soil class 7 questions with answers in Kannada medium 7ನೇ ತರಗತಿ ವಿಜ್ಞಾನ ಮಣ್ಣು - ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.
ಇಂಪಾರ್ಟೆಂಟ್ ಪಾಯಿಂಟ್ಸ್ - chapter 9 soil class 7
• ಭೂಮಿಯ ಮೇಲಿನ ಜೀವಿಗಳಿಗೆ ಮಣ್ಣು ತುಂಬಾ ಮುಖ್ಯ.
• ಮಣ್ಣಿನ ಪದರಗಳ ನೀಳ ಸೀಳಿಕೆಯೇ ಮಣ್ಣಿನ ಸ್ತರವಿನ್ಯಾಸ. ವಿವಿಧ ಪದರಗಳನ್ನು ಸ್ತರಗಳು ಎನ್ನುವರು.
• ಮಣ್ಣಿನ ವಿಧಗಳೆಂದರೆ - ಜೇಡಿಯುಕ್ತ ಮಣ್ಣು, ಕಳಿಮಣ್ಣು ಮತ್ತು ಮರಳುಯುಕ್ತ ಮಣ್ಣು.
• ಬೇರೆ ಬೇರೆ ವಿಧದ ಮಣ್ಣುಗಳ ನೀರು ಇಂಗಿಸಿಕೊಳ್ಳುವ ಸಾಮರ್ಥ್ಯ ಬೇರೆ ಬೇರೆ. ಇದು ಮರಳುಯುಕ್ತ ಮಣ್ಣಿನಲ್ಲಿ ಅತಿ ಹೆಚ್ಚಾಗಿರುತ್ತದೆ ಮತ್ತು ಜೇಡಿಯುಕ್ತ ಮಣ್ಣಿನಲ್ಲಿ ಅತಿ ಕಡಿಮೆಯಾಗಿರುತ್ತದೆ.
• ಬೇರೆ ಬೇರೆ ವಿಧದ ಬೆಳೆಗಳನ್ನು ಬೆಳೆಯಲು ಬೇರೆ ಬೇರೆ ವಿಧದ ಮಣ್ಣನ್ನು ಬಳಸಲಾಗುತ್ತದೆ. ಜೇಡಿಮಣ್ಣು ಮತ್ತು ಕಳಿಮಣ್ಣು ಗೋಧಿ, ದ್ವಿದಳ ಧಾನ್ಯಗಳು ಮತ್ತು ಭತ್ತ ಬೆಳೆಯಲು ಯೋಗ್ಯವಾಗಿವೆ. ಹತ್ತಿಯನ್ನು ಮರಳು ಮಿಶ್ರಿತ ಕಳಿಮಣ್ಣಿನಲ್ಲಿ ಬೆಳೆಯಲಾಗುತ್ತದೆ.
• ಅನೇಕ ವಿಧದ ಬೆಳೆಗಳಿಗೆ ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ಮುಖ್ಯವಾಗಿದೆ.
• ಮಡಕೆಗಳು, ಆಟಿಕೆಗಳು ಮತ್ತು ಮೂರ್ತಿಗಳನ್ನು ಮಾಡಲು ಜೇಡಿಯುಕ್ತ ಮಣ್ಣು ಬಳಕೆಯಾಗುತ್ತದೆ.
ಅಭ್ಯಾಸಗಳು- notes on soil class 7
೧ ಮತ್ತು ೨ನೇ ಪ್ರಶ್ನೆಗಳಿಗೆ ಹೆಚ್ಚು ಸೂಕ್ತವಾದ ಉತ್ತರವನ್ನು ಗುರ್ತಿಸಿ.
೧. ಕಲ್ಲಿನ ಕಣಗಳ ಜೊತೆಗೆ, ಮಣ್ಣು ಇವುಗಳನ್ನು ಒಳಗೊಂಡಿರುತ್ತದೆ.
(i) ಗಾಳಿ ಮತ್ತು ನೀರು
(ii) ನೀರು ಮತ್ತು ಸಸ್ಯಗಳು
(iii) ಖನಿಜಗಳು, ಸಾವಯವ ಪದಾರ್ಥಗಳು, ಗಾಳಿ ಮತ್ತು ನೀರು.
(iv) ನೀರು, ಗಾಳಿ ಮತ್ತು ಸಸ್ಯಗಳು
ಉತ್ತರ- (iii) ಖನಿಜಗಳು, ಸಾವಯವ ಪದಾರ್ಥಗಳು, ಗಾಳಿ ಮತ್ತು ನೀರು.
೨. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅತಿ ಹೆಚ್ಚಾಗಿರುವುದು
(i) ಮರಳುಯುಕ್ತ ಮಣ್ಣಿನಲ್ಲಿ
(ii) ಜೇಡಿಯುಕ್ತಮಣ್ಣಿನಲ್ಲಿ
(iii) ಕಳಿಮಣ್ಣಿನಲ್ಲಿ
(iv) ಮರಳು ಮತ್ತು ಕಳಿಮಣ್ಣಿನ ಮಿಶ್ರಣದಲ್ಲಿ
ಉತ್ತರ- (ii) ಜೇಡಿಯುಕ್ತಮಣ್ಣಿನಲ್ಲಿ
೩. ಕಾಲಂ - I ರಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ - II ರಲ್ಲಿರುವ ಸೂಕ್ತ ಅಂಶಗಳೊಂದಿಗೆ ಹೊಂದಿಸಿ.
ಕಾಲಂ - I | ಕಾಲಂ- II |
---|---|
(i) ಜೀವಿಗಳ ಒಂದು ವಾಸಸ್ಥಳ | (ಎ) ದೊಡ್ಡ ಕಣಗಳು |
(ii) ಮಣ್ಣಿನ ಮೇಲ್ಪದರ | (ಬಿ) ಎಲ್ಲಾ ವಿಧದ ಮಣ್ಣು |
(iii) ಮರಳುಯುಕ್ತ ಮಣ್ಣು | (ಸಿ) ಗಾಢ ಬಣ್ಣದ್ದು |
(iv) ಮಣ್ಣಿನ ಮಧ್ಯದ ಪದರ | (ಡಿ) ಒತ್ತೊತ್ತಾಗಿ ಜೋಡಣೆಗೊಂಡ ಸಣ್ಣ ಕಣಗಳು |
(v) ಜೇಡಿಯುಕ್ತಮಣ್ಣು | (ಇ) ಹ್ಯೂಮಸ್‌ನ ಪ್ರಮಾಣ ಕಡಿಮೆ |
ಉತ್ತರ-
ಕಾಲಂ - I | ಕಾಲಂ- II |
---|---|
(i) ಜೀವಿಗಳ ಒಂದು ವಾಸಸ್ಥಳ | (ಬಿ) ಎಲ್ಲಾ ವಿಧದ ಮಣ್ಣು |
(ii) ಮಣ್ಣಿನ ಮೇಲ್ಪದರ | (ಸಿ) ಗಾಢ ಬಣ್ಣದ್ದು |
(iii) ಮರಳುಯುಕ್ತ ಮಣ್ಣು | (ಎ) ದೊಡ್ಡ ಕಣಗಳು |
(iv) ಮಣ್ಣಿನ ಮಧ್ಯದ ಪದರ | (ಇ) ಹ್ಯೂಮಸ್‌ನ ಪ್ರಮಾಣ ಕಡಿಮೆ |
(v) ಜೇಡಿಯುಕ್ತಮಣ್ಣು | (ಡಿ) ಒತ್ತೊತ್ತಾಗಿ ಜೋಡಣೆಗೊಂಡ ಸಣ್ಣ ಕಣಗಳು |
೪. ಮಣ್ಣು ಹೇಗೆ ಉಂಟಾಗುತ್ತದೆ? ವಿವರಿಸಿ.
ಉತ್ತರ- ಗಾಳಿ, ನೀರು ಮತ್ತು ಹವಾಮಾನದ ಪರಿಣಾಮದಿಂದ ಬಂಡೆಗಳು ಒಡೆದು ಮಣ್ಣು ಉತ್ಪತ್ತಿಯಾಗುತ್ತದೆ. ಬಂಡೆಗಳ ಮೇಲೆ ನಡೆಯುವ ಭೌತಿಕ, ರಾಸಾಯನಿಕ, ಜೈವಿಕ ಕ್ರಿಯೆಗಳಿಂದ ಮಣ್ಣು ಉತ್ಪತ್ತಿಯಾಗುತ್ತದೆ.ಹವಾಮಾನ ಪ್ರಕ್ರಿಯೆಯಲ್ಲಿ, ಬಂಡೆಗಳನ್ನು ಸಣ್ಣ ತುಂಡುಗಳಾಗಿ ಪರಿವರ್ತಿತವಾಗುತ್ತದೆ, ಇದು ಅಂತಿಮವಾಗಿ ಮಣ್ಣಿನ ಕಣಗಳಿಗೆ ತಿರುಗಿ ಮಣ್ಣಿನ ಪದರವನ್ನು ರೂಪಿಸುತ್ತದೆ.
೫. ಜೇಡಿಯುಕ್ತ ಮಣ್ಣು ಬೆಳೆಗಳಿಗೆ ಹೇಗೆ ಉಪಯುಕ್ತವಾಗಿದೆ?
ಉತ್ತರ- ಕೆಳಗಿನ ಕಾರಣಗಳಿಗಾಗಿ ಜೇಡಿಮಣ್ಣಿನ ಮಣ್ಣು ಬೆಳೆಗಳಿಗೆ ಉಪಯುಕ್ತವಾಗಿದೆ
- ಇದು ಅತ್ಯುತ್ತಮ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ
- ಜೇಡಿಮಣ್ಣು ಸಾವಯವ ವಸ್ತುಗಳಿಂದ ಸಮೃದ್ಧವಾಗಿದೆ
- ಜೇಡಿಯುಕ್ತಮಣ್ಣು ತುಂಬಾ ಫಲವತ್ತಾದ ಮತ್ತು ಹೂಮಸ್ನಿಂದ ಸಮೃದ್ಧವಾಗಿದೆ.
೬. ಜೇಡಿಯುಕ್ತಮಣ್ಣು ಮತ್ತು ಮರಳುಯುಕ್ತ ಮಣ್ಣಿನ ನಡುವಣ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.
ಉತ್ತರ-
ಜೇಡಿಯುಕ್ತಮಣ್ಣು | ಮರಳುಯುಕ್ತ ಮಣ್ಣು |
---|---|
1. ಕಣಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. | ಕಣಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. |
2. ಉತ್ತಮ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ | ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ. |
3. ತೂಕದಲ್ಲಿ ಭಾರವಾಗಿರುತ್ತದೆ. | ತೂಕದಲ್ಲಿ ಹಗುರವಾಗಿರುತ್ತದೆ, |
4. ಈ ಮಣ್ಣಿನಲ್ಲಿ ಹ್ಯೂಮಸ್ ಸಮೃದ್ಧವಾಗಿದೆ. | ಈ ಮಣ್ಣಿನಲ್ಲಿ ಹ್ಯೂಮಸ್ ಸಮೃದ್ಧವಾಗಿಲ್ಲ. |
5. ಕಣಗಳ ನಡುವೆ ಕಡಿಮೆ ಗಾಳಿಯು ಸೇರಿಕೊಂಡಿರುತ್ತದೆ. | ಕಣಗಳ ನಡುವೆ ಹೆಚ್ಚಿನ ಗಾಳಿಯು ಸೇರಿಕೊಂಡಿರುತ್ತದೆ. |
6. ಗೋಧಿ, ಭತ್ತ, ಹೆಸರು ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. | ಹತ್ತಿ, ಕಡಲೆಕಾಯಿ ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. |
೭. ಮಣ್ಣಿನ ಪದರಗಳ ನೀಳಸೀಳಿಕೆಯ ಚಿತ್ರ ಬರೆದು, ವಿವಿಧ ಸ್ತರಗಳನ್ನು ಹೆಸರಿಸಿ.
ಉತ್ತರ-
೮. ನೀರು ಇಂಗುವ ದರಕ್ಕೆ ಸಂಬಂಧಿಸಿದ ಪ್ರಯೋಗವನ್ನು ರಜಿ಼ಯಾ ತನ್ನ ಜಮೀನಿನಲ್ಲಿ ಮಾಡಿದ್ದಾಳೆ. ಮಣ್ಣಿನ ಮಾದರಿಯ ಮೂಲಕ 200 ml ನೀರು ಇಂಗಲು 40 min ತೆಗೆದುಕೊಂಡಿದ್ದನ್ನು ಅವಳು ಗಮನಿಸಿದಳು. ನೀರು ಇಂಗುವ ದರವನ್ನು ಲೆಕ್ಕಾಚಾರ ಮಾಡಿ.
ಉತ್ತರ-
೯. ಮಣ್ಣಿನ ಮಾಲಿನ್ಯ ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟಲು ಹೇಗೆ ಸಾಧ್ಯ ಎಂಬುದನ್ನು ವಿವರಿಸಿ. chapter 9 soil class 7 question answer.
ಉತ್ತರ-
- ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ.
- ಕೈಗಾರಿಕಾ ವಿಸರ್ಜನೆಯನ್ನು ಬಿಡುಗಡೆ ಮಾಡುವ ಮೊದಲು ಸರಿಯಾಗಿ ಸಂಶ್ಲೇಶಿಸಬೇಕು.
- ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸುವ ಮೂಲಕ.
- ಹೆಚ್ಚು ಹೆಚ್ಚು ಮರಗಳನ್ನು ನೆಡುವುದು.ಅರಣ್ಯಕರಣವನ್ನು ಪ್ರೋತ್ಸಾಹಿಸಬೇಕು.
- ಅರಣ್ಯನಾಶವನ್ನು ತಡೆಯಬೇಕು ಮತ್ತು ಪ್ರಾಣಿಗಳನ್ನು ಅತಿಯಾಗಿ ಮೇಯಿಸುವುದನ್ನು ತಪ್ಪಿಸುವ ಮೂಲಕ.
- ಮಿಶ್ರ ಕೃಷಿ ಮತ್ತು ಬೆಳೆ ಬದಲಾವಣೆಯನ್ನು ಪ್ರೋತ್ಸಾಹಿಸಬೇಕು.
೧೦. ಕೊಟ್ಟಿರುವ ಸುಳಿವುಗಳನ್ನು ಬಳಸಿ ಈ ಕೆಳಗಿನ ಪದಬಂಧವನ್ನು ಬಿಡಿಸಿ.notes of soil class 7.
ಎಡದಿಂದ ಬಲಕ್ಕೆ
೧. ಗಿಡಗಳನ್ನು ನೆಡುವುದರಿಂದ ಇದನ್ನು ತಡೆಗಟ್ಟಬಹುದು.
ಮಣ್ಣಿನ ಸವೆತ
೨. ಇದರ ಬಳಕೆ ನಿಷೇಧಿಸುವುದರಿಂದ ಮಣ್ಣಿನ ಮಾಲಿನ್ಯ ತಪ್ಪಿಸಬಹುದು.
ಪ್ಲಾಸ್ಟಿಕ್
೩. ಮಡಕೆ ತಯಾರಿಸಲು ಬಳಸುವ ಮಣ್ಣಿನ ವಿಧ.
ಕಪ್ಪು ಮಣ್ಣು
ಮೇಲಿನಿಂದ ಕೆಳಕ್ಕೆ
೪. ಮರುಭೂಮಿಯಲ್ಲಿ ಇದರಿಂದ ಮಣ್ಣಿನ ಸವೆತ ಉಂಟಾಗುತ್ತದೆ.
ಗಾಳಿ
೫. ಈ ಧಾನ್ಯವನ್ನು ಬೆಳೆಯಲು ಜೇಡಿಮಣ್ಣು ಮತ್ತು ಕಳಿಮಣ್ಣು ಯೋಗ್ಯವಾಗಿವೆ.
ಗೋಧಿ
೬. ಈ ವಿಧದ ಮಣ್ಣು ಅತಿ ಕಡಿಮೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಮರಳುಯುಕ್ತ ಮಣ್ಣು
೭. ಮಣ್ಣಿನ ಎಲ್ಲಾ ಪದರಗಳನ್ನು ಒಟ್ಟಾಗಿ ಹೀಗೆ ಕರೆಯುತ್ತೇವೆ.
ಸ್ತರವಿನ್ಯಾಸ
೮. ಮಣ್ಣಿನಲ್ಲಿ ವಾಸಿಸುವ ಜೀವಿ.
ಎರೆಹುಳು
ಈ ಒಂದು ಬ್ಲಾಗ್ ಲೇಖನದಲ್ಲಿ soil class 7 questions with answers in Kannada medium 7ನೇ ತರಗತಿ ವಿಜ್ಞಾನ ಮಣ್ಣು ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.
FAQs In Chapter 9 Soil Class 7.
ಮಣ್ಣಿನ ವಿಧಗಳಾವುವು?
ಮಣ್ಣಿನ ವಿಧಗಳೆಂದರೆ - ಜೇಡಿಯುಕ್ತ ಮಣ್ಣು, ಕಳಿಮಣ್ಣು ಮತ್ತು ಮರಳುಯುಕ್ತ ಮಣ್ಣು.
ಮಣ್ಣಿನ ತೇವಾಂಶ ಎಂದರೇನು?
ಮಣ್ಣು ನೀರನ್ನು ಹಿಡಿದಿಟ್ಟುಕೊಳುತ್ತದೆ. ಇದನ್ನು ಮಣ್ಣಿನ ತೇವಾಂಶ ಎನ್ನುವರು.
ಜೇಡಿಯುಕ್ತ ಮಣ್ಣನ್ನು ಎಲ್ಲಿ ಬಳಸಲಾಗುತ್ತದೆ?
ಮಡಕೆಗಳು, ಆಟಿಕೆಗಳು ಮತ್ತು ಮೂರ್ತಿಗಳನ್ನು ಮಾಡಲು ಜೇಡಿಯುಕ್ತ ಮಣ್ಣು ಬಳಕೆಯಾಗುತ್ತದೆ.
PLEASE DO NOT ENTER ANY SPAM LINK IN THE COMMENT BOX