KSEEB Solutions For Class 5 EVS Chapter 10 Shelter Kannada Medium.
ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ಗಾದೆ ಮಾತನ್ನು ಕೇಳಿರುತ್ತೀರಿ. ಮನೆ ನಮಗೆಲ್ಲ ಗೊತ್ತಿರುವ ಪದ. ಆದಿ ಮಾನವರು ಗುಹೆ ಮತ್ತು ಮರದ ಪೊಟರೆಗಳನ್ನು ಆಶ್ರಯಿಸಿ ಬಿಸಿಲು, ಮಳೆ, ಗಾಳಿ ಹಾಗೂ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯುತ್ತಿದ್ದರು. ಹಾಗಾಗಿ ಇವು ಮಾನವನ ಮೊದಲ ವಸತಿಗಳು ಎನಿಸಿದವು. ನಾಗರಿಕನಾದ ಮಾನವ ಒಂದೆಡೆ ನೆಲೆ ನಿಂತಾಗ ಮನೆಯ ಅವಶ್ಯಕತೆ ಹೆಚ್ಚಾಯಿತು. ನಾಗರಿಕ ಮಾನವನಿಂದ ಆರಂಭಗೊಂಡ ವಸತಿ ನಿರ್ಮಾಣವು ಕಾಲ, ಸಮಯ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆಯಿಂದ ವಸತಿಯ ಅಗತ್ಯತೆ ಹೆಚ್ಚುತ್ತಾ ಹೋಯಿತು. ವೈಯಕ್ತಿಕ ವಸತಿ ನಿರ್ಮಾಣದಿಂದ, ಆರಂಭಗೊಂಡ ಈ ಕಾರ್ಯ ಸಾಮೂಹಿಕ ವಸತಿಗಳಾಗಿ ಬದಲಾಗಿ ಹೊಸ ರೂಪ ಪಡೆಯಿತು.ಇಲ್ಲಿ ನಾವು KSEEB Solutions For Class 5 EVS Chapter 10 Shelter ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.
KSEEB Solutions For Class 5 EVS Chapter 10 Shelter.
ಕೆಳಗಿನ ಚಿತ್ರಗಳನ್ನು ಗಮನಿಸು. ಈ ಮನೆಗಳ ನಿರ್ಮಾಣದ ಬಗ್ಗೆ ಹಿಂದಿನ ತರಗತಿಯಲ್ಲಿ ತಿಳಿದಿರುವೆ. ಆಯಾ ಚಿತ್ರಗಳ ಮುಂದೆ ಮನೆ ನಿರ್ಮಾಣ ಮಾಡಲು ಬೇಕಾದ ಸಾಮಗ್ರಿಗಳನ್ನು ಬರೆ.
ಉತ್ತರ-
ಹೀಗೆ ಮಾಡು : ನಿನ್ನ ಹಳ್ಳಿಯ ಓಣಿ ಅಥವ ನಗರದ ಬೀದಿಗಳನ್ನು ನೀನು ಗಮನಿಸು.
ಇವು ಸಾಮಾನ್ಯ ಜನವಸತಿ ಪ್ರದೇಶಗಳು. ಇಲ್ಲಿ ಸಾಮಾನ್ಯವಾಗಿ ಕುಟುಂಬಗಳು ವೈಯಕ್ತಿಕ ವಸತಿ ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ ಈ ಜನವಸತಿ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶಗಳನ್ನು ಕೆಳಗೆ ನೀಡಿದೆ. ನೀನು ಗಮನಿಸಿದ ಇತರೆ ಅಂಶಗಳನ್ನು ನಿಗದಿ ಪಡಿಸಿದ ಜಾಗದಲ್ಲಿ ಬರೆ.
ಮನೆಗಳು ಎಲ್ಲೆಂದರಲ್ಲಿ ಅಥವಾ ಸಾಲಾಗಿ ಕಂಡುಬರುತ್ತವೆ.
ಬೀದಿಗಳು ಬಹಳಷ್ಟು ಅಂಕು ಡೊಂಕಾಗಿರುತ್ತವೆ.
ಜನವಸತಿ ಪ್ರದೇಶದಲ್ಲಿ ಬೀದಿ ದೀಪದ ವ್ಯವಸ್ಥೆ ಮಾಡಲಾಗಿರುತ್ತದೆ.
ಉತ್ತರ-ಕುಡಿಯುವ ನೀರಿನ ವ್ಯವಸ್ಥೆಗೆ ಕೊಳಾಯಿ ,ನಲ್ಲಿ ಸೌಲಭ್ಯ ಕಲ್ಪಿಸಲಾಗಿರುತ್ತದೆ.
ಆಸ್ಪತ್ರೆ,ಶಾಲೆ,ಹಾಲಿನ ಡೈರಿ,ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
ಆಟದ ಮೈದಾನ,ದೇವಸ್ಥಾನ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
ಕೆಳಗೆ ಕೆಲವು ಹೇಳಿಕೆಗಳನ್ನು ನೀಡಲಾಗಿದೆ. ಆದರೆ ಕೆಲವು ಹೇಳಿಕೆಗಳು ಸರಿಯಾದ ಕಾರಣವಾಗಿಲ್ಲ. ಸರಿಯಾದ ಕಾರಣಗಳಿಗೆ ಮಾತ್ರ (✔) ಗುರುತು ಹಾಕು.
೧. ಸಾಮೂಹಿಕ ವಸತಿಗಳಲ್ಲಿ ಹಲವು ಕುಟುಂಬಗಳು ಒಂದೆಡೆ ವಾಸಿಸುತ್ತವೆ. ✔
೨. ಹಣದ ಸೌಲಭ್ಯ ಕಡಿಮೆ ಇರುವ ಹಳ್ಳಿ ಅಥವಾ ನಗರದ ಬಡ ಕುಟುಂಬಗಳಿಗೆ ಸರಕಾರವೇ ಸಾಮೂಹಿಕ ವಸತಿ ನಿರ್ಮಿಸಿ, ವಸತಿಸೌಲಭ್ಯ ಒದಗಿಸುತ್ತದೆ. ✔
೩. ಕಡಿಮೆ ಭೂಮಿಯಲ್ಲಿ ಅತಿ ಹೆಚ್ಚಿನ ಜನಸಂಖ್ಯೆಗೆ ವ್ಯವಸ್ಥಿತ ಮೂಲ ಸೌಲಭ್ಯಗಳನ್ನು ನೀಡಲು ಇವುಗಳನ್ನು ನಿರ್ಮಿಸಲಾಗುತ್ತದೆ. ✔
೪. ಬಹುಮಹಡಿ ವಸತಿ ಕಟ್ಟಡಗಳನ್ನು ಕೇವಲ ಒಂದೇ ಕುಟುಂಬ ವಾಸಿಸುವಂತೆ ನಿರ್ಮಾಣ ಮಾಡಲಾಗಿರುತ್ತದೆ. X
ಕೆಳಗಿನ ಹೇಳಿಕೆಗಳನ್ನು ಗಮನಿಸು. ನಗರ / ಹಾಗೂ ಗ್ರಾಮೀಣ ಪ್ರದೇಶದ ವಸತಿ
ಸಮಸ್ಯೆಗಳಲ್ಲಿ ಕೆಲವನ್ನು ನೀಡಿದೆ. ಉಳಿದವುಗಳನ್ನು ಗೆಳೆಯ/ಗೆಳತಿಯರೊಂದಿಗೆ ಚರ್ಚಿಸಿ
ಬರೆ. (ಶಿಕ್ಷಕರ ನೆರವು ಪಡೆ)
ನಗರ ಪ್ರದೇಶದ ವಸತಿ ಸಮಸ್ಯೆಗಳು
* ಸಮರ್ಪಕ ಒಳಚರಂಡಿ ವ್ಯವಸ್ಥೆ ಇರುವುದಿಲ್ಲ.
* ಕಸ/ತ್ಯಾಜ್ಯದ ವಿಲೇವಾರಿ ಸಮಸ್ಯೆ.
* ಬಹುಮಹಡಿ ವಸತಿ ಕಟ್ಟಡಗಳಲ್ಲಿ ಆಗಾಗ್ಗೆ ಸಂಭವಿಸುವ ಅಗ್ನಿ ದುರಂತಗಳು.
* ___________________________________________________
* ___________________________________________________
ಉತ್ತರ-
- ಕುಡಿಯುವ ನೀರು,ಗಾಳಿ,ವಾತಾವರಣ ಕಲುಷಿತವಾಗಿರುವುದು.
- ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಕೈಗಾರಿಕಾ ಪ್ರದೇಶಗಳಲ್ಲಿನ ಮಾಲಿನ್ಯ.
ಗ್ರಾಮೀಣ ಪ್ರದೇಶದ ವಸತಿ ಸಮಸ್ಯೆಗಳು
* ಸ್ನಾನ ಗೃಹ, ಶೌಚಾಲಯ ಇಲ್ಲದಿರುವಿಕೆ.
* ವಿದ್ಯುತ್ ಸೌಲಭ್ಯ ಇಲ್ಲದಿರುವಿಕೆ.
* ಶುದ್ಧ ಕುಡಿಯುವ ನೀರಿನ ಸರಬರಾಜು ಇಲ್ಲದಿರುವಿಕೆ.
* ವಾಹನ ಸಂಚಾರಕ್ಕೆ ಸೂಕ್ತವಲ್ಲದ ಬೀದಿಗಳು.
* ಒಳ ಚರಂಡಿಯ ಸೌಲಭ್ಯ ಇಲ್ಲದಿರುವುದು.
* ___________________________________________________
* ___________________________________________________
ಉತ್ತರ-
- ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಉದ್ಯೋಗ ಸಂಬಂಧಿ ಸಮಸ್ಯೆಗಳು.
- ಸೂಕ್ತ ವಸತಿ ಸೌಲಭ್ಯ ಇಲ್ಲದಿರುವುದು.
FAQS-
ಜನವಸತಿಗಳು ಎಂದರೇನು?
ಹಳ್ಳಿ ಅಥವಾ ನಗರಗಳಲ್ಲಿ ಅನೇಕ ಕುಟುಂಬಗಳು ಅಕ್ಕ-ಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡು ಒಂದೆಡೆ ವಾಸಿಸುತ್ತಾರೆ. ಇದನ್ನು ಜನವಸತಿಗಳುಎನ್ನುವರು.
ಉತ್ತಮ ನಗರ ಅಥವಾ ಹಳ್ಳಿಯ ವಸತಿಯ ಲಕ್ಷಣಗಳು ಯಾವುವು?
ಉತ್ತಮ ನಗರ ಅಥವಾ ಹಳ್ಳಿಯ ವಸತಿಯ ಲಕ್ಷಣಗಳು
* ಗಾಳಿ, ಬೆಳಕು ಯಥೇಚ್ಛವಾಗಿ ಬರುವಂತಿರಬೇಕು.
* ಪ್ರತಿ ಮನೆಯ ಮೇಲ್ಛಾವಣಿಯು ಮಳೆ ಕೊಯ್ಲು ಅನುಸರಿಸಿ ಮಳೆ ನೀರು ಸಂಗ್ರಹ ಮಾಡುವ ವ್ಯವಸ್ಥೆ ಇರುತ್ತದೆ.
* ಸೌರಶಕ್ತಿಯಿಂದ ವಿದ್ಯುತ್ ಪಡೆಯುವಿಕೆ.
* ಮುಚ್ಚಿದ ಒಳಚರಂಡಿ ವ್ಯವಸ್ಥೆ.
* ಕಸವಿಲೇವಾರಿ ಮಾಡಲು ಸಮರ್ಪಕ ವ್ಯವಸ್ಥೆ ಇರುತ್ತದೆ. ಕಸದಿಂದ ಗೊಬ್ಬರ ತಯಾರಿಸುವ ವ್ಯವಸ್ಥೆ.
YOU CAN DOWNLOAD THIS LESSON IN PDF CLICK HERE👇👇👇
PLEASE DO NOT ENTER ANY SPAM LINK IN THE COMMENT BOX