5th EVS Chapter 15 Answers Kannada Medium

5th EVS Chapter 15 Answers Kannada Medium Our India- Physical Diversity Kannada Medium.

ನಮ್ಮ ಭಾರತ - ಪ್ರಾಕೃತಿಕ ವೈವಿಧ್ಯ-ಭಾರತ ನಮ್ಮ ದೇಶ. ಇದು ವೈವಿಧ್ಯಮಯವಾದ ಪರಿಸರವನ್ನು ಹೊಂದಿದೆ. ಹಿಮಾಲಯ ಪರ್ವತ ಶ್ರೇಣಿಗಳು, ಎತ್ತರವಾದ ಶಿಖರಗಳು, ಪ್ರಸ್ಥಭೂಮಿ, ವಿಶಾಲವಾದ ಮೈದಾನಗಳು, ಕಡಲ ತೀರಗಳು ಮತ್ತು ದ್ವೀಪಗಳು, ಮರುಭೂಮಿ, ನದಿಜಾಲಗಳು ಹೀಗೆ ಅನೇಕ ಪ್ರಾಕೃತಿಕ ವೈಶಿಷ್ಟ್ಯಗಳಿಂದ ಕೂಡಿದ ಭಾರತವು ಭವ್ಯತೆಯ ಪ್ರತಿರೂಪವಾಗಿದೆ. ಇದೊಂದು ವಿವಿಧ ಸಸ್ಯ-ಪ್ರಾಣಿಗಳಿಂದ ಕೂಡಿದ ಜೀವತಾಣವಾಗಿದೆ.ಇಲ್ಲಿ ನಾವು 5th EVS Chapter 15 Answers Kannada Medium ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.

5th EVS Chapter 15 Answers Kannada Medium


  ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆ. 
  ೧) ಹಿಮಾಲಯ ಪರ್ವತಗಳ ತಪ್ಪಲಿನಲ್ಲಿ ವಾಸಿಸುವ ಪ್ರಾಣಿಗಳ ಹೆಸರನ್ನು ತಿಳಿದು ಪಟ್ಟಿಮಾಡು.
  ____________________
  ____________________
  ____________________
  ____________________
   ____________________
  ಉತ್ತರ-ಹಿಮಸಾರಂಗ, ಹಿಮ ಕರಡಿ, ಹಿಮಾಲಯದ ರಣಹದ್ದು, ಕೋತಿಗಳು, ಹಿಮ ನಾಯಿಗಳು. 
  ೨) ಹಿಮಾಲಯ ಪರ್ವತದ ತಗ್ಗು ಭಾಗಗಳಲ್ಲಿ ಸಮತಟ್ಟಾದ, ನೀಳ ಹಾಗೂ ವಿಶಾಲವಾದ ಭಾಗಗಳಿರುತ್ತವೆ. ಇವುಗಳನ್ನು ಡೂನ್ ಎಂದು ಕರೆಯುತ್ತಾರೆ. ಉದಾಹರಣೆಗೆ, ಭಾರತದ ಡೆಹರಾಡೂನ್. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಜನರು ಬೇಸಿಗೆಯಲ್ಲಿ ಇಲ್ಲಿಗೆ ಪ್ರವಾಸಕ್ಕಾಗಿ ಹೋಗುತ್ತಾರೆ. ಏಕೆ? 
  ಉತ್ತರ-ಇಲ್ಲಿನ ವಾತಾವರಣ ಬೇಸಿಗೆಯಲ್ಲಿ ತಂಪಾಗಿದ್ದು,ಆಹ್ಲಾದಕರವಾಗಿರುತ್ತದೆ,ಆದುದರಿಂದ ಜನರು ಬೇಸಿಗೆಯ ಹೆಚ್ಚಿನ ಉಷ್ಣಾಂಶದಿಂದ ಸ್ವಲ್ಪ ದಿನ ಮುಕ್ತಿ ಪಡೆಯಲು ಬೇಸಿಗೆಯಲ್ಲಿ ಇಲ್ಲಿಗೆ ಪ್ರವಾಸಕ್ಕಾಗಿ ಹೋಗುತ್ತಾರೆ. 
  ೩) ನಿಮ್ಮೂರಿನ ಸಮೀಪ ಅಥವಾ ಸುತ್ತಮುತ್ತ ಪರ್ವತ/ಪರ್ವತ ಶ್ರೇಣಿ/ ಬೆಟ್ಟಗುಡ್ಡಗಳು ಇದ್ದಲ್ಲಿ, ಅವುಗಳನ್ನು ಹೆಸರಿಸು.
   ____________________ ____________________
   ____________________ ____________________
   ____________________ ____________________
   ____________________ ____________________ 
   ____________________ ____________________
  ಉತ್ತರ-ಮುಳ್ಳಯ್ಯನ ಗಿರಿ, ಕಲ್ಲತ್ತಿ ಗಿರಿ, ಕೆಮ್ಮಣ್ಣು  ಗುಂಡಿ,ಪುಷ್ಪಗಿರಿ ಬೆಟ್ಟ. 
  ಈ ಚಿತ್ರಗಳನ್ನು ಗಮನಿಸಿ, ಹೆಸರಿಸು. ಭಾರತದಲ್ಲಿ ಇವುಗಳನ್ನು ಎಲ್ಲೆಲ್ಲಿ ಕಾಣುವೆ? ತಿಳಿಸು. 
  (ಶಿಕ್ಷಕರ ಸಹಾಯ ಪಡೆ)
  5th EVS Chapter 15 Answers Kannada Medium

  1.ಅಶೋಕ ಸ್ತಂಭ- ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿವೆ.
  2.ಕೆಂಪು ಕೋಟೆಯ- ಭಾರತದ ದೆಹಲಿ ನಗರದಲ್ಲಿರುವ ಒಂದು ಐತಿಹಾಸಿಕ ಕೋಟೆಯಾಗಿದ್ದು, ಇದು ಮೊಘಲರ ಮುಖ್ಯ ನಿವಾಸವಾಗಿತ್ತು.
  3.ತಾಜ್ ಮಹಲ್ - ಯಮುನಾ ನದಿಯ ಬಲದಂಡೆಯಲ್ಲಿ ವಿಶಾಲವಾದ ಮೊಘಲ್ ಉದ್ಯಾನವನದಲ್ಲಿದೆ,  ಆಗ್ರಾದಲ್ಲಿದೆ. 
  4.ನಳಂದ- ಪ್ರಾಚೀನ ವಿಶ್ವವಿದ್ಯಾಲಯಇದು ಪಾಟ್ನಾದ ಆಗ್ನೇಯಕ್ಕೆ ಬಿಹಾರ ಷರೀಫ್ ಪಟ್ಟಣದ ಸಮೀಪದಲ್ಲಿದೆ ಮತ್ತು ಐದನೇ ಶತಮಾನದ ಕಲಿಕೆಯ ಕೇಂದ್ರವಾಗಿತ್ತು. ಇದು UNESCO ವಿಶ್ವ ಪರಂಪರೆಯ ತಾಣವಾಗಿದೆ. ಇದು ಭಾರತದ ಈಶಾನ್ಯ ಭಾಗದಲ್ಲಿದೆ.
  ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆ. 
  ೧) ಉತ್ತರದ ಮೈದಾನಗಳು ಫಲವತ್ತಾಗಿರಲು ಕಾರಣವೇನು? 
  ಉತ್ತರ-ಸಟ್ಲೇಜ್, ಗಂಗಾ, ಬ್ರಹ್ಮಪುತ್ರ ಮತ್ತು ಅವುಗಳ ಉಪನದಿಗಳು ಇಲ್ಲಿ ಹರಿಯುತ್ತವೆನದಿಗಳು ಮೆಕ್ಕಲು ಮಣ್ಣನ್ನು ಸಂಚಯ ಮಾಡುವುದರಿಂದ ಈ ಭಾಗವು ಹೆಚ್ಚು ಫಲವತ್ತತೆಯಿಂದ ಕೂಡಿರುತ್ತದೆ.
  ೨) ನದಿಬಯಲಿನಲ್ಲಿ ಜನರು ಹೆಚ್ಚಾಗಿ ವಾಸಿಸಲು ಬಯಸುತ್ತಾರೆ. ಏಕೆ? 
  ಉತ್ತರ-ನದಿ ಮೈದಾನಗಳು ಇರುವಲ್ಲಿ ನೀರಿನ ಸೌಲಭ್ಯ ದೊರಕುವುದರಿಂದ ಕೃಷಿ ಚಟುವಟಿಕೆಗಳು, ಸಾರಿಗೆ-ಸೌಕರ್ಯ, ಪ್ರಾಣಿಸಾಕಾಣಿಕೆ, ವ್ಯಾಪಾರ-ವಹಿವಾಟು, ಕೈಗಾರಿಕೆಗಳು ಅಭಿವೃದ್ಧಿ ಹೊಂದುವುವು. ಆದ್ದರಿಂದ ಈ ಭಾಗದಲ್ಲಿ ಜನರು ಹೆಚ್ಚಾಗಿ ನೆಲೆಸುತ್ತಾರೆ.
  ೩) ನಮ್ಮ ರಾಜ್ಯದ ಪ್ರಮುಖ ನದಿಗಳು ಹಾಗೂ ಬೆಳೆಗಳನ್ನು ಪಟ್ಟಿಮಾಡು.
  5th EVS Chapter 15 Answers Kannada Medium
  ಇಂದು ಗಂಗಾನದಿಯ ಶುದ್ಧೀಕರಣದ ಕೆಲಸಗಳು ನಡೆಯುತ್ತಿವೆ. ಶುದ್ಧೀಕರಿಸುವುದು ಅವಶ್ಯವೆ? ನದಿಗಳನ್ನು ಶುದ್ಧೀಕರಿಸುವುದರಿಂದ ಆಗುವ ಅನುಕೂಲಗಳೇನು? ಇಲ್ಲಿ ಬರೆ.
  ___________________________________________________
  ___________________________________________________
  ___________________________________________________
  ___________________________________________________
  ___________________________________________________
  ಉತ್ತರ-ಇಂದು ಮಾನವನ ಹಲವು ಚಟುವಟಿಕೆಗಳಿಂದ ನದಿಗಳು ಕಲುಷಿತಗೊಂಡಿವೆ, ಇಂತಹ ನದಿಗಳ ನೀರನ್ನು ಶುದ್ಧಗೊಳಿಸುವುದರಿಂದ ಕುಡಿಯಲು ಶುದ್ಧ ನೀರು ದೊರೆಯುತ್ತದೆ,ಜಲಚರಗಳು ಸ್ವಚ್ಛ ನೀರಿನಲ್ಲಿ ಜೀವಿಸಲು ನೆರವಾಗುತ್ತದೆ, ಪರಿಸರ ಉತ್ತಮವಾಗಿರುತ್ತದೆ.  

  ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆ.
  ೧) ಭಾರತದ ಎರಡು ಮುಖ್ಯ ಪ್ರಸ್ಥಭೂಮಿಗಳನ್ನು ಹೆಸರಿಸು. 
  ಉತ್ತರ-ನರ್ಮದಾ-ಸೋನೆ ಸೀಳು ಕಣಿವೆಯು ಈ ಭೂಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಉತ್ತರದ ಭಾಗವನ್ನು ಮಾಳ್ವ ಪ್ರಸ್ಥಭೂಮಿ ಎಂದೂ, ದಕ್ಷಿಣ ಭಾಗವನ್ನು ದಖನ್ ಪ್ರಸ್ಥಭೂಮಿ ಎಂದೂ ಕರೆಯುತ್ತಾರೆ.
  ೨) ಪರ್ಯಾಯ ಪ್ರಸ್ಥಭೂಮಿಯಲ್ಲಿ ಕಂಡುಬರುವ ಪ್ರಮುಖ ಚಾರಿತ್ರಿಕ ಸ್ಥಳಗಳನ್ನು 
   ಹೆಸರಿಸು.
  ಉತ್ತರ-ಬಾದಾಮಿ, ಮೈಸೂರು, ಪಟ್ಟದಕಲ್ಲು, ಕಿತ್ತೂರು, ಮದ್ರಾಸ್, ಬೇಲೂರು, ಹಳೇಬೀಡು,ವಿಜಯನಗರ,ಹಂಪಿ. 
  ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆ.
  ಕರ್ನಾಟಕದ ಕರಾವಳಿ ಯಾವ ಸಮುದ್ರಕ್ಕೆ ಹೊಂದಿಕೊಂಡಿದೆ?
  ಉತ್ತರ-ಕರ್ನಾಟಕದ ಕರಾವಳಿ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿದೆ. 
  ಕರ್ನಾಟಕದ ಯಾವ ಜಿಲ್ಲೆಗಳು ಕರಾವಳಿ ಭಾಗಕ್ಕೆ ಸೇರುತ್ತವೆ? 
  ಉತ್ತರ-ಕರ್ನಾಟಕದ ಉಡುಪಿ,ಉತ್ತರ ಕನ್ನಡ,ದಕ್ಷಿಣ ಕನ್ನಡ ಜಿಲ್ಲೆಗಳು ಕರಾವಳಿ ಭಾಗಕ್ಕೆ ಸೇರುತ್ತವೆ.
  ಭಾರತದ ಪಶ್ಚಿಮ ಕರಾವಳಿ ಭಾಗದ ಪ್ರಮುಖ ಬೆಳೆಗಳನ್ನು ಪಟ್ಟಿಮಾಡು.
  ಉತ್ತರ-ಭಾರತದ ಪಶ್ಚಿಮ ಕರಾವಳಿ ಭಾಗದ ಪ್ರಮುಖ ಬೆಳೆಗಳು -
  ಅಡಿಕೆ,ಭತ್ತ, ಏಲಕ್ಕಿ,ಗೇರು ಬೀಜ, ತೆಂಗು,ರಬ್ಬರ್. 
  ಕರ್ನಾಟಕದ ಕಡಲ ಆಹಾರ ಪದಾರ್ಥಗಳಿಗೆ ಬಹಳ ಬೇಡಿಕೆಯಿದೆ. ರಾಜ್ಯದಿಂದ ಹೊರದೇಶಗಳಿಗೆ ಇವುಗಳನ್ನು ರಫ್ತು ಮಾಡಲಾಗುತ್ತದೆ. ಅವು ಯಾವುವು? 
  ಉತ್ತರ-ಅಡಿಕೆ,ಭತ್ತ, ಏಲಕ್ಕಿ,ಗೇರು ಬೀಜ, ತೆಂಗು,ರಬ್ಬರ್. 
  ನಮ್ಮ ಭಾರತದ ಪ್ರಸಿದ್ಧ ಬೀಚ್‌ಗಳು ಯಾವುವು ಎಂಬುದನ್ನು ತಿಳಿದು ಬರೆ.
  ಉತ್ತರ-ಉತ್ತರ ಗೋವಾದ ಕ್ಯಾಂಡೋಲಿಮ್ ಬೀಚ್. ಒಡಿಶಾದ ಬಾಲಸೋರ್‌ನಲ್ಲಿರುವ ಚಂಡಿಪುರ ಬೀಚ್. ದಕ್ಷಿಣ ಗೋವಾದ ಕ್ಯಾವೆಲೋಸಿಮ್ ಬೀಚ್. 
  ಒಡಿಶಾದ ಪುರಿಯಲ್ಲಿರುವ ನೀಲಿ ಧ್ವಜದ ಗೋಲ್ಡನ್ ಬೀಚ್. ಉತ್ತರ ಗೋವಾದ ಮಾಂಡ್ರೆಮ್ ಬೀಚ್.ದಕ್ಷಿಣ ಗೋವಾದ ಬಟರ್‌ಫ್ಲೈಬೀಚ್.ಕರ್ನಾಟಕದ ಗೋಕರ್ಣದಲ್ಲಿರುವ ಓಂ ಬೀಚ್.ಕೇರಳದ ತಿರುವನಂತಪುರಂನಲ್ಲಿರುವ ಕೋವಲಂ ಬೀಚ್.
  ಕರಾವಳಿ ಭಾಗದ ಮೀನುಗಾರರ ವೇಷಭೂಷಣ ಮತ್ತು ಆಹಾರ ಪದ್ಧತಿಯನ್ನು ಗಮನಿಸಿ. 
  ಈ ಬಗ್ಗೆ ೪ ವಾಕ್ಯಗಳನ್ನು ಬರೆ. 
  ಉತ್ತರ-ಕರಾವಳಿ ಭಾಗದ ಮೀನುಗಾರರ ವೇಷಭೂಷಣ ತುಂಬಾ ಸರಳವಾಗಿರುತ್ತದೆ. ಕಡಲಲ್ಲಿ ಮೀನು ಹಿಡಿಯುವ ಕಾರ್ಯ ಮಾಡಲು ಅನುಕೂಲಕರ ಬಟ್ಟೆ ಧರಿಸುತ್ತಾರೆ ಮತ್ತು ಇವರ ಆಹಾರ ಪದ್ಧತಿ ಕಡಲ ಉತ್ಪನ್ನಗಳಾದ ಮೀನು, ಸೀಗಡಿ ಬಳಕೆ ಹೆಚ್ಚು, ಕೆಲವು ತರಕಾರಿಗಳಾದ ಸಾಂಬಾರ್ ಸೌತೆ,ಇತರೆ ಸೊಪ್ಪುಗಳನ್ನು ಬಳಸುತ್ತಾರೆ. 
  ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳನ್ನು ಹೆಸರಿಸು.
  ಉತ್ತರ-ಪಶ್ಚಿಮ ಕರಾವಳಿಯಲ್ಲಿ ಮುಂಬೈ, ಕಾಂಡ್ಲಾ, ಮಂಗಳೂರು, ಜೆಎನ್‌ಪಿಟಿ, ಮೊರ್ಮುಗೋವ್ ಮತ್ತು ಕೊಚ್ಚಿನ್ ಬಂದರುಗಳಿವೆ. ಪೂರ್ವ ಕರಾವಳಿಯಲ್ಲಿರುವ ಬಂದರುಗಳು ಚೆನ್ನೈ, ಟುಟಿಕೋರಿನ್, ವಿಶಾಖಪಟ್ಟಣಂ, ಪರದೀಪ್, ಕೋಲ್ಕತ್ತಾ ಮತ್ತು ಎನ್ನೋರ್.
  ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆ.
  ೧) ಓಯಸಿಸ್ ಎಂದರೇನು? 
  ಉತ್ತರ-ಅಂತರ್ಜಲದ ಒರತೆಯು ಚಿಲುಮೆ ರೂಪದಲ್ಲಿ ಕಂಡುಬರುವುದನ್ನು 
  ಓಯಸಿಸ್ ಎಂದು ಕರೆಯುತ್ತಾರೆ.
  ೨) ಮರುಭೂಮಿಯ ಯಾವುದಾದರೂ ೩ ಲಕ್ಷಣಗಳನ್ನು ಬರೆ. 
  ಉತ್ತರ-ಮರುಭೂಮಿಯ ಲಕ್ಷಣಗಳು 
  • ಮರುಭೂಮಿಯು ವಿಸ್ತಾರವಾದ ಶುಷ್ಕ ಪ್ರದೇಶವಾಗಿದ್ದು, ಮರಳುಮಯವಾಗಿರುತ್ತದೆ.
  • ಬಿಸಿಲಿನ ತಾಪವಿದ್ದು, ಯಾವಾಗಲೂ ಇಲ್ಲಿ ಒಣ ಹವೆ ಇರುತ್ತದೆ. 
  • ಇಲ್ಲಿ ನೀರಿನ ಕೊರತೆಯಿದೆ. ಅಂತರ್ಜಲದ ಒರತೆಯು ಚಿಲುಮೆ ರೂಪದಲ್ಲಿಕಂಡುಬರುವುದನ್ನು ಓಯಸಿಸ್ ಎಂದು ಕರೆಯುತ್ತಾರೆ.
  • ಇಲ್ಲಿ ಸಾಮಾನ್ಯವಾಗಿ ದೀರ್ಘಕಾಲ ಬರಗಾಲ ನಿಭಾಯಿಸಬಲ್ಲ ಕುರುಚಲು ಸಸ್ಯ, ಪಾಪಸ್ ಕಳ್ಳಿಯಂತಹ ಮುಳ್ಳಿನ ಗಿಡಗಳು, ಕತ್ತಾಳೆ, ಜಾಲಿ ಗಿಡಗಳು ಕಂಡುಬರುತ್ತವೆ.
  ೩) ಕೊಟ್ಟಿರುವ ಖಾಲಿ ಜಾಗದಲ್ಲಿ ಒಂಟೆಯ ಚಿತ್ರವನ್ನು ಅಂಟಿಸಿ, ಇದರ ಬಗ್ಗೆ ೪ ವಾಕ್ಯಗಳನ್ನು ಬರೆ. 
  ಉತ್ತರ-
  5th EVS Chapter 15 Answers Kannada Medium

  ಒಂಟೆಯು ಮರುಭೂಮಿಯಲ್ಲಿ ಬದುಕಬಲ್ಲ ಪ್ರಾಣಿ. ಏಕೆಂದರೆ ಅದರ ಚಪ್ಪಟೆಯಾದ ಕಾಲುಗಳ ಗೊರಸುಗಳು ಮರಳಿನಲ್ಲಿ ನಡಿಗೆಗೆ ಯೋಗ್ಯವಾಗಿವೆ. ಅದರ ಬೆನ್ನಿನ ಮೇಲಿನ ಡುಬ್ಬವು ಅನೇಕ ದಿನಗಳವರೆಗೆ ಬೇಕಾಗುವಷ್ಟು ಮೇದಸ್ಸು ಮತ್ತು ನೀರಿನ 
  ಸಂಗ್ರಹಣೆಗೆ ಅನುಕೂಲಕರವಾಗಿದೆ. ಒಂಟೆಯು ಮರುಭೂಮಿಯ ಜನತೆಗೆ ಪ್ರಯಾಣ ಮತ್ತು ಸರಕು ಸಾಗಿಸಲು ಸಾರಿಗೆಯ ಸಾಧನವಾಗಿ ಬಳಕೆಯಾಗಿದೆ. ಆದ್ದರಿಂದಲೇ ಇದನ್ನು ಮರುಭೂಮಿಯ ಹಡಗು ಎಂದು ಕರೆಯುತ್ತಾರೆ. 
  ನಿನಗೊಂದು ಸವಾಲು 
  ಭೂಮಿ ಕಾಯುತ್ತಿದೆ. ಅಂತರ್ಜಲ ಬತ್ತುತ್ತಿದೆ. ಹಿಮಾಲಯ ಪರ್ವತಗಳಲ್ಲಿ ಹಿಮ ಕರಗುತ್ತಿದೆ ಇದಕ್ಕೆ ಕಾರಣವೇನು?ಆಲೋಚಿಸು ಗೆಳೆಯರೊಂದಿಗೆ ಚರ್ಚಿಸಿ, ಇಲ್ಲಿ ಬರೆ.
  ಉತ್ತರ-ಮಾನವನು ತನ್ನ ಸ್ವಾರ್ಥಕ್ಕಾಗಿ,ಕಾಡುಗಳನ್ನು ಮರಗಳನ್ನು ಕಡಿದು, ಅಭಿವೃದ್ಧಿ ಎಂಬ ಹೆಸರಿನಲ್ಲಿ ಕಟ್ಟಡಗಳು, ರಸ್ತೆಗಳು, ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದಾರೆ. ಹಲವು ಕಾರ್ಖಾನೆಗಳಿಂದ ಬರುವ ಅಪಾಯಕಾರಿ ಅನಿಲಗಳು,ಕಲುಷಿತ ನೀರು,ನದಿಗಳನ್ನು ಸೇರುತ್ತಿದೆ. ವಿವಿಧ ವಾಹನಗಳು ಬಿಡುವ ವಿಷಕಾರಿ ಅನಿಲಗಳಿಂದ ನಮ್ಮ ಪರಿಸರ ಕಲುಷಿತಗೊಂಡು ಈ ಸಮಸ್ಯೆಗಳು ಉಂಟಾಗುತ್ತಿವೆ. 
  ರೇಡಿಯೊ, ಟಿವಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಸಾರವಾಗುವ ಹವಾಮಾನ ವರದಿಗಳಿಂದ 
  ನಮಗಾಗುವ ಅನುಕೂಲಗಳೇನು? ಪಟ್ಟಿಮಾಡು.
  ಉತ್ತರ-ರೇಡಿಯೊ, ಟಿವಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಸಾರವಾಗುವ ಹವಾಮಾನ ವರದಿಗಳಿಂದ 
  ಮಳೆಯ ಬಗ್ಗೆ ಮೊದಲೇ ಮಾಹಿತಿ ಸಿಗುತ್ತದೆ. 
  ಮೀನುಗಾರರಿಗೆ ಕಡಲಲ್ಲಿ ಇಳಿದು ಮೀನುಗಾರಿಕೆ ಮಾಡುವ ಮುನ್ನ ಮುನ್ನೆಚ್ಚ್ಚರಿಕೆ ಪಡೆಯ ಬಹುದು. 
  ಹೆಚ್ಚಿನ ಮಳೆಯ ಬಗ್ಗೆ ಮಾಹಿತಿ ಸಿಕ್ಕಾಗ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬಹುದು. 
  ತಿಳಿದು ಬರೆ.
  ೧) ಭಾರತದ ಯಾವುದಾದರೂ ೩ ಸಂರಕ್ಷಿಸಲ್ಪಟ್ಟ ಅರಣ್ಯ ಪ್ರದೇಶಗಳನ್ನುಹೆಸರಿಸು. 
  ಉತ್ತರ-ನಾಗರಹೊಳೆ, ಭದ್ರಾ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ 
  ೨) ಇಂದು ಕಣ್ಮರೆಯಾಗುತ್ತಿರುವ ಪ್ರಾಣಿಗಳ ಬಗ್ಗೆ ಗೆಳೆಯ/ಗೆಳತಿಯರೊಂದಿಗೆ ಚರ್ಚಿಸು.
   ಅಂತಹ ೩ ಪ್ರಾಣಿಗಳನ್ನು ಹೆಸರಿಸು. 
  ಉತ್ತರ-ಕಾಡು ಪಾಪ, ಲಂಗೂರ್ ಕೋತಿಗಳು, ಚಿರತೆ, ಹುಲಿ. 
  ೩) ಅರಣ್ಯನಾಶದಿಂದ ಎದುರಾಗುವ ತೊಂದರೆಗಳಾವುವು? ಗೆಳೆಯ/ಗೆಳತಿಯರೊಂದಿಗೆ 
   ಚರ್ಚಿಸಿ, ಇಲ್ಲಿ ಬರೆ.
  ಉತ್ತರ-ಮಳೆಯ ಕೊರತೆ ಉಂಟಾಗುತ್ತದೆ. ಇದರಿಂದ ಕುಡಿಯುವ ನೀರು ಹಾಗು ವ್ಯವಸಾಯಕ್ಕಾಗಿ ನೀರಿನ ಕೊರತೆ ಉಂಟಾಗುತ್ತದೆ. 
  ವಿವಿಧ ಕಾಡು ಪ್ರಾಣಿಗಳಿಗೆ ವಾಸ ಸ್ಥಳದ ಕೊರತೆ ಉಂಟಾಗಿ, ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಉಂಟಾಗುತ್ತದೆ. 
  ವಾಯು ಮಾಲಿನ್ಯ ದಿಂದ ಭೂಮಿಯ ಉಷ್ಣತೆ ಹೆಚ್ಚಾಗುತ್ತದೆ,ಹಲವು ಉಸಿರಾಟ ಸಂಬಂಧಿತ ರೋಗಗಳಿಂದ ಬಾಳಬೇಕಾಗುತ್ತದೆ. 
  ೪) ನಿನ್ನ ಸುತ್ತಮುತ್ತಲಿನ ಪರಿಸರದಲ್ಲಿ ಯಾವ ಯಾವ ಜೀವಿಗಳು ವಾಸಿಸುತ್ತಿವೆ ಎಂಬುದನ್ನು 
  ವೀಕ್ಷಿಸಿ ಪಟ್ಟಿಮಾಡು.
  ಉತ್ತರ-

  ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭಾರ್ತಿ ಮಾಡಿ. 
  _________ ಶಿಖರವು ಪ್ರಪಂಚದಲ್ಲೇ ಎತ್ತರವಾದುದು. 
  ಉತ್ತರ-ಮೌಂಟ್ ಎವರೆಸ್ಟ್
  _________ಭಾರತದ ಅತ್ಯಂತ ಎತ್ತರವಾದ ಶಿಖರ.
  ಉತ್ತರ-ಮೌಂಟ್ ಗಾಡ್ವಿನ್ ಆಸ್ಟಿನ್ ಅಥವಾ ಏ೨
  ___________ಕರ್ನಾಟಕದ ಅತಿ ಎತ್ತರವಾದ ಶಿಖರ.
  ಉತ್ತರ-ಮುಳ್ಳಯ್ಯನಗಿರಿ
  ________ದಕ್ಷಿಣ ಭಾರತದ ಎತ್ತರವಾದ ಶಿಖರ.
  ಉತ್ತರ-ಅನೈಮುಡಿ 
  ಕರ್ನಾಟಕದ ಕೊಲ್ಲೂರು,ಧರ್ಮಸ್ಥಳ ,ಸುಬ್ರಮಣ್ಯ ದೇವಾಲಯಗಳ ಒಳಗೋಡೆಗಳನ್ನು_______ ನಿರ್ಮಿಸಲಾಗಿದೆ.
  ಉತ್ತರ-ಮರಗಳಿಂದ 
  ಕಾಶ್ಮೀರ ಕಣಿವೆಗಳಲ್ಲಿ ಮನೆಗಳನ್ನು ________ ದಿಮ್ಮಿಗಳಿಂದ ನಿರ್ಮಿಸಿದ್ದಾರೆ.
  ಉತ್ತರ-ಮರದ
  ರಾಯಚೂರು ಮತ್ತು ಆಂಧ್ರಪ್ರದೇಶದ ಕೆಲವು ಭಾಗದಲ್ಲಿ ಕಟ್ಟಡಗಳನ್ನು _________ ಕಲ್ಲಿನಿಂದ ನಿರ್ಮಿಸಿದ್ದಾರೆ.
  ಉತ್ತರ-ಕಡಪ 
  ಇತ್ತೀಚೆಗೆ ಬಾಗಲಕೋಟೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣದಲ್ಲಿ__________ ಶಿಲೆಯ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ.
  ಉತ್ತರ-ಕೆಂಪು ಗ್ರಾನೈಟ್
  ಕರ್ನಾಟಕದ ಬೇಲೂರು, ಹಳೇಬೀಡು ಮತ್ತುತಮಿಳುನಾಡಿನ ಬಹಳಷ್ಟು ದೇವಾಲಯಗಳು ವಿಶಾಲವಾಗಿದ್ದು, ಇವು ಕಲ್ಲಿನಿಂದ________ ನಿರ್ಮಾಣಗೊಂಡಿವೆ.
  ಉತ್ತರ-ಬಳಪದ ಕಲ್ಲು) 
  ಕನಾರ್ಟಕದ __________ ಎಂಬಲ್ಲಿ ಮರಳುಗಲ್ಲಿನ ಗುಹಾಂತರ ದೇವಾಲಯಗಳು ಇವೆ.
  ಉತ್ತರ-ಬಾದಾಮಿ 

  5th EVS Chapter 14 Our India- Physical Diversity FAQS-

  ಪ್ರಾಕೃತಿಕ ಲಕ್ಷಣ ಎಂದರೇನು?

  ಎತ್ತರವಾದ ಪರ್ವತ, ಆಳವಾದ ಕಣಿವೆ-ಕಂದರ, ಸಮತಟ್ಟಾದ ಮೈದಾನ, ಪ್ರಸ್ಥಭೂಮಿ ಮೊದಲಾದ ವೈವಿಧ್ಯವನ್ನು ನಾವು ನೋಡಬಹುದು. ಈ ರೀತಿಯಲ್ಲಿ ಕಂಡುಬರುವ ಭೂ ಮೇಲ್ಮೈನ ವಿಶೇಷತೆಗಳನ್ನು ಅಲ್ಲಿನ ಪ್ರಾಕೃತಿಕ ಲಕ್ಷಣ ಎನ್ನುವರು.

  ಹಿಮಾಲಯ ಪರ್ವತಗಳ ಪ್ರಮುಖ ಲಕ್ಷಣಗಳು ಯಾವುವು?

  ಹಿಮಾಲಯ ಪರ್ವತಗಳ ಪ್ರಮುಖ ಲಕ್ಷಣಗಳು ಹಿಮದಿಂದ ಆವರಿಸಿರುತ್ತವೆ. ಹೀಗಾಗಿ ಇವುಗಳನ್ನು ಹಿಮಾಲಯ ಪರ್ವತಗಳು ಎನ್ನುವರು. ಅತಿ ಎತ್ತರವಾದ ಶಿಖರಗಳನ್ನು ಹೊಂದಿರುತ್ತವೆ. ಇಲ್ಲಿ ಆಳವಾದ ಕಣಿವೆ ಮತ್ತು ಕಂದರಗಳಿರುತ್ತವೆ. ಹಿಮನದಿ ಮತ್ತು ಎತ್ತರವಾದ ಪರ್ವತ ಘಾಟಿಗಳಿಂದ ಕೂಡಿರುತ್ತವೆ. ಇಲ್ಲಿ ಬಿಸಿನೀರಿನ ಬುಗ್ಗೆಗಳಿವೆ. ವಿವಿಧ ಸಸ್ಯ-ಪ್ರಾಣಿ ಪ್ರಭೇದಗಳನ್ನು ಹೊಂದಿವೆ.

  ಹಿಮಾಲಯ ಪರ್ವತ ಶ್ರೇಣಿಗಳ ಅನುಕೂಲಗಳು ಏನು?

  ಹಿಮಾಲಯ ಪರ್ವತ ಶ್ರೇಣಿಗಳ ಅನುಕೂಲಗಳು- ಅತಿ ಶೀತ ಪ್ರದೇಶವಾಗಿರುವ ಮಧ್ಯ ಏಷ್ಯಾದಿಂದ ಬೀಸಿಬರುವ ಶೀತಮಾರುತಗಳನ್ನು ಇವು ತಡೆಯುತ್ತವೆ. ಉತ್ತರ ಭಾರತದ ನದಿಗಳಿಗೆ ಉಗಮ ಸ್ಥಾನಗಳಾಗಿವೆ. ಮಾನ್ಸೂನ್ ಮಾರುತಗಳನ್ನು ತಡೆದು ಅಧಿಕ ಮಳೆಯಾಗಲು ಕಾರಣವಾಗಿವೆ. ಬೃಹತ್ ಗೋಡೆಯಂತೆ ಉತ್ತರದ ನೈಸರ್ಗಿಕ ಗಡಿಯಾಗಿದ್ದು, ಪರಕೀಯರ ದಾಳಿಯನ್ನು ನಿಯಂತ್ರಿಸುತ್ತವೆ.

  ಪ್ರಸ್ಥಭೂಮಿಯ ಪ್ರಮುಖ ಲಕ್ಷಣಗಳು ಪ್ರಮುಖ ಅನುಕೂಲಗಳು ಏನು?

  ಸಿಂಧೂ, ಗಂಗಾ, ಯಮುನಾ, ಬ್ರಹ್ಮಪುತ್ರ ನದಿಗಳು ಈ ಪರ್ವತ ಶ್ರೇಣಿಯಲ್ಲಿಯೇ ಹುಟ್ಟಿ ಹರಿಯುತ್ತವೆ.

  ಒಂದು ನದಿ ಹೇಗೆಲ್ಲಾ ಕಲುಷಿತವಾಗುತ್ತದೆ?

  ಅನುಪಯುಕ್ತ ವಸ್ತುಗಳನ್ನು ನದಿಗಳ ನೀರಿನಲ್ಲಿ ಹಾಕಲಾಗುತ್ತಿದೆ. ವಿವಿಧ ರಾಸಾಯನಿಕ ಬಣ್ಣಗಳ ಲೇಪನದ ವಿಗ್ರಹ / ಮೂರ್ತಿಗಳನ್ನು ನೀರಿನಲ್ಲಿ ಬಿಡಲಾಗುತ್ತಿದೆ. ಕೈಗಾರಿಕೆಗಳಿಂದ ಬಿಡುಗಡೆಯಾಗುವ ರಾಸಾಯನಿಕ ತ್ಯಾಜ್ಯಗಳು ನದಿಗಳ ನೀರಿಗೆ ಸೇರುತ್ತವೆ. ಮಹಾನಗರಗಳಲ್ಲಿ ಉತ್ಪತ್ತಿಯಾಗುವ ಸಾವಿರಾರು ಟನ್‌ಗಳಷ್ಟು ವಿವಿಧ ರೂಪದ ತ್ಯಾಜ್ಯಗಳು ಸೇರಿ ನದಿಯ ನೀರನ್ನು ವಿಷವನ್ನಾಗಿ ಮಾಡಿವೆ. ಗಣಿಗಾರಿಕೆಯಿಂದಲೂ ನದಿಗಳು ಕಲುಷಿತವಾಗುತ್ತವೆ. ಉದಾಹರಣೆಗೆ, ಕಾಳಿ ನದಿ, ಭದ್ರಾ ನದಿ ಇತ್ಯಾದಿ.

  ಪ್ರಸ್ಥಭೂಮಿಯ ಪ್ರಮುಖ ಲಕ್ಷಣಗಳು ಪ್ರಮುಖ ಅನುಕೂಲಗಳು ಏನು?

  ಪ್ರಸ್ಥಭೂಮಿಯ ಪ್ರಮುಖ ಲಕ್ಷಣಗಳು ಪ್ರಸ್ಥ ಭೂಮಿಯು ಸುತ್ತ ಮುತ್ತಲಿನ ಪ್ರದೇಶಗಳಿಗಿಂತ ಮೇಲ್ಭಾಗದಲ್ಲಿ ಸಮತಟ್ಟಾಗಿರುವ ಹಾಗೂ ಕಡಿದಾದ ಬದಿಗಳನ್ನುಳ್ಳ ಭೂಪ್ರದೇಶವನ್ನು ಹೊಂದಿರುತ್ತದೆ. ಈ ಭೂಭಾಗವು ಸಾಕಷ್ಟು ವಿಶಾಲವಾಗಿದ್ದು, ಸಮತಟ್ಟಾಗಿರುತ್ತದೆ. ದಖನ್ ಪ್ರಸ್ಥಭೂಮಿಯು ಭಾರತದ ಅತಿದೊಡ್ಡ ಪ್ರಸ್ಥಭೂಮಿಯಾಗಿದೆ. ಇದು ಪುರಾತನ ಗಟ್ಟಿ ಶಿಲೆಗಳಿಂದ ರಚನೆಯಾಗಿದೆ. ಪ್ರಮುಖ ಅನುಕೂಲಗಳು ಪರ್ಯಾಯ ಪ್ರಸ್ಥಭೂಮಿಯು ಸಮೃದ್ಧ ಖನಿಜ ಸಂಪತ್ತನ್ನು ಹೊಂದಿದೆ. ಇಲ್ಲಿ ಹರಿಯುವ ನದಿಗಳು ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿವೆ. ಇಲ್ಲಿ ಜಲಪಾತಗಳಿದ್ದು, ಜಲವಿದ್ಯುತ್ ತಯಾರಿಕೆಗೆ ಇವು ಉಪಯುಕ್ತವಾಗಿವೆ. ಕೃಷಿ, ಪ್ರಾಣಿ ಸಾಕಣೆ ಮತ್ತು ಕೈಗಾರಿಕೆಗೆ ಅನುಕೂಲಕರವಾಗಿವೆ.

  ಬೀಚ್‌ಗಳು ಎಂದರೇನು? ಕರ್ನಾಟಕದ ಪ್ರಸಿದ್ಧ ಬೀಚ್ಗಳು ಯಾವುವು?

  ಭೂಮಿಗೆ ಹೊಂದಿಕೊಂಡಂತೆ ಇರುವ ಕಡಿದಾದ ಅಂಚುಗಳಿಲ್ಲದ ಸಮತಟ್ಟಾದ ವಿಶಾಲ ಕಡಲತೀರಗಳು ಇವೆ. ಇವುಗಳನ್ನು ಬೀಚ್‌ಗಳು ಎಂದು ಕರೆಯುತ್ತಾರೆ.ಕರ್ನಾಟಕದ ಉಳ್ಳಾಲ, ಮಲ್ಪೆ, ಕಾಪು, ಓಂ ಹಾಗೂ ಮರವಂತೆ ಬೀಚ್‌ಗಳು ನೋಡಲು ಸುಂದರವಾಗಿವೆ.

  ದಕ್ಷಿಣ ಭಾರತದ ನದಿಗಳ ಪ್ರಮುಖ ಲಕ್ಷಣಗಳನ್ನು ಬರೆಯಿರಿ.

  ದಕ್ಷಿಣ ಭಾರತದ ನದಿಗಳು : ದಕ್ಷಿಣ ಭಾರತದ ನದಿಗಳನ್ನು ಪೂರ್ವಕ್ಕೆ ಹರಿಯುವ ಮತ್ತು ಪಶ್ಚಿಮಕ್ಕೆ ಹರಿಯುವ ನದಿಗಳೆಂದು ವಿಂಗಡಿಸಬಹುದು. ಪೂರ್ವಕ್ಕೆ ಹರಿಯುವ ಪ್ರಮುಖ ಮಹಾನದಿ,ಗೋದಾವರಿ,ಕೃಷ್ಣಾ,ಪಾಲಾರ್,ಪೆನ್ನಾರ್,ಕಾವೇರಿ ನದಿಗಳು. ಇವು ಆಗ್ನೇಯ ಮತ್ತು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತವೆ. ಪಶ್ಚಿಮಕ್ಕೆ ಹರಿಯುವ ಪ್ರಮುಖ ನದಿಗಳೆಂದರೆ-ನರ್ಮದ, ತಾಪಿ, ಶರಾವತಿ, ಕಾಳಿ, ನೇತ್ರಾವತಿ,ಜುವಾರಿ ಮತ್ತು ಪೆರಿಯಾರ್ ನದಿಗಳು ಅರಬ್ಬೀಸಮುದ್ರವನ್ನು ಸೇರುವವು. ಇವು ಚಿಕ್ಕವು ಮತ್ತು ತೀವ್ರಗತಿಯಲ್ಲಿ ಹರಿಯುತ್ತವೆ ಹಾಗೂ ಜಲಪಾತಗಳನ್ನು ಸೃಷ್ಟಿಸಿ, ಜಲವಿದ್ಯುಚ್ಛಕ್ತಿ ತಯಾರಿಕೆಗೆ ನೆರವಾಗುತ್ತವೆ.

  ಮಾರುತಗಳು ಎಂದರೇನು?

  ನಿರ್ದಿಷ್ಟ ಕಾಲದಲ್ಲಿ ಅಧಿಕ ಒತ್ತಡವುಳ್ಳ ಭಾಗದಿಂದ ಕಡಿಮೆ ಒತ್ತಡವುಳ್ಳ ಭಾಗಗಳಿಗೆ ಬೀಸುವಂತಹ ವಾಯುವಿನ ಚಲನೆಯನ್ನು ಮಾರುತಗಳು ಎನ್ನುತ್ತಾರೆ. ಒಂದು ಋತುವಿನಿಂದ ಮತ್ತೊಂದು ಋತುವಿಗೆ ದಿಕ್ಕನ್ನು ಬದಲಿಸಿಕೊಂಡು ಬೀಸುವ ಮಾರುಗಳಿಗೆ ಋತುಕಾಲಿಕ ಮಾರುತಗಳು ಎನ್ನುವರು. ಉದಾಹರಣೆಗೆ, ಮಾನ್ಸೂನ್ ಮಾರುತಗಳು.


  YOU CAN CHECK 5TH EVS NOTES OF OTHER CHAPTERS HERE 👇👇👇
  ಕಾಮೆಂಟ್‌‌ ಪೋಸ್ಟ್‌ ಮಾಡಿ

  0 ಕಾಮೆಂಟ್‌ಗಳು
  * Please Don't Spam Here. All the Comments are Reviewed by Admin.