Solutions For Class 7 Science Chapter 7 In Kannada

Solutions For Class 7 Science Chapter 7 In Kannada - Weather Climate And Adaptations Of Animals To Climate Class 7 Questions And Answer- ಹವಾಮಾನ, ವಾಯುಗುಣ ಮತ್ತು ವಾಯುಗುಣಕ್ಕೆ ಪ್ರಾಣಿಗಳು ಹೊಂದಾಣಿಕೆ‌ ಪ್ರಶ್ನೋತ್ತರಗಳು .

Solutions For Class 7 Science Chapter 7 In Kannada - Weather Climate And Adaptations Of Animals To Climate Class 7 Questions And Answer- 7ನೇ ತರಗತಿ ವಿಜ್ಞಾನ ಹವಾಮಾನ, ವಾಯುಗುಣ ಮತ್ತು ವಾಯುಗುಣಕ್ಕೆ ಪ್ರಾಣಿಗಳು ಹೊಂದಾಣಿಕೆ‌. -  ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Solutions For Class 7 Science Chapter 7 In Kannada

    Our team of subject matter experts has produced NCERT Solutions for Grade 7 Science Chapter 7 Weather, Climate, and Adaptations of Animals to Climate to aid students in their test preparation. All of the in-text and exercise problems from the NCERT Science textbooks for Class 7 are included with the NCERT Solutions in these books. Students can learn more about Chapter 7 and get a quick review before their examinations by practicing questions from the Class 7 NCERT Solutions. 

    ಇಂಪಾರ್ಟೆಂಟ್ ಪಾಯಿಂಟ್ಸ್ - weather climate and adaptations of animals to climate

    1. ತಾಪ, ಆರ್ದ್ರತೆ, ಮಳೆ, ಗಾಳಿಯ ಜವ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಒಂದು ಪ್ರದೇಶದ ವಾತಾವರಣದ ದೈನಂದಿನ ಸ್ಥಿತಿಯನ್ನು ಆ ಪ್ರದೇಶದ ಹವಾಮಾನ ಎನ್ನುವರು.
    2. ಯಾವುದೇ ಎರಡು ದಿನಗಳು ಅಥವಾ ವಾರ-ವಾರಕ್ಕೂ ಹವಾಮಾನವು ಒಂದೇ ಸಮನಾಗಿ ಇರುವುದಿಲ್ಲ.
    3. ಸಾಧಾರಣವಾಗಿ ಮಧ್ಯಾಹ್ನ ಗರಿಷ್ಠ ತಾಪ ಮತ್ತು ಮುಂಜಾನೆ ಕನಿಷ್ಠ ತಾಪ ಇರುತ್ತದೆ.
    4. ಒಂದು ವರ್ಷದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ಬದಲಾಗುತ್ತದೆ.
    5. ಹವಾಮಾನದ ಎಲ್ಲಾ ಬದಲಾವಣೆಗಳೂ ಸೂರ್ಯನಿಂದ ಉಂಟಾಗುತ್ತವೆ.ಅಂದಾಜು ೨೫ ವರ್ಷಗಳಷ್ಟು ದೀರ್ಘಾವಧಿಯ ಸರಾಸರಿ ಹವಾಮಾನದ ಮಾದರಿಯನ್ನು ಆ ಪ್ರದೇಶದ ವಾಯುಗುಣ ಎನ್ನುವರು.
    6. ಉಷ್ಣವಲಯ ಮತ್ತು ಧ್ರುವ ಪ್ರದೇಶಗಳು ಹವಾಮಾನ ವೈಪರೀತ್ಯ ಹೊಂದಿರುವ ಭೂಮಿಯ ಎರಡು ಪ್ರದೇಶಗಳಾಗಿವೆ.
    7. ತಾವು ವಾಸಿಸುವ ಪರಿಸ್ಥಿತಿಗಳಿಗೆ ಪ್ರಾಣಿಗಳು ಹೊಂದಾಣಿಕೆ ಮಾಡಿಕೊಂಡಿರುತ್ತವೆ.
    8. ಧ್ರುವ ಪ್ರದೇಶದಲ್ಲಿ ವರ್ಷವಿಡೀ ವಿಪರೀತ ಚಳಿಯಿರುತ್ತದೆ. ವರ್ಷದ ಆರು ತಿಂಗಳುಗಳ ಕಾಲ ಸೂರ್ಯ ಮುಳುಗುವುದಿಲ್ಲ ಹಾಗೂ ಉಳಿದ ಆರು ತಿಂಗಳು ಸೂರ್ಯೋದಯವಾಗುವುದಿಲ್ಲ.
    9. ಧ್ರುವ ಪ್ರದೇಶದ ಪ್ರಾಣಿಗಳು ಅಲ್ಲಿನ ವಿಪರೀತ ಚಳಿಯ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಶ್ವೇತ ತುಪ್ಪಳ, ತೀಕ್ಷ್ಣ ಘ್ರಾಣಶಕ್ತಿ, ಚರ್ಮದ ಅಡಿ ಕೊಬ್ಬಿನ ಪದರ,ನಡೆಯಲು ಮತ್ತು ಈಜಲು ಅಗಲವಾದ ದೊಡ್ಡ ಪಂಜಗಳು - ಈ ಪ್ರಾಣಿಗಳ ಕೆಲವು ವೈಶಿಷ್ಟ್ಯಗಳು.
    10. ವಿಪರೀತ ಚಳಿಯ ವಿಷಮ ಸ್ಥಿತಿಯಿಂದ ಪಾರಾಗಲು ವಲಸೆ ಹೋಗುವುದು ಒಂದು ಉಪಾಯವಾಗಿದೆ.
    11. ಅನುಕೂಲಕರ ವಾಯುಗುಣದ ಪರಿಸ್ಥಿತಿಯಿಂದಾಗಿ ಉಷ್ಣವಲಯದ ಮಳೆಕಾಡುಗಳಲ್ಲಿ ಬಹಳಷ್ಟು ಸಂಖ್ಯೆಯ ಪ್ರಾಣಿ ಹಾಗೂ ಸಸ್ಯಗಳನ್ನು ಕಾಣಬಹುದಾಗಿದೆ.
    12. ಆಹಾರ ಮತ್ತು ಆವಾಸಕ್ಕಾಗಿ ಪೈಪೋಟಿಯನ್ನು ಎದುರಿಸಲು ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುವ ಪ್ರಾಣಿಗಳು ವಿವಿಧ ಬಗೆಯ ಆಹಾರ ತಿನ್ನುವ ಮೂಲಕ ಹೊಂದಾಣಿಕೆ ಮಾಡಿಕೊಂಡಿರುತ್ತವೆ.
    13. ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುವ ಪ್ರಾಣಿಗಳ ಕೆಲವು ಹೊಂದಾಣಿಕೆಗಳೆಂದರೆ ಮರದ ಮೇಲೆ ವಾಸಿಸುವುದು, ಉದ್ದನೆಯ ಶಕ್ತಿಯುತವಾದ ಬಾಲ, ಉದ್ದ ಹಾಗೂ ದೊಡ್ಡದಾದ ಕೊಕ್ಕು, ಗಾಢವರ್ಣ, ನಿಖರ ಆಕೃತಿಗಳು, ದೊಡ್ಡ ಸ್ವರ, ಹಣ್ಣಿನ ಆಹಾರ, ಸೂಕ್ಷ್ಣ ಶ್ರವಣಶಕ್ತಿ, ತೀಕ್ಷ್ಣ ದೃಷ್ಟಿ, ದಪ್ಪಚರ್ಮ, ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕಪಟ ರೂಪ ಧರಿಸುವುದು ಇತ್ಯಾದಿಗಳು.

    ಅಭ್ಯಾಸಗಳು-Solutions For Class 7 Science Chapter 7 In Kannada

    ೧. ಒಂದು ಪ್ರದೇಶದ ಹವಾಮಾನವನ್ನು ನಿರ್ಧರಿಸುವ ಅಂಶಗಳನ್ನು ಹೆಸರಿಸಿ.

    ಉತ್ತರ- ತಾಪ, ಆರ್ದ್ರತೆ, ಮಳೆ, ಗಾಳಿಯ ಜವ ಒಂದು ಪ್ರದೇಶದ ಹವಾಮಾನವನ್ನು ನಿರ್ಧರಿಸುವ ಅಂಶಗಳಾಗಿವೆ. 

    ೨. ಗರಿಷ್ಠ ಹಾಗೂ ಕನಿಷ್ಠ ತಾಪವು ದಿನದ ಯಾವ ಸಮಯದಲ್ಲಿ ಕಂಡುಬರುತ್ತದೆ?

    ಉತ್ತರ- ಸಾಮಾನ್ಯವಾಗಿ ದಿನದ ಗರಿಷ್ಠ ತಾಪಮಾನವು ಮಧ್ಯಾಹ್ನ ಸಂಭವಿಸುತ್ತದೆ ಮತ್ತು ಕನಿಷ್ಠ ತಾಪಮಾನವು ಮುಂಜಾನೆ ಸಂಭವಿಸುತ್ತದೆ.

    Solutions For Class 7 Science Chapter 7 In Kannada

    ೩. ಬಿಟ್ಟ ಸ್ಥಳ ತುಂಬಿ :Solutions For Class 7 Science Chapter 7 In Kannada

    (i) ದೀರ್ಘ ಕಾಲಾವಧಿಯ ಸಮಯದಲ್ಲಿ ತೆಗೆದುಕೊಂಡ ಹವಾಮಾನದ ಸರಾಸರಿಯನ್ನು 

    ________ ಎನ್ನುವರು.

    ಉತ್ತರ-  ವಾಯುಗುಣ

    (ii) ವರ್ಷವಿಡೀ ಅತಿ ಹೆಚ್ಚು ತಾಪ ಮತ್ತು ಅತಿ ಕಡಿಮೆ ಮಳೆ ಇದ್ದರೆ ಆ ಪ್ರದೇಶದ ವಾಯುಗುಣ ________ ಮತ್ತು ________ ಆಗಿರುತ್ತದೆ.

    ಉತ್ತರ- ಉಷ್ಣ ಮತ್ತು ಶುಷ್ಕ

    (iii) ಹವಾಮಾನ ವೈಪರೀತ್ಯ ಹೊಂದಿರುವ ಭೂಮಿಯ ಎರಡು ಪ್ರದೇಶಗಳೆಂದರೆ _________ ಮತ್ತು ________

    ಉತ್ತರ- ಧ್ರುವ ಪ್ರದೇಶ ಮತ್ತು ಮರುಭೂಮಿ

    ೪. ಈ ಕೆಳಗಿನ ಪ್ರದೇಶಗಳ ವಾಯುಗುಣವನ್ನು ಸೂಚಿಸಿ

    (ಎ) ಜಮ್ಮು ಮತ್ತು ಕಾಶ್ಮೀರ : _______________

    ಉತ್ತರ- ಮಧ್ಯಮ ಬಿಸಿ ಮತ್ತು ತೇವ

    (ಬಿ) ಕೇರಳ : _______________

    ಉತ್ತರ- ಬಿಸಿ ಮತ್ತು ಆರ್ದ್ರ

    (ಸಿ) ರಾಜಸ್ಥಾನ : _______________

    ಉತ್ತರ- ಬಿಸಿ ಮತ್ತು ಶುಷ್ಕ

    (ಡಿ) ಈಶಾನ್ಯ ಭಾರತ : _______________

    ಉತ್ತರ- ಆರ್ದ್ರ

    ೫. ಹವಾಮಾನ ಅಥವಾ ವಾಯುಗುಣ ಈ ಎರಡರಲ್ಲಿ ಯಾವುದು ಆಗಾಗ್ಗೆ ಬದಲಾಗುತ್ತದೆ?

    ಉತ್ತರ-ಹವಾಮಾನವು ಆಗಾಗ್ಗೆ ಬದಲಾಗುತ್ತದೆ. 

    ೬. ಪ್ರಾಣಿಗಳ ಕೆಲವು ವೈಶಿಷ್ಟ್ಯಗಳನ್ನು ಕೆಳಗೆ ನೀಡಲಾಗಿದೆ. 

    ಲಕ್ಷಣಪ್ರದೇಶ
    ಹೆಚ್ಚು ಹಣ್ಣುಗಳನ್ನು ಒಳಗೊಂಡ ಆಹಾರಉಷ್ಣವಲಯದ ಮಳೆಕಾಡುಗಳು
    ಶ್ವೇತ ತುಪ್ಪಳಧ್ರುವ ಪ್ರದೇಶಗಳು
    ವಲಸೆಯ ಅಗತ್ಯತೆಧ್ರುವ ಪ್ರದೇಶಗಳು
    ದೊಡ್ಡ ಧ್ವನಿಉಷ್ಣವಲಯದ ಮಳೆಕಾಡುಗಳು
    ಪಾದಗಳಲ್ಲಿ ಅಂಟುಸಿಂಬೆಉಷ್ಣವಲಯದ ಮಳೆಕಾಡುಗಳು
    ಚರ್ಮದಡಿ ಕೊಬ್ಬಿನ ಪದರಧ್ರುವ ಪ್ರದೇಶಗಳು
    ಅಗಲ ಮತ್ತು ದೊಡ್ಡದಾದ ಪಂಜಧ್ರುವ ಪ್ರದೇಶಗಳು
    ಗಾಢವರ್ಣಉಷ್ಣವಲಯದ ಮಳೆಕಾಡುಗಳು
    ಶಕ್ತಿಯುತ ಬಾಲಉಷ್ಣವಲಯದ ಮಳೆಕಾಡುಗಳು
    ಉದ್ದ ಮತ್ತು ದೊಡ್ಡದಾದ ಕೊಕ್ಕುಉಷ್ಣವಲಯದ ಮಳೆಕಾಡುಗಳು

    ಪ್ರತಿಯೊಂದಕ್ಕೂ ಅದು ಉಷ್ಣವಲಯ ಮಳೆಕಾಡಿನ ಹೊಂದಾಣಿಕೆಯೆ ಅಥವಾ ಧ್ರುವ ಪ್ರದೇಶದ ಹೊಂದಾಣಿಕೆಯೆ ಎಂಬುದನ್ನು ಸೂಚಿಸಿ. ಕೆಲವು ವೈಶಿಷ್ಟ್ಯಗಳು ಎರಡೂ ಪ್ರದೇಶಗಳಿಗೆ ಹೊಂದಾಣಿಕೆಯಾಗಬಹುದು ಎಂದು ನಿಮಗೆ ಅನಿಸುತ್ತದೆಯೆ?

    ೭. ಉಷ್ಣವಲಯದ ಮಳೆಕಾಡುಗಳಲ್ಲಿ ಬಹಳ ಪ್ರಾಣಿಗಳು ಕಂಡುಬರುತ್ತವೆ. ಕಾರಣವೇನು?

    ಉತ್ತರ- ಉಷ್ಣವಲಯದ ಮಳೆಕಾಡಿನಲ್ಲಿ ಬಿಸಿ ಮತ್ತು ಆರ್ದ್ರ ತಾಪಮಾನ ಮತ್ತು ನಿರಂತರ ಮಳೆಯು ಅನೇಕ ಪ್ರಾಣಿಗಳ ಉಳಿವಿಗೆ ಸರಿಹೊಂದುತ್ತದೆ; ಮತ್ತು ಬೆಚ್ಚನೆಯ ವಾತಾವರಣದಿಂದಾಗಿ ಈ ಪ್ರದೇಶವು ಹಲವಾರು ಜಾತಿಯ ಗಿಡಮರಗಳನ್ನು ಹಾಗೂ ಪ್ರಾಣಿಗಳನ್ನು ಪೋಷಿಸುತ್ತದೆ ಆದ್ದರಿಂದ,ಅನುಕೂಲಕರ ವಾಯುಗುಣದ ಪರಿಸ್ಥಿತಿಯಿಂದಾಗಿ ಉಷ್ಣವಲಯದ ಮಳೆಕಾಡುಗಳಲ್ಲಿ ಬಹಳಷ್ಟು ಸಂಖ್ಯೆಯ ಪ್ರಾಣಿ ಹಾಗೂ ಸಸ್ಯಗಳನ್ನು ಕಾಣಬಹುದಾಗಿದೆ.

    ೮. ಕೆಲವು ಜಾತಿಯ ಪ್ರಾಣಿಗಳು ನಿರ್ದಿಷ್ಟ ವಾಯುಗುಣದಲ್ಲಿ ಮಾತ್ರ ಕಂಡುಬರುತ್ತವೆ ಎಂಬುದನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ.

    ಉತ್ತರ- ಪ್ರಾಣಿಗಳು ಅವು ವಾಸಿಸುವ ಪ್ರದೇಶಗಳಲ್ಲಿ ಬದುಕಲು ಹೊಂದಿಕೊಳ್ಳುತ್ತವೆ. ಅತ್ಯಂತ ಶೀತ ಮತ್ತು ಬಿಸಿ ವಾತಾವರಣದಲ್ಲಿ ವಾಸಿಸುವ ಪ್ರಾಣಿಗಳು ವಿಪರೀತ ಶೀತ ಅಥವಾ ಶಾಖದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವಿಶೇಷ ಲಕ್ಷಣಗಳನ್ನು ಹೊಂದಿರಬೇಕು.

    ಉದಾಹರಣೆ: ಹಿಮ ಪ್ರದೇಶದಲ್ಲಿ ವಾಸಿಸುವ ಹಿಮಕರಡಿಗಳು ಬಿಳಿ ತುಪ್ಪಳವನ್ನು ಹೊಂದಿದ್ದು, ಹಿಮಭರಿತ ಬಿಳಿ ಹಿನ್ನೆಲೆಯಲ್ಲಿ ಅವು ಸುಲಭವಾಗಿ ಗೋಚರಿಸುವುದಿಲ್ಲ. ಇದು ಅವರ ಪರಭಕ್ಷಕಗಳಿಂದ ರಕ್ಷಿಸುತ್ತದೆ. ಇದು ತಮ್ಮ ಬೇಟೆಯನ್ನು ಹಿಡಿಯಲು ಸಹ ಸಹಾಯ ಮಾಡುತ್ತದೆ. ತೀವ್ರತರವಾದ ಶೀತದಿಂದ ರಕ್ಷಿಸಲು, ಅವುಗಳು ಎರಡು ದಪ್ಪವಾದ ತುಪ್ಪಳವನ್ನು ಹೊಂದಿರುತ್ತವೆ. ಅವುಗಳ ಚರ್ಮದ ಅಡಿಯಲ್ಲಿ ಕೊಬ್ಬಿನ ಪದರವೂ ಇರುತ್ತದೆ.

    Solutions For Class 7 Science Chapter 7 In Kannada

    ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುವ ಪ್ರಾಣಿಗಳ ಕೆಲವು ಹೊಂದಾಣಿಕೆಗಳೆಂದರೆ ಮರದ ಮೇಲೆ ವಾಸಿಸುವುದು, ಉದ್ದನೆಯ ಶಕ್ತಿಯುತವಾದ ಬಾಲ, ಉದ್ದ ಹಾಗೂ ದೊಡ್ಡದಾದ ಕೊಕ್ಕು, ಗಾಢವರ್ಣ, ನಿಖರ ಆಕೃತಿಗಳು, ದೊಡ್ಡ ಸ್ವರ, ಹಣ್ಣಿನ ಆಹಾರ, ಸೂಕ್ಷ್ಣ ಶ್ರವಣಶಕ್ತಿ, ತೀಕ್ಷ್ಣ ದೃಷ್ಟಿ, ದಪ್ಪಚರ್ಮ, ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕಪಟ ರೂಪ ಧರಿಸುವುದು ಇತ್ಯಾದಿಗಳು.

    Solutions For Class 7 Science Chapter 7 In Kannada

    ೯. ಉಷ್ಣವಲಯದ ಮಳೆಕಾಡಿನ ಪರಿಸ್ಥಿತಿಗೆ ಆನೆಯು ಹೇಗೆ ಹೊಂದಾಣಿಕೆ ಮಾಡಿಕೊಂಡಿದೆ?

    ಉತ್ತರ- ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುವ ಆನೆಯು ರೂಪಾಂತರವು ಈ ಕೆಳಗಿನಂತಿದೆ:

    • ಸೊಂಡಿಲು ತೀವ್ರ ಘಾಣಶಕ್ತಿಯನ್ನು ಹೊಂದಿದ್ದು ಅದನ್ನು ನಾಸಿಕದಂತೆ ಉಪಯೋಗಿಸುತ್ತದೆ. 
    • ಆಹಾರವನ್ನು ಎತ್ತಿಕೊಳ್ಳಲೂ ಸೊಂಡಿಲನ್ನು ಉಪಯೋಗಿಸುತ್ತದೆ.
    • ದಂತಗಳು ರೂಪಾಂತರಗೊಂಡ ಹಲ್ಲುಗಳಾಗಿದ್ದು, ತಾನು ತಿನ್ನ ಬಯಸುವ ಮರದ ತೊಗಟೆಯನ್ನು ಸೀಳಲು ನೆರವಾಗುತ್ತವೆ. 
    • ಆನೆಗಳ ದೊಡ್ಡ ಕಿವಿಗಳು ತುಂಬಾ ಮೃದುವಾದ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ.
    • ಮಳೆಕಾಡಿನ ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಆನೆಗಳು ತಂಪಾಗಿರಲು ಕಿವಿಗಳು ಸಹಾಯ ಮಾಡುತ್ತವೆ.

    Solutions For Class 7 Science Chapter 7 In Kannada

    ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬಲ್ಲ ಸೂಕ್ತ ಆಯ್ಕೆಯನ್ನು ಆರಿಸಿಕೊಳ್ಳಿ.

    ೧೦. ಮೈಮೇಲೆ ಪಟ್ಟೆಯುಳ್ಳ ಮಾಂಸಾಹಾರಿಯು ತನ್ನ ಬೇಟೆಯನ್ನು ಹಿಡಿಯಲು ಶೀಘ್ರವಾಗಿ ಚಲಿಸುತ್ತದೆ. ಇದನ್ನು ನಾವು ಇಲ್ಲಿ ಕಾಣಬಹುದು.

     (i) ಧ್ರುವ ಪ್ರದೇಶಗಳು

     (ii) ಮರುಭೂಮಿಗಳು

    (iii) ಸಾಗರಗಳು

     (iv) ಉಷ್ಣವಲಯದ ಮಳೆಕಾಡುಗಳು

    ಉತ್ತರ:-(iv) ಉಷ್ಣವಲಯದ ಮಳೆಕಾಡುಗಳು

    ೧೧. ಧ್ರುವ ಪ್ರದೇಶದ ವಿಪರೀತ ಚಳಿಯ ಸ್ಥಿತಿಗೆ ಹೊಂದಿಕೊಳ್ಳಲು ಯಾವ ವೈಶಿಷ್ಟ್ಯಗಳು ಹಿಮಕರಡಿಗೆ ನೆರವಾಗುತ್ತವೆ?

    (ಎ) ಶ್ವೇತ ತುಪ್ಪಳ, ಚರ್ಮದಡಿ ಕೊಬ್ಬು, ತೀಕ್ಷ್ಣ ಘ್ರಾಣಶಕ್ತಿ

    (ಬಿ) ತೆಳು ಚರ್ಮ, ದೊಡ್ಡ ಕಣ್ಣು, ಶ್ವೇತ ತುಪ್ಪಳ

    (ಸಿ) ಉದ್ದನೆಯ ಬಾಲ, ಬಲವಾದ ಉಗುರು, ಬೆಳ್ಳಗಿನ ದೊಡ್ಡಪಂಜ

    (ಡಿ) ಬಿಳಿದೇಹ, ಈಜಾಡಲು ಪಂಜ, ಉಸಿರಾಡಲು ಕಿವಿರುಗಳು

    ಉತ್ತರ:- (ಎ) ಶ್ವೇತ ತುಪ್ಪಳ, ಚರ್ಮದಡಿ ಕೊಬ್ಬು, ತೀಕ್ಷ್ಣ ಪ್ರಾಣಶಕ್ತಿ

    ೧೨. ಕೆಳಗಿನ ಯಾವ ಆಯ್ಕೆಯು ಉಷ್ಣವಲಯದ ಮಳೆಕಾಡನ್ನು ಉತ್ತಮವಾಗಿ ವರ್ಣಿಸುತ್ತದೆ?

    (ಎ) ಉಷ್ಣ ಮತ್ತು ಆರ್ದ್ರತೆ

    (ಬಿ) ಮಧ್ಯಮ ತಾಪ, ಅಧಿಕ ಮಳೆ

    (ಸಿ) ಚಳಿ ಮತ್ತು ಆರ್ದ್ರತೆ

    (ಡಿ) ಉಷ್ಣ ಮತ್ತು ಒಣಹವೆ

    ಉತ್ತರ:-(ಎ) ಉಷ್ಣ ಮತ್ತು ಆದ್ರತೆ

    FAQS -weather climate and adaptation class 7

    ಜೀವಿಗಳ ಹೊಂದಾಣಿಕೆ ಎಂದರೇನು?

    ಜೀವಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಾಣಿಕೆಎಂದು ಕರೆಯಲಾಗುತ್ತದೆ. ಹೊಂದಾಣಿಕೆಗಳು ಜೀವಿಗಳ ರಚನೆ ಅಥವಾ ನಡವಳಿಕೆಯಲ್ಲಿನ ಬದಲಾವಣೆಗಳಾಗಿವೆ, ಅದು ಆ ಆವಾಸಸ್ಥಾನದಲ್ಲಿ ಜೀವಿ ಬದುಕಲು ಅನುವು ಮಾಡಿಕೊಡುತ್ತದೆ..

    ಎಲ್ಲಾ ಪ್ರಾಣಿಗಳಿಗೆ ಹೊಂದಾಣಿಕೆಗಳಿವೆಯೇ?

    ಎಲ್ಲಾ ಜೀವಿಗಳು ಬದುಕಲು ಹೊಂದಾಣಿಕೆಗಳನ್ನು ಹೊಂದಿವೆ. ಸಣ್ಣ ಇರುವೆಯಿಂದ ಹಿಡಿದು ಸಮುದ್ರದಲ್ಲಿ ಈಜುವ ದೈತ್ಯ ತಿಮಿಂಗಿಲದವರೆಗೆ, ಪ್ರಾಣಿಗಳು ವಿವಿಧ ಪರಿಸರದಲ್ಲಿ ವಾಸಿಸಲು ಹೊಂದಿಕೊಂಡಿವೆ..

    weather climate and adaptations of animals to climate class 7 notes pdf



    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.