ಮಿಕ್ಸಿ ಬಳಸಿ ಕೆಲಸ ಮಾಡುವುದು.
ನಿನ್ನ ಮನೆಯಲ್ಲಿ ಉಷ್ಣದ ಸಹಾಯದಿಂದ ಮಾಡುವ ಯಾವುದಾದರೂ ೨ ಕೆಲಸಗಳನ್ನು ಇಲ್ಲಿ ಬರೆ.
೧. ____________________________________________________
೨. ____________________________________________________
ಉತ್ತರ-೧. ಬಟ್ಟೆಯನ್ನು ಇಸ್ತ್ರಿ ಮಾಡುವುದು.
೨. ನೀರನ್ನು ಕಾಯಿಸುವುದು.
ಚಳಿಗಾಲದಲ್ಲಿ ಘನೀಕೃತ ಎಣ್ಣೆಯ ಪಾತ್ರೆಗಳನ್ನು ಒಲೆಯ ಉರಿ ಇಲ್ಲವೆ ಸೂರ್ಯನ
ಬಿಸಿಲಿಗೆ ಇಡುತ್ತಾರೆ. ಏಕಿರಬಹುದು? ಆಲೋಚಿಸಿ, ಬರೆ.
____________________________________________________
____________________________________________________
ಉತ್ತರ-ಘನೀಕೃತ ಎಣ್ಣೆಯನ್ನು ದ್ರವ ರೂಪಕ್ಕೆ ತರಲು ಘನೀಕೃತ ಎಣ್ಣೆಯ ಪಾತ್ರೆಗಳನ್ನು ಒಲೆಯ ಉರಿ ಇಲ್ಲವೆ ಸೂರ್ಯನ ಬಿಸಿಲಿಗೆ ಇಡುತ್ತಾರೆ.
ಆಲೋಚಿಸು : ಇದ್ದಿಲಿನ ಇಸ್ತ್ರಿಪೆಟ್ಟಿಗೆ ಬಳಸುವಾಗ ಯಾವುದು ಉಷ್ಣಶಕ್ತಿಯಾಗುತ್ತದೆ?
ಉತ್ತರ-ಇದ್ದಿಲು ಉರಿಯುವುದರಿಂದ ಉಷ್ಣ ಬಿಡುಗಡೆಯಾಗುತ್ತದೆ.
ಚಟುವಟಿಕೆ : ಗೆಳೆಯರು ಇಲ್ಲವೆ ಹಿರಿಯರೊಂದಿಗೆ ಚರ್ಚಿಸಿ, ಬರೆ.
೧. ಬೇಸಿಗೆ ಕಾಲದಲ್ಲಿ ಒಣ ಹಾಕಿದ ಬಟ್ಟೆಗಳು ಬಹಳ ಬೇಗ ಒಣಗುತ್ತವೆ. ಹೇಗೆ?
____________________________________________________
____________________________________________________
ಉತ್ತರ-ಬಟ್ಟೆಯ ಮೇಲ್ಮೈಯಿಂದ ನೀರಿನ ಆವಿಯಾಗುವಿಕೆಯಿಂದಾಗಿ ಒದ್ದೆಯಾದ ಬಟ್ಟೆಗಳು ಒಣಗುತ್ತವೆ. ಬೇಸಿಗೆಯಲ್ಲಿ ತಾಪಮಾನವು ಅಧಿಕವಾಗಿರುತ್ತದೆ. ಆದ್ದರಿಂದ, ಆವಿಯಾಗುವಿಕೆಯ ಪ್ರಮಾಣವು ಹೆಚ್ಚು. ಆದ್ದರಿಂದ, ಬೇಸಿಗೆಯಲ್ಲಿ ಒದ್ದೆಯಾದ ಬಟ್ಟೆಗಳು ವೇಗವಾಗಿ ಒಣಗುತ್ತವೆ.
೨. ಬೇಸಿಗೆ ಕಾಲದಲ್ಲಿ ಕೆರೆ ಬಾವಿಗಳ ನೀರು ಕಡಿಮೆಯಾಗುತ್ತದೆ. ಏಕೆ?
____________________________________________________
____________________________________________________
ಉತ್ತರ-ಬೇಸಿಗೆ ಕಾಲ ಎಂದರೆ ಹೆಚ್ಚು ಹಗಲು ಮತ್ತು ಸೂರ್ಯನ ಶಾಖ. ಆದ್ದರಿಂದ, ಸೂರ್ಯನ ಶಾಖ ಇರುವ ಕಾರಣ ಹಗಲಿನ ಸಮಯದಲ್ಲಿ ನೀರು ವೇಗವಾಗಿ ಆವಿಯಾಗುವುದರಿಂದ ಬೇಸಿಗೆಯಲ್ಲಿ ಬಾವಿಗಳು ಒಣಗುತ್ತವೆ.
೩. ವಿಪರೀತ ಚಳಿ ಇರುವಾಗ ಜನರು ಸೂರ್ಯನ ಬೆಳಕಿಗಾಗಿ ಕಾಯುತ್ತಾರೆ. ಏಕೆ?
____________________________________________________
____________________________________________________
ಉತ್ತರ-ಚಳಿಯಿಂದ ಮುಕ್ತಿ ಹೊಂದಲು ಮತ್ತು ದೇಹವನ್ನು ಬೆಚ್ಚಗಿಡಲು ಜನರು ಚಳಿಗಾಲದಲ್ಲಿ ಸೂರ್ಯನ ಬೆಳಕನ್ನು ಕಾಯುತ್ತಾರೆ. ಅಲ್ಲದೆ, ತಂಪಾದ ವಾತಾವರಣದಲ್ಲಿ ದೇಹವು ವೈರಸ್ಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.
೪. ಸೌರ ಜಲತಾಪಕವನ್ನು ಏಕೆ ಬಳಸುತ್ತಾರೆ?
____________________________________________________
ಉತ್ತರ-ನೀರನ್ನು ಬಿಸಿ ಮಾಡಲು ಅಥವಾ ಕಾಯಿಸಲು ಬಳಸುತ್ತಾರೆ. ಸೋಲಾರ್ ವಾಟರ್ ಹೀಟರ್ ಅನ್ನು ಬಳಸುವುದರಿಂದ 70-80% ವಿದ್ಯುತ್ ಅಥವಾ ಇಂಧನ ಬಿಲ್‌ಗಳನ್ನು ಉಳಿಸಬಹುದು.
ಈ ಚಿತ್ರಗಳನ್ನು ಗಮನಿಸು. ಸೌರಶಕ್ತಿಯನ್ನು ಎಲ್ಲಿ ಬಳಸಲಾಗಿದೆ ಎಂದು ಗುರುತಿಸಿ ಹೇಳು.
5th EVS Chapter 13 Answers Kannada Medium.
ಉತ್ತರ-ಮೊದಲ ಚಿತ್ರದಲ್ಲಿ ಕಾರಿನ ರೂಫ್ ಮೇಲೆ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ಕಾರನ್ನು ಚಲಾಯಿಸಲು ಬಳಸಲಾಗಿದೆ.
ಎರಡನೇ ಚಿತ್ರದಲ್ಲಿ ದೋಣಿ ಅಥವಾ ಹಡಗಿನ ಮೇಲೆ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ದೋಣಿ ಅಥವಾ ಹಡಗನ್ನು ಚಲಾಯಿಸಲು ಬಳಸಲಾಗಿದೆ.
ಮೂರನೇ ಚಿತ್ರದಲ್ಲಿ ವಿಮಾನದ ಮೇಲ್ಬಾಗ ರೂಫ್ ಮೇಲೆ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ವಿಮಾನವನ್ನು ಚಲಾಯಿಸಲು ಬಳಸಲಾಗಿದೆ.
ನಾಲ್ಕನೇ ಚಿತ್ರದಲ್ಲಿ ಸೋಲಾರ್ ಕುಕ್ಕರ್ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ಮನೆಯಲ್ಲಿ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಅಡುಗೆ ತಯಾರಿಸಬಹುದು.
ಐದನೇ ಚಿತ್ರದಲ್ಲಿ ನೀರನ್ನು ಬಿಸಿ ಮಾಡಲು ಅಥವಾ ಕಾಯಿಸಲು ಬಳಸಲಾಗಿದೆ. ಸೋಲಾರ್ ವಾಟರ್ ಹೀಟರ್ ಅನ್ನು ಬಳಸುವುದರಿಂದ 70-80% ವಿದ್ಯುತ್ ಅಥವಾ ಇಂಧನ ಬಿಲ್‌ಗಳನ್ನು ಉಳಿಸಬಹುದು.
ಆರನೇ ಚಿತ್ರದಲ್ಲಿ ಬೀದಿ ದೀಪಗಳಲ್ಲಿ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ಬೆಳಕನ್ನು ಪಡೆಯಲಾಗುತ್ತದೆ.
ಚಟುವಟಿಕೆ : ನೀನು ಬಹಳ ಹತ್ತಿರದಿಂದ ನೋಡಿರುವ ಅಥವಾ ಬಳಸಿರುವ ಸೌರಶಕ್ತಿಯ ಸಾಧನಗಳ ಹೆಸರು ಬರೆ.
ಉತ್ತರ-
ಉತ್ತರ-
ಪವನ ಶಕ್ತಿಯಿಂದ ಮಾಡುವಂತಹ ಇನ್ನಿತರ ಕೆಲಸಗಳನ್ನು ತಿಳಿದು ಬರೆ. ಉತ್ತರ-- ಗಾಳಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ.
- ವಿಂಡ್‌ಮಿಲ್‌ಗಳಲ್ಲಿ ಬಳಕೆ.
- ಗಾಳಿ ಚಾಲಿತ ವಾಹನಗಳು, ನೀರಿನ ಪಂಪ್, ವಿಂಡ್‌ಸರ್ಫಿಂಗ್, ಚಾಲಿತ ಹಡಗುಗಳು ಮತ್ತು ಸರಕು ಹಡಗುಗಳಲ್ಲಿ ಬಳಸಬಹುದು.
ನಿನಗೆ ತಿಳಿದಿರುವ ಅಣೆಕಟ್ಟುಗಳ ಹೆಸರನ್ನು ಬರೆ. ಅದರಲ್ಲಿ ನೀನು ಭೇಟಿ ನೀಡಿದ
ಅಣೆಕಟ್ಟು ಇದ್ದರೆ (✔) ಗುರುತು ಹಾಕು.
೧. ___________________ ೨. _______________________
೩. ___________________ ೪. _______________________
೫. ___________________ ೬. _______________________
ಉತ್ತರ-ಕೃಷ್ಣಾ ರಾಜ ಸಾಗರ ಆಣೆಕಟ್ಟು.
ತುಂಗಾ ಭದ್ರ ಆಣೆಕಟ್ಟು.
ಹೇಮಾವತಿ ಜಲಾಶಯ.
ಆಲಮಟ್ಟಿ ಆಣೆಕಟ್ಟು.
ಮಾರಿಕಣಿವೆ ಆಣೆಕಟ್ಟು.
ಕಬಿನಿ ಆಣೆಕಟ್ಟು.
ಕರ್ನಾಟಕದ ಕೆಲವು ನದಿಗಳಿಗೆ ಅಡ್ಡವಾಗಿ ಕಟ್ಟಿದ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಕೇಂದ್ರಗಳ ಹೆಸರನ್ನು ಗ್ರಂಥಾಲಯದ ಪುಸ್ತಕಗಳ ನೆರವಿನಿಂದ ಪಟ್ಟಿಮಾಡು.
ನೀರಿನ ಶಕ್ತಿ ಬಳಸಿ ಮಾಡುವ ಕೆಲಸಗಳನ್ನು ಹೆಸರಿಸು.
೧. ____________________________________________________
೨. ____________________________________________________
೩. ____________________________________________________
೪. ____________________________________________________
ಉತ್ತರ-
ನೀರಿನ ಶಕ್ತಿ ಬಳಸಿ ಮಾಡುವ ಕೆಲಸಗಳು.
೧. ಸಾರಿಗೆ-ಹಡಗು,ದೋಣಿ ಗಳನ್ನು ನಡೆಸಲು.
೨. ಜಲವಿದ್ಯುತ್ ಉತ್ಪಾದಿಸಲು.
೩. ಪ್ರವಾಸೋದ್ಯಮ ಮತ್ತು ಮನರಂಜನೆಯಲ್ಲಿ ಬಳಸಲಾಗುತ್ತದೆ.
೪. ಹಲವು ಅದಿರುಗಳಿಂದ ತ್ಯಾಜ್ಯಗಳನ್ನು ತೆಗೆಯಲು ಬಳಸಲಾಗುತ್ತದೆ
ನೀನು ವಿದ್ಯುತ್ ಅನ್ನು ಉಳಿಸುವ ೨ ಸಂದರ್ಭಗಳನ್ನು ಬರೆ.
೧. ____________________________________________________
೨. ____________________________________________________
ಉತ್ತರ-ವಿದ್ಯುತ್‌ಅನ್ನು ಉಳಿಸುವ ೨ ಸಂದರ್ಭಗಳು-
೧. ಬಳಕೆಯಾಗದ ದೀಪಗಳನ್ನು ಆಫ್ ಮಾಡಿ.
೨. ಬಳಸದ ಉಪಕರಣಗಳನ್ನು ಅನ್‌ಪ್ಲಗ್ ಮಾಡಿ/ ಆಫ್ ಮಾಡಿ.
ನಿನ್ನ ಮನೆಯಲ್ಲಿ ವಿದ್ಯುತ್ ಸಾಧನ ಬಳಸಿ ಮಾಡುವ ಯಾವುದಾದರೂ ೪ ಕೆಲಸಗಳನ್ನು ಬರೆ.
ನೀನು ತಿಳಿದಿರುವಂತೆ ಜೈವಿಕ ಶಕ್ತಿಯಿಂದ ಯಾವ ಯಾವ ಕೆಲಸ ಮಾಡಬಹುದು?ಇಲ್ಲಿ ಬರೆ.
೧. ____________________________________________________
೨. ____________________________________________________
೩. ____________________________________________________
೪. ____________________________________________________
ಉತ್ತರ-
೧. ವಿದ್ಯುತ್ ದೀಪಗಳನ್ನು ಬೆಳಗಿಸಲು ವಿದ್ಯುತ್ ಉತ್ಪಾದನೆ ಮಾಡಬಹುದು.
೨. ಜೈವಿಕ ಅನಿಲ ಉತ್ಪಾದಿಸಿ ಆ ಅನಿಲವನ್ನು ಅಡುಗೆ ಒಲೆ ಯಲ್ಲಿ ಬಳಸಬಹುದು.
೩. ಬಾವಿಯ ನೀರನ್ನು ಮೇಲೆತ್ತಲು ಬಳಕೆ ಮಾಡಬಹುದು.
೪. ಹಲವು ಕಾರ್ಯಗಳನ್ನು ನಿರ್ವಹಿಸಲು ಇಂಧನವಾಗಿ ಬಳಸಬಹುದು.
ಚಟುವಟಿಕೆ : ಈ ಕೆಳಗಿನವುಗಳಲ್ಲಿ ಬಳಸುವ ಇಂಧನಗಳನ್ನು ಶಿಕ್ಷಕರು/ ಹಿರಿಯರಿಂದ ತಿಳಿದು ಆಯಾ ಚಿತ್ರದ ಕೆಳಗೆ ಬರೆ
ಉತ್ತರ-
ನಿನ್ನ ಮನೆಯಲ್ಲಿ ಇಂಧನ ಬಳಸಿ ಉಪಯೋಗಿಸುವ ಸಾಧನಗಳೇನಾದರೂ ಇದ್ದರೆ
ಅವುಗಳನ್ನು ಹೆಸರಿಸು.
೧. ___________________ • ___________________
೨. ___________________ • ___________________
೩. ___________________ • ___________________
ಉತ್ತರ-ಇಂಧನ ಬಳಸಿ ಉಪಯೋಗಿಸುವ ಸಾಧನಗಳು
೧. ಒಲೆ • ಸೌದೆ,ಎಲ್.ಪಿ.ಜಿ.
೨. ನೀರು ಬಿಸಿ ಮಾಡಲು • ಸೌರ ಜಲ ತಾಪಕ
೩. ಮಿಕ್ಸರ್/ಗ್ರೈಂಡರ್ • ವಿದ್ಯುತ್
ನೀನು ಈಗಾಗಲೇ ಕಲಿತ ಶಕ್ತಿಯ ವಿವಿಧ ರೂಪಗಳನ್ನು ಇಲ್ಲಿ ಬರೆ.
೧. ___________________ ೨. _______________________
೩. ___________________ ೪. _______________________
೫. ___________________ ೬. _______________________
೭. ___________________ ೮. _______________________
೯. ___________________ ೧೦. _____________________
ಉತ್ತರ-ಶಕ್ತಿಯ ವಿವಿಧ ರೂಪಗಳು-
೧. ಸ್ನಾಯು ಶಕ್ತಿ. ೨. ಯಾಂತ್ರಿಕ ಶಕ್ತಿ
೩. ಉಷ್ಣ ಶಕ್ತಿ ೪. ಸೌರ ಶಕ್ತಿ
೫. ಪವನಶಕ್ತಿ ೬.ಜಲದ ಸಂಗ್ರಹಿತ ಶಕ್ತಿ
೭. ವಿದ್ಯುತ್ ಶಕ್ತಿ ೮. ಜೈವಿಕ ಶಕ್ತಿ
೯. ರಾಸಾಯನಿಕ ಶಕ್ತಿ ೧೦. ಇಂಧನ ಶಕ್ತಿ
ಕೆಳಗಿನ ಚಟುವಟಿಕೆಯಲ್ಲಿ ಶಕ್ತಿಯು ಯಾವ ರೂಪದಿಂದ ಯಾವ ರೂಪಕ್ಕೆ ಬದಲಾಯಿತು
ಎಂಬುದನ್ನು ಬರೆ. ಕೊಟ್ಟಿರುವ ಉದಾಹರಣೆಯನ್ನು ಗಮನಿಸು.
ಉತ್ತರ-ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುವ ಬೇರೆ ಉದಾಹರಣೆಗಳನ್ನು ಇಲ್ಲಿ ಬರೆ.
೧. ____________________________________________________
೨. ____________________________________________________
೩. ____________________________________________________
೪. ___________________________________________________
ಉತ್ತರ-ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುವ ಬೇರೆ ಉದಾಹರಣೆಗಳು-
೧. ಇಂಧನವು ಯಾಂತ್ರಿಕ ಶಕ್ತಿಯಾಗಿ ಬದಲಾಗುವುದು. (ವಾಹನ ಚಲಿಸಲು)
೨. ಸೌದೆಯು ಉಷ್ಣ ಶಕ್ತಿಯಾಗಿ ಬದಲಾಗುವುದು. (ಅಡುಗೆ ಮಾಡಲು)
೩. ಸೈಕಲ್ ಸವಾರಿ ಸ್ನಾಯು ಶಕ್ತಿ ಯಾಂತ್ರಿಕ ಶಕ್ತಿಯಾಗಿ ಬದಲಾಗುವುದು.
೪. ಮಿಕ್ಸರ್/ಗ್ರೈಂಡರ್ ವಿದ್ಯುತ್ ಶಕ್ತಿ ಯಾಂತ್ರಿಕ ಶಕ್ತಿಯಾಗಿ ಬದಲಾಗುವುದು.
ಕೆಳಗೆ ಕೊಟ್ಟಿರುವ ಚಟುವಟಿಕೆಯಿಂದ ಯಾವ ಪರ್ಯಾಯ ಶಕ್ತಿ ಉಳಿಸಬಹುದು ಎಂಬುದನ್ನು ಸುಳಿವು ಬಳಸಿ ಬರೆ. (ಇಂಧನ, ರಾಸಾಯನಿಕ, ವಿದ್ಯುತ್, ಇದ್ದಿಲು)
ಕೆಳಗಿನ ಚಟುವಟಿಕೆಗಳಿಗೆ ಬಳಸುವ ಶಕ್ತಿಯ ಬದಲಿಗೆ ಉಳಿತಾಯವಾಗಿ ಯಾವ
ಪರ್ಯಾಯ ಶಕ್ತಿಯನ್ನು ಬಳಸಬಹುದು ಎಂಬುದನ್ನು ಸುಳಿವು ಬಳಸಿ ಬರೆ.
(ಸೌರ ಜಲತಾಪಕ, ಗೋಬರ್ ಗ್ಯಾಸ್, ಸೌರಕುಕ್ಕರ್, ಸೋಲಾರ್, ರಾಸಾಯನಿಕ ಶುಷ್ಕಕೋಶ)
kseeb solutions for class 5 evs chapter 13.
Amazing Energy Frequently Asked Questions-
ಕೆಲಸ ಎಂದರೇನು?
ವಸ್ತುವಿನ ಮೇಲೆ ಪ್ರಯೋಗವಾದ ಬಲವು ಆ ವಸ್ತುವನ್ನು ಅದೇ ದಿಕ್ಕಿನಲ್ಲಿಯೇ ಚಲಿಸುವಂತೆ ಮಾಡಿದರೆ ಕೆಲಸ ಆಗಿದೆ ಎಂದು ಅರ್ಥ.
ಒಂದು ವಸ್ತುವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವಂತೆ ಮಾಡುವುದನ್ನು
ಕೂಡ ಕೆಲಸ ಎಂದು ಹೇಳಬಹುದು.
ಸ್ನಾಯು ಶಕ್ತಿ ಎಂದರೇನು?
ಓಡಾಡುವ, ಏರುವ, ಇಳಿಯುವ, ವಸ್ತುಗಳನ್ನು ಎಳೆಯುವ, ನೂಕುವ - ಇಂತಹ ಚಟುವಟಿಕೆಗಳಿಗೆ ಸ್ನಾಯು ಶಕ್ತಿ ಅವಶ್ಯ. ಇದು ನಮ್ಮ ಶರೀರದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಯಿಂದ ಉಂಟಾಗುವ ಶಕ್ತಿ.
ಪ್ರಚ್ಛನ್ನಶಕ್ತಿ ಎಂದರೇನು?
ಒಂದು ವಸ್ತುವು ತನ್ನ ಸ್ಥಾನದಿಂದ ಪಡೆಯುವ ಶಕ್ತಿಯನ್ನು ಪ್ರಚ್ಛನ್ನಶಕ್ತಿ ಎಂದು ಕರೆಯುತ್ತಾರೆ.
ಚಲನಶಕ್ತಿ ಎಂದರೇನು?
ಒಂದು ವಸ್ತುವು ತನ್ನ ಚಲನೆಯಿಂದ ಪಡೆಯುವ ಶಕ್ತಿಯನ್ನು ಚಲನಶಕ್ತಿ ಎಂದು ಕರೆಯುತ್ತಾರೆ.
ಯಾಂತ್ರಿಕ ಶಕ್ತಿ ಎಂದರೇನು?
ಪ್ರಚ್ಛನ್ನ ಶಕ್ತಿ ಮತ್ತು ಚಲನ ಶಕ್ತಿಗಳ ಒಟ್ಟು ಮೊತ್ತವನ್ನು ಯಾಂತ್ರಿಕ ಶಕ್ತಿ ಎಂದು ಕರೆಯುತ್ತಾರೆ.
ಭೂಮಿಯ ಮೇಲಿರುವ ಎಲ್ಲಾ ಶಕ್ತಿಗಳ ಮೂಲ ಆಕರ ಯಾವುದು?
ಭೂಮಿಯ ಮೇಲಿರುವ ಎಲ್ಲಾ ಶಕ್ತಿಗಳ ಮೂಲ ಆಕರ ಸೂರ್ಯ.
ಸೌರಶಕ್ತಿ ಎಂದರೇನು?
ಸೂರ್ಯನಿಂದ ಪಡೆಯುವ ಶಕ್ತಿಯನ್ನು ಸೌರಶಕ್ತಿ ಎನ್ನುತ್ತಾರೆ.
ದ್ಯುತಿ ಸಂಶ್ಲೇಷಣೆ ಎಂದರೇನು?
ಸಸ್ಯಗಳು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ತಮ್ಮ ಆಹಾರವನ್ನು ತಯಾರಿಸುತ್ತವೆ. ಈ ಪ್ರಕ್ರಿಯೆಯನ್ನು ದ್ಯುತಿ ಸಂಶ್ಲೇಷಣೆ ಎಂದು ಕರೆಯಲಾಗುವುದು.
ಪವನ ಶಕ್ತಿ ಎಂದರೇನು?
ಚಲಿಸುವ ವಾಯುವು (ಗಾಳಿ) ತನ್ನಲ್ಲಿ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ಪವನ ಶಕ್ತಿ
(ಗಾಳಿ ಶಕ್ತಿ) ಎನ್ನುತ್ತಾರೆ.
ಜೈವಿಕ ಅನಿಲ ಎಂದರೇನು?
ಕೃಷಿ ತ್ಯಾಜ್ಯ, ಸಸ್ಯದ ಅವಶೇಷಗಳು ಮತ್ತು ಪ್ರಾಣಿಗಳ ಸಗಣಿ ಇವೇ ಮೊದಲಾದವುಗಳನ್ನು ವಾಯುವಿನ ಸಂಪರ್ಕವಿಲ್ಲದಂತೆ ಕೊಳೆಯಿಸಿದಾಗ ಉಂಟಾಗುವ ಅನಿಲವನ್ನು ಜೈವಿಕ ಅನಿಲ ಎನ್ನುತ್ತಾರೆ.
ಇಲ್ಲಿ ನಾವು Class 5 EVS Question Answer Chapter 13 Amazing Energy ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.
class 5 evs chapter 13 questions and answers in pdf👇👇👇
hhttps://drive.google.com/file/d/1gAr-kWvUV3wGutDiovlnwOOvrGTCrETn/view?usp=sharing
ALSO READ THE SOLUTIONS OF 5th EVS CHAPTERS👇👇👇
PLEASE DO NOT ENTER ANY SPAM LINK IN THE COMMENT BOX