5th EVS Solutions Chapter 14 The Sky Kannada

 5th EVS Solutions Chapter 14 The Sky Kannada.

ಬಾನಂಗಳ ಸಂಜೆ ಮೇಲೆ ಆಟದ ಮೈದಾನದಿಂದ ಆಕಾಶವನ್ನು ನೋಡು. ಮಸುಕಿನಿಂದ ಆವರಿಸಿದ ಸಂಜೆಗತ್ತಲಿನಲ್ಲಿ ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಆಕಾಶದಲ್ಲಿ ಕಾಣುತ್ತವೆ. ಶುಭ್ರ ಆಕಾಶದಲ್ಲಿ ಅಸಂಖ್ಯಾತ ನಕ್ಷತ್ರಗಳು ಕಾಣಿಸುತ್ತವೆ. ಕೆಲವೊಮ್ಮೆ ಬೀಳುವ ನಕ್ಷತ್ರಗಳು ಕಾಣುವವು. ಮಳೆಗಾಲದಲ್ಲಿ ಗುಡುಗಿನ ಆರ್ಭಟ, ಮಿಂಚು, ಬಿರುಗಾಳಿ, ಮಳೆ, ಏನೆಲ್ಲಾ ಕಂಡುಬರುತ್ತದೆ. ಇವೆಲ್ಲಾ ಹೇಗೆ ಆಗುತ್ತವೆ? ಎಂಬ ಕುತೂಹಲ ನಮಗೆಲ್ಲಾ ಇದೆ. ಸೂರ್ಯ ಉದಯಿಸಿದಾಗ, ಸುತ್ತಲೂ ಬೆಳಕು ಚೆಲ್ಲಿ ಹಗಲು ಆಗುವುದು. ಸೂರ್ಯ ಮುಳುಗಿದಾಗ ಕತ್ತಲಾಗಿ ರಾತ್ರಿಯಾಗುವುದು. ರಾತ್ರಿಯಲ್ಲಿ ಚಂದ್ರ ಮೂಡುವುದು.ಇಲ್ಲಿ ನಾವು 5th standard evs lesson number 14 the sky notes ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.5th EVS Solutions Chapter 14 The Sky Kannada

5th standard evs lesson number 14 the sky notes.

ಸೌರವ್ಯೂಹ - ಸೂರ್ಯನ ಪರಿವಾರ.

5th EVS Solutions Chapter 14 The Sky Kannada
ಈ ಚಿತ್ರದ ಸಹಾಯದಿಂದ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು.

ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ? 

ಉತ್ತರ- ಸೌರವ್ಯೂಹದಲ್ಲಿ ಎಂಟು ಗ್ರಹಗಳಿವೆ. 

ಸೌರವ್ಯೂಹದ ಗ್ರಹಗಳ ಹೆಸರುಗಳನ್ನು ಅನುಕ್ರಮವಾಗಿ ಬರೆ. 

ಉತ್ತರ-ಬುಧ,ಶುಕ್ರ,ಭೂಮಿ, ಮಂಗಳ, ಗುರು,ಶನಿ, ಯುರೇನಸ್, ನೆಪ್ಟ್ಯೂನ್. 

ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು? 

ಉತ್ತರ-ಸೂರ್ಯನಿಗೆ ಹತ್ತಿರವಿರುವ ಗ್ರಹ- ಬುಧ. 

ಈ ಗ್ರಹಗಳಲ್ಲಿ ನಾವು ವಾಸಿಸುತ್ತಿರುವ ಗ್ರಹ ಯಾವುದು? 

ಉತ್ತರ-ಈ ಗ್ರಹಗಳಲ್ಲಿ ನಾವು ವಾಸಿಸುತ್ತಿರುವ ಗ್ರಹ- ಭೂಮಿ. 

ಸೌರವ್ಯೂಹದ ದೊಡ್ಡ ಗ್ರಹ ಯಾವುದು? 

ಉತ್ತರ-ಸೌರವ್ಯೂಹದ ದೊಡ್ಡ ಗ್ರಹ -ಗುರು. 

ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ ಯಾವುದು? 

ಉತ್ತರ-ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ- ಬುಧ. 

ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ ಯಾವುದು? 

ಉತ್ತರ-ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ-ನೆಪ್ಟ್ಯೂನ್. 

ಸೂರ್ಯನಿಂದ ಭೂಮಿ ಎಷ್ಟನೇ ಸ್ಥಾನದಲ್ಲಿದೆ?

ಉತ್ತರ-ಸೂರ್ಯನಿಂದ ಭೂಮಿ ಮೂರನೇ ಸ್ಥಾನದಲ್ಲಿದೆ. 

ಜೀವಿಗಳು ಭೂಮಿಯ ಮೇಲೆ ಜೀವಿಸಲು ಅಗತ್ಯವಾದ ಅಂಶಗಳನ್ನು ಪಟ್ಟಿ ಮಾಡು. 

________________ _________________ _______________

________________ _________________ _______________

ಉತ್ತರ-ನೀರು, ಗಾಳಿ(ಆಮ್ಲಜನಕ),ಮಣ್ಣು,ಸೂಕ್ತವಾದ ವಾಯುಗುಣ, 

ಯಾವ ಗ್ರಹವು ಸೂರ್ಯನನ್ನು ಸುತ್ತಲು ಕಡಿಮೆ ಅವಧಿಯನ್ನು ತೆಗೆದುಕೊಳ್ಳುತ್ತದೆ? ಏಕೆ? 

ಉತ್ತರ-ಬುಧ ಗ್ರಹವು ಸೂರ್ಯನನ್ನು ಸುತ್ತಲು ಕಡಿಮೆ ಅವಧಿಯನ್ನು ತೆಗೆದುಕೊಳ್ಳುತ್ತದೆ. ಏಕೆಂದರೆ- ಇದು ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿರುವ ಗ್ರಹ.

ಯಾವ ಗ್ರಹವು ಸೂರ್ಯನನ್ನು ಒಂದು ಬಾರಿ ಸುತ್ತಲು ಹೆಚ್ಚಿನ ಅವಧಿ ತೆಗೆದು ಕೊಳ್ಳುತ್ತದೆ? ಏಕೆ?

ಉತ್ತರ- ನೆಪ್ಟ್ಯೂನ್ ಗ್ರಹವು ಸೂರ್ಯನನ್ನು ಒಂದು ಬಾರಿ ಸುತ್ತಲು ಹೆಚ್ಚಿನ ಅವಧಿ ತೆಗೆದು ಕೊಳ್ಳುತ್ತದೆ. ಏಕೆಂದರೆ ಸೂರ್ಯನಿಂದ ಅತ್ಯಂತ ದೂರದಲ್ಲಿದೆ. 

ಯಾವ ಗ್ರಹವು ವಾರ್ಷಿಕ ಚಲನೆಗಿಂತ ಹೆಚ್ಚಿನ ಕಾಲವನ್ನು ದೈನಂದಿನ ಚಲನೆಗೆ ತೆಗೆದುಕೊಳ್ಳುತ್ತದೆ?

ಉತ್ತರ- ಶುಕ್ರ ಗ್ರಹವು ವಾರ್ಷಿಕ ಚಲನೆಗಿಂತ ಹೆಚ್ಚಿನ ಕಾಲವನ್ನು ದೈನಂದಿನ ಚಲನೆಗೆ ತೆಗೆದುಕೊಳ್ಳುತ್ತದೆ. 

ಕೆಲವು ಗ್ರಹಗಳ ಲಕ್ಷಣಗಳನ್ನು ಈ ಕೆಳಗೆ ಕೊಟ್ಟಿದೆ. ಅವುಗಳ ಮುಂದೆ ಸಂಬಂಧಿಸಿದ ಗ್ರಹದ ಹೆಸರನ್ನು ಬರೆ.

5th EVS Solutions Chapter 14 The Sky Kannada
ಕೆಳಗೆ ಕೊಟ್ಟಿರುವ ಕೋಷ್ಟಕದಲ್ಲಿ ಗ್ರಹಗಳ ಹೆಸರುಗಳನ್ನು ಗುರುತಿಸಿ.
 ಉದಾಹರಣೆ : ಗುರು
5th EVS Solutions Chapter 14 The Sky Kannada
ಉತ್ತರ-
5th EVS Solutions Chapter 14 The Sky Kannada

ಚಟುವಟಿಕೆ : ಗ್ರಹಗಳ ಚಿತ್ರಗಳನ್ನು ವೀಕ್ಷಿಸಿ, ಅವುಗಳ ಹೆಸರನ್ನು ಕೊಟ್ಟಿರುವ ಜಾಗದಲ್ಲಿ ಬರೆ. ಒಂದು ಉದಾಹರಣೆಯನ್ನು ಕೊಡಲಾಗಿದೆ.
5th EVS Solutions Chapter 14 The Sky Kannada
ಉತ್ತರ-
5th EVS Solutions Chapter 14 The Sky Kannada
ಯಾವ ಗುಂಪಿನಲ್ಲಿ ಯಾರು? ಈ ಕೆಳಗಿನ ಪಟ್ಟಿಯಲ್ಲಿ ಬರೆ.
ಸೂರ್ಯ, ಭೂಮಿ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಮತ್ತು ಧ್ರುವತಾರೆ,
5th EVS Solutions Chapter 14 The Sky Kannada
ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆ.

೧. ಸೌರವ್ಯೂಹ ಎಂದರೇನು?

ಉತ್ತರ-ಸೂರ್ಯ ಮತ್ತು ಅದರ ಸುತ್ತಲೂ ಸುತ್ತುವ ಆಕಾಶಕಾಯಗಳ ಸಮೂಹಕ್ಕೆ ಸೌರವ್ಯೂಹ ಎಂದು ಕರೆಯಲಾಗುವುದು. 

೨. ಭೂಮಿಯ ನೈಸರ್ಗಿಕ ಉಪಗ್ರಹ ಯಾವುದು?

ಉತ್ತರ-ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ. 

೩. ಈ ಆಕಾಶಕಾಯಗಳ ಪ್ರಮುಖ ಲಕ್ಷಣಗಳನ್ನು ಬರೆ.
5th EVS Solutions Chapter 14 The Sky Kannada

The Sky Frequently Asked Questions-

ಗ್ರಹಗಳ ಲಕ್ಷಣಗಳನ್ನು ಬರೆ. 

  • ಸೂರ್ಯನ ಸುತ್ತ ಅಂಡಾಕಾರದ ಪಥದಲ್ಲಿ ಪ್ರದಕ್ಷಿಣೆ ಹಾಕುವ ಆಕಾಶಕಾಯವೇ ಗ್ರಹ. 
  • ಪ್ರತಿಗ್ರಹವೂ ತನ್ನದೇ ಆದ ನಿರ್ದಿಷ್ಟ ಮಾರ್ಗದಲ್ಲಿ ಚಲಿಸುವುದು. ಅದನ್ನು ಕಕ್ಷಾ ಮಾರ್ಗಎನ್ನುವರು. 
  • ಸೂರ್ಯನ ಸುತ್ತ ಸುತ್ತುವ ಭೂ ಮಾರ್ಗವನ್ನು ಭೂಪಥ ಎನ್ನುವರು. 
  • ಗ್ರಹಗಳಿಗೆ ಸ್ವಂತ ಬೆಳಕಿಲ್ಲ. ಅವು ಬೆಳಕು ಮತ್ತು ಶಾಖಗಳಿಗೆ ಸೂರ್ಯನನ್ನು ಅವಲಂಬಿಸಿವೆ.

ಭೂಮಿಯ ಆಕಾರ ಯಾವುದು?

ವಿಜ್ಞಾನಿಗಳ ಪ್ರಕಾರ ಭೂಮಿಯು ಧ್ರುವಗಳಲ್ಲಿ ಚಪ್ಪಟೆಯಾಗಿಯೂ ಮತ್ತು ಸಮಭಾಜಕ ವೃತ್ತದ ಬಳಿ ಸ್ವಲ್ಪ ಉಬ್ಬಿದೆ ಎಂದು ಖಚಿತವಾಗಿದೆ. ಹೀಗಾಗಿ ಇಂತಹ ಆಕಾರವನ್ನು ಜಿಯಾಯ್ಡ್ಅಥವಾ ಭೂಮ್ಯಾಕಾರ ಎಂದು ಕರೆಯಲಾಗಿದೆ. 

ಭೂ ಮೇಲ್ಮೈನ ಒಟ್ಟು ವಿಸ್ತೀರ್ಣ ಎಷ್ಟು?

ಭೂ ಮೇಲ್ಮೈನ ಒಟ್ಟು ವಿಸ್ತೀರ್ಣವು ೫೧೦ ಮಿಲಿಯನ್ ಚದರ ಕಿ.ಮೀ.ಗಳು. 

ಭೂಮಿಯ ಎರಡು ಚಲನೆಗಳು ಯಾವುವು?

ಭೂಮಿಗೆ ದೈನಂದಿನ ಚಲನೆ ಮತ್ತು ವಾರ್ಷಿಕ ಚಲನೆ ಎಂಬ ಎರಡು ಚಲನೆಗಳಿವೆ. 

ದೈನಂದಿನ ಚಲನೆ ಎಂದರೇನು?

ತನ್ನ ಅಕ್ಷದಲ್ಲಿ ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದೇ ದೈನಂದಿನ ಚಲನೆ. 

ವಾರ್ಷಿಕ ಚಲನೆ ಎಂದರೇನು?

ಭೂಮಿ ತನ್ನ ಕಕ್ಷಾಮಾರ್ಗದಲ್ಲಿ ಸೂರ್ಯನನ್ನು ಸುತ್ತುವುದೇ ವಾರ್ಷಿಕ ಚಲನೆ. ಭೂಮಿಯು ಸೂರ್ಯನನ್ನು ಪ್ರದಕ್ಷಿಣೆ ಹಾಕುವಾಗ ತನ್ನ ಅಕ್ಷದಲ್ಲಿ ಸದಾ ಸುತ್ತುತ್ತದೆ.

ಚಂದ್ರನ ಚಲನೆಗಳು ಯಾವುವು?

ಚಂದ್ರನಿಗೆ ಎರಡು ವಿಧದ ಚಲನೆಗಳಿವೆ. ಒಂದು ತನ್ನ ಅಕ್ಷದಲ್ಲಿ ಸುತ್ತುವ ಅಕ್ಷಭ್ರಮಣ ಮತ್ತೊಂದು ತನ್ನ ಪಥದಲ್ಲಿ ಭೂಮಿಯ ಸುತ್ತ ಸುತ್ತುವ ಪರಿಭ್ರಮಣ. 

class 5 evs chapter 14 questions and answers in pdf👇👇👇

pdf 2.4Mb

ALSO READ THE SOLUTIONS OF 5th EVS CHAPTERS👇👇👇
























ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.