Transportation In Animals And Plants Class 7 Questions And Answers In Kannada Medium

transportation in animals and plants class 7 questions and answers in kannada medium 7ನೇ ತರಗತಿ ವಿಜ್ಞಾನ ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ  Pranigalalli Mattu Sasyagalalli Saganike ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Transportation In Animals And Plants Class 7 Questions And Answers In Kannada Medium

    transportation in animals and plants class 7 solutions, 7th Class Pranigalalli Mattu Sasyagalalli Saganike Science Notes 7ನೇ ತರಗತಿ ಪ್ರಾಣಿಗಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 7th Standard Science Chapter 11 Notes Question Answer Mcq Pdf Download in Kannada Medium 2023 Kseeb Solutions For Class 7 Science Chapter 11 Notes 7th Std Science 11 Lesson Question Answer in Kannada Medium, Transportation in Animals and Plants. 

    Class 7 ScienceTransportation In Animals And Plants-Important Points

      • ದೇಹದಲ್ಲಿ ಪರಿಚಲನೆಗೊಳ್ಳುತ್ತಿರುವ ರಕ್ತವು ಬಹಳಷ್ಟು ಪ್ರಾಣಿಗಳಲ್ಲಿ ಆಹಾರ ಮತ್ತು ಆಕ್ಸಿಜನ್‌ಅನ್ನು ದೇಹದ ವಿವಿಧ ಜೀವಕೋಶಗಳಿಗೆ ವಿತರಿಸುತ್ತದೆ. ತ್ಯಾಜ್ಯಪದಾರ್ಥಗಳನ್ನು ಕೂಡ ದೇಹದ ವಿವಿಧ ಭಾಗಗಳಿಂದ ವಿಸರ್ಜನೆಗೆ ಅದು ಕೊಂಡೊಯ್ಯುತ್ತದೆ.
      • ಪರಿಚಲನಾವ್ಯೂಹವು ಹೃದಯ ಮತ್ತು ರಕ್ತನಾಳಗಳನ್ನು ಒಳಗೊಂಡಿದೆ.
      • ಮಾನವರಲ್ಲಿ ರಕ್ತವು ಅಪಧಮನಿ ಮತ್ತು ಅಭಿಧಮನಿಗಳ ಮೂಲಕ ಹರಿಯುತ್ತದೆ ಮತ್ತು ಹೃದಯವು ರಕ್ತವನ್ನು ಪಂಪ್ ಮಾಡುವ ಅಂಗದಂತೆ ಕೆಲಸ ಮಾಡುತ್ತದೆ.
      • ರಕ್ತವು ಪ್ಲಾಸ್ಮಾ, ಕೆಂಪು ರಕ್ತಕಣ, ಬಿಳಿ ರಕ್ತಕಣ ಮತ್ತು ಕಿರುತಟ್ಟೆಗಳನ್ನು ಒಳಗೊಂಡಿದೆ. ಹಿಮೋಗ್ಲೋಬಿನ್ ಎಂಬ ಕೆಂಪುವರ್ಣಕ ಇರುವುದರಿಂದ ರಕ್ತವು ಕೆಂಪು ಬಣ್ಣದಲ್ಲಿದೆ.
      • ವಯಸ್ಕ ಮಾನವನ ಹೃದಯವು ನಿಮಿಷಕ್ಕೆ ೭೦ ರಿಂದ ೮೦ ಬಾರಿ ಬಡಿದುಕೊಳ್ಳುತ್ತದೆ. ಇದಕ್ಕೆ ಹೃದಯದ ಬಡಿತ ಎನ್ನುವರು.
      • ಅಪಧಮನಿಗಳು ರಕ್ತವನ್ನು ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುತ್ತವೆ.
      • ಅಭಿಧಮನಿಗಳು ರಕ್ತವನ್ನು ದೇಹದ ಎಲ್ಲಾ ಭಾಗಗಳಿಂದ ಹೃದಯಕ್ಕೆ ಹಿಂತಿರುಗಿಸುತ್ತವೆ.
      • ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರ ತೆಗೆಯುವುದಕ್ಕೆ ವಿಸರ್ಜನೆ ಎನ್ನುವರು.
      • ಮಾನವನ ವಿಸರ್ಜನಾಂಗವ್ಯೂಹವು ಎರಡು ಮೂತ್ರಜನಕಾಂಗಗಳು, ಎರಡು ಮೂತ್ರನಾಳಗಳು, ಮೂತ್ರಕೋಶ ಮತ್ತು ಯೂರಿತ್ರಾವನ್ನು ಒಳಗೊಂಡಿದೆ.
      • ಯೂರಿಯಾ ಮತ್ತು ಲವಣಗಳು ನೀರಿನೊಂದಿಗೆ ಬೆವರಿನ ರೂಪದಲ್ಲಿ ಹೊರ ಹೋಗುತ್ತವೆ.
      • ನೀರಿನಲ್ಲಿ ನೇರವಾಗಿ ಕರಗುವ ಅಮೋನಿಯಾದಂತಹ ತ್ಯಾಜ್ಯಪದಾರ್ಥಗಳನ್ನು ಮೀನು ವಿಸರ್ಜಿಸುತ್ತದೆ.
      • ಪಕ್ಷಿ, ಕೀಟ ಮತ್ತು ಹಲ್ಲಿಗಳು ಅರ್ಧಘನ ರೂಪದಲ್ಲಿ ಯೂರಿಕ್ ಆಮ್ಲವನ್ನು ವಿಸರ್ಜಿಸುತ್ತವೆ.
      • ಮಣ್ಣಿನಲ್ಲಿರುವ ನೀರು ಮತ್ತು ಖನಿಜ ಪೆÇÃಷಕಗಳು ಬೇರುಗಳಿಂದ ಹೀರಿಕೊಳ್ಳಲ್ಪಡುತ್ತವೆ.
      • ಕ್ಸೈಲಂ ಎಂಬ ವಾಹಕ ಅಂಗಾಂಶದ ಮೂಲಕ ನೀರಿನೊಂದಿಗೆ ಪೋಷಕಗಳು ಇಡೀ ಸಸ್ಯಕ್ಕೆ ಸಾಗಿಸಲ್ಪಡುತ್ತವೆ.
      • ಸಸ್ಯದ ವಿವಿಧ ಭಾಗಗಳಿಗೆ ಆಹಾರವನ್ನು ಸಾಗಿಸುವ ವಾಹಕ ಅಂಗಾಂಶ ಫ್ಲೋಯಂ 
      • ಬಾಷ್ಪವಿಸರ್ಜನೆಯಲ್ಲಿ ಪತ್ರರಂಧ್ರಗಳ ಮೂಲಕ ಸಸ್ಯಗಳ ಬಹಳಷ್ಟು ನೀರು ಆವಿಯ ರೂಪದಲ್ಲಿ ನಷ್ಟವಾಗುತ್ತದೆ.
      • ಬೇರಿನ ಮೂಲಕ ಮಣ್ಣಿನಿಂದ ಹೀರಿಕೆಯಾದ ನೀರು ಸಸ್ಯದ ಕಾಂಡ ಮತ್ತು ಎಲೆಗಳಿಗೆ ತಲುಪುವಂತೆ ಮೇಲಕ್ಕೆ ಎಳೆಯಲು ಬೇಕಾದ ಬಲವನ್ನು ಬಾಷ್ಪವಿಸರ್ಜನೆಯು ಉಂಟುಮಾಡುತ್ತದೆ.

      Transportation In Animals And Plants Class 7 ಅಭ್ಯಾಸಗಳು-

      ೧. ಕಾಲಂ - I ರಲ್ಲಿ ಕೊಟ್ಟಿರುವ ರಚನೆಗಳನ್ನು ಕಾಲಂ - II ರಲ್ಲಿ ಕೊಟ್ಟಿರುವ ಅವುಗಳ ಕಾರ್ಯಗಳೊಂದಿಗೆ ಹೊಂದಿಸಿ. 

      ಕಾಲಂ - I ಕಾಲಂ - I
      i) ಪತ್ರರಂಧ್ರ (ಎ) ನೀರಿನ ಹೀರುವಿಕೆ
      (ii) ಕ್ಸೈಲಂ (ಬಿ) ಬಾಷ್ಪವಿಸರ್ಜನೆ
      (iii) ಬೇರು ರೋಮಗಳು (ಸಿ) ಆಹಾರ ಸಾಗಾಣಿಕೆ
      (iv) ಫ್ಲೋಯಂ (ಡಿ) ನೀರಿನ ಸಾಗಾಣಿಕೆ
      (ಇ) ಕಾರ್ಬೊಹೈಡ್ರೇಟ್‌ಗಳ ಸಂಶ್ಲೇಷಣೆ

      ಉತ್ತರ-

      ಕಾಲಂ - I ಕಾಲಂ - I
      i) ಪತ್ರರಂಧ್ರ (ಬಿ) ಬಾಷ್ಪವಿಸರ್ಜನೆ
      (ii) ಕ್ಸೈಲಂ (ಡಿ) ನೀರಿನ ಸಾಗಾಣಿಕೆ
      (iii) ಬೇರು ರೋಮಗಳು (ಎ) ನೀರಿನ ಹೀರುವಿಕೆ
      (iv) ಫ್ಲೋಯಂ (ಸಿ) ಆಹಾರ ಸಾಗಾಣಿಕೆ

      ೨. ಬಿಟ್ಟ ಪದ ತುಂಬಿ :

      (i) ಹೃದಯದಿಂದ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವುದು __________ .

      ಉತ್ತರ-ಅಪಧಮನಿಗಳು

      (ii) ಹಿಮೋಗ್ಲೋಬಿನ್ ಹೊಂದಿರುವ ಕೋಶಗಳು ____________ .

      ಉತ್ತರ-ಕೆಂಪು ರಕ್ತಕಣಗಳು

      Transportation In Animals And Plants Class 7 Questions And Answers In Kannada Medium

      (iii) ಅಭಿಧಮನಿ ಮತ್ತು ಅಪಧಮನಿಗಳನ್ನು ಸೇರಿಸುವ ಜಾಲ _____________ .

      ಉತ್ತರ-ಲೋಮನಾಳಗಳು

      Transportation In Animals And Plants Class 7 Questions And Answers In Kannada Medium

      (iv) ಹೃದಯದ ಲಯಬದ್ಧ ಸಂಕುಚನ ಮತ್ತು ವಿಕಸನವನ್ನು ___________ ಎನ್ನುವರು.

      ಉತ್ತರ-ಹೃದಯ ಬಡಿತ 

      (v) ಮಾನವರಲ್ಲಿ ಮುಖ್ಯವಾದ ತ್ಯಾಜ್ಯ ಉತ್ಪನ್ನ __________ .

      ಉತ್ತರ-ಯೂರಿಯಾ

      (vi) ಬೆವರಿನಲ್ಲಿರುವುದು ನೀರು ಮತ್ತು _________ .

      ಉತ್ತರ-ಲವಣಗಳು

      (vii) ಮೂತ್ರಜನಕಾಂಗಗಳು ತ್ಯಾಜ್ಯಪದಾರ್ಥಗಳನ್ನು ಹೊರಹಾಕುವ ದ್ರವಕ್ಕೆ ________ ಎನ್ನುವರು.

      ಉತ್ತರ-ಮೂತ್ರ

      Transportation In Animals And Plants Class 7 Questions And Answers In Kannada Medium


      (viii) ಮರಗಳಲ್ಲಿ ನೀರು ಹೆಚ್ಚು ಎತ್ತರಕ್ಕೆ ತಲುಪುವಂತೆ ಮಾಡುವ ಮೇಲ್ಮುಖ ಸೆಳೆತವನ್ನು ಉಂಟುಮಾಡುವ ಕ್ರಿಯೆ ___________ .

      ಉತ್ತರ-ಭಾಷ್ಪ ವಿಸರ್ಜನೆ.

      Transportation In Animals And Plants Class 7 Questions And Answers In Kannada Medium

      ೩. ಸರಿಯಾದ ಉತ್ತರವನ್ನು ಆರಿಸಿ

      (ಎ) ಸಸ್ಯಗಳಲ್ಲಿ ನೀರು ಇವುಗಳ ಮೂಲಕ ಸಾಗಿಸಲ್ಪಡುತ್ತದೆ.

      (i) ಕ್ಸೈಲಂ

       (ii) ಪ್ಲೋಯಮ್

      (iii) ಪತ್ರರಂಧ್ರ

       (iv) ಬೇರು ರೋಮ

      ಉತ್ತರ-(i) ಕ್ಸೈಲಂ

      (ಬಿ) ಸಸ್ಯಗಳನ್ನು ಇಲ್ಲಿ ಇಡುವುದರ ಮೂಲಕ ಬೇರುಗಳಿಂದ ನೀರಿನ ಹೀರುವಿಕೆಯನ್ನು ಹೆಚ್ಚಿಸಬಹುದು.

      (i) ನೆರಳಿನಲ್ಲಿ 

      (ii) ಮಂದ ಬೆಳಕಿನಲ್ಲಿ

      (iii) ಫ್ಯಾನ್‌ನ ಅಡಿಯಲ್ಲಿ 

      (iv) ಪಾಲಿಥೀನ್ ಚೀಲವನ್ನು ಸುತ್ತಿ.

      ಉತ್ತರ-(iii) ಫ್ಯಾನ್‌ನ ಅಡಿಯಲ್ಲಿ 

      Transportation In Animals And Plants Class 7 Questions And Answers In Kannada Medium

      ೪. ಸಸ್ಯ ಅಥವಾ ಪ್ರಾಣಿಯಲ್ಲಿ ಪದಾರ್ಥಗಳ ಸಾಗಾಣಿಕೆ ಏಕೆ ಅವಶ್ಯಕ? ವಿವರಿಸಿ.

      ಉತ್ತರ-

      • ಸಸ್ಯ ಮತ್ತು ಪ್ರಾಣಿಗಳ ಪ್ರತಿಯೊಂದು ಜೀವಕೋಶಕ್ಕೂ ಉಸಿರಾಟದ ಮೂಲಕ ಶಕ್ತಿಯನ್ನು ಬಿಡುಗಡೆ ಮಾಡಲು ಪೋಷಕಾಂಶಗಳು ಮತ್ತು ಆಮ್ಲಜನಕದ ನಿಯಮಿತ ಪೂರೈಕೆಯ ಅಗತ್ಯವಿರುವುದರಿಂದ ವಸ್ತುಗಳ ಸಾಗಣೆಯು ಅವಶ್ಯಕವಾಗಿದೆ.
      • ನಾವು ಸೇವಿಸುವ ಆಹಾರವು ಜೀವಕೋಶಗಳಿಂದ ಹೀರಿಕೊಳ್ಳಲು ಸಣ್ಣ ಘಟಕಗಳಾಗಿ ವಿಭಜನೆಯಾಗುತ್ತದೆ. ನಾವು ಉಸಿರಾಡುವ ಆಮ್ಲಜನಕವನ್ನು ದೇಹದ ಎಲ್ಲಾ ಜೀವಕೋಶಗಳಿಗೆ ಸಾಗಿಸಬೇಕು. ನಮ್ಮ ದೇಹವು ಕಾರ್ಬನ್ ಡೈಆಕ್ಸೈಡ್ನಂತಹ ತ್ಯಾಜ್ಯ ವಸ್ತುಗಳನ್ನು ನಿರಂತರವಾಗಿ ಹೊರಹಾಕವ ಅಗತ್ಯವಿರುತ್ತದೆ.
      • ಈ ಎಲ್ಲಾ ವಸ್ತುಗಳ ಸಾಗಣೆಗೆ (ಪೋಷಕಾಂಶಗಳು, ಆಮ್ಲಜನಕ ಮತ್ತು ತ್ಯಾಜ್ಯ ಉತ್ಪನ್ನಗಳು), ನಮ್ಮ ದೇಹವು ವಿಶೇಷ ಸಾಗಾಣಿಕೆ ವ್ಯವಸ್ಥೆಯನ್ನು ಹೊಂದಿದೆ.ಇಲ್ಲದಿದ್ದರೆ ಅವು ಜೀವಿಗೆ ಹಾನಿಯನ್ನುಂಟುಮಾಡುತ್ತವೆ.
      • ಅಂತೆಯೇ, ಸಸ್ಯಗಳಲ್ಲಿ, ನೀರು ಮತ್ತು ಆಹಾರದ ಸಾಗಣೆಯನ್ನು ಕ್ಸೈಲೆಮ್ ಮತ್ತು ಫ್ಲೋಯಮ್ಅಂಗಾಂಶಗಳ ಸಹಾಯದಿಂದ ಸಾಧಿಸಲಾಗುತ್ತದೆ.

      ೫. ರಕ್ತದಲ್ಲಿ ಕಿರುತಟ್ಟೆಗಳಿಲ್ಲದಿದ್ದರೆ ಏನಾಗುತ್ತಿತ್ತು?

      ಉತ್ತರ-ರಕ್ತ ಹೆಪ್ಪುಗಟ್ಟುವಲ್ಲಿ ಕಿರುತಟ್ಟೆಗಳು / ಪ್ಲೇಟ್ಲೆಟ್ಗಳು ಪ್ರಮುಖ ಪಾತ್ರ ವಹಿಸುತ್ತವೆ.  ಗಾಯಗೊಂಡ ಸ್ಥಳದಲ್ಲಿ ರಕ್ತದ ನಷ್ಟವನ್ನು ತಡೆಯಲು ರಕ್ತ ಹೆಪ್ಪುಗಟ್ಟುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ರಕ್ತದಲ್ಲಿ ಕಿರುತಟ್ಟೆಗಳಿಲ್ಲದಿದ್ದರೆ, ರಕ್ತ ಹೆಪ್ಪುಗಟ್ಟಲು ಸಾಧ್ಯವಾಗುವುದಿಲ್ಲ, ಇದರಿಂದ ರಕ್ತದ ನಷ್ಟ ಹೆಚ್ಚಾಗುತ್ತದೆ. 

      ೬. ಪತ್ರರಂಧ್ರಗಳು ಎಂದರೇನು? ಪತ್ರರಂಧ್ರಗಳ ಎರಡು ಕಾರ್ಯಗಳನ್ನು ತಿಳಿಸಿ.

      ಉತ್ತರ-ಎಲೆಗಳ ಎಪಿಡರ್ಮಿಸ್‌ನ ಅಲ್ಲಲ್ಲಿ ಕಂಡುಬರುವ ಚಿಕ್ಕ ರಂಧ್ರಗಳನ್ನು  ಪತ್ರರಂದ್ರಗಳು ಎನ್ನುವರು. 

      ಪತ್ರರಂಧ್ರಗಳ  ದ್ಯುತಿಸಂಶ್ಲೇಷಣೆಯ ಉದ್ದೇಶಕ್ಕಾಗಿ ಎಲೆಗಳಲ್ಲಿ ಅನಿಲಗಳ ವಿನಿಮಯವು ಅಧಿಕ ಪ್ರಮಾಣದಲ್ಲಿ ಈ ರಂಧ್ರಗಳ ಮೂಲಕ ಆಗುತ್ತದೆ. ವಾತಾವರಣದಿಂದ ಅನಿಲಗಳ ವಿನಿಮಯ ಪ್ರಕ್ರಿಯೆಗೆ ಪತ್ರರಂಧ್ರಗಳ ಅಗತ್ಯವಿದೆ. ಬಾಷ್ಪವಿಸರ್ಜನೆ (ನೀರಾವಿಯ ರೂಪದಲ್ಲಿ ಸಸ್ಯದೇಹದಿಂದ ನೀರಿನ ನಷ್ಟವಾಗುವಿಕೆ) ಕೂಡಾ ಪತ್ರರಂಧ್ರಗಳ ಮೂಲಕವೇ ಜರುಗುತ್ತದೆ. 

      Transportation In Animals And Plants Class 7 Questions And Answers In Kannada Medium

      ೭. ಬಾಷ್ಪವಿಸರ್ಜನೆಯು ಸಸ್ಯಗಳಲ್ಲಿ ಯಾವುದಾದರೂ ಉಪಯುಕ್ತ ಕಾರ್ಯವನ್ನು ನಿರ್ವಹಿಸುತ್ತದೆಯೆ? ವಿವರಿಸಿ.

      ಉತ್ತರ-

      1. ಬಾಷ್ಪವಿಸರ್ಜನಾ ಪ್ರಕ್ರಿಯೆಯಿಂದ ಸಸ್ಯಗಳು ಬಹಳಷ್ಟು ನೀರನ್ನು ಬಿಡುಗಡೆ ಮಾಡುತ್ತವೆ.  
      2. ಹೀರಿಕೊಂಡ ಎಲ್ಲಾ ನೀರನ್ನು ಸಸ್ಯಗಳು ಉಪಯೋಗಿಸುವುದಿಲ್ಲ. ಎಲೆಗಳ ಮೇಲ್ಮೈನಲ್ಲಿರುವ ಪತ್ರರಂಧ್ರಗಳ ಮೂಲಕ 
      3. ಬಾಷ್ಪವಿಸರ್ಜನಾ ಪ್ರಕ್ರಿಯೆಯಿಂದ ನೀರು ಆವಿಯಾಗುತ್ತದೆ.
      4. ಎಲೆಗಳಿಂದಾದ ನೀರಿನ ಆವೀಕರಣವು ಮೇಲ್ಮಖ ಸೆಳೆತವನ್ನು ಉತ್ಪತ್ತಿ ಮಾಡುತ್ತದೆ. ಈ ಮೇಲ್ಮುಖ ಸೆಳೆತವು ಎತ್ತರದ ಮರಗಳಲ್ಲಿ ಹೆಚ್ಚು ಎತ್ತರಗಳಿಗೆ ನೀರನ್ನು ಎಳೆಯಬಲ್ಲದು. 
      5. ಬಾಷ್ಪವಿಸರ್ಜನೆಯು ಸಸ್ಯವನ್ನು ತಂಪಾಗಿ ಕೂಡಾ ಇಡುತ್ತದೆ.

      ೮. ರಕ್ತದ ಘಟಕಗಳು ಯಾವುವು?

      ಉತ್ತರ-

      ರಕ್ತದ ಮುಖ್ಯ ಘಟಕಗಳು 

      1. ಕೆಂಪು ರಕ್ತ ಕಣಗಳು 
      2. ಬಿಳಿ ರಕ್ತ ಕಣಗಳು (WBC)
      3. ಕಿರುತಟ್ಟೆಗಳು
      4. ಪ್ಲಾಸ್ಮಾ

      ೯. ದೇಹದ ಎಲ್ಲಾ ಭಾಗಗಳಿಗೂ ರಕ್ತದ ಅಗತ್ಯ ಇದೆ. ಏಕೆ?

      ಉತ್ತರ-(i) ರಕ್ತವು ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಎಲ್ಲಾ ಜೀವಕೋಶಗಳಿಗೆ ಸಾಗಿಸುತ್ತದೆ.

      (ii) ರಕ್ತವು ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯವಸ್ತುಗಳನ್ನು ನಿರ್ದಿಷ್ಟ ಸ್ಥಳಗಳಿಗೆ ಸಾಗಿಸಿ ದೇಹದಿಂದ ಹೊರಹಾಕಲು ಸಹಕರಿಸುತ್ತದೆ. 

      (iii) ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.

      (iv) ಇದು ರೋಗಗಳು ಮತ್ತು ಸೋಂಕುಗಳ ವಿರುದ್ಧ ಸಹ ಹೋರಾಡುತ್ತದೆ.

      ೧೦. ರಕ್ತವನ್ನು ಕೆಂಪಾಗಿ ಕಾಣುವಂತೆ ಮಾಡುವುದು ಯಾವುದು?

      ಉತ್ತರ-ಹಿಮೋಗ್ಲೋಬಿನ್ ಎಂಬ ಕೆಂಪುವರ್ಣಕ ಇರುವುದರಿಂದ ರಕ್ತವು ಕೆಂಪು ಬಣ್ಣದಲ್ಲಿದೆ.

      Transportation In Animals And Plants Class 7 Questions And Answers In Kannada Medium

      ೧೧. ಹೃದಯದ ಕಾರ್ಯವನ್ನು ವಿವರಿಸಿ.

      ಉತ್ತರ-ಇತರ ಪದಾರ್ಥಗಳನ್ನು ತನ್ನೊಂದಿಗೆ ಕೊಂಡೊಯ್ಯುವ ರಕ್ತದ ಸಾಗಾಣಿಕೆಗೆ ಪಂಪ್‌ನಂತೆ ವರ್ತಿಸುತ್ತ ನಿರಂತರವಾಗಿ ಬಡಿದುಕೊಳ್ಳುವ ಅಂಗ ಹೃದಯ.ಬಹಳ ವರ್ಷಗಳವರೆಗೆ ನಿರಂತರವಾಗಿ ನಮ್ಮ ಹೃದಯವು ತಡೆರಹಿತ ಪಂಪಿನಂತೆ ಕೆಲಸ ಮಾಡುತ್ತದೆ. ಎದೆಯ ಕುಹರದಲ್ಲಿ ಕೆಳತುದಿ ಸ್ವಲ್ಪ ಎಡಗಡೆಗೆ ವಾಲಿಕೊಂಡಿರುವಂತೆ ಹೃದಯವಿದೆ ಆಕ್ಸಿಜನ್‌ಯುಕ್ತ ರಕ್ತ ಮತ್ತು ಕಾರ್ಬನ್ ಡೈಆಕ್ಸೈಡ್ ಯುಕ್ತ ರಕ್ತಗಳು ಪರಸ್ಪರ ಬೆರಕೆಯಾಗದಂತೆ ತಡೆಯಲು ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮೇಲಿನ ಎರಡು ಕೋಣೆಗಳನ್ನು ಹೃತ್ಕರ್ಣಗಳು ಮತ್ತು ಕೆಳಗಿನ ಎರಡು ಕೋಣೆಗಳನ್ನು ಹೃತ್ಕುಕ್ಷಿಗಳು ಎನ್ನುವರು. ಕೋಣೆಗಳ ನಡುವಿನ ಅಡ್ಡಗೋಡೆಯು ಆಕ್ಸಿಜನ್‌ಯುಕ್ತ ರಕ್ತದ ಜೊತೆಗೆ ಕಾರ್ಬನ್ ಡೈಆಕ್ಸೈಡ್  ಯುಕ್ತ ರಕ್ತವು ಮಿಶ್ರಣಗೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.ರಕ್ತವು ಹೃದಯದಿಂದ ಶ್ವಾಸಕೋಶಕ್ಕೆ ಹರಿದು ಪುನಃ ಹೃದಯಕ್ಕೆ ಹಿಂತಿರುಗುತ್ತದೆ. ಈ ರಕ್ತವು ಹೃದಯದಿಂದ ದೇಹದ ಉಳಿದ ಭಾಗಗಳಿಗೆ ಪಂಪ್ ಮಾಡಲ್ಪಡುತ್ತದೆ. 

      Transportation In Animals And Plants Class 7 Questions And Answers In Kannada Medium

      ೧೨. ತ್ಯಾಜ್ಯ ಉತ್ಪನ್ನಗಳನ್ನು ವಿಸರ್ಜಿಸುವ ಅವಶ್ಯಕತೆ ಏಕಿದೆ?

      ಉತ್ತರ-ನಮ್ಮ ದೇಹದ ಎಲ್ಲಾ ಜೀವಕೋಶಗಳಲ್ಲಿ ನಡೆಯುವ ಚಟುವಟಿಕೆಗಳಿಂದ ತ್ಯಾಜ್ಯ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ಈ ತ್ಯಾಜ್ಯ ಉತ್ಪನ್ನಗಳು ದೇಹಕ್ಕೆ ವಿಷಕಾರಿಯಾಗಿದ್ದು, ಅವುಗಳನ್ನು ಹೊರಹಾಕುವ ಅವಶ್ಯಕತೆಯಿದೆ. ಜೀವಿಗಳ ಜೀವಕೋಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವ ಈ ಪ್ರಕ್ರಿಯೆಯನ್ನು ವಿಸರ್ಜನೆ ಎಂದು ಕರೆಯಲಾಗುತ್ತದೆ.

      ೧೩. ಮಾನವನ ವಿಸರ್ಜನಾಂಗವ್ಯೂಹದ ಚಿತ್ರ ಬಿಡಿಸಿ ಮತ್ತು ವಿವಿಧ ಭಾಗಗಳನ್ನು ಗುರ್ತಿಸಿ.

      ಉತ್ತರ-

      Transportation In Animals And Plants Class 7 Questions And Answers In Kannada Medium

      Class 7 Science Transportation In Animals And Plants  - FAQs.

      ಹೃದಯದ ಬಡಿತ ಎಂದರೇನು?

      ವಯಸ್ಕ ಮಾನವನ ಹೃದಯವು ನಿಮಿಷಕ್ಕೆ ೭೦ ರಿಂದ ೮೦ ಬಾರಿ ಬಡಿದುಕೊಳ್ಳುತ್ತದೆ. ಇದಕ್ಕೆ ಹೃದಯದ ಬಡಿತ ಎನ್ನುವರು.

      ಮೀನು ತನ್ನ ದೇಹದಿಂದ ರಾಸಾಯನಿಕ ತ್ಯಾಜ್ಯಗಳನ್ನು ಹೊರತೆಗೆಯುವ ವಿಧಾನ ಯಾವುದು?

      ಮೀನು ತನ್ನ ದೇಹದಿಂದ ರಾಸಾಯನಿಕ ತ್ಯಾಜ್ಯಗಳನ್ನು ಹೊರತೆಗೆಯುವ ವಿಧಾನವು ನೀರಿನ ಲಭ್ಯತೆಯನ್ನು ಅವಲಂಬಿಸಿದೆ.ನೀರಿನಲ್ಲಿ ನೇರವಾಗಿ ಕರಗುವ ಅಮೋನಿಯಾದಂತಹ ತ್ಯಾಜ್ಯಪದಾರ್ಥಗಳನ್ನು ಮೀನು ವಿಸರ್ಜಿಸುತ್ತದೆ.

      ಪಕ್ಷಿ, ಕೀಟ ಮತ್ತು ಹಲ್ಲಿಗಳು ತಮ್ಮ ದೇಹದಿಂದ ರಾಸಾಯನಿಕ ತ್ಯಾಜ್ಯಗಳನ್ನು ಹೊರತೆಗೆಯುವ ವಿಧಾನ ಯಾವುದು?

      ಪಕ್ಷಿ, ಕೀಟ ಮತ್ತು ಹಲ್ಲಿಗಳು ಅರ್ಧಘನ ರೂಪದಲ್ಲಿ ಯೂರಿಕ್ ಆಮ್ಲವನ್ನು ವಿಸರ್ಜಿಸುತ್ತವೆ.


      👉Class 7 Science Transportation In Animals And Plants Questions And Answers In Kannada Medium PDF.👈













      ಕಾಮೆಂಟ್‌‌ ಪೋಸ್ಟ್‌ ಮಾಡಿ

      0 ಕಾಮೆಂಟ್‌ಗಳು
      * Please Don't Spam Here. All the Comments are Reviewed by Admin.