ಹಾಯ್ ಹಲೋ ಸ್ನೇಹಿತರೆ ನಾವು ಇವತ್ತು ಈ ಒಂದು ಬ್ಲಾಗ್ ಲೇಖನದಲ್ಲಿ ನಮ್ಮ ಕರ್ನಾಟಕದ ಕರಾವಳಿ geography in kannada coastal karnataka ಈ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಬಹು ಆಯ್ಕೆ ಮತ್ತು ಇತರೆ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಲು ಅನುಕೂಲವಾಗುವಂತೆ ಪ್ರಮುಖ ಅಂಶಗಳನ್ನು ಈ ಒಂದು ಲೇಖನದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
geography in kannada coastal Karnataka,coastal Karnataka region,ಆತ್ಮೀಯರೇ ಕರ್ನಾಟಕದ ಪ್ರಮುಖ ಪ್ರಾಕೃತಿಕ ವಿಭಾಗಗಳಲ್ಲಿ ಕರಾವಳಿ ಮೈದಾನ, ಮಲೆನಾಡು ಪ್ರದೇಶ,ಮೈದಾನ ಪ್ರದೇಶಗಳು ಬಹಳ ಮುಖ್ಯವಾದ 3 ವಿಭಾಗಗಳಾಗಿವೆ.
- ಈ ಕರಾವಳಿ ಪ್ರಾಕೃತಿಕ ವಿಭಾಗವು ಅರಬ್ಬಿ ಸಮುದ್ರ ಮತ್ತು ಮಲೆನಾಡುಗಳ ಮಧ್ಯ ವಿಸ್ತರಿಸಿದೆ ಇದು ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದವರೆಗೆ 320 ಕಿಲೋಮೀಟರ್ ಉದ್ದವನ್ನು ಹೊಂದಿದೆ.
- ಕರ್ನಾಟಕದ ಕರಾವಳಿಯ ವಿಸ್ತಾರ ಎಷ್ಟು? - 320 ಕಿಲೋಮೀಟರ್
- ಉಗಮ-ಕೇರಳದ ಸಮ್ಮಿಶ್ರ ತೀರ ಹಾಗೂ ಉತ್ತರದ ಮುಳುಗಡೆ ಹೊಂದಿದ ಕೊಂಕಣ ಕರಾವಳಿಗಳ ನಡುವೆ.
- ಇದು ಕಾರವಾರ ಕೊಲ್ಲಿ, ಬೇಲೆಕೆರೆ ಕೊಲ್ಲಿ ಮತ್ತು ಭಟ್ಕಳ ಕೊಲ್ಲಿಯಂತಹ ಮರಳು ಕೊಲ್ಲಿಗಳನ್ನು ಹೊಂದಿದೆ.
- ಅತ್ಯಂತ ಸಕ್ರಿಯವಾಗಿರುವ ನೈಋತ್ಯ ಮಾನ್ಸೂನ್ ಕಾರಣದಿಂದಾಗಿ ಕರಾವಳಿಯಲ್ಲಿ ಯಾವುದೇ ದೊಡ್ಡ ಡೆಲ್ಟಾಗಳಿಲ್ಲ.
- ಮಲಬಾರ್ ಕರಾವಳಿಯ ಲಗೂನ್ ಸರೋವರ ಹಾಗೂ ನಾಲಿಗೆ ಆಕಾರದ ಮರಳು ದೀಪಗಳನ್ನು ಇದು ಒಳಗೊಂಡಿದೆ.
- ಭಾರತದ ಪೂರ್ವ ಕರಾವಳಿ ಮೆಕ್ಕಲು ಮಣ್ಣಿನ ಸಂಚಯನ ಕಾರ್ಯದಿಂದ ನಿರ್ಮಿತವಾಗಿದ್ದರೆ, ಪಶ್ಚಿಮ ಕರಾವಳಿ ಅಲೆಚೇದಿತ ಪೀಠ ಭೂಮಿ ಸವೆತ ಕಾರ್ಯದಿಂದ ನಿರ್ಮಿತವಾಗಿದೆ.
- ರಾಜ್ಯದ ಕರಾವಳಿಯು ಹೆಚ್ಚಿನ ಭಾಗ ಮುಳುಗಡೆ ಹೊಂದಿದ ಕರಾವಳಿಯಾಗಿದೆ.
- ಕರಾವಳಿ ಮೈದಾನ ಅಂದ್ರೆ ಕರ್ನಾಟಕದ ಕರಾವಳಿ ಮೈದಾನ ಪ್ರಸ್ಥಭೂಮಿಯ ಅಂಚು ನಿರಂತರವಾಗಿ ಸಮುದ್ರದ ಅಲೆಗಳಿಂದ ನಿರಂತರವಾಗಿ ಸವೆತ ಕ್ಕೆ ಒಳಗಾಗಿ ನಮ್ಮ ಕರ್ನಾಟಕದ ಕರಾವಳಿ ಮೈದಾನ ನಿರ್ಮಾಣವಾಗಿರೋದು ಕಂಡುಬರುತ್ತದೆ.
- ಇಲ್ಲಿ ಮ್ಯಾಕ್ರಲ್ (ಬಂಗಡಿ) ಎಂಬ ತಳಿಯ ಮೀನುಗಳು ಕಂಡು ಬರುವದರಿಂದ ಈ ಕರಾವಳಿಯನ್ನು ಮ್ಯಾಕ್ರಲ್ ಎಂತಲೂ ಕರೆಯುತ್ತಾರೆ.
- ಉತ್ತರ ಕರಾವಳಿ.
- ದಕ್ಷಿಣ ಕರಾವಳಿ.
ಉತ್ತರ ಕರಾವಳಿ | ದಕ್ಷಿಣ ಕರಾವಳಿ. |
---|---|
ಅತ್ಯಂತ ಕಿರಿದಾಗಿದೆ. | ಸಾಕಷ್ಟು ವಿಸ್ತಾರವಾಗಿದೆ. |
ದ್ವೀಪಗಳು ಹೆಚ್ಚಾಗಿ ಕಂಡು ಬರುತ್ತವೆ. | ದ್ವೀಪಗಳ ಸಂಖ್ಯೆ ಕಡಿಮೆ. |
13 km ಗಳಷ್ಟು ಅಗಲವಾಗಿದೆ. | 60 ರಿಂದ 70 ಕಿಲೋ ಮೀಟರ್ ಅಗಲವಾಗಿದೆ.. |
ಕಾಳಿ, ಗಂಗವಳ್ಳಿ ,ಬೇಡ್ತಿ, ಶರಾವತಿ,ತದ್ರಿ ನದಿಗಳು | ನೇತ್ರಾವತಿ |
ಕರ್ನಾಟಕದ ಕರಾವಳಿ ಜಿಲ್ಲೆಗಳು
- ಉತ್ತರ ಕರ್ನಾಟಕ.
- ಉಡುಪಿ.
- ದಕ್ಷಿಣ ಕನ್ನಡ.
ಕರ್ನಾಟಕದ ಕಡಲತೀರಗಳು (ಬೀಚುಗಳು)
ಕರ್ನಾಟಕದಲ್ಲಿ ಎಷ್ಟು ಬಂದರುಗಳಿವೆ? ಇದರಲ್ಲಿ ಮುಖ್ಯ ಬಂದರುಗಳು ಯಾವುವು?
ಕರ್ನಾಟಕದ ಕರಾವಳಿ ದ್ವೀಪಗಳು -
ಅಳಿವೆಗಳು
ಕರ್ನಾಟಕದ ಕರಾವಳಿ ನದಿಗಳು ಮೂರು ಕರಾವಳಿ ಜಿಲ್ಲೆಗಳ ಮೂಲಕ ಹರಿದು ಅರಬ್ಬಿ ಸಮುದ್ರದೊಂದಿಗೆ ಒಂದಾಗುತ್ತವೆ. ಇವುಗಳಲ್ಲಿ ನೇತ್ರಾವತಿ ನದಿ , ಶರಾವತಿ ನದಿ , ಅಘನಾಶಿನಿ ನದಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು. ಕರ್ನಾಟಕದ ಕರಾವಳಿ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಈ ನದಿಗಳು ಸಮಾನಾಂತರ ನದಿ ವ್ಯವಸ್ಥೆಗೆ ಉತ್ತಮ ಉದಾಹರಣೆಗಳಾಗಿವೆ. ಪಶ್ಚಿಮದ ನದಿಗಳಲ್ಲಿ ಕಾಳಿ ನದಿ ಅತ್ಯಂತ ಉತ್ತರದಲ್ಲಿದ್ದರೆ ನೇತ್ರಾವತಿ ಅತ್ಯಂತ ದಕ್ಷಿಣದಲ್ಲಿ ಇರುವ ನದಿಯಾಗಿದೆ. ಅತಿ ಪ್ರಮುಖವಾದ ನದಿಗಳೆಂದರೆ ಕಾಳಿ ಗಂಗಾವತಿ ಅಥವಾ ಬೇಡ್ತಿ ಶರಾವತಿ ಅಘನಾಶಿನಿ ನೇತ್ರಾವತಿ, ವರಾಹಿ, ಹಾಲಾಡಿ, ಚಕ್ರ, ಸೀತಾ, ಸ್ವರ್ಣ, ಕೊಲ್ಲೂರು ಮತ್ತು ಗುರುಪುರ.
ಈ ನದಿಗಳು ಚಿಕ್ಕ ನದಿಗಳಾಗಿದ್ದು, ಕಡಿದಾದ ಇಳಿಜಾರುಳ್ಳ ಬೆಟ್ಟ ಗುಡ್ಡಗಳ ನಡುವೆ ವೇಗವಾಗಿ ಹರಿಯುವುದರಿಂದ ಜಲವಿದ್ಯುತ್ ತಯಾರಿಕೆಗೆ ಉಪಯುಕ್ತವಾಗಿವೆ. ಜೊತೆಗೆ ಇವುಗಳ ಮಾರ್ಗದಲ್ಲಿ ಹಲವು ಜಲಪಾತಗಳು ಉಂಟಾಗಿವೆ.
ಕಾಳಿ ನದಿ-
ಉಗಮ- ಉತ್ತರ ಕನ್ನಡ ಜಿಲ್ಲೆಯ ಡಿಗ್ಗಿ ಘಾಟ್.
ಉಪನದಿಗಳು- ತಟ್ಟೀಹಳ್ಳ, ಪಂಡ್ರಿ,ಕನೇರಿ,ವಾಕಿ ಮತ್ತು ಮಾದ್ರಿ.
ಜಲಪಾತ- ಲಾಂಗುಳಿ ಜಲಪಾತ
ಒಟ್ಟು ಉದ್ದ- 184km
ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಇದು ಅತಿ ದೊಡ್ಡದು.
ಕಾರಾವಾರದ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಶರಾವತಿ
ಉಗಮ- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.
ಉಪನದಿಗಳು- ಹರಿದ್ರಾವತಿ,ಎಣ್ಣೆಹೊಳೆ
ಜಲಪಾತ- ಗೇರುಸೊಪ್ಪದ ಬಳಿ ಜೋಗ್ ಜಲಪಾತ (253mtr) ಎತ್ತರ.
ಒಟ್ಟು ಉದ್ದ-128km
ಹೊನ್ನಾವರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ನೇತ್ರಾವತಿ
ಉಗಮ- ಚಿಕ್ಕಮಗಳೂರು ಜಿಲ್ಲೆ ಬಲ್ಲಾಳ ರಾಯನದುರ್ಗ.
ಉಪನದಿಗಳು-ಚಾರ್ಮುಡಿ,ಶಿಶಿಲ,ಪಾಲ್ಗುಣಿ,ಗುರುಪುರ,ಕುಮಾರಧಾರ.
ಜಲಪಾತ-ಭಂಡಾಜೆ ಜಲಪಾತ
ಒಟ್ಟು ಉದ್ದ- 96km
ಮಂಗಳೂರು ಸಮೀಪದ ಕೊಡಿಯಾಲ್ ಬೈಲ್ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಗಂಗವಳ್ಳಿ(ಗಂಗಾವಳಿ) - ಬೇಡ್ತಿ.-
ಉಗಮ- ಧಾರವಾಡ ಬಳಿ ಸೋಮೇಶ್ವರ ಕುಂಡದಲ್ಲಿ ಶಾಲ್ಮಲ ಎಂಬ ಹೆಸರಿನಿಂದ ಉಗಮ.
ಜಲಪಾತ- ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿ ಮಾಗೋಡು ಜಲಪಾತ.
ಒಟ್ಟು ಉದ್ದ- 161km
ಗೋಕರ್ಣ ಮತ್ತು ಅಂಕೋಲಗಳ ನಡುವೆ ಗಂಗಾವಳಿ ಗ್ರಾಮದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಅಘನಾಶಿನಿ
ಉಗಮ- ಸಿರ್ಸಿಯ ಬಳಿ ಹುಟ್ಟುವ ಎರಡು ಹೊಳೆಗಳ ಸಂಗಮದಿಂದ - ಸಿದ್ದಾಪುರ ತಾಲೂಕಿನ ಮಟ್ಟೇಹಳ್ಳಿ ಬಳಿ.
ಜಲಪಾತ- ಊಂಚಳ್ಳಿ ಜಲಪಾತ,ಶಿವಗಂಗೆ, ಇಳಿಮನೆ.
ತದಡಿ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಚಕ್ರಾ
ಉಗಮ- ಚಿಕ್ಕಮಗಳೂರು
ಒಟ್ಟು ಉದ್ದ-72km
ಕುಂದಾಪುರ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಹಾಲಾಡಿ
ಉಗಮ- ಉಡುಪಿ ಜಿಲ್ಲೆ ಕುಂದಾಪುರ ಬಳಿಯ ಕವಲೆದುರ್ಗ.
ಉಪನದಿ- ವಾರಾಹಿ
ಕುಂದಾಪುರ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ವಾರಾಹಿ
ಉಗಮ- ಕೊಡಚಾದ್ರಿ
ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕುಂದಾಪುರದ ಬಸ್ರೂರು ಹಾಗೂ ಗಂಗೊಳ್ಳಿ ಪ್ರದೇಶಗಳ ಮೂಲಕ ಹರಿದು ಹೋಗುತ್ತದೆ.
ಮುಂದೆ ಹರಿಯುತ್ತಾ ಸೌಪರ್ಣಿಕಾ , ಕೇದಕ, ಚಕ್ರ ಹಾಗೂ ಕುಬ್ಜ ನದಿಗಳನ್ನು ಸಂಗಮಿಸಿ, ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಯದೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಅಡ್ಡಲಾಗಿ ವಾರಾಹಿ ಅಣೆಕಟ್ಟನ್ನು ಕಟ್ಟಲಾಗಿದೆ.ಇದಕ್ಕೆ ಮಾಣಿ ಅಣೆಕಟ್ಟು ಎಂತಲೂ ಕರೆಯುತ್ತಾರೆ.
ಗುರುಪುರ ನದಿ
ಗುರುಪುರ ನದಿ ಫಾಲ್ಗುಣಿ ನದಿ ಎಂದೂ ಸಹ ಕರೆಯಲಾಗುತ್ತದೆ. ಗುರುಪುರ ನದಿ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಇದು ಮಂಗಳೂರು ನಗರದ ಈಶಾನ್ಯ ಭಾಗದಲ್ಲಿರುವ ಗುರುಪುರ ಎಂಬ ಪಟ್ಟಣದ ದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿದು ಹಾದುಹೋಗುವ ಕಾರಣ “ಗುರುಪುರ” ಹೆಸರನ್ನು ಪಡೆಯುತ್ತದೆ.
ಸೀತಾ ನದಿ
ಉಗಮ- ನರಸಿಂಹ ಪರ್ವತದ ಬಳಿ.
ಜಲಪಾತ-ಕುಡ್ಲು ಜಲಪಾತ, ಬರ್ಕಾನಾ ಜಲಪಾತ, ಜೊಮ್ಲು ತೀರ್ಥ ಜಲಪಾತ
FAQs-Geography In Kannada Coastal Karnataka
ಕರ್ನಾಟಕದ ಕರಾವಳಿ ಮೈದಾನದಲ್ಲಿ ವಿಸ್ತಾರವಾದ ಮುಖಜಭೂಮಿಕಂಡುಬರುವುದಿಲ್ಲ ಏಕೆ?
ಪ್ರಭಲವಾದ ನೈಋತ್ಯ ಮಾನ್ಸೂನ್ ಮಾರುತಗಳಿಂದ ಉಂಟಾಗುವಚ್ದೊಡ್ಡ ಉಂಟಾಗುವ ದೊಡ್ಡ ಅಲೆಗಳು ನದಿ ಸಂಚಯಿತ ವಸ್ತುಗಳನ್ನು ಸಮುದ್ರದೊಳಗೆ ಬಹುದೂರ ಕೊಂಡೊಯ್ದಿವೆ.
ಸೂಫಾ ಅನೇಕಾತೆಯನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಕಾಳಿ ನದಿ.
ಅಘನಾಶಿನಿ ಮತ್ತು ಶರಾವತಿ ನದಿಗಳ ನಡುವೆ ಇರುವ ಪಟ್ಟಣಗಳು ಯಾವುವು?
ಕುಮುಟಾ ಮತ್ತು ಹೊನ್ನಾವರ.
PLEASE DO NOT ENTER ANY SPAM LINK IN THE COMMENT BOX