kseeb solutions for class 5 evs chapter 8 ಕೃಷಿ

ರೈತರ ಮುಖ್ಯ ಕಸುಬು ಕೃಷಿ. ಹಾಗಾಗಿ ರೈತರನ್ನು ಕೃಷಿಕರು ಎಂತಲೂ ಕರೆಯುತ್ತಾರೆ. ತಮ್ಮ ಜೀವನ ಸಾಗಿಸಲು ಕೃಷಿಕರು, ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.kseeb solutions for class 5 evs chapter 8.

kseeb solutions for class 5 evs chapter 8

    ಈ ಪಾಠದ ಪ್ರಮುಖ ಅಂಶಗಳು- 

    • ಆಹಾರವು ಎಲ್ಲಿಂದ ಬರುತ್ತದೆ ಎಂಬುದನ್ನು ಕೃಷಿಯ ಹಂತಗಳ ಮೂಲಕ ಅರ್ಥೈಸಿಕೊಳ್ಳುವೆ.
    • ಕೃಷಿ ಕಾರ್ಮಿಕರು, ಸಣ್ಣ ಕೃಷಿಕರು ಮತ್ತು ದೊಡ್ಡ ಕೃಷಿಕರ ಕೆಲಸಗಳು ಹಾಗೂ ಸಮಸ್ಯೆಗಳ ಬಗ್ಗೆ ತಿಳಿದು ಪರಿಹಾರಗಳನ್ನು ಸೂಚಿಸುವೆ.
    • ಸಾವಯವ ಕೃಷಿ ಹಾಗೂ ರಾಸಾಯನಿಕ ಕೃಷಿಯನ್ನು ಅರ್ಥೈಸಿಕೊಂಡು, ವ್ಯತ್ಯಾಸ ಗುರುತಿಸುವೆ.
    • ಮಳೆಯಾಧಾರಿತ ಕೃಷಿ ಭೂಮಿ, ನೀರಾವರಿ ಕೃಷಿ ಭೂಮಿ ಬಗ್ಗೆ ಅರಿತುಕೊಳ್ಳುವೆ.
    • ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅರ್ಥೈಸಿಕೊಂಡು ಎರಡೂ 
    • ನೀರಾವರಿ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳನ್ನು ಪಟ್ಟಿ ಮಾಡುವೆ.
    • ಕೃಷಿ ಜಮೀನಿನಲ್ಲಿ ಕೈಗೊಳ್ಳುವ ಸಾಂದ್ರ ಬೇಸಾಯ, ಮಿಶ್ರ ಬೇಸಾಯ ಹಾಗೂ ತೋಟಗಾರಿಕೆಯ ಬಗ್ಗೆ ಮಾಹಿತಿ ಪಡೆಯುವೆ.
    • ಧಾನ್ಯ ಸಂಗ್ರಹಣೆಯ ಆಧುನಿಕ ಮತ್ತು ಸಾಂಪ್ರದಾಯಿಕ ವಿಧಾನಗಳು/ಸಾಧನಗಳನ್ನು ಗುರುತಿಸುವೆ.
    ಇಲ್ಲಿ ನಾವು kseeb solutions for class 5 evs chapter 8 ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.

    kseeb solutions for class 5 evs chapter 8.

    ನೆನಪಿಸಿಕೊ : ಹೊಲ - ಗದ್ದೆಗಳಲ್ಲಿ ಕೆಲಸ ಮಾಡುವ ಜನರನ್ನು ಗಮನಿಸು. ಅವರು ಮಾಡುವ ಕೆಲಸಗಳನ್ನು ನೆನಪಿಸಿಕೊ/ ವೀಕ್ಷಿಸು. ಅವುಗಳನ್ನು ಇಲ್ಲಿ ಪಟ್ಟಿ ಮಾಡು.

    ಉತ್ತರ- 
    • ಉಳುಮೆ ಮಾಡುವುದು. 
    • ಬೀಜ ಬಿತ್ತನೆ ಮಾಡುವುದು.
    • ನೀರು ಹಾಯಿಸುವುದು. 
    • ಗೊಬ್ಬರ ಹಾಕುವುದು.
    • ಕಳೆ ಕೀಳುವುದು. 
    • ಕೀಟಗಳಿಂದ ಬೆಳೆಯನ್ನು ರಕ್ಷಣೆ ಮಾಡಲು ರಾಸಾಯನಿಕಗಳ ಸಿಂಪಡಣೆ ಮಾಡುವುದು. 
    • ಚೆನ್ನಾಗಿ ಬಂಡ ಬೆಳೆಗಳನ್ನು ಕಟಾವು ಮಾಡುವುದು. 



    ಈ ಕೆಳಗಿನ ಚಿತ್ರಗಳನ್ನು ಗಮನಿಸು ಹಾಗೂ ಅವುಗಳ ಮುಂದಿನ ಹೇಳಿಕೆಗಳನ್ನು ಓದು.ಚಿತ್ರಗಳಿಗೂ ಮತ್ತು ಹೇಳಿಕೆಗೂ ಜೋಡಣೆ ಸರಿಯಾಗಿಲ್ಲ. ಚಿತ್ರಗಳನ್ನು ಅವುಗಳ ಸರಿಯಾದ ಹೇಳಿಕೆಯೊಂದಿಗೆ ಗೆರೆ ಎಳೆದು ಜೋಡಿಸು.
    kseeb solutions for class 5 evs chapter 8

     Class 5 EVS Question answer  Chapter 8 Agriculture.

    kseeb solutions for class 5 evs chapter 8
    ಇವು ಕೃಷಿಕರು ಬೆಳೆ ಬೆಳೆಯಲು ಅನುಸರಿಸುವ ಹಂತಗಳು. ಹೇಳಿಕೆಯನ್ನು ಸರಿಯಾದ ಚಿತ್ರದೊಂದಿಗೆ ನೀನು ಜೋಡಿಸಿರುವೆ. ಆದರೆ ಅವು ಕ್ರಮವಾಗಿಲ್ಲ. ಈ ಹಂತಗಳನ್ನು ಕಾಲಾನುಕ್ರಮವಾಗಿ ಕೆಳಗೆ ಬರೆ. 

    ಉತ್ತರ- 

    1. ಬೆಳೆ ಬೆಳೆಯಲು ನೆಲವನ್ನು ಉಳುಮೆ ಮಾಡುವುದು.
    2. ಬೆಳೆ ಬೆಳೆಯಲು ಬೀಜಗಳನ್ನು ಬಿತ್ತುವುದು.
    3. ಬೆಳೆಗಳು ಚೆನ್ನಾಗಿ ಬೆಳೆಯಲು ನೀರು ಹರಿಸುವುದು.
    4. ಬೆಳೆಗಳು ಚೆನ್ನಾಗಿ ಬೆಳೆಯಲು ರಾಸಾಯನಿಕಅಥವಾ ಸಾವಯವ ಗೊಬ್ಬರ ಹಾಕುವುದು.
    5. ಪ್ರಾಣಿ, ಪಕ್ಷಿ, ಕೀಟಗಳು ಮತ್ತು ರೋಗಗಳಿಂದ ಬೆಳೆಯನ್ನು ರಕ್ಷಿಸುವುದು.
    6. ಯಂತ್ರಗಳು ಅಥವಾ ಕೈಗಳಿಂದ ಬೆಳೆಗಳನ್ನು ಕಟಾವು ಮಾಡುವುದು.
    ಕೃಷಿ ಕಾರ್ಮಿಕರಿಗೆ ತಮ್ಮದೇ ಆದ ಸಮಸ್ಯೆಗಳಿವೆ. ಕೆಳಗೆ ಕೆಲವು ಹೇಳಿಕೆಗಳಿವೆ. ಅವುಗಳಲ್ಲಿ 
    ಕೃಷಿ ಕಾರ್ಮಿಕರ ಸಮಸ್ಯೆಗಳ ಮುಂದೆ (✔) ಅಥವಾ (x) ಗುರುತು ಹಾಕು. 
    ೧. ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ದೊರೆಯುವುದಿಲ್ಲ.  
    ೨. ಕೆಲವೊಮ್ಮೆ ಕೂಲಿ ತುಂಬಾ ಕಡಿಮೆ ಇರುತ್ತದೆ.
    ೩. ಕೃಷಿ ಕಾರ್ಮಿಕರು ತುಂಬಾ ಶ್ರೀಮಂತರು.

    ಉತ್ತರ- 

    ೧. ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ದೊರೆಯುವುದಿಲ್ಲ. 
    ೨. ಕೆಲವೊಮ್ಮೆ ಕೂಲಿ ತುಂಬಾ ಕಡಿಮೆ ಇರುತ್ತದೆ. 
    ೩. ಕೃಷಿ ಕಾರ್ಮಿಕರು ತುಂಬಾ ಶ್ರೀಮಂತರುx

    ಹೀಗೆ ಮಾಡು : ನಿಮ್ಮೂರಿನ ಒಂದಿಬ್ಬರು ಕೃಷಿ ಕಾರ್ಮಿಕರನ್ನು ಭೇಟಿ ಮಾಡು. ಅವರು 
    ಎದುರಿಸುತ್ತಿರುವ ಸಮಸ್ಯೆಗಳನ್ನು ಇಲ್ಲಿ ಬರೆ.
    ೧) _________________________________________________
    ೨) __________________________________________________
    ಉತ್ತರ- 
    ೧. ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ದೊರೆಯದಿರುವುದು. 
    ೨. ಕೃಷಿ ಕಾರ್ಮಿಕರಿಗೆ ಕೂಲಿ ತುಂಬಾ ಕಡಿಮೆ ಇರುತ್ತದೆ. 
    ಚಟುವಟಿಕೆ 
    ಶಿಕ್ಷಕರ ನೆರವಿನಿಂದ ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರಗಳನ್ನು ಕೆಳಗೆ ಪಟ್ಟಿಮಾಡು.
    ೧) _________________________________________________
    ೨) _________________________________________________
    ೩) ________________________________________________

    ಉತ್ತರ- 
    • ಬಿಡುವಿನ ಸಮಯದಲ್ಲಿ ಇತರೆ  ಕಸುಬುಗಳನ್ನು ಮಾಡುವುದು. 
    • ಉಪಕಸುಬುಗಳನ್ನು ರೂಢಿಸಿಕೊಳ್ಳುವುದು. 
    • ಗಳಿಸಿದ ಹಣದ ಬಳಕೆಯನ್ನು ಮಿತಗೊಳಿಸಿ ಉಳಿತಾಯದ ಕಡೆ ಗಮನ ನೀಡುವುದು. 

    ದೊಡ್ಡ ಕೃಷಿಕರು ಬ್ಯಾಂಕ್‌ಗಳಿಂದ ಪಡೆಯುವ ಸೌಲಭ್ಯಗಳನ್ನು ಚರ್ಚಿಸಿ, ಇಲ್ಲಿ ಬರೆ. 
    ೧) _________________________________________________
    ೨) _________________________________________________
    ಉತ್ತರ- 
    • ಆಧುನಿಕ ಕೃಷಿಯಂತ್ರಗಳನ್ನು ಖರೀದಿಸಲು ಸಬ್ಸಿಡಿ ಸಾಲ ಪಡೆಯುತ್ತಾರೆ. 
    • ಕೃಷಿ ಚಟುವಟಿಕೆ ಮಾಡಲು ಬಡ್ಡಿ ರಹಿತ ಸಾಲ ಪಡೆಯುತ್ತಾರೆ. 

    ಚಟುವಟಿಕೆ : ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಬಳಸಿ ಬೆಳೆಯಲಾಗುವ ಬೆಳೆಗಳ ಪಟ್ಟಿ ಮಾಡು. (ಶಿಕ್ಷಕರ/ಪೋಷಕರ ನೆರವು ಪಡೆದುಕೊ.)
    ಉತ್ತರ- ತೆಂಗು,ಬಾಳೆ,ಮಾವು, ಪಪ್ಪಾಯ, ತರಕಾರಿಗಳು, ಹಲಸು, ಸೀಬೆ, ಅಡಿಕೆ. 

    ಹನಿ ನೀರಾವರಿ ಹಾಗೂ ತುಂತುರು ನೀರಾವರಿಯ ಉಪಯೋಗಗಳನ್ನು ಕೆಳಗೆ ಪಟ್ಟಿಮಾಡು. 
    ೧) _________________________________________________
    ೨) _________________________________________________
    ೩) _________________________________________________
    ೪) _________________________________________________
    ೫) _________________________________________________
    ೬) _________________________________________________

    ಉತ್ತರ- 
    ಹನಿ ನೀರಾವರಿ

    1. ಕಡಿಮೆ ನೀರನ್ನು ಒದಗಿಸಿ ಹೆಚ್ಚಿನ ಉತ್ತಮ ಇಳುವರಿ ಪಡೆಯಲು ಸಹಕಾರಿ. 
    2. ನೀರಿನ ಮಿತ ಬಳಕೆ ಜೊತೆಗೆ ನೀರಿನ ಪೋಲನ್ನು ತಡೆಗಟ್ಟಬಹುದು. 
    3. ಕಳೆ ನಿಯಂತ್ರಣ ಮಾಡಬಹುದು. 
    ತುಂತುರು ನೀರಾವರಿ
    1. ಕಬ್ಬು, ಜೋಳ, ಕಾಫಿ, ಇತರೆ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ. 
    2. ಕಡಿಮೆ ನೀರನ್ನು ಒದಗಿಸಿ ಹೆಚ್ಚಿನ ಉತ್ತಮ ಇಳುವರಿ ಪಡೆಯಲು ಸಹಕಾರಿ. 
    3. ನೀರಿನ ಮಿತ ಬಳಕೆ ಜೊತೆಗೆ ನೀರಿನ ಪೋಲನ್ನು ತಡೆಗಟ್ಟಬಹುದು. 


    ಮಳೆಯಾಶ್ರಿತ ಕೃಷಿ ಭೂಮಿ ಅಥವಾ ನೀರಾವರಿ ಕೃಷಿ ಭೂಮಿ ಯಾವುದೇ ಇದ್ದರೂ ರೈತರು ಇಂದು ಎರಡು ರೀತಿಯ ಕೃಷಿ 
    ಪದ್ಧತಿಗಳನ್ನು ಅನುಸರಿಸಿ ಬೆಳೆ ಬೆಳೆಯುತ್ತಾರೆ. ಅವುಗಳೆಂದರೆ -
    ೧) ಸಾವಯವ ಕೃಷಿ 
    ೨) ರಾಸಾಯನಿಕ ಕೃಷಿ 
    ಇವೆರಡರ ಬಗ್ಗೆ ತಿಳಿಯಲು ಕೆಳಗಿನ ಹೇಳಿಕೆಗಳನ್ನು ಓದಿ ಅರ್ಥೈಸಿಕೊ. ಶಿಕ್ಷಕರ 
    ನೆರವಿನಿಂದ ಸಾವಯವ ಮತ್ತು ರಾಸಾಯನಿಕ ಕೃಷಿಯ ಹೇಳಿಕೆಗಳನ್ನು ಗುರುತಿಸು. ಕೆಳಗಿನ 
    ಚಾರ್ಟ್ನಲ್ಲಿ ಬರೆ. 
    ಹೇಳಿಕೆಗಳು
    ೧. ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. 
    ೨. ಕೊಟ್ಟಿಗೆ / ತಿಪ್ಪೆಗೊಬ್ಬರವನ್ನು ಕೃಷಿ ಭೂಮಿಗೆ ಬಳಸಲಾಗುತ್ತದೆ.
    ೩. ಎರೆಹುಳು ಗೊಬ್ಬರವನ್ನು ಮಣ್ಣಿನ ಪೋಷಕಾಂಶ ಹೆಚ್ಚಿಸಲು ಉಪಯೋಗಿಸಲಾಗುತ್ತದೆ.
    ೪. ರಾಸಾಯನಿಕ ಪೀಡೆ ನಾಶಕಗಳ ಸಿಂಪಡಣೆ ಮಾಡಿ ಬೆಳೆ ಬೆಳೆಯಲಾಗುತ್ತದೆ.
    ೫. ಹಸಿರೆಲೆ / ಒಣಗಿದ ತರಗೆಲೆಗಳನ್ನೂ ಈ ಕೃಷಿಯಲ್ಲಿ ಬಳಸಲಾಗುತ್ತದೆ.

    ಉತ್ತರ- 
    ಸಾವಯವ ಕೃಷಿ
    ೨. ಕೊಟ್ಟಿಗೆ / ತಿಪ್ಪೆಗೊಬ್ಬರವನ್ನು ಕೃಷಿ ಭೂಮಿಗೆ ಬಳಸಲಾಗುತ್ತದೆ.

    ೩. ಎರೆಹುಳು ಗೊಬ್ಬರವನ್ನು ಮಣ್ಣಿನ ಪೋಷಕಾಂಶ ಹೆಚ್ಚಿಸಲು ಉಪಯೋಗಿಸಲಾಗುತ್ತದೆ.
    ೫. ಹಸಿರೆಲೆ / ಒಣಗಿದ ತರಗೆಲೆಗಳನ್ನೂ ಈ ಕೃಷಿಯಲ್ಲಿ ಬಳಸಲಾಗುತ್ತದೆ.

    ರಾಸಾಯನಿಕ ಕೃಷಿ
    ೧. ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. 
    ೪. ರಾಸಾಯನಿಕ ಪೀಡೆ ನಾಶಕಗಳ ಸಿಂಪಡಣೆ ಮಾಡಿ ಬೆಳೆ ಬೆಳೆಯಲಾಗುತ್ತದೆ.

    ಚಟುವಟಿಕೆ : ಮಿಶ್ರ ಬೇಸಾಯದಲ್ಲಿ ಹಲವು ಕೃಷಿ ಕಾರ್ಯ ಮತ್ತು ಉಪಕಸುಬುಗಳನ್ನು ಕೈಗೊಳ್ಳಲಾಗುತ್ತದೆ. ಶಿಕ್ಷಕರ ನೆರವಿನಿಂದ ಅವುಗಳನ್ನು ಪಟ್ಟಿ ಮಾಡು.
    ಉತ್ತರ-  ದನಕರು,ಕೋಳಿ, ರೇಷ್ಮೆ, ಜೇನು,ಮೀನು ಸಾಕಾಣಿಕೆ ಮಾಡುವುದು.

    kseeb solutions for class 5 evs chapter 8

    ಚಟುವಟಿಕೆ : ತೋಟಗಾರಿಕೆಯಲ್ಲಿ ಬೆಳೆಯಲಾಗುವ ವಿವಿಧ ಹಣ್ಣುಗಳು, ತರಕಾರಿ, 

    ಹೂಗಳನ್ನು ಪಟ್ಟಿಮಾಡು. ಹಿರಿಯರ ನೆರವು ಪಡೆದುಕೊ.

    _________________________       _________________________

    _________________________        ________________________

    ಉತ್ತರ-  ದಾಳಿಂಬೆ,ಸಪೋಟ, ಮಾವು, ನಿಂಬೆ,ಹಲಸು, ಕಿತ್ತಳೆ,ದ್ರಾಕ್ಷಿ, ಸೇಬು, ಸೀಬೆ,ಪಪ್ಪಾಯ,ನುಗ್ಗೆ,ಬೀನ್ಸ್, ಬದನೆ,ಸೌತೆಕಾಯಿ. 
    kseeb solutions for class 5 evs chapter 8

     Class 5 EVS Question answer  Chapter 8 Agriculture.

    ಕೆಳಗಿನ ಚಿತ್ರಗಳನ್ನು ಗಮನಿಸು. ಅವುಗಳಿಗೆ ಸಂಬಂಧಿಸಿದ ಕೃಷಿ/ಬೇಸಾಯ ಪದ್ಧತಿಗಳನ್ನು ಬರೆ.
    Class 5 EVS Question answer

    Class 5 EVS Question answer.

    ಉತ್ತರ-
    5 EVS Question answer  Chapter 8 Agriculture

    5 EVS Question answer  Chapter 8 Agriculture.

    ಆಲೋಚಿಸು : ಧಾನ್ಯಗಳ ಸಂರಕ್ಷಣೆ ನಮಗೆ ಅಗತ್ಯ. ಏಕೆ? ಇದರಿಂದ ಕೃಷಿಕರಿಗೆ 
    ಹಾಗೂ ಧಾನ್ಯಗಳನ್ನು ಕೊಳ್ಳುವವರಿಗೆ ಆಗುವ ಅನುಕೂಲವೇನು? ಇಲ್ಲಿ ಬರೆ.
    ೧) _________________________________________________
    ೨) _________________________________________________
    ಉತ್ತರ-
    • ಆಹಾರ ಧಾನ್ಯಗಳು/ ಪದಾರ್ಥಗಳನ್ನು ಹೆಚ್ಚು ಬೆಳೆಯುತ್ತಿರುವುದರಿಂದ ಅವುಗಳನ್ನು ಸಂಗ್ರಹಿಸುವುದು ಅವಶ್ಯವಾಗಿದೆ. 
    • ಆಹಾರ ಧಾನ್ಯಗಳು/ ಪದಾರ್ಥಗಳ ಕೊರತೆ ನೀಗಿಸಲು ಅವುಗಳನ್ನು ಸಂಗ್ರಹಿಸುವುದು ಅವಶ್ಯವಾಗಿದೆ. 
    • ಆಹಾರ ಧಾನ್ಯಗಳು/ ಪದಾರ್ಥಗಳಿಗೆ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಸಂಗ್ರಹಿಸುವುದು ಅವಶ್ಯವಾಗಿದೆ. 

    ಕೃಷಿ  FAQS-

    ನಮ್ಮ ದೇಶದ ಮುಖ್ಯ ಕಸುಬು ಯಾವುದು?

    ನಮ್ಮ ದೇಶದ ಮುಖ್ಯ ಕಸುಬು ಕೃಷಿ.

    ಮೂರು ಬಗೆಯ ಕೃಷಿಕರು ಯಾರು?

    ಉತ್ತರ- ೧) ಕೃಷಿ ಕಾರ್ಮಿಕರು ೨) ಸಣ್ಣ ಕೃಷಿಕರು ೩) ದೊಡ್ಡ ಕೃಷಿಕರು

    ಕೃಷಿ ಕಾರ್ಮಿಕರು ಎಂದರೆ ಯಾರು?

    ಉತ್ತರ-ಇವರಿಗೆ ತಮ್ಮದೇ ಸ್ವಂತ ಜಮೀನು ಇರುವುದಿಲ್ಲ. ತಮ್ಮ ಜೀವನ ಸಾಗಿಸಲು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ.

    ಸಣ್ಣ ಕೃಷಿಕರು ಎಂದರೆ ಯಾರು?

    ಉತ್ತರ-ಸಣ್ಣ ಕೃಷಿಕರಿಗೆ ತಮ್ಮದೇ ಆದ ಸ್ವಲ್ಪ ಜಮೀನು ಇರುತ್ತದೆ. ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳನ್ನು ಮಾರಿ ಬರುವ ಹಣದಿಂದ ಜೀವನ ಸಾಗಿಸುತ್ತಿರುತ್ತಾರೆ. ಇವರು ಸಹ ಸಮಸ್ಯೆಗಳನ್ನು ಹೊಂದಿದ್ದಾರೆ. ಉದಾಹರಣೆ : ಕೃಷಿ ಮಾಡಲು ಹಣದ ಅಭಾವವಿರುತ್ತದೆ. ಕೃಷಿ ಜಮೀನು ಕಡಿಮೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿರುತ್ತದೆ. ಕೃಷಿ ಜಮೀನಿಗೆ ನೀರಿನ ಸೌಲಭ್ಯ (ನೀರಾವರಿ) ಕಡಿಮೆ ಇರುತ್ತದೆ. ಹಲವು ಸನ್ನಿವೇಶಗಳಲ್ಲಿ ಜಮೀನಿಗೆ ನೀರು ದೊರೆಯುವುದೇ ಇಲ್ಲ. ಕೃಷಿ ಭೂಮಿಯ ಫಲವತ್ತತೆಗನುಗುಣವಾಗಿ ಹಾಗೂ ಋತುಮಾನಕ್ಕನುಗುಣವಾಗಿ ಬೆಳೆ ತೆಗೆಯಲು ಇವರಿಗೆ ಸರಿಯಾದ ಮಾರ್ಗದರ್ಶನ ಇರುವುದಿಲ್ಲ.

    ದೊಡ್ಡ ಕೃಷಿಕರು ಎಂದರೆ ಯಾರು?

    ಸಾಮಾನ್ಯವಾಗಿ ದೊಡ್ಡ ಕೃಷಿಕರು ಹೆಚ್ಚು ಜಮೀನು ಹೊಂದಿರುತ್ತಾರೆ. ಜಮೀನಿನಲ್ಲಿ ಕೃಷಿ ಕೆಲಸಗಳಿಗಾಗಿ ಕುಟುಂಬದ ಸದಸ್ಯರಲ್ಲದೆ, ಸಹಾಯಕರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ದೊಡ್ಡ ಕೃಷಿಕರ ಬಗೆಗೆ ಕೆಲವು ಹೇಳಿಕೆಗಳನ್ನು ನೀಡಿದೆ. ಗಮನಿಸು. ಆಧುನಿಕ ಕೃಷಿಯಂತ್ರಗಳನ್ನು ಖರೀದಿಸಿ, ಬಳಸುತ್ತಾರೆ. ಧಾನ್ಯಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಇದ್ದಾಗ ಮಾರಾಟಮಾಡುತ್ತಾರೆ. ಬ್ಯಾಂಕ್‌ಗಳ ಹಣಕಾಸು ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಾರೆ. ವಿವಿಧ ಬೆಳೆಗಳ ಕೃಷಿ ಮಾಡುವುದರಿಂದ ಇವರು ಹೆಚ್ಚಿನ ಆದಾಯ ಹೊಂದಿರುತ್ತಾರೆ.

    ಕೃಷಿಕರು ಹೊಂದಿರುವ ಕೃಷಿ ಭೂಮಿ (ಜಮೀನು)ಯನ್ನು ಹೇಗೆ ವಿಭಾಗಿಸಲಾಗಿದೆ?

    ಕೃಷಿಕರು ಹೊಂದಿರುವ ಕೃಷಿ ಭೂಮಿ (ಜಮೀನು)ಯನ್ನು ಮುಖ್ಯವಾಗಿ ಎರಡು ವಿಧದಲ್ಲಿ ವಿಭಾಗಿಸಲಾಗಿದೆ. ೧) ಮಳೆಯಾಧಾರಿತ ಕೃಷಿ ಭೂಮಿ ೨) ನೀರಾವರಿ ಕೃಷಿ ಭೂಮಿ ಮಳೆಯಾಧಾರಿತ ಕೃಷಿ ಭೂಮಿ ಎಂದರೇನು? ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿನ ಜಮೀನು ಮಳೆಯಾಧಾರಿತ ಕೃಷಿ ಭೂಮಿಯಾಗಿದೆ. ಕಡಿಮೆ ನೀರನ್ನು ಬಳಸುವ ಬೆಳೆಗಳನ್ನು ಭೂಮಿಯ ಮಣ್ಣಿಗನುಗುಣವಾಗಿ ಬೆಳೆಯುತ್ತಾರೆ. ಮಳೆಯಾಧಾರಿತ ಕೃಷಿ ಭೂಮಿಯ ಬೇಸಾಯವನ್ನು ಖುಷ್ಕಿ ಅಥವಾ ಒಣಭೂಮಿ ಬೇಸಾಯ ಎಂತಲೂ ಕರೆಯಲಾಗುವುದು.

    ನೀರಾವರಿ ಕೃಷಿ ಎಂದರೇನು?

    ಬೆಳೆಗಳಿಗೆ ಮಳೆಯ ನೀರನ್ನು ಹೊರತುಪಡಿಸಿದರೆ ಕೆರೆ, ಕಾಲುವೆ, ಬಾವಿ, ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತದೆ. ಹೀಗೆ ನೀರನ್ನು ಬಳಸಿ ಕೃಷಿ ಮಾಡುವುದನ್ನು ನೀರಾವರಿ ಕೃಷಿ ಎನ್ನುವರು.

    ನೀರಾವರಿ ಬೆಳೆಗಳು ಎಂದರೇನು?

    ನೀರಾವರಿ ಭೂಮಿಯಲ್ಲಿ ಮಣ್ಣಿಗೆ ತಕ್ಕಂತೆ ಕಬ್ಬು, ಭತ್ತ, ಹತ್ತಿಯಂತಹ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳನ್ನು ನೀರಾವರಿ ಬೆಳೆಗಳು ಎನ್ನುವರು.

    ನೀರಾವರಿಯ ಆಕರಗಳಿರುವ ರೈತರು ನೀರು ಹೆಚ್ಚು ಪೋಲಾಗುವುದನ್ನು ತಡೆಗಟ್ಟಲು ವಿಶಿಷ್ಟ ನೀರಾವರಿ ಪದ್ಧತಿಗಳನ್ನು ಅನುಸರಿಸುತ್ತಾರೆ ಅವು ಯಾವುವು?

    ನೀರಾವರಿಯ ಆಕರಗಳಿರುವ ರೈತರು ನೀರು ಹೆಚ್ಚು ಪೋಲಾಗುವುದನ್ನು ತಡೆಗಟ್ಟಲು ವಿಶಿಷ್ಟ ನೀರಾವರಿ ಪದ್ಧತಿಗಳನ್ನು ಅನುಸರಿಸುತ್ತಾರೆ. ಅವುಗಳೆಂದರೆ - ೧) ಹನಿ ನೀರಾವರಿ ೨) ತುಂತುರು ನೀರಾವರಿ

    ಸಾಂದ್ರ ಬೇಸಾಯ ಎಂದರೇನು?

    ಒಂದೇ ಕೃಷಿ ಜಮೀನಿನಲ್ಲಿ ವರ್ಷವೊಂದಕ್ಕೆ ೨ ರಿಂದ ೩ ಬೆಳೆಗಳನ್ನು ಬೆಳೆಯುವುದು. ಉದಾಹರಣೆಗೆ, ಜೋಳ, ಭತ್ತ, ರಾಗಿ, ಸೂರ್ಯಕಾಂತಿ, ಹತ್ತಿ, ಹುರಳಿ, ಕಡಲೆ, ತೊಗರಿ.

    ಮಿಶ್ರ ಬೇಸಾಯ ಎಂದರೇನು?

    ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ದನಕರು,ಕೋಳಿ, ರೇಷ್ಮೆ, ಜೇನು ಸಾಕಾಣಿಕೆ ಮಾಡುವುದು.

    ತೋಟಗಾರಿಕೆ ಎಂದರೇನು?

    ಆಹಾರದ ಬೆಳೆಗಳ ಬದಲಿಗೆ ಕೃಷಿ ಜಮೀನಿನಲ್ಲಿ ವಿವಿಧ ಹಣ್ಣುಗಳು, ತರಕಾರಿ, ಕಾಫಿ, ಟೀ ಅಥವಾ ಹೂಗಳನ್ನು ಬೆಳೆಯುವುದು.


    👉kseeb solutions for class 5 evs chapter 8 ಕೃಷಿ pdf👈



    ALSO, READ THESE NOTES OF 5th STANDARD-






























    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.