Class 5th EVS Question Answer Chapter 12 Elements Compounds Mixtures Kannada.
ನಾವು ದಿನನಿತ್ಯ ಅನೇಕ ದ್ರವ್ಯಗಳನ್ನು ಬಳಸುತ್ತೇವೆ. ಪ್ರಕೃತಿಯಲ್ಲಿ ದೊರೆಯುವ ಈ ದ್ರವ್ಯಗಳು, ಅಣುಗಳಿಂದ ಅಥವಾ ಸಂಯುಕ್ತ ಅಣುಗಳಿಂದ ಕೂಡಿವೆ. ಈ ಸಂಯುಕ್ತ ಅಣುಗಳನ್ನು ವಿಭಜಿಸಿದಾಗ ಮೂಲಧಾತುಗಳು ಸಿಗುತ್ತವೆ. ಈ ಮೂಲಧಾತುವಿನ ಅತ್ಯಂತ ಚಿಕ್ಕ ಘಟಕವೇ ಪರಮಾಣು. ಪರಮಾಣುವು ಮೂಲಧಾತುವಿನ ಅದೇ ಗುಣಗಳುಳ್ಳ ಅತ್ಯಂತ ಚಿಕ್ಕ ಘಟಕವಾಗಿದೆ. ಕೆಲವು ಪರಮಾಣುಗಳು ಸುಲಭವಾಗಿ ಮತ್ತೊಂದರೊಡನೆ ಸೇರಿ ಬೇರೆ ಬೇರೆ ದ್ರವ್ಯಗಳಾಗುತ್ತವೆ. ದ್ರವ್ಯದಲ್ಲಿರುವ ಪರಮಾಣುಗಳನ್ನು ಆಧರಿಸಿ ಅವುಗಳನ್ನು ಧಾತು, ಸಂಯುಕ್ತ ಮತ್ತು ಮಿಶ್ರಣಗಳು ಎಂದು ವರ್ಗೀಕರಿಸಲಾಗಿದೆ.ಇಲ್ಲಿ ನಾವು Class 5th EVS Question Answer Chapter 12 Elements Compounds Mixtures Kannada ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.
Elements Compounds and Mixtures class 5 notes Knnada.
ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡು.
೧. ಧಾತುವಿನಲ್ಲಿ ಒಂದೇ ರೀತಿಯ __________ ಗಳ ಸಮೂಹವಿರುತ್ತದೆ.
ಉತ್ತರ- ಕಣ
೨. ಸಂಯುಕ್ತ ವಸ್ತುವಿನಲ್ಲಿ ವಿಭಿನ್ನ __________ ಪರಮಾಣುಗಳ ಸಮೂಹವಿರುತ್ತದೆ.
ಉತ್ತರ- ಧಾತುಗಳ
೩. ಸಂಯುಕ್ತ ವಸ್ತು ಎಂದರೆ _____________________________________
__________________________________________________________
__________________________________________________________
ಉತ್ತರ- ಎರಡು ಅಥವಾ ಹೆಚ್ಚು ಧಾತುಗಳು ರಾಸಾಯನಿಕವಾಗಿ ನಿರ್ದಿಷ್ಟ ಅನುಪಾತದಲ್ಲಿ
ಸಂಯೋಗಗೊಂಡು ಹೊಸ ಲಕ್ಷಣದ ವಸ್ತುವಾದಲ್ಲಿ ಅದಕ್ಕೆ ಸಂಯುಕ್ತವಸ್ತು ಎನ್ನಲಾಗುತ್ತದೆ.
ಉದಾಹರಣೆ : ನೀರು
೪. ಮಿಶ್ರಣ ಎಂದರೆ ___________________________________________
_________________________________________________________
_________________________________________________________
ಉತ್ತರ- ಎರಡು ಅಥವಾ ಹೆಚ್ಚು ವಸ್ತುಗಳು (ಧಾತುಗಳು ಅಥವಾ ಸಂಯುಕ್ತಗಳು) ಯಾವುದೇ
ಅನುಪಾತದಲ್ಲಿ ಸೇರಿಸಲ್ಪಟ್ಟಾಗ, ಅವು ರಾಸಾಯನಿಕ ಬದಲಾವಣೆಯಾಗದೆ ತಮ್ಮ ಮೂಲ
ಲಕ್ಷಣಗಳನ್ನು ಉಳಿಸಿಕೊಂಡಿದ್ದಲ್ಲಿ ಆ ವಸ್ತುವನ್ನು ಮಿಶ್ರಣ ಎನ್ನುತ್ತೇವೆ.
ಉದಾಹರಣೆ : ಮಣ್ಣು - ಮರಳು, ಜೇಡಿಮಣ್ಣು ಮತ್ತು ಹಲವು ಬಗೆಯ ಲವಣಗಳು
ಹಾಗೂ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳ ಮಿಶ್ರಣವಾಗಿದೆ.
೫. ಇವುಗಳಿಗೆ ಪ್ರತಿಯೊಂದಕ್ಕೂ ೫ ಉದಾಹರಣೆ ಕೊಡು (ಶಿಕ್ಷಕರ ಸಹಾಯ ಪಡೆ).
ಧಾತು ________ ________ ________ ________ ________
ಉತ್ತರ- ಆಕ್ಸಿಜನ್,ಪ್ಲುಟೋನಿಯಂ,ಹೈಡ್ರೋಜೆನ್, ಚಿನ್ನ, ಬೆಳ್ಳಿ,
ಸಂಯುಕ್ತ ________ ________ ________ ________ ________
ಉತ್ತರ- ನೀರು,ಇಂಗಾಲದ ಡೈ ಆಕ್ಸೈಡ್, ಸೋಡಿಯಮ್ ಕ್ಲೋರೈಡ್ (ಉಪ್ಪು), ಸಕ್ಕರೆ, ಅಡುಗೆ ಸೋಡ.
ಮಿಶ್ರಣ ________ ________ ________ ________ ________
ಉತ್ತರ- ಗಾಳಿ, ಮಣ್ಣು,ಸಮುದ್ರದ ನೀರು, ಮರಳು.
PLEASE DO NOT ENTER ANY SPAM LINK IN THE COMMENT BOX